ಭಾರತೀಯ ಸೈನಿಕರ ವಿರುದದ್ದ ಹೇಳಿಕೆಗೆ ತಕ್ಕ ಶಾಸ್ತಿ ತೆತ್ತ ಕಾಂಗ್ರೆಸ್ಸಿಗರು

ಒಂದು ಕಡೆ ಭಾರತೀಯ ಸೈನಿಕರು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಉಗ್ರರ ದಮನ ಮಾಡುತ್ತಿದ್ದರೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಯೋಧರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದರು. ಕೇವಲ ಮೋದಿ ರವರ ಕಾರ್ಯಗಳನ್ನು ದೂಷಿಸುವುದಕ್ಕಾಗಿ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ, ಕಾಂಗ್ರೆಸ್ ನಾಯಕರಿಗೆ ಅದಕ್ಕೆ ತಕ್ಕ ಶಾಸ್ತಿ ಯೇ ನಡೆದಿದೆ.

ಅಷ್ಟಕ್ಕೂ ನಡೆದದ್ದೇನು?

ಸೇನಾ ಪಡೆಗಳು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಉಗ್ರರ ವಿರುದ್ಧ ಆಪರೇಷನ್ ಆಲ್ ಔಟ್ ನಡೆಸುತ್ತಿರುವ ಸಂದರ್ಭದಲ್ಲಿ ಕೆಲವು ನಾಗರಿಕರು ಮರಣ ಹೊಂದಿದ್ದಾರೆ ಎಂಬ ವದಂತಿಯನ್ನು ಕಾಂಗ್ರೆಸ್ ಪಕ್ಷ ಹುಟ್ಟು ಹಾಕಿ, ಭಾರತೀಯ ಸೈನಿಕರು ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡು ೨೦ ನಾಗರಿಕರನ್ನು ಕೊಂದು ಹಾಕುತ್ತಾರೆ. ಸೇನಾ ಪಡೆಯ ಕ್ರಮಗಳು ಉಗ್ರರಿಗಿಂತ ನಾಗರಿಕರ ಮೇಲೆಯೇ ಹೆಚ್ಚಾಗಿದೆ ಎಂದು ಗುಲಾಮ್ ನಾಭಿ ಮತ್ತು ಸೈಫುದ್ದೀನ್ ಸೋಜ್ ಹೇಳಿಕೆ ನೀಡಿದ್ದರು.

ಈ ಹೇಳಿಕೆಗಳಿಗೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಭಾರತೀಯ ಸೇನೆಗೆ ಅವಮಾನ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಈ ನಾಯಕರ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿದೆ. ಈ ಹೇಳಿಕೆಗಳನ್ನು ದೇಶ ದ್ರೋಹ ಹೇಳಿಕೆ ಎಂದು ಪರಿಗಣಿಸಿ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಷ್ಟಕ್ಕೂ ಸೈನ್ಯದ ವಿರುದ್ಧ ಹೇಳಿಕೆ ನೀಡುವುದು ದೇಶ ದ್ರೋಹವೆ?

ಹೌದು ಎನ್ನುತ್ತದೆ ಕಾನೂನು ಮತ್ತು ಈ ಹೇಳಿಕೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವುದರಿಂದ ಕಾನೂನು ಕ್ರಮ ಕೈಗೊಳ್ಳದೆ ಬೇರೆ ಅನಿವಾರ್ಯವಿಲ್ಲ.

ಅದೇನೇ ಇರಲಿ ಯಾವ ಪಕ್ಷದ ನಾಯಕರೇ ಆಗಿರಲಿ ಸೈನ್ಯದ ವಿರುದ್ಧ ಮಾತನಾಡಿದರೆ ಅವರಿಗೆ ತಕ್ಕ ಶಾಸ್ತಿಯಾಗಬೇಕು ಎನ್ನುವುದು ನಮ್ಮ ವಾದ. ಇದಕ್ಕೆ ನಿಮ್ಮ ಬೆಂಬಲವಿದ್ದರೆ ದಯವಿಟ್ಟು ಶೇರ್ ಮಾಡಿ

#JaiJawan

CongressIndian armyOperation Allout
Comments (0)
Add Comment