ಭಾರತೀಯ ಸೇನೆಯ ತಾಕತ್ತು ತಿಳಿಸಿದ ಆರ್ ಎಸ್ ಎಸ್ ಒಮ್ಮೆ ಓದಿ

ಕಳೆದ ವರ್ಷ ನಡೆದಿದ್ದ ಸರ್ಜಿಕಲ್ ದಾಳಿ ಸುಳ್ಳೆಂದು ವಾದ ಮಾಡುತ್ತಿದ್ದ ಪ್ರತಿಪಕ್ಷಗಳನ್ನು ಶಾಂತವಾಗಿರಿಸಲು ಮೋದಿ ರವರು ಸರ್ಜಿಕಲ್ ಸ್ಟ್ರೈಕ್ ದಾಳಿಯ ವಿಡಿಯೋ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಪಕ್ಷಗಳು ವಿರೋಧಿಸಿದರು ದೇಶದಲ್ಲೆಡೆ ಬಾರಿ ಪ್ರಶಂಸೆ ವ್ಯಕ್ತವಾಗಿದೆ. ಈಗ ಆರ್ ಎಸ್ ಎಸ್ ಸಂಘಟನೆಯು ಭಾರತೀಯ ಸೇನೆಯ ತಾಕತ್ತನ್ನು ತಿಳಿಸಿದೆ.

ಅಷ್ಟಕ್ಕೂ ಆರ್ಎಸ್ಎಸ್ ಏನು ಹೇಳಿದೆ?

ಸರ್ಜಿಕಲ್ ಸ್ಟ್ರೈಕ್ ನ ವೀಡಿಯೋ ನೋಡಿದ ಆರ್ಎಸ್ಎಸ್ ಸಂಘಟನೆಯು ಭಾರತೀಯ ಸೇನೆ ಕೇವಲ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾತ್ರವಲ್ಲ ಮನಸು ಪಟ್ಟರೆ ಪಾಕಿಸ್ತಾನದ ಲಾಹೋರ್ ನಲ್ಲಿ ಶತ್ರುಗಳು ಅಡಗಿದ್ದರೂ ಚಿಟಿಕೆ ಹೊಡೆಯುವಷ್ಟು ಸಮಯದಲ್ಲಿ ಉಗ್ರರನ್ನು ಹೊಡೆದುರುಳಿಸಬಲ್ಲದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದೆ.
ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಎಂದು ಹೇಳಿದೆ. ಅಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ವೇಳೆ ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲು ಆಗಿದೆ.

ಕಾಶ್ಮೀರದಲ್ಲಿ ಕೆಲವು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪಿಡಿಪಿ ಎಂದಿಗೆ ಸೇರಿ ಬಿಜೆಪಿ ಸರ್ಕಾರ ಮೈತ್ರಿ ಸರ್ಕಾರವನ್ನು ರಚಿಸಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ನೆಲೆಸುವ ಉದ್ದೇಶದಿಂದ ಮತ್ತು ಉಗ್ರರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಮೈತ್ರಿ ಸರ್ಕಾರದಿಂದ ಹಿಂದೆ ಸರಿದವು ಎಂದು ಹೇಳಿದರು.
ಕಾಶ್ಮೀರದಲ್ಲಿ ಉಗ್ರರ ಪ್ರಮುಖ ನೆಲೆಗಳ ನ್ನು ಶಾಶ್ವತವಾಗಿ ನಿರ್ನಾಮ ಮಾಡುವುದು ಸೇನೆಗೆ ಆತ್ಮ ಸ್ಥೈರ್ಯ ತುಂಬುವುದು ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೈನಿಕರಲ್ಲಿ ಶಕ್ತಿ ತುಂಬುವುದು ನಮ್ಮ ಗುರಿಯಾಗಿತ್ತು. ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ವ್ಯಕ್ತಿಗಳನ್ನು ಮಟ್ಟಹಾಕಬೇಕಿತ್ತು, ಆದ ಕಾರಣ ಯಾವುದೇ ಮುಲಾಜಿಲ್ಲದೆ ಅಧಿಕಾರವನ್ನು ತ್ಯಾಗ ಮಾಡಿದೆವು ಎಂದರು.

Indian armyrss
Comments (0)
Add Comment