ಕುಮಾರಸ್ವಾಮಿ ರವರಿಗೆ ಜನ ಉಗಿಯುತ್ತಿದ್ದಾರೆ: ಕಾಂಗ್ರೆಸ್ ಮುಖಂಡ

ಹೌದು ಕುಮಾರಸ್ವಾಮಿ ರವರಿಗೆ ಜನ ಉಗಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ, ಅಷ್ಟಕ್ಕೂ ಯಾರು ಹೇಳಿದ್ದು ವಿಷಯದ ಮೂಲವೇನು ಎಂಬುದನ್ನು ತಿಳಿಯಲು ದಯವಿಟ್ಟು ಸಂಪೂರ್ಣ ಓದಿ.

ಕುಮಾರಸ್ವಾಮಿ ರವರು ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಜನರು ನಂಬಿದ್ದರು, ಆದರೆ ರಾಜ್ಯದ ಆರ್ಥಿಕ ಸಂಕಷ್ಟವನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿ ಅವರು ರೈತರ ಸಾಲ ಸಂಪೂರ್ಣ ಮನ್ನ ಮಾಡಿಲ್ಲ. ಇದರಿಂದ ಎಲ್ಲೆಡೆ ಕುಮಾರಸ್ವಾಮಿ ರವರು ಕೆಂಗಣ್ಣಿಗೆ ಗುರಿಯಾಗಿ ರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ತಮ್ಮ ಮೈತ್ರಿ ಸರ್ಕಾರದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ ವಿ ಚಂದ್ರಶೇಖರ್ ಅವರು ಈ ಹೇಳಿಕೆಯನ್ನು ಹೇಳಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಚಂದ್ರಶೇಖರ್ ರವರು ಕುಮಾರಸ್ವಾಮಿ ಅವರು ರೈತರ ಸಾಲಮನ್ನ ಮಾಡುತ್ತಾರೆ ಎಂಬುದನ್ನು ಜನರು ನಂಬಿದ್ದರು ಆದರೆ ಸಿಎಂ ಆದ ಮೇಲೆ ಕುಮಾರಸ್ವಾಮಿ ರವರು ಏನು ಎಂಬುದು ಜನರಿಗೆ ಅರ್ಥವಾಗಿದೆ, ಇಷ್ಟೇ ಅಲ್ಲದೆ ಮಹಿಳೆಯರ ಸಾಲಮನ್ನ ಕೂಡ ನಡೆಯುತ್ತದೆ ಎಂದು ನಂಬಿದ್ದ ಮತದಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಈಗ ಮತದಾರರಿಗೆ ಬುದ್ಧಿ ಬಂದಿದ್ದು  ಎಚ್ ಡಿ ಕುಮಾರಸ್ವಾಮಿ ರವರಿಗೆ ಜನ ಉಗಿಯುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಕೆಲ ಬೂತ್ ನಲ್ಲಿ ಜೆಡಿಎಸ್ ಏಜೆಂಟ್ ಗಳೇ ಇರಲಿಲ್ಲ. ಪ್ರತಿ ಬೂತ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು 50ರಿಂದ ನೂರು ಜನ ಇರುತ್ತಿದ್ದರು. ಆದರೆ ಜೆಡಿಎಸ್ ನವರು ಇಬ್ಬರಿಂದ ಮೂರು ಮಂದಿ ಮಾತ್ರವೇ ಇರುತ್ತಿದ್ದರು ಎಂದಿದ್ದಾರೆ. ಇದೀಗ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಹೇಳಿಕೆ ವಿವಾದಕ್ಕೀಡಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಿದೆ.

Post Author: Ravi Yadav