ಭಾರತೀಯ ಸೇನೆಗೆ 40 ಕೋಟಿ ರೂಪಾಯಿ ದಾನ ಮಾಡಿದ ಸಾಮಾಜಿಕ ಕಾರ್ಯಕರ್ತ! ಯಾರಿವರು?

ಸಾಮಾಜಿಕ ಕಾರ್ಯಕರ್ತ ಮುಂಬಯಿ ನಿವಾಸಿಯಾಗಿರುವವರು ತನ್ನ ಸ್ವ ಇಚ್ಛೆಯಿಂದ ಇಂದ ೪೦ ಕೋಟಿ ರೂಪಾಯಿಗಳನ್ನು ಭಾರತೀಯ ಸೇನೆಗೆ ನೀಡಿದ್ದಾರೆ. ಇದನ್ನು ತಾವು ಸೇನೆಯ ಮೇಲಿನ ಗೌರವದಿಂದ ಕೊಡುತ್ತಿದ್ದೇನೆ ಎಂದು ಪ್ರೇಮ್ ದರಾಯಾನಿ ತಿಳಿಸಿದ್ದಾರೆ.

 

ತಮ್ಮದೇ ಒಂದು ಚಾರಿಟೇಬಲ್ ಟ್ರಸ್ಟ್ “ರಾಧಾ ಕಾಲಿಂದಾಸ್ ದರಾಯಾನಿ ಚಾರಿಟೇಬಲ್ ಟ್ರಸ್ಟ್” ಹೊಂದಿದ್ದಾರೆ. ಈ ಟ್ರಸ್ಟ್ ಇಂದ ಇದಕ್ಕಿಂತ ಮೊದಲು ಸುಮಾರು ೬ ಎಕರೆ ಭೂಮಿಯನ್ನು ಸೇನೆಗೆ ನೀಡಿದ್ದರು. ಇಂದು ಆ ಜಾಗದಲ್ಲಿ ಸೇನೆಯ Army Law college ಕಟ್ಟಲಾಗಿದೆ. ಇದರ ಉದ್ಘಾಟನೆ ಇದೇ ವಾರದಲ್ಲಿ ನಡೆದಿತ್ತು. ಆ ಜಾಗದ ಇಂದಿನ ಮಾರುಕಟ್ಟೆ ಬೆಲೆ ಸುಮಾರು ೪೦ ಕೋಟಿ. ಸೇನೆಗೆ ನೀಡಿದ ಒಂದು ಉತ್ತಮವಾದ donation ಗಳಲ್ಲಿ ಇದೂ ಒಂದು. ಪುಣೆಯಿಂದ ೪೫ ಕಿ.ಮೀ. ದೂರದಲ್ಲಿದೆ.

 

ಇದರ ಬಗ್ಗೆ ಒಂದು ಸಂದರ್ಶನದಲ್ಲಿ ಮಾತಾನಾಡಿದ ದರಾಯಾನಿ ಅವರು

ಎಷ್ಟು ಹಣ ಅದರ ಬೆಲೆ ಇದು ಯಾವುದೂ ಮುಖ್ಯವಲ್ಲ, ಭಾರತೀಯ ಸೇನೆ ಮಾತ್ರ ಮುಖ್ಯ. ನಾವು ಇಂದು ರಾತ್ರಿ ನೆಮ್ಮದಿಯ ನಿದ್ದೆ ಮಾಡುತ್ತೇವೆ ಎಂದರೆ ಇದು ಸೇನೆ ಹಗಲು ರಾತ್ರಿ ಎನ್ನದೆ ಗಡಿಯಲ್ಲಿ ಕಾಯುವುದರಿಂದ ಆಗಿದೆ. ನಾವು ಇಂದು ಸ್ವಾತಂತ್ರ್ಯದಿಂದ ಇದ್ದೇವೆ ಎಂದೃ ಅದಕ್ಕೆ ಮುಖ್ಯ ಕಾರಣ ಭಾರತ ಸೇನೆ. ಗಡಿ ಆಚೆಗಿನ ಶತ್ರುಗಳ ವಿರುದ್ಧ ಮಾತ್ರವಲ್ಲದೇ‌ ಗಡಿಯೊಳಗಿನ ಶತ್ರುಗಳ ವಿರುದ್ಧ ಕೂಡಾ ಸೆಣಸಾಡುತ್ತಿದ್ದಾರೆ ನಮ್ಮ ಸೈನಿಕರು. ಇವರಿಗೆ ನಮ್ಮ ಕಡೆಯಿಂದ ಭಾವನಾತ್ಮಕ ಬೆಂಬಲ ನೀಡುವುದು ಪ್ರತಿಯೊಬ್ಬರ ಕರ್ತವ್ಯ.

ಅದೇ ಸಂಧರ್ಭದಲ್ಲಿ ಪ್ರತಿಯೊಬ್ಬರು ಸೇನೆಗೆ ಗೌರವ ನೀಡುವುದು ಮಾತ್ರ ಸಾಲದು ದೇಶಕ್ಕೆ ಅವರ ನಿಸ್ವಾರ್ಥ ಸೇವೆಗೆ ಇನ್ನೂ ಏನಾದರೂ ಹೆಚ್ಚಿನದು ಕೊಡಬೇಕು. ಇದು ಎಲ್ಲಾ ಪ್ರಜೆಗಳ ಕರ್ತವ್ಯ. ಈ ಧನ ಸಹಾಯ ಕೂಡಾ ಸೈನಿಕರಿಗೆ ಕೊಡುವುದು ಕಷ್ಟ ಏಕೆಂದರೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅವರಿಗೆ ಬೇರಾವುದೇ ಉದ್ದೇಶ ಇಲ್ಲದೆ ಈ ದಾನ ಮಾಡುತ್ತಿರುವುದು ಎಂದು ಮನವರಿಸಿ ಕೊಡಬೇಕಾಗುತ್ತದೆ. ಅದು ನಮ್ಮ ಸೇನೆಯ ಹೃದಯವಂತಿಕೆ.

ಇಂತಹ ಕೊಡುಗೈ ದಾನಿಗಳ ನೆರವು‌‌ ಇಂದು ಬಹಳ ಕಡಿಮೆಯಾಗುತ್ತಿರುವ ಸಂಧರ್ಭದಲ್ಲಿ ಇಂತಹ ದರಾಯಾನಿ ಅಂತವರ ದೊಡ್ಡ ಮೊತ್ತದ ದಾನ ನಮ್ಮಂತವರಿಗೆ ಸ್ಪೂರ್ತಿ.

ಭಾರತ್ ಮಾತಾ ಕೀ ಜೈ 

Comments (0)
Add Comment