ಉಗ್ರರಿಗೆ ತಕ್ಕ ಪ್ರತ್ಯುತ್ತರ ನಮ್ಮ ಸೇನೆ ನಮ್ಮ ಹೆಮ್ಮೆ

ಶನಿವಾರ ಉಗ್ರರ ಕುತಂತ್ರಕ್ಕೆ ಬಲಿಯಾಗಿದ್ದು ಸಲೀಂ ಶಾ ಎಂಬ ಪೊಲೀಸ್ ಕಾನ್ಸ್ಟೇಬಲ್, ಸಲೀಂ ಶಾ ಎಂಬುವವರನ್ನು ಅಪಹರಿಸಿ ಉಗ್ರರು ಹತ್ಯೆ ಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿತ್ತು ಈ ವಿಷಯ ಕುರಿತು ಕೆಲವರಂತೂ ದೇಶದ ಪೊಲೀಸರಿಗೆ ರಕ್ಷಣೆ ಇಲ್ಲ ಎಂಬಂತೆ ಬಿಂಬಿಸಿದರು. ಆದರೆ ಭಾರತೀಯ ಸೇನೆ ಕೇವಲ 24 ಗಂಟೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿ ದೇಶ ಸೈನಿಕರ ತಾಕತ್ತು ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪೇದೆ ಸಲೀಂ ಅವರನ್ನು ಕೊಂದಿದ್ದ ಉಗ್ರರ ಬೇಟೆಗೆ ಜಾಲ ಬೀಸಿದ ಸೇನೆ, ಸಲೀಂ ಅವರನ್ನು ಅಪಹರಿಸಿದ್ದ ಸ್ಥಳದಿಂದ ಕೇವಲ ೨ ಕಿ.ಮೀ ದೂರದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಕೊಂದು ಹಾಕಿದೆ.ಈ ಕುರಿತು ಜಮ್ಮು-ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ವಿವರವನ್ನು ನೀಡಿದ್ದಾರೆ, ಸಲೀಮ್ ರವರು ರಜೆಯಲ್ಲಿ ಇದ್ದಾಗ ಈ ಕೃತ್ಯ ನಡೆಸಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ.

ಪೊಲೀಸ್ ಹತ್ಯೆ ಬಳಿಕ ಉಗ್ರರ ಸುಳಿವಿನ ಹಿನ್ನಲೆಯಲ್ಲಿ ಬಿಎಸ್‌ಎಫ್,ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಪಡೆಗಳು ಭಾರೀ ಕಾರ್ಯಾಚರಣೆಗಿಳಿದು ತಕ್ಷಣದಲ್ಲಿ ಮೂವರನ್ನು ಹತ್ಯೆಗೈದಿದ್ದಾರೆ. ಉಗ್ರರ ಬಳಿಯಿಂದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Indian armykashmir
Comments (0)
Add Comment