ಉಗ್ರರಿಗೆ ಬಿತ್ತು ಕಡಿವಾಣ: ಸೈನಿಕರಿಂದ ಮಾಸ್ಟರ್ ಮೈಂಡ್ ಅರೆಸ್ಟ್

ಹೌದು ಸೇನೆ ಜಮ್ಮು ಮತ್ತು ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳುತ್ತಿದ್ದಂತೆ ಅಸಲಿ ಆಟ ಶುರು ಮಾಡಿದೆ. ನೆನ್ನೆ ಎಷ್ಟೇ ಉಗ್ರರನ್ನು ಚೆಂಡಾಡಿದ್ದ ಸೇನೆ ಈಗ ಮತ್ತೊಂದು ಕಾರ್ಯ ಚರಣೆ ಮಾಡಿ ಯಶಸ್ವಿಯಾಗಿದೆ ಆದರೆ ಇದು ಒಬ್ಬ ಉಗ್ರನನ್ನು ತಡೆದಂತೆ ಅಲ್ಲ ಬದಲಾಗಿ ಸಾವಿರಕ್ಕಿಂತ ಹೆಚ್ಚು ಉಗ್ರರನ್ನು ತಡೆದಂತೆ, ಅದು ಹೇಗೆ ಎಂದು ತಿಳಿಯಲು ಸಂಪೂರ್ಣ ಓದಿ.

ಅಷ್ಟಕ್ಕೂ ವಿಷಯದ ಮೂಲವೇನು?

ವಿಷಯದ ಮೂಲವೇ ಹಣ ಮತ್ತು ಉಗ್ರರಿಗಿರುವ ನಂಟು. ಅದೆಷ್ಟೋ ಜನ ಉಗ್ರರು ಕೇವಲ ಹಣಕ್ಕಾಗಿ ದಾಳಿ ಮಾಡುತ್ತಾರೆ ಮತ್ತು ಕಾಶ್ಮೀರಿ ಯುವಕರನ್ನು ಪ್ರಚೋದಿಸಲು ಈ ಹಣವೇ ಒಂದು ಹಸ್ತ್ರ ವಾಗಿದೆ. ಯಾವುದೇ ಕಂಪನಿಗಳು ಇಲ್ಲದ ಕಾರಣ ಯುವಕರು ಕಾಳಿ ಕುಳಿತಿರುವ ಸಂದರ್ಭದಲ್ಲಿ ಸೇನೆಯ ಮೇಲೆ ದಾಳಿ ನಡೆಸಲು ಹಣ ನೀಡುತ್ತಾರೆ. ಈ ಹಣಕ್ಕೋಸ್ಕರ ಅದೆಷ್ಟೋ ಕಾಶ್ಮೀರಿ ಯುವಕರು ಬಲಿಯಾಗುತ್ತಿದ್ದಾರೆ, ಆದರೆ ಅವರಿಗೆ ತಿಳಿದಿಲ್ಲ ನಾವು ದಾಳಿ ನಡೆಸದೆ ಇದ್ದಲ್ಲಿ ಶಾಂತಿ ಕಾಪಾಡಿಕೊಂಡಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು, ಆದರೆ ಇನ್ನು ಮುಂದೆ ಈ ಸ್ಥಿತಿ ಬರುವುದು ಕಡಿಮೆಯಾಗಲಿದೆ.

 

ಅದೇಗೆ ಅಂತೀರಾ ಮುಂದೆ ಓದಿ?

ಕಾಶ್ಮೀರದಲ್ಲಿ ಅದೆಷ್ಟೋ ಉಗ್ರರಿಗೆ ಬೆಂಬಲ ನೀಡುವ ಜನರಿದ್ದಾರೆ, ಅವರ ಬಳಿ ಹಣವು ಬೇಕಾದಷ್ಟಿದೆ ಅವರೆಲ್ಲರೂ ಕೇವಲ ಪಾಕಿಸ್ತಾನ ಸರ್ಕಾರಕ್ಕೆ ಮಾತು ಉಗ್ರರಿಗೋಸ್ಕರ ತಮ್ಮ ಹಣವನ್ನು ಖರ್ಚು ಮಾಡಿ ಯುವಕರನ್ನು ಸೇನೆಯ ಮೇಲೆ ದಾಳಿ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಆದರೆ ಮೋದಿ ರವರ ಪ್ಲಾನ್ ನೋಡಿ, ಸರ್ಕಾರ ಬೀಳಿಸಿ ಸೇನೆಯ ಕೈಗೆ ಅಧಿಕಾರ ನೀಡಿದ ತಕ್ಷಣ ಆಟ ಶುರು ಮಾಡಿದ ಸೇನೆ, ಮೊದಲು ಹಣ ಬರುವ ಮೂಲವನ್ನು ಕಂಡು ಹಿಡಿಯಲು ಪ್ರಾರಂಭಿಸಿದೆ. ಇದಕ್ಕೆ ಪ್ರತಿಫಲವಾಗಿ ಹಲವು ಹಣ ಹಂಚುವವರನ್ನು ಸೇನೆ ಬಂದಿಸಿದೆ.

ಇಷ್ಟು ಸಾಲದು ಎಂಬಂತೆ ಮೂಲವನ್ನು ಕಂಡು ಹಿಡಿದು ಭಯೋತ್ಪಾದಕರಿಗೆ ಕೋಟಿ ಕೋಟಿಗಳಲ್ಲಿ ಹಣ ಪೂರೈಸಿದ ಪ್ರಮುಖ ಆರೋಪಿ ರಮೇಶ್ ಶಾನನ್ನು ಉತ್ತರ ಪ್ರದೇಶ ಉಗ್ರರ ನಿಗ್ರಹ ದಳ (ಎಟಿಎಸ್) ಮತ್ತು ಮಹಾರಾಷ್ಟ್ರ ಪೋಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪುಣೆಯಲ್ಲಿ ಬಂಧಿಸಿದ್ದಾರೆ. ಪಾಕಿಸ್ತಾನ ವ್ಯಕ್ತಿಯೊಬ್ಬನ ಸೂಚನೆ ಮೇರೆಗೆ ವಿವಿಧ ಬ್ಯಾಂಕ್‍ಗಳಿಗೆ ಹಣ ಜಮೆಗೊಳಿಸಿದ ಆರೋಪದ ಮೇಲೆ ಕಳೆದ ಮಾರ್ಚ್‍ನಲ್ಲಿ ಉತ್ತರ ಪ್ರದೇಶದ ಗೋರಖ್‍ಪುರ್‍ನಲ್ಲಿ ಆರು ಜನರನ್ನು ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು 28 ವರ್ಷದ ರಮೇಶ್ ಶಾನನ್ನು ಜಂಟಿ ಪಡೆ ಬಂಧಿಸಿದೆ. ಈತ ಉಗ್ರರಿಗೆ ಹಣ ಪೂರೈಸುವ ಪ್ರಮುಖ ಸೂತ್ರಧಾರ ಎನ್ನಲಾಗಿದೆ

Comments (0)
Add Comment