ಟ್ವೀಟ್ ನೋಡಿ ಗರ್ಭಿಣಿಯ ಪ್ರಾಣ ಉಳಿಸಿದ ಹರಿಪ್ರಿಯಾ

ಬೆಂಗಳೂರು: ಚಂದನವನದ ನಟಿ ಹರಿಪ್ರಿಯಾ ಮಾನವೀಯತೆ ಮೆರೆದಿದ್ದಾರೆ. ರಕ್ತದಾನ ಮಾಡುವ ಮೂಲಕ ಗರ್ಭಿಣಿ ಮಹಿಳೆವೋರ್ವಳ ಜೀವ ಉಳಿಸಿದ್ದಾರೆ.

‘ರಕ್ತ ಬೇಕಾಗಿದೆ’ ಎನ್ನುವ ಟ್ವೀಟ್‌ ನೋಡಿದ ನಟಿ ಹರಿಪ್ರಿಯಾ ಅವರು, ಸೀದಾ ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿದ್ದಾರೆ ಎನ್ನಲಾಗಿದೆ. ಹೆರಿಗೆಯ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ತಮ್ಮ ರಕ್ತದಾನ ಮಾಡುವ ಮೂಲಕ ಆ ಜೀವ ಉಳಿಸಿದ್ದಾರೆ. ಬಳಿಕ ಆ ಮಹಿಳಿಗೆ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ತಾವು ಮಾಡಿರು ಸಹಾಯವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಇಂದು ಸಾರ್ಥಕತೆಯ ಮನೋಭಾವ ಮೂಡಿದೆ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು ಅಂತ ಹೇಳಿಕೊಂಡಿದದ್‌ಆರೆ.

Post Author: Ravi Yadav