ರಾಹುಲ್ ಕಣ್ಣು ಮಿಟುಕಿಸಿದ್ದಕ್ಕೆ ಕಣ್ಸನ್ನೆ ಬೆಡಗಿ ಹೇಳಿದ್ದೇನು?

ಶುಕ್ರವಾರದಂದು ನಡೆದ ಲೋಕಸಭಾ ಕಲಾಪದಲ್ಲಿ ಅವಿಶ್ವಾಸದ ನಿರ್ಣಯ ಚರ್ಚೆಯ ವೇಳೆ ಮೋದಿ ಅವರನ್ನು ತಬ್ಬಿಕೊಂಡು ನಂತರ ಕುಳಿತುಕೊಳ್ಳುವಾಗ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ ರಾಹುಲ್ ಗಾಂಧಿ ರವರು ಪಕ್ಷದ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಕಡೆ ತಿರುಗಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಮಾಡಿದಂತೆ ಕಣ್ಣು ಮಿಟುಕಿಸಿದರು.

ಈ ವಿಷಯ ಯಾರಿಗೆ ತಿಳಿದಿಲ್ಲ ಹೇಳಿ ರಾಹುಲ್ ಗಾಂಧಿ ರವರು ಈ ಕೇವಲ ಒಂದು ಕಣ್ಸನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ  ಭರ್ಜರಿಯಾಗಿಯೇ ಸುದ್ದಿಯಾಗಿದ್ದಾರೆ. ಎಲ್ಲಿ ನೋಡಿದರೂ ರಾಹುಲ್ ಗಾಂಧಿ ರವರ ಕಣ್ಸನ್ನೆಯದ್ದೆ ಮಾತು. ಇದೇ ರೀತಿ ಕೆಲವು ದಿನಗಳ ಹಿಂದೆ ಒಂದು ಹುಡುಗಿ ಮಾಡಿದ ಕಣ್ಸನ್ನೆಯಿಂದ ಇಡೀ ದೇಶವೇ ಅವಳ ಕಡೆ ತಿರುಗಿ ನೋಡಿತ್ತು, ಅವರೇ ಪ್ರಿಯಾ ವಾರಿಯರ್.

ಈ ಕಣ್ಸನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದ್ದ ಪ್ರಿಯಾ ವಾರಿಯರ್ ರವರು ರಾಹುಲ್ ಗಾಂಧಿ ರವರ ಕಣ್ಸನ್ನೆ ಗೆ ಪ್ರತಿಕ್ರಿಯೆ ನೀಡಿದ್ದಾರೆ, ನನಗಿಂತ ರಾಹುಲ್ ಗಾಂಧಿ ರವರೆ ಚೆನ್ನಾಗಿ ಕಣ್ಸನ್ನೆ ಮಾಡಿದ್ದಾರೆ ಎಂದು ಸ್ವತಃ ಪ್ರಿಯಾ ವಾರಿಯರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇಡೀ ದೇಶವನ್ನು ನಗೆಯಲ್ಲಿ ತೇಲಿಸಿದ ರಾಹುಲ್ ಗಾಂಧಿರವರಿಗೆ ನಮ್ಮ ನಮನಗಳು.

priya varrierrahul gandhi
Comments (0)
Add Comment