ಕೆರಳಿದ ‘ಪ್ರತಾಪ’ ಸಿಂಹ,ಖಡಕ್ ವಾರ್ನಿಂಗ್ ಒಮ್ಮೆ ಓದಿ

ಕೆರಳಿದ ‘ಪ್ರತಾಪ’ ಸಿಂಹ,ಖಡಕ್ ವಾರ್ನಿಂಗ್ ಒಮ್ಮೆ ಓದಿ

0

ಅಷ್ಟಕ್ಕೂ ವಿಷಯದ ಮೂಲವೇನು?

ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಕರಾಳ ದಿನಗಳನ್ನು ಅನುಭವಿಸಿದ್ದರು, ಒಂದಲ್ಲ ಎರಡಲ್ಲ ಬರೋಬ್ಬರಿ ೨೪ ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿತ್ತು. ಬಿ ಸ್ ವೈ ಪ್ರಮಾಣ ವಚನದ ಹಿಂದಿನ ದಿನ ಟ್ವೀಟ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಪ್ರತಾಪ್ ಸಿಂಹರವರು, ನಾಳೆ ಇಂದ ಕಾರ್ಯಕರ್ತರನ್ನು ಮುಟ್ಟಿದರೆ ಜೋಕೇ, ಕರಾಳ ದಿನಗಳು ಕೊನೆಗೊಳ್ಳಲಿವೆ ಎಂದು ಘರ್ಜಿಸಿದ್ದರು.

ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಸಿಂಹರವರ ಮಾತುಗಳು ಕೆಳಗಡೆ ಇವೇ ಸಂಪೂರ್ಣ ಓದಿ.

ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಈಗಲೂ ಅಷ್ಟೇ ಕುಮಾರಸ್ವಾಮಿ ಸರ್ಕಾರ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.ಕರಾಳ ದಿನಗಳು ಇನ್ನು ಮುಂದೆ ಬರುವುದಿಲ್ಲ, ಬಂದರೆ ಸುಮ್ಮನೆ ಕೂರಲ್ಲ. ಎಂದು ವಾಗ್ದ್ವಾದ ನಡೆಸಿದರು.

ಬಿಜೆಪಿ ಕಾರ್ಯಕರ್ತ ಹತ್ಯೆಗಳಿಂದ ನೊಂದಿರುವ ಪ್ರತಾಪ್ ಸಿಂಹ ಇನ್ನು ಮುಂದೆ ಈ ರೀತಿ ಘಟನೆಗಳು ನಡೆದರೆ ಸುಮ್ಮನೆ ಇರುವಂತೆ ಕಾಣುತ್ತಿಲ್ಲ. ಅದೇನೇ ಇರಲಿ ರಾಜ್ಯದಲ್ಲಿ ಶಾಂತಿ ನೆಲೆಸುವುದು ಅಗತ್ಯ. ಆದರೆ ಬಿಜೆಪಿ ಕಾರ್ಯಕರ್ತರ ಹತ್ಯೆಗಳು ಖಂಡನೀಯ. ಇನ್ನು ಮುಂದೆ ಈ ರೀತಿ ನಡೆಯದಂತೆ ಎಚ್ಚರ ವಹಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.

ಇದೇ ವೇಳೆ ಮಾತನಾಡಿದ ಸಿಂಹ ನಾನು ಊರು ಕೇರಿ ಗೊತ್ತಿಲ್ಲದೇ ಮೈಸೂರಿಗೆ ಬಂದಾಗ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಇತ್ತು. ಒಂದು ಜೆಡಿಎಸ್ ಇತ್ತು. ಇಂತಹ ಒಂದು ಗ್ರಾಮ ಪಂಚಾಯತ್ ಇಲ್ಲದೆ ಇದ್ದ ಸಂದರ್ಭದಲ್ಲಿ ಬಂದು ಮೈಸೂರಿನಲ್ಲಿ ಗೆದ್ದು, 11,000 ಕೋಟಿ ಅನುದಾನ ತಂದಿದ್ದೇನೆ. ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 8 ಲೈನ್ ಹೈವೆ ಮಾಡಿಸುತ್ತಿದ್ದೇನೆ ಎಂದು ತಿಳಿಸಿದರು.