ವಿಶ್ವದ ದೊಡ್ಡಣ್ಣನಿಗೆ ಗುದ್ದು ನೀಡಿದ ಮೋದಿ !!

0

ಹೌದು ನೀವು ಕೇಳುತ್ತಿರುವುದು ನಿಜ, ಈ ಮೊದಲು ಒಂದು ಕಾಲವಿತ್ತು ದೇಶದ ದೊಡ್ಡಣ್ಣನ ಜೊತೆ ಪ್ರತಿಯೊಬ್ಬರು ಆರ್ಥಿಕ ಸಂಬಂಧ ಬೆಳೆಸಿ ವಿಶ್ವದ ದೊಡ್ಡಣ್ಣ ನೀಡಿದ ಎಲ್ಲಾ ಶರತ್ತುಗಳಿಗೆ ಒಪ್ಪಿ ಕೊಂಡು  ತಲೆಬಾಗಿ ನಡೆಯಬೇಕಿತ್ತು. ವಿಶ್ವದ ದೊಡ್ಡಣ್ಣನಿಗೆ ಆರ್ಥಿಕ ವಿಷಯದಲ್ಲಾಗಲಿ ಅಥವಾ ಬೇರೆ ಇನ್ಯಾವುದೇ ವಿಷಯವಿರಲಿ ಸವಾಲೆಸೆದ ಅದು ಕೇವಲ ಕೆಲವೇ ರಾಷ್ಟ್ರಗಳು. ಅದರಲ್ಲಿ ರಶಿಯಾ ಮತ್ತು ಚೈನಾ ಮೊದಲಿನವು.

ಆದರೆ ಈಗ ಕಾಲ ಬದಲಾಗಿದೆ ಭಾರತವನ್ನು ಮೋದಿ ಎಂಬ ಮಹಾನ್ ವಿಶ್ವ ನಾಯಕ ಮುಂದುವರಿಸುತ್ತಿದ್ದಾರೆ ವಿಶ್ವದ ದೊಡ್ಡಣ್ಣ ನ ಜೊತೆ ಸಂಬಂಧಕ್ಕೂ ಸಮರಕ್ಕೂ ಸಿದ್ಧ ಎನ್ನುವ ಕಾಲ ಬಂದಿದೆ. ಹೌದು ಅಮೇರಿಕಾ ದೇಶದ ಆರ್ಥಿಕ ದಿಗ್ಬಂಧನ ಗಳಿಗೆ ಭಯ ಪಡುವ ಕಾಲ ಹೋಗಿದೆ. ವಿಶ್ವದ ದೊಡ್ಡಣ್ಣ ಎಷ್ಟೇ ಸುಂಕ ವಿಧಿಸಿದ್ದರು ಯಾವುದೇ ಕ್ರಮ ಕೈಗೊಳ್ಳದೇ ಇರುವ ಕಾಲ ಹೋಗಿದೆ. ಅಷ್ಟಕ್ಕೂ ವಿಷಯದ ಮೂಲ ವೇನೆಂದು ಯೋಜನೆ ಮಾಡುತ್ತಿರುವಿರಾ ಕೆಳಗಡೆ ಓದಿ.

ಅಷ್ಟಕ್ಕೂ ವಿಷಯದ ಮೂಲವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಕೆಲವು ದಿನಗಳ ಹಿಂದಷ್ಟೇ ಭಾರತದ ಆರ್ಥಿಕ ಪರಿಸ್ಥಿತಿಯನ್ನು ನೋಡಿ  ಅಲ್ಯೂಮೀನಿಯಂ ಹಾಗೂ ಸ್ಟೀಲ್​ಗೆ ಬಾರಿ ಸುಂಕ ವಿಧಿಸಿದ್ದರು. ಈ ಕುರಿತು ಮಾತನಾಡಿದ ಡೊನಾಲ್ಡ್ ಟ್ರಂಪ್ ರವರು  ಈ ಕುರಿತಾಗಿ ಮಾತನಾಡಿದ್ದ ಡೊನಾಲ್ಡ್​ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸ್ಟೀಲ್​ ಮೇಲೆ ಶೇ. 25 ಹಾಗೂ ಅಲ್ಯೂಮೀನಿಯಂ ಮೇಲೆ ಶೇ. 10 ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರು. ಇದು ಭಾರತಕ್ಕೆ ಶಾಕ್ ನೀಡಿತು. ಎಲ್ಲಾ ಸಂಬಂಧಗಳು ಸರಿಯಾಗಿ ಇದ್ದರು ವಿಶ್ವ ದೊಡ್ಡಣ್ಣನ ಈ ಆದೇಶ ಆಶ್ಚರ್ಯಕರವಾಗಿತ್ತು.

ಇದೇ ಒಂದು ಬೇರೆ ರಾಷ್ಟ್ರವಾಗಿದ್ದರೆ  ವಿಶ್ವದ ದೊಡ್ಡಣ್ಣನನ್ನು ಎದುರು ಹಾಕಿಕೊಳ್ಳದೆ ಸುಂಕ ಕಟ್ಟಿ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಮೋದಿ ರವರು ಟ್ರಂಪ್ ರವರಿಗೆ ಶಾಕ್ ನೀಡಿದ್ದಾರೆ.

ಅಷ್ಟಕ್ಕೂ ಏನಿದು ಶಾಕ್  ತಿಳಿಯಲು ಮುಂದೆ ಓದಿ.

ವಿಶ್ವದ ದೊಡ್ಡಣ್ಣ ನ ಜೊತೆ ವ್ಯಾಪಾರ ವಹಿವಾಟುಗಳನ್ನು ಸುಭದ್ರವಾಗಿ ಇಟ್ಟುಕೊಳ್ಳಲು ಭಾರತ ಕೆಲವು ದಿನಗಳ ಹಿಂದಷ್ಟೇ ವಿಶ್ವದ ದೊಡ್ಡಣ್ಣನಿಗೆ ತೆರಿಗೆ ವಿನಾಯಿತಿಯನ್ನು ನೀಡಿತ್ತು. ಆದರೆ ಟ್ರಂಪ್ ರವರ ಈ ನಡೆ ಮೋದಿ ರವರನ್ನು ಕೆರಳಿಸಿದ್ದು ತೆರಿಗೆ ವಿನಾಯಿತಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಇದರ ಕುರಿತಾಗಿ ವಿಶ್ವ ವ್ಯಾಪಾರ ಸಂಸ್ಥೆ ಗೆ ಪತ್ರವೊಂದನ್ನು ಬರೆದಿದ್ದಾರೆ. ಕೆಳಗಿನ ವಸ್ತುಗಳಿಗೆ ಈ ರೀತಿ ಶುಲ್ಕ ವಿಧಿಸಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.ಇದರಿಂದ ಭಾರತ ಸರ್ಕಾರಕ್ಕೆ ಆದಾಯ ಹೆಚ್ಚಾಗಲಿದೆ.\

ಅಷ್ಟಕ್ಕೂ ಯಾವ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗಿದೆ?

ಭಾರತವು 800 ಸಿಸಿಗಿಂತಲೂ ಹೆಚ್ಚಿನ ಕ್ಷಮತೆಯುಳ್ಳ ಬೈಕ್​ಗಳು, ಸೇಬು ಹಾಗೂ ಬಾದಾಮಿಯಂತಹ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಿಸಲು ನಿರ್ಧರಿಸಿದೆ.

ಈ ಹೊಸ ನಿರ್ಧಾರದ ಅನ್ವಯ ಅಮೆರಿಕಾದಿಂದ ಆಮದು ಮಾಡುವ 800 ಸಿಸಿ ಬೈಕ್​ಗಳ ಮೇಲೆ ಶೇ. 50 ರಷ್ಟು ಸುಂಕ, ಬಾದಾಮಿ ಮೇಲೆ ಶೇ. 20, ಶೇಂಗಾಕ್ಕೆ ಶೇ. 20 ಹಾಗೂ ಸೇಬುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸಲು ಯೋಚಿಸಲಾಗಿದೆ.

ಅಕ್ರೂಟ್​ ಮೇಲಿನ ಆಮದು ಸುಂಕ ಶೇ. 30 ರಿಂದ ಶೇ. 100ಕ್ಕೇರಿಸಲಾಗಿದೆ. ಇದನ್ನು ಹೊರತುಪಡಿಸಿ ಬಾದಾಮಿ ಮೇಲಿನ ಆಮದು ಸುಂಕ ಕಿಲೋ ಒಂದಕ್ಕೆ 65 ರಿಂದ 100 ರೂಪಾಯಿ ಮಾಡಲಾಗಿದೆ.

ಭಾರತದಿಂದ ಹೆಚ್ಚಿಸಲಾದ ಸುಂಕ ಜೂನ್ 21 ಜಾರಿಗೆ ಬರಲಿದೆ.