ನಾಡಿನ ಜನತೆಗೆ ಒಂದು ಶುಭಸುದ್ದಿ

ಹಲವು ವರ್ಷಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಇಂದು(ಸೋಮವಾರ) ಬೆಳಿಗ್ಗೆ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು.

ಇಂದು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ದೆಹಲಿಯ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌(ಏಮ್ಸ್‌) ಹೇಳಿದೆ.

ಅಟಲ್‌ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿರವಾಗಿದೆ. ಡಾ.ರಣದೀಪ್‌ ಗುಲೇರಿಯಾ ಅವರ ನೇತೃತ್ವದ ವೈದ್ಯರ ತಂಡ ವಾಜಪೇಯಿ ಅವರ ಆಗೋಗ್ಯದ ನಿಗಾವಹಿಸಿದ್ದಾರೆ ಎಂದು ಏಮ್ಸ್‌ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.

ವಾಜಪೇಯಿ ಅವರು ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಏಮ್ಸ್‌ನ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ವಾಜಪೇಯಿ ಅವರಿಗೆ ಈಗ 93 ವರ್ಷ ವಯಸ್ಸು. ವಾಜಪೇಯಿ ಅವರು 1998ರಿಂದ 2004ರವರೆಗೆ ಎನ್‌ಡಿಎ ಮೈತ್ರಿಕೂಟದ ಸರ್ಕಾರವನ್ನು ಮುನ್ನಡೆಸಿದ್ದ ಮತ್ಸದ್ದಿ ನಾಯಕ.

Post Author: Ravi Yadav