ವೀರ ಯೋಧರ ರಕ್ತದಲ್ಲಿ ಮತ ಹುಡುಕಿದ ಕಾಂಗ್ರೆಸ್: ನಾಚಿಕೆಯಾಗಬೇಕು

ಕಾಂಗ್ರೆಸ್ ಪಕ್ಷದ ಒಂದಲ್ಲಾ ಒಂದು ಕುತಂತ್ರಗಳು ಕಾಲಕಾಲಕ್ಕೆ ಬಯಲಾಗುತ್ತಾ ಬಂದಿವೆ. ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷವು ಕೇವಲ ಮತಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂಬುದನ್ನು ಸಾಬೀತುಪಡಿಸುತ್ತಿದೆ. ಆದರೆ ಒಂದು ಕೀಳು ಮಟ್ಟಕ್ಕೆ ಇಳಿದು ಯೋಧರ ರಕ್ತದಲ್ಲಿಯೂ ಕೂಡ ಮತಗಳನ್ನು ಹುಡುಕಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸರ್ಕಾರವು ಮೈತ್ರಿಯನ್ನು ಮುರಿದುಕೊಂಡು ಸರ್ಕಾರ ಅಂತ್ಯಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ದಾರಿಮಾಡಿಕೊಟ್ಟಿತು ಮತ್ತು ಇತ್ತೀಚೆಗಷ್ಟೇ ಸರ್ಜಿಕಲ್ ಸ್ಟ್ರೈಕ್ ನ ವಿಡಿಯೋ ವಿಡಿಯೋವನ್ನು ಬಹಿರಂಗಗೊಳಿಸಿತ್ತು.

ಪ್ರತಿ ಪಕ್ಷಗಳು ಕೇವಲ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಮ್ಮ ಹೆಮ್ಮೆಯ ಸೈನಿಕರು ಪ್ರಾಣವನ್ನು ಒತ್ತೆ ಇಟ್ಟು ನಡೆಸಿದ ಸರ್ಜಿಕಲ್ ಸ್ಟ್ರೈಕ್  ನನ್ನು ಸುಳ್ಳು ಎಂದು ಟೀಕೆ ಮಾಡುತ್ತಿದ್ದರು. ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತೀಯ ಸೈನಿಕರು ಉಗ್ರರ ವಿರುದ್ಧ ಹೋರಾಡುತ್ತಿದ್ದರೆ ಇತ್ತ ಕಡೆ ಕಾಂಗ್ರೆಸ್ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ.

ದೇಶದ್ರೋಹಿಗಳನ್ನು ಬೆಂಬಲಿಸಿ ಮತ್ತು ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಗಳನ್ನು ಸುಳ್ಳು ಎಂದು ಜನರಿಗೆ ಪ್ರಚಾರ ಮಾಡುತ್ತಿತ್ತು. ಆದ ಕಾರಣ ಕೇಂದ್ರ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಒಂದು ಬಹಿರಂಗಗೊಳಿಸಿ ಸೈನಿಕರ ವಿರುದ್ಧ ಮಾತನಾಡುವ ಬಾಯಿಮುಚ್ಚಿಸಿತ್ತು ಮತ್ತು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಇರುವುದರಿಂದ ಸೈನಿಕರಿಗೆ ಪೂರ್ಣ ಸ್ವಾತಂತ್ರ ದೊರಕಿದಂತಾಗಿದ್ದು ಉಗ್ರರ ದಮನಕ್ಕೆ ಮುಂದಾಗಿದ್ದಾರೆ.

ಈ ಸೈನಿಕರ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷವು ಹೊಗಳುವುದನ್ನು ಬಿಟ್ಟು, ಯೋಧರ ತ್ಯಾಗ ಮತ್ತು ರಕ್ತವನ್ನು ಬಿಜೆಪಿ ಪಕ್ಷವು ಮತಗಳನ್ನಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷದವರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಷ್ಟಕ್ಕೂ ಯೋಧರು ತಮ್ಮ ಜೀವನವನ್ನು ಕಾಯುತ್ತಿರುವುದು ದೇಶವನ್ನೇ ಹೊರತು ಕಾಯುತ್ತಿರುವುದು ದೇಶವನ್ನೇ ಹೊರತು ಎಂಬುದು ಕಾಂಗ್ರೆಸ್ ಗಮನಕ್ಕೆ ಬರದಂತೆ ಕಾಣುತ್ತಿದೆ.

ದಯವಿಟ್ಟು ಕಾಂಗ್ರೆಸ್ನವರು ತಮ್ಮ ಪ್ರಚಾರಕ್ಕಾಗಿ ದೇಶದ ಯೋಧರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು, ಯೋಧರ ತ್ಯಾಗ ಮತ್ತು ರಕ್ತ ಗಳಲ್ಲಿ ಮತ ಕಂಡವರು ಬಹುಶಃ ನೀವೇ ಇರಬೇಕು. ನಿಮ್ಮ ಪ್ರಚಾರಕ್ಕೆ ಬೇಕಿದ್ದರೆ ಯಾವುದಾದರೂ ಭ್ರಷ್ಟಾಚಾರ ಆರೋಪವನ್ನು ನಿರೂಪಿಸಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿ ಆದರೆ ದಯವಿಟ್ಟು ದೇಶದ ಹೆಮ್ಮೆಯ ಸೈನಿಕರ ಬಗ್ಗೆ ಮಾತನಾಡಬೇಡಿ ಅವರ ರಕ್ತ ಗಳಲ್ಲಿ ಕಾಣಿಸುವುದು ಕೇವಲ ಭಾರತ ಮಾತೆ ಚಿತ್ರ ನೆನಪಿರಲಿ.

CongressIndian armymodiNarendra modi
Comments (0)
Add Comment