ಬೆಟಾಲಿಯನ್ ಸೇರಿದ ಹುತಾತ್ಮ ಕಾರ್ಗಿಲ್ ಯೋಧನ ಪುತ್ರ

ಮುಝಾಫರ್‌ನಗರ, ಜೂ. 11: ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಟೊಲೊಲಿಂಗ್‌ನಲ್ಲಿ ಹತ್ಯೆಗೀಡಾಗಿದ್ದ ಲ್ಯಾನ್ಸ್‌ ನಾಯಕ್ ಬಚನ್‌ಸಿಂಗ್ ಅವರ ಪುತ್ರ ಹಿತೇಶ್ ಕುಮಾರ್, ತಮ್ಮ ತಂದೆ ಸೇವೆ ಸಲ್ಲಿಸಿದ ರಜಪೂತ್ ರೈಫಲ್ಸ್‌ನ 2ನೇ ಬೆಟಾಲಿಯನ್ ಸೇರಿದ್ದಾರೆ.

ತಂದೆ ಹುತಾತ್ಮರಾದಾಗ ಹಿತೇಶ್‌ಗೆ ಇನ್ನೂ ಆರು ವರ್ಷ. 19 ವರ್ಷಗಳ ಬಳಿಕ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಉತ್ತೀರ್ಣರಾದ ಹಿತೇಶ್ ಅವರನ್ನು ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆ ನಿಯೋಜಿಸಿದೆ.

ಬೆಟಾಲಿಯನ್‌ನಲ್ಲೇ ಮಗನಿಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ವಿಶೇಷ. ಮುಝಾಫರ್‌ನಗರದಲ್ಲಿ ಬಚನ್ ಸಿಂಗ್ ಸ್ಮರಣಾರ್ಥ ಸಿವಿಲ್ ಲೈನ್ ಪ್ರದೆಶಕ್ಕೆ ಅವರ ಹೆಸರು ಇಡಲಾಗಿದೆ. “19 ವರ್ಷಗಳಿಂದ ಭಾರತ ಸೇನೆಯನ್ನು ಸೇರುವ ಕನಸು ಕಾಣುತ್ತಿದ್ದೆ. ಅದು ನನ್ನ ತಾಯಿಯ ಕನಸೂ ಆಗಿತ್ತು. ಇದೀಗ ಹೆಮ್ಮೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಸೇವೆ ಮಾಡಲು ಗಮನ ಹರಿಸುತ್ತೇನೆ” ಎಂದು ಹಿತೇಶ್ ಹೇಳಿದ್ದಾರೆ.

ಬಚನ್ ಹುತಾತ್ಮರಾದ ಬಳಿಕ ಜೀವನ ಕಷ್ಟಕರವಾಗಿತ್ತು. ನನ್ನ ಇಬ್ಬರು ಮಕ್ಕಳನ್ನು ಬೆಳೆಸಲು ನಾನು ಶ್ರಮಪಟ್ಟೆ. ಹಿತೇಶ್ ಇದೀಗ ಸೇನೆಗೆ ನಿಯೋಜನೆಗೊಂಡಿರುವುದು ಹೆಮ್ಮೆ ಎನಿಸಿದೆ. ತಮ್ಮ ಹೇಮಂತ್ ಕುಡಾ ಸೇನೆ ಸೇರಲು ಸಜ್ಜಾಗುತ್ತಿದ್ದಾನೆ” ಎಂದು ತಾಯಿ ಸಂತಸ ವ್ಯಕ್ತಪಡಿಸಿದರು.

Comments (0)
Add Comment