ಹೇಗಿದೆ ಗೊತ್ತಾ ಮುಕೇಶ್ ಅಂಬಾನಿಯ ವ್ಯಾನಿಟಿ ವ್ಯಾನ್?

ಹೇಗಿದೆ ಗೊತ್ತಾ ಮುಕೇಶ್ ಅಂಬಾನಿಯ ವ್ಯಾನಿಟಿ ವ್ಯಾನ್?

0

ಮುಕೇಶ್ ಅಂಬಾನಿ ಭಾರತ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಮುಕೇಶ್ ಅಂಬಾನಿ ಮನೆ ಕೂಡ ಅತ್ಯಂತ ದುಬಾರಿ ಮನೆಗಳಲ್ಲಿ ಒಂದು. ನಿಮಗೆ ಗೊತ್ತಿರುವ ಹಾಗೆ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮೂರು ಲಕ್ಷ ರೂಪಾಯಿ ಮೌಲ್ಯದ ಟೀ ಕುಡೀತಾರಂತೆ. ಇದ್ರಿಂದ್ಲೇ ನೀವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು, ಮುಕೇಶ್ ಅಂಬಾನಿ ಲೈಫ್ ಸ್ಟೈಲ್ ಹೇಗಿರುತ್ತೆ ಎನ್ನುವ ಬಗ್ಗೆ.

ಮುಕೇಶ್ ಅಂಬಾನಿ ಬಳಿ ದುಬಾರಿ ಬೆಲೆಯ ಸಾಕಷ್ಟು ವಾಹನಗಳಿವೆ. ಅಂಬಾನಿ ಅತ್ಯಾಕರ್ಷಕ, ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್ ರೆಡಿ ಮಾಡಿಸಿದ್ದಾರೆ. ಇದಕ್ಕಾಗಿ ಮುಕೇಶ್ 25 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಡಚ್ ಕಂಪನಿ ಸಿದ್ಧಪಡಿಸಿರುವ ಈ ವ್ಯಾನಿಟಿ ವ್ಯಾನ್ ನಲ್ಲಿ ಎಲ್ಲ ಸೌಲಭ್ಯಗಳೂ ಇವೆ.

ಸಮಯ ಉಳಿಸುವ ಹಿನ್ನೆಲೆಯಲ್ಲಿ ವ್ಯಾನಿಟಿ ವ್ಯಾನ್ ನಲ್ಲಿಯೇ ಮೀಟಿಂಗ್ ರೂಂ ಕೂಡ ಇದೆ. ಬಾಂಬ್, ಗುಂಡು ಹಾಗೂ ಬೆಂಕಿ ಈ ವ್ಯಾನ್ ಗೆ ತಗಲೋದಿಲ್ಲ. ಈ ವ್ಯಾನಿಟಿ ವ್ಯಾನ್ ನಲ್ಲಿ ಮುಕೇಶ್ ಅಂಬಾನಿಯ ಪೂರ್ತಿ ಕುಟುಂಬ ವಾಸ ಮಾಡಬಹುದಾಗಿದೆ. ಮುಂಬೈ ರಸ್ತೆಯಲ್ಲಿ ಈ ವ್ಯಾನಿಟಿ ವ್ಯಾನ್ ಓಡಾಡಲು ಆರ್ ಟಿ ಓ ಪರವಾನಿಗೆ ನೀಡಿದೆ.