ಕಾಂಗ್ರೆಸ್ ನ ಕುತಂತ್ರ ಬುದ್ಧಿ ಬಯಲು, ತೃತೀಯ ರಂಗದಲ್ಲಿ ಮತ್ತೊಂದು ದೊಡ್ಡ ಬಿರುಕು: ಲೋಕಸಭೆಗೆ ಭಾರಿ ಟ್ವಿಸ್ಟ್

ಕಾಂಗ್ರೆಸ್ ಗೆ ಶಾಕ್ ತೃತೀಯ ರಂಗದಲ್ಲಿ ಮತ್ತೊಂದು ದೊಡ್ಡ ಬಿರುಕು: ಲೋಕಸಭೆಗೆ ಭಾರಿ ಟ್ವಿಸ್ಟ್

0

ದಯವಿಟ್ಟು ನಗದೇ ಸಂಪೂರ್ಣ ಓದಿ, ಯಾಕೆಂದರೆ ತೃತೀಯರಂಗ ಎಂಬ ಹೆಸರು ಕೇಳಿದರೆ ನಗು ಬರದೇ ಇರಲಾರದು. ಕೆಲವೇ ಕೆಲವು ದಿನಗಳ ಹಿಂದೆ ಮೋದಿ ಅಲೆಯು ಸುನಾಮಿಯಾಗಿ ಬದಲಾದ ನಂತರ ಸುನಾಮಿಗೆ ಮೂರ್ಖರಂತೆ ತಡೆಗೋಡೆ ನಿರ್ಮಿಸಲು ವಿರೋಧ ಪಕ್ಷಗಳೆಲ್ಲವೂ ಒಂದಾಗಿ ತೃತೀಯ ರಂಗವನ್ನು ಸೃಷ್ಟಿ ಮಾಡಿಕೊಂಡರು. ಕೆಲವರಂತೂ ಎಲ್ಲಾ ಪಕ್ಷಗಳು ಒಗ್ಗೂಡಿ ದರಿಂದ ಮೋದಿ ರವರಿಗೆ ಗೆಲುವು ಕಷ್ಟ ಸಾಧ್ಯ ಎಂಬ ಮಾತುಗಳನ್ನು ಹರಿಹಾಯ್ದರು. ಆದರೆ ಈ ವಿಷಯ ತಿಳಿದ ನಂತರ ಮೋದಿ ವಿರೋಧಿಗಳು, ತೃತೀಯರಂಗದ ಬೆಂಬಲಿಗರು ಅಡಗಿ ಕುಳಿತುಕೊಳ್ಳಬೇಕಾಗುತ್ತದೆ.

ಕಾಂಗ್ರೆಸ್ ಪಕ್ಷದ ಜತೆ ಕೈಜೋಡಿಸಲು ಸಿದ್ಧರಾಗಿದ್ದ ಬರೋಬ್ಬರಿ ಮೂರು ಪಕ್ಷಗಳು ಹಿಂದೆ ಸರಿದಿದ್ದ ನ್ನು ನೀವು ಕೇಳಿರಬಹುದು.  ಇದರ ಬಗ್ಗೆ ನಾವು ಮೊದಲನೆ ವಿಕೆಟ್ ಪತನ ಎರಡನೇ ವಿಕೆಟ್ ಪತನ ಮತ್ತು ಮೂರನೇ ವಿಕೆಟ್ ಪತನ ಎಂಬ ಸಾಲು ಸಾಲು ಅಂಕಣಗಳನ್ನು ಬರೆದಿದ್ದವು ಆದರೆ ಈಗ ಅಸಲಿಗೆ ತೃತಿಯ ರಂಗ ಇರುವುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಯಾಕೆ ಅಂತೀರಾ ಸಂಪೂರ್ಣ ತಿಳಿಯಲು ಕೆಳಗಡೆ ಓದಿ.

ಮೊನ್ನೆಯಷ್ಟೇ ಪ್ರಣವ್ ಮುಖರ್ಜಿ ರವರು ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಸಿಡಿಮಿಡಿಗೊಂಡ ಓವೈಸಿ ಪಕ್ಷ ಕಾಂಗ್ರೆಸ್ ಪಕ್ಷ ನಾಶವಾಗುತ್ತಿದೆ, ಎಂದು ಟೀಕೆಗಳನ್ನು ಮಾಡಿ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ. ಇದರ ಬೆನ್ನಲ್ಲೇ ಮೋದಿರವರ ಮುಂದೆ ಬೇಡಿಕೆಗಳನ್ನು ಇಟ್ಟು ಅರವಿಂದ ಕ್ರೇಜಿವಾಲ್ ಬೇಡಿಕೆಗಳನ್ನು ಈಡೇರಿಸಿದರೆ ಬಿಜೆಪಿ ಪಕ್ಷಕ್ಕೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತೇನೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು. ಇಷ್ಟು ಸಾಲದು ಎಂಬಂತೆ ಪಾಪ ರಾಹುಲ್ ಗಾಂಧಿರವರಿಗೆ ಮತ್ತೊಂದು ಶಾಕ್ ಎದುರಾಗಿತ್ತು, ತೃತೀಯರಂಗದ ಪ್ರಮುಖ ಪಕ್ಷ ಎನಿಸಿಕೊಂಡಿದ್ದ, ಮಾಯಾವತಿ ಮುನ್ನಡೆಸುವ ಪಕ್ಷವು ತಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಇರುವುದಿಲ್ಲ ನಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಹೋರಾಡುತ್ತೇವೆ ಯಾವುದೇ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆ ಸೀಟು ಬಿಟ್ಟು ಕೊಡುವುದಿಲ್ಲ ಎಂದು ರಾಹುಲ್ ಗಾಂಧಿರವರಿಗೆ ಶಾಕ್ ನೀಡಿತ್ತು.

ಈಗ ಮತ್ತೊಮ್ಮೆ ರಾಹುಲ್ ಗಾಂಧಿರವರಿಗೆ ಭರ್ಜರಿ ಶಾಕ್ ಎದುರಾಗಿದೆ. ತೃತೀಯ ರಂಗವನ್ನು ಕಟ್ಟಿದ್ದೇವೆ ಬೆಳೆಸುತ್ತೇವೆ ಮೋದಿ ರವರನ್ನು ಸೋಲಿಸುತ್ತೇವೆ ಎಂದು ಕೊಂಡಿದ್ದ ಪ್ರಧಾನಿ ಆಕಾಂಕ್ಷಿ ರಾಹುಲ್ ರವರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ನ ಕುತಂತ್ರ ನೀತಿ ಬಯಲಾಗಿದ್ದು ಕಾಂಗ್ರೆಸ್ ನಿಂದ ಬೆಂಬಲ ಹಿಂಪಡೆಯುವುದಾಗಿ ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡಿದ್ದು ಕಾಂಗ್ರೆಸ್ ನವರಿಗೆ ಮತ್ತೊಂದು ರಾಜ್ಯ ಕಠಿಣವಾಗಲಿದೆ.

ಅಷ್ಟಕ್ಕೂ ಏನದು ಕುತಂತ್ರ ಬುದ್ದಿ?

ರಾಜಕೀಯದಲ್ಲಿ ಮೈತ್ರಿ ಗಳೆಲ್ಲವೂ ಸರ್ವೇಸಾಮಾನ್ಯ, ಇವತ್ತು ಒಂದು ಪಕ್ಷಕ್ಕೆ ಬೆಂಬಲ ನೀಡುವವರು ಮರುದಿನ ಮತ್ತೊಂದು ಪಕ್ಷದ ಪರವಾಗಿ ನಿಲ್ಲುತ್ತಾರೆ.ಇದೆಲ್ಲವೂ ತಿಳಿದಿರುವ ವಿಷಯ ಯಾರು ಇದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಜೊತೆಗೆ ಇದ್ದುಕೊಂಡು ಬೇರೆ ಪಕ್ಷಗಳಿಗೆ ಸಹಾಯ ಮಾಡಿದರೆ ಮೋಸ ಮಾಡಿದಂತಾಗುತ್ತದೆ. ಇಂತಹದ್ದೇ ಒಂದು ಕುತಂತ್ರ ಬುದ್ಧಿಯನ್ನು ಕಾಂಗ್ರೆಸ್ ಪಕ್ಷ ಬಂಗಾಳದಲ್ಲಿ ಮಾಡಿದೆ.

ಮಮತಾ ಬ್ಯಾನರ್ಜಿ ನವರು ಪಶ್ಚಿಮಬಂಗಾಳದಲ್ಲಿ ಕಳೆದ ಚುನಾವಣೆ ವೇಳೆ ಗೆಲ್ಲುವ ಫೇವರಿಟ್ ಎನಿಸಿದ್ದರು.  ಕಾಂಗ್ರೆಸ್ ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಹೇಗಾದರೂ ಮಾಡಿ ಮೋಸ ಬ್ಯಾನರ್ಜಿ ರವನ್ನು ಸೋಲಿಸಬೇಕೆಂದು, ಎಲ್ಲಾ ವಿರೋಧ ಪಕ್ಷಗಳ ಜೊತೆ ಒಳ ಮೈತ್ರಿಯನ್ನು ಮಾಡಿಕೊಂಡಿತು. ಈ ವಿಷಯ ಇದುವರೆಗೂ ಯಾರಿಗೂ ತಿಳಿದಿರಲಿಲ್ಲ ಆದರೆ ಈ ಕುತಂತ್ರ ನೀತಿ ಬಯಲಾಗುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾಬ್ಯಾನರ್ಜಿ ರವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಕೈಜೋಡಿಸುವುದಾಗಿ ಘೋಷಿಸಿದ್ದರು. ಈಗ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇದು ಕಾಂಗ್ರೆಸ್ ಗೆ ಬಾರಿ ತಲೆ ನೋವಾದರೆ ಮೋದಿ ಅಭಿಮಾನಿಗಳಿಗೆ ನಗುವಿನ ಆಟಿಕೆ ಇದ್ದಂತೆ.

ಇತ್ತ ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ಗೊಂದಲಗಳು ಇನ್ನೂ ಮುಗಿದಿಲ್ಲ, ಎರಡು ಪಕ್ಷಗಳು ಅಪ ಮೈತ್ರಿ ಮಾಡಿಕೊಂಡರೆ ಏನೆಲ್ಲ ಸಂಭವಿಸ ಬಹುದು ಎಂಬುದಕ್ಕೆ ಕರ್ನಾಟಕವೇ ಸಾಕ್ಷಿ. ಇನ್ನು ವಿರೋಧ ಪಕ್ಷಗಳ ಒಂದಾಗಿ ಮೈತ್ರಿ ಸರ್ಕಾರ ರಚಿಸಿದ್ದಲ್ಲಿ ಎಷ್ಟು ಗುದ್ದಾಟಗಳು  ನಡೆಯಬಹುದು,ನೀವೇ ಯೋಚನೆ ಮಾಡಿ. ಅದಕ್ಕಾಗಿ ಸ್ಪಷ್ಟ ಬಹುಮತ ನೀಡಿ, ಕರ್ನಾಟಕದ ಅತಂತ್ರ ಸ್ಥಿತಿ ಭಾರತಕ್ಕೆ ಬೇಡ ಎಂಬುದು ಮೋದಿ ರವರ ಅಭಿಮಾನಿಗಳ ನಿಲುವು.

ಇನ್ನು ಚುನಾವಣೆ ಕಾವೇರಿಲ್ಲ ಅಷ್ಟರಲ್ಲಾಗಲೇ ಇಷ್ಟು ಗುದ್ದಾಟಗಳು, ಇನ್ನು ಮುಂದೆ ಏನೇನು ನಡೆಯಬಹುದು ಎಂಬುದನ್ನು ಕಾದುನೋಡಬೇಕಾಗಿದೆ. ದಯವಿಟ್ಟು ಶೇರ್ ಮಾಡಿ ಬೆಂಬಲಿಸಿ.

ಜೈ ಹಿಂದ್