ಪ್ರಿಯಾಂಕ ರವರ ಒಂದು ಡ್ರೆಸ್ ನ ಬೆಲೆ ಕೇಳಿದ್ರೆ ಶಾಕ್ ಆಗ್ತೀರ !

ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ಪ್ರಿಯಾಂಕ ಚೋಪ್ರಾ  ಅತೀ ಹೆಚ್ಚು ಬೇಡಿಕೆ ಇರುವ ನಟಿ. ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಕೂಡ ಒಬ್ಬರು. ಇಂತಹ ಖ್ಯಾತ ನಟಿ ಬಳಸುವ ವಸ್ತುಗಳು ಕೂಡ ದುಬಾರಿ ಬೆಲೆಯದ್ದೇ ಆಗಿರುತ್ತದೆ.

ಇತ್ತೀಚೆಗಷ್ಟೇ ತಮ್ಮ ಆಪ್ತರೊಬ್ಬರ  ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಪ್ರಿಯಾಂಕ ಕೈಯಲ್ಲಿದ್ದ ಪರ್ಸ್  ಭಾರಿ ಚರ್ಚೆಗೆ ಗ್ರಾಸವಾಗಿತ್ತು . ಆ ಪರ್ಸ್ ಎಲ್ಲರ ಗಮನ ಸೆಳೆದಿತ್ತು. ಕಾರಣ ಅದರ ಬೆಲೆಯಿಂದ ಒಂದು ಕಾರನ್ನೇ ಖರೀದಿಸಬಹುದಾಗಿತ್ತು. ಅಷ್ಟು ದುಬಾರಿ ಪರ್ಸ್ ಬಳಸುತ್ತಿದ್ದರು ಪ್ರಿಯಾಂಕಾ ಚೋಪ್ರಾ.

ಅದೇ ರೀತಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಪ್ರಿಯಾಂಕಾ ಚೋಪ್ರಾ ಈ ಬಾರಿ ದುಬಾರಿ ಡ್ರೆಸ್ ವೊಂದನ್ನು ಖರೀದಿಸುವುದರ ಮೂಲಕ ಎಲ್ಲರ ಕಣ್ಣು ಹುಬ್ಬೇರಿಸುವಂತೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ  ತಮ್ಮ ಹುಟ್ಟುಹಬ್ಬವನ್ನು ವಿದೇಶದಲ್ಲಿ ಆಚರಿಸಿ ಕೊಂಡಾಗ  ಪ್ರಿಯಾಂಕಾ ಚೋಪ್ರಾ ರವರು ಬರೋಬ್ಬರಿ 1,86,660 ರೂ ಬೆಲೆ ಬಾಳುವ ಡ್ರೆಸ್ ಅನ್ನು ಖರೀದಿಸಿದ್ದಾರೆ. ಈಗ ಇದು ಇಂಟರ್ನೆಟ್ಟಲ್ಲಿ ಟ್ರೆಂಡಿಂಗ್ ಆಗಿದೆ.

Post Author: Ravi Yadav