ಕುಮಾರಸ್ವಾಮಿ ಅವರ ವಿರುದ್ಧ ತಿರುಗಿ ಬಿದ್ದ ಜನ: ಯಡಿಯೂರಪ್ಪನವರೇ ನಮ್ಮ ಸಿಎಂ ಆಗಬೇಕಿತ್ತು

ಕುಮಾರಸ್ವಾಮಿ ಅವರ ವಿರುದ್ಧ ತಿರುಗಿ ಬಿದ್ದ ಜನ: ಯಡಿಯೂರಪ್ಪನವರೇ ನಮ್ಮ ಸಿಎಂ ಆಗಬೇಕಿತ್ತು

0

ಎಲ್ಲರಿಗೂ ತಿಳಿದಿರುವ ಹಾಗೆ ಚುನಾವಣಾ ಫಲಿತಾಂಶವು ಅತಂತ್ರವಾಗಿ ಬಂದಿದ್ದರಿಂದ, ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷಕ್ಕೆ ಬೆಂಬಲವನ್ನು ನೀಡಿ ಸರ್ಕಾರವನ್ನು ರಚಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಆದರೆ ಸಮಿಶ್ರ ಸರ್ಕಾರ ಬಂದಾಗಿನಿಂದ ಕುಮಾರಸ್ವಾಮಿರವರ ಲಕ್ ತುಂಬಾ ಹದಗೆಟ್ಟಂತೆ ಕಾಣುತ್ತಿದೆ.

ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು, ಇತ್ತ ಕುಮಾರಸ್ವಾಮಿ ರವರು ಅಧಿಕಾರದ ಆಸೆಗೆ ಮುಖ್ಯಮಂತ್ರಿಯಾಗಲು ಒಪ್ಪಿದರು. ಬಿಜೆಪಿ ಪಕ್ಷವು ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರು ಸರ್ಕಾರ ರಚಿಸಲು ವಿಫಲವಾಗಿತ್ತು.

ಕೆಲವು ಜಿಲ್ಲೆಗಳಲ್ಲಿ ಪಾರುಪತ್ಯ ಸ್ಥಾಪಿಸಿದ್ದ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಿದೆ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಚುನಾವಣಾ ಫಲಿತಾಂಶದ ಮೂಲಕ ಕಿತ್ತೊಗಿದಿದ್ದರು ತಮ್ಮ ಲಾಭಕ್ಕಾಗಿ ಈ ಸರ್ಕಾರ ರಚಿಸಿದ್ದ ಕುಮಾರಸ್ವಾಮಿ ರವರಿಗೆ ಜೆಡಿಎಸ್ ಪಕ್ಷದ ಭದ್ರಕೋಟೆಯಾದ ಮಂಡ್ಯದಲ್ಲಿ ಪ್ರಜೆಗಳು ತಿರುಗಿಬಿದ್ದಿರುವುದು ಬಾರಿ ಮುಜುಗರ ಉಂಟು ಮಾಡಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಪ್ರತಿಯೊಂದು ವಿಷಯದಲ್ಲೂ ಬಹಳ ಸೂಕ್ಷ್ಮವಾಗಿ ಹೆಜ್ಜೆ ಇಡುವ ಶ್ರೀಯುತ ಯಡಿಯೂರಪ್ಪನವರು ರಾಜಕೀಯವಾಗಿ ಬಹಳ ಅನುಭವವನ್ನು ಹೊಂದಿದ್ದಾರೆ. ರೈತರ ನಾಯಕ  ಎಂದು ಗುರುತಿಸಿಕೊಂಡಿದ್ದ ಯಡಿಯೂರಪ್ಪನವರು ರಾಜ್ಯದ ಆರ್ಥಿಕ ಸಂಕಷ್ಟವನ್ನು ಅರ್ಥಮಾಡಿಕೊಂಡು ರಾಜ್ಯದ ಜನರಿಗೆ ಸುಳ್ಳು ಭರವಸೆಗಳನ್ನು ನೀಡದೆ  ಒಂದು ಲಕ್ಷದ ವರೆಗೆ ಎಲ್ಲರ ಸಾಲ ಮನ್ನಾ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆ ಯಲ್ಲಿ ಹೇಳಿದ್ದರು. ಆದರೆ ಯಾವುದೇ ಅಂಶಗಳನ್ನು ಅವಲೋಕಿಸಿದೆ ಕೇವಲ ಚುನಾವಣಾ ಲಾಭಕ್ಕಾಗಿ ಕುಮಾರಸ್ವಾಮಿ ರವರು ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.

ಆದರೆ ಅಧಿಕಾರಕ್ಕೆ ಬಂದ ಮೇಲೆ  ಬಜೆಟ್ ನಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ವಿಫಲವಾದ ಕುಮಾರಸ್ವಾಮಿ ಅವರ ವಿರುದ್ಧ ಹಲವರು ಪ್ರತಿಭಟನೆ ಮಾಡಿದ್ದರು. ಇತ್ತ ಮಹಿಳಾ ಸಂಘದವರು ತಮ್ಮ ಸಾಲ ಮನ್ನಾ ವಾಗುತ್ತದೆ ಎಂದು ಇಟ್ಟುಕೊಂಡಿದ್ದ  ಭರವಸೆಗಳೆಲ್ಲವನ್ನು ಹುಸಿಗೊಳಿಸಿದ ಕುಮಾರಸ್ವಾಮಿ ರವರ ವಿರುದ್ಧ ತಮ್ಮ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಜೆಡಿಎಸ್ ತೆಕ್ಕೆಗೆ ಹಾಕಿದ್ದ ಮಂಡ್ಯದ ಜನತೆ ತಿರುಗಿಬಿದ್ದಿದ್ದಾರೆ.

ಈಗ ಮಂಡ್ಯದೆಲ್ಲೆಡೆ ಜನತೆಯು ಕುಮಾರಸ್ವಾಮಿ ರವರಿಗಿಂತ ಶ್ರೀಯುತ ಯಡಿಯೂರಪ್ಪನವರೇ ಎಷ್ಟು  ಮೇಲು, ರಾಜ್ಯದ ಜನರ ಹಿತಕ್ಕಾಗಿ ಯಡಿಯೂರಪ್ಪ ರವರ ನಿರ್ಧಾರಗಳೇ ಸೂಕ್ತ. ಅಧಿಕಾರ ಸ್ವೀಕರಿಸುವ ಮುಂಚೆ ರೈತರ ಬಗ್ಗೆ ಕಾಳಜಿ ತೋರಿಸುತ್ತಿದ್ದ ಕುಮಾರಸ್ವಾಮಿ ರವರು ಅಧಿಕಾರ ಬಂದಮೇಲೆ ರೈತರನ್ನು ಸಂಪೂರ್ಣ ಮರೆತಿದ್ದಾರೆ. ಇಂತಹ ಮುಖ್ಯಮಂತ್ರಿಗಳ ಅಗತ್ಯ ರಾಜ್ಯದ ಜನರಿಗೆ ಇಲ್ಲ ಇನ್ನೊಮ್ಮೆ ಮಂಡ್ಯದಲ್ಲಿ ಜೆಡಿಎಸ್ ಪಕ್ಷವು ದೊಡ್ಡ ಪಕ್ಷವಾಗಿ ಹೊರ ಹೊಮ್ಮುವುದಿಲ್ಲಎಂದು ಛೀಮಾರಿ ಹಾಕಿದ್ದಾರೆ.

ಕೇವಲ ಮಂಡ್ಯದಲ್ಲಿ ಮಾತ್ರವಲ್ಲದೆ ಇಡಿ ರಾಜ್ಯದಲ್ಲೆಡೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ರವರು ನಮ್ಮ ಮುಖ್ಯಮಂತ್ರಿ ಯಲ್ಲ ಎಂದು ಜನತೆಯು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿ ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆ ಏರಬೇಕಿತ್ತು ಎಂದು ಎಲ್ಲರ ವಾದ.ನಿಮಗೂ ಹಾಗೆಯೇ ಅನಿಸುತ್ತಿದೆಯೇ? ಹಾಗಿದ್ದರೆ ಶೇರ್ ಮಾಡಿ ಬೆಂಬಲಿಸಿ