ಇಬ್ಬರ ಜಗಳ ಮೋದಿ ರವರಿಗೆ ಲಾಭ: ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದ ಓವೈಸಿ

ಹೌದು ಈಗ ಓವೈಸಿ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿದೆ. ಇಷ್ಟು ದಿವಸ ನಾವು ತೃತೀಯ ರಂಗವನ್ನು ರಚಿಸಿಕೊಂಡು ಮೋದಿ ರವರ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಓವೈಸಿ ಮತ್ತು ಕಾಂಗ್ರೆಸ್ ನಡುವೆ ಈಗ ಒಳಜಗಳ ಪ್ರಾರಂಭವಾಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ಮೊನ್ನೆಯಷ್ಟೇ ಪ್ರಣಭ್ ಮುಖರ್ಜಿ ರವರು RSS ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ರವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ವಿರುದ್ಧ ತಿರುಗಿ ಬಿದ್ದಿದ್ದ ಓವೈಸಿ ಕಾಂಗ್ರೆಸ್ ನಾಶವಾಗುತ್ತಿರುವ ಪಕ್ಷವೆಂದು ಹೇಳಿಕೆ ನೀಡಿದ್ದರು.

ಇದರಿಂದ ಎಲ್ಲರೂ ತೃತೀಯರಂಗದ ಮೊದಲ ವಿಕೆಟ್ ಪತನ ಎಂದು ತಿಳಿದಿದ್ದರು. ಅದಕ್ಕೆ ಪುಷ್ಟಿ ನೀಡುವಂತೆ ಇಂದು ಓವೈಸಿ ರವರು ಮತ್ತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇದರಿಂದ ಓವೈಸಿ ಪಕ್ಷದವರು ತೃತೀಯ ರಂಗದಿಂದ ಹೊರಗುಳಿಯುವುದು ಬಹುತೇಕ ಖಚಿತವಾದಂತಿದೆ.

ಅಷ್ಟಕ್ಕೂ ಈಗ ಹರಿಹಾಯಲು ಕಾರಣವೇನು? 

ದೇಶದ ರಾಷ್ಟ್ರಪತಿಯಾದ ಪ್ರಣವ್ ಮುಖರ್ಜಿ ರವರನ್ನು ಇಫ್ತಾರ್ ಕೂಟಕ್ಕೆ ರಾಹುಲ್ ಗಾಂಧಿ ಆಹ್ವಾನಿಸಿದ್ದರು. ಇದರಿಂದ ಸಿಡಿಮಿಡಿಗೊಂಡ ಓವೈಸಿ ರವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

“ಇದು ಕಾಂಗ್ರೆಸ್ಸಿನ ವಿಡಂಬನೆ. ಕಾಂಗ್ರೆಸ್ಸಿಗೆ ಮುಸ್ಲಿಂ ಸಬಲೀಕರಣ ಬೇಕಿಲ್ಲ. ಅದು ಹಿಂದು ಮತಗಳನ್ನು ಆದಷ್ಟು ಜಾಸ್ತಿ ಪಡೆಯುವ ಬಗ್ಗೆಯೇ ಚಿಂತನೆ ನಡೆಸುತ್ತಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿ, ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳುವ ಮೂಲಕ ತಮ್ಮ ಸಂದೇಶ ಏನು ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟವಾಗಿ ತಿಳಿಸಿದ್ದಾರೆ” ಎಂದು ಓವೈಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೆಲ್ಲಾ ನೋಡಿದರೆ ಇವರ ತೃತಿಯ ರಂಗ ಚುನಾವಣೆಗೂ ಮುಂಚೆ ಮುರಿದು ಬಿದ್ದು ಪ್ರತಿಯೊಬ್ಬರು ನೇರವಾಗಿ ಮೋದಿ ಅವರನ್ನು ಎದುರಿಸುವ ಪರಿಸ್ಥಿತಿಯನ್ನು ತಂದುಕೊಳ್ಳುವಂತೆ ಇದ್ದಾರೆ. ಒಟ್ಟಿನಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಇಲ್ಲಿ ಯಾವ ಬರೆಯುತ್ತಿದ್ದರು ಮೋದಿ, ಕೆಲವರ ಪ್ರಕಾರ ಯಾವುದೇ ತೃತೀಯ ರಂಗ ವಾಗಲಿ ಮೋದಿ ಅವರನ್ನು ಏನು ಮಾಡಲು ಸಾಧ್ಯವಿಲ್ಲವೆಂದು  ಮಾತನಾಡುತ್ತಿದ್ದಾರೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕಿದೆ.

Post Author: Ravi Yadav