ಟೀಕೆಗಳಿಗೆ ಯೋಜನೆಗಳಿಂದಲೇ ಮತ್ತೊಮ್ಮೆ ಉತ್ತರಿಸಿದ ಮೋದಿ:ಒಮ್ಮೆ ಓದಿ

ಟೀಕೆಗಳಿಗೆ ಯೋಜನೆಗಳಿಂದಲೇ ಮತ್ತೊಮ್ಮೆ ಉತ್ತರಿಸಿದ ಮೋದಿ:ಒಮ್ಮೆ ಓದಿ

0

ಮೋದಿ ದೇಶ ವಿದೇಶಗಳ ಪ್ರವಾಸದಲ್ಲೇ ಕಾಲ ಕಳೆಯುತ್ತಾರೆ ಎಂದು ಪ್ರತಿಯೊಬ್ಬ ವಿರೋಧಿಯು ಬೊಬ್ಬೆ ಹೊಡೆಯುವುದೇ ಆಯಿತು. ಅದರಿಂದ ಆಗುವ ಲಾಭ ಮತ್ತು ವಿದೇಶಗಳಿಂದ ಬರುವ ಬಂಡವಾಳ ಹೂಡಿಕೆಯನ್ನು ಯಾರೂ ಗಮನಿಸುತ್ತಿಲ್ಲ. ಕಹಿ ಸತ್ಯವೇನೆಂದರೆ ಇದನ್ನು ಯಾವ ಮೀಡಿಯಾ ಕೂಡ ತೋರಿಸುವುದಿಲ್ಲ ಸುಮ್ಮನೆ ಬ್ರೇಕಿಂಗ್ ನ್ಯೂಸ್ ವಿದೇಶಕ್ಕೆ ಹಾರಿದ ಪ್ರಧಾನಿ ಎಂದು ಟೀಕೆ ಮಾಡುತ್ತಲೇ ಇರುತ್ತವೆ.

ಆದರೆ ಈ ಯಾವುದೇ ಟೀಕೆಗಳಿಗೂ ಜಗ್ಗದ ಮೋದಿರವರು ದಿನಕ್ಕೆ 18 ಗಂಟೆ ಭಾರತದ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತಲೇ ಇದ್ದಾರೆ.ಪ್ರತಿ ಪ್ರವಾಸದಲ್ಲಿಯೂ ಏನಾದರೂ ಒಂದು ಯೋಜನೆ ಅಥವಾ ಬಂಡವಾಳ ತರುವಂತಹ ಐಡಿಯಾ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದರೆ ಮೋದಿ ಜಿ ರವರು.ಆದರೆ ಇದರ ಪ್ರತಿಫಲ ಟೀಕೆಗಳು ಮಾತ್ರ.

ಈ ಬಾರಿಯೂ ಕಳೆದೇ ಕೆಲವು ದಿನಗಳ ಹಿಂದಷ್ಟೇ ಕಾಶ್ಮೀರಿ ಪ್ರವಾಸ ಕೈಗೊಂಡಿದ್ದ ಮೋದಿರವರು ಭಾರತ ಹಿರಿಮೆಯನ್ನು ಹೆಚ್ಚಿಸುವಂತಹ ಯೋಜನೆಗಳನ್ನು ಘೋಷಿಸಿದ್ದಾರೆ. . ಇದನ್ನು ಯಾವ ಮೀಡಿಯಾ ಅಲ್ಲಿಯೂ ಬ್ರೇಕಿಂಗ್ ನ್ಯೂಸ್ ಎಂದು ಜನರಿಗೆ ತಲುಪುವಂತೆ ಮಾಡಿಲ್ಲ.

1.ಏಷ್ಯಾದಲ್ಲಿಯೇ ಅತಿ ಉದ್ದವಾದ ಸುರಂಗ ಮಾರ್ಗವನ್ನು ಕಾಶ್ಮೀರದಲ್ಲಿ ನಿರ್ಮಿಸುವ ಯೋಜನೆಯನ್ನು ಉದ್ಘಾಟಿಸಿ ಅದರ ಕೆಲಸಕ್ಕೆ ಚಾಲನೆ ನೀಡಿದರು ನಮ್ಮ ಹೆಮ್ಮೆಯ ಪ್ರಧಾನ ಸೇವಕ.

2.ಕಾಶ್ಮೀರ ಪ್ರವಾಸ ಕೈಗೊಂಡ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಡಾಖ್ ನಲ್ಲಿ ಅನೇಕ ಯೋಜನೆಗಳ ಅಡಿಗಲ್ಲು ಹಾಕಿದರು. ಇದು ಕಾಶ್ಮೀರದ ಗುರೇಝ್ ಅಲ್ಲಿ ಸ್ಥಾಪನೆಗೊಳ್ಳಲಿದೆ.

3.ಕಿಶನ್ಗಂಗಾ 330Mega watt ವಿದ್ಯುತ್ ಯೋಜನೆಯನ್ನು ಇಡೀ ದೇಶಕ್ಕೆ ಅರ್ಪಿಸಿದರು. ಇದರಿಂದ ಕಾಶ್ಮೀರದಲ್ಲಿ ಅನೇಕ ನಗರಗಳು ವಿದ್ಯುತ್ ಪಡೆಯಲಿವೆ.

4.ಅತ್ಯಂತ ಮಹತ್ವದ ಯೋಜನೆಯಾದ ಜೋಜಿಲ್ಲಾ ಸುರಂಗ ಮಾರ್ಗದ ಉದ್ಘಾಟನೆ ಪ್ರಧಾನಮಂತ್ರಿ ಮಾಡಿದರು. ಇದು ಶ್ರೀನಗರ-ಲೇಹ್  ರಾಷ್ಟ್ರೀಯ ಹೆದ್ದಾರಿಯಾಗಲಿದೆ.

5. ಶ್ರೀನಗರ ಹಾಗು ಜಮ್ಮುವಿನಲ್ಲಿ ರಿಂಗ್ ರೋಡ್ ಶಿಲಾನ್ಯಾಸ ಮಾಡಿದರು.

ಈ ಎಲ್ಲ ಯೋಜನೆಗಳಿಂದ ಕಾಶ್ಮೀರ ಪ್ರಗತಿಯಲ್ಲಿ ವೇಗ ಪಡೆದುಕೊಳ್ಳಲಿದೆ. ಇದರ ಜೊತೆಗೆ ಭಾರತದ ಹಿರಿಮೆ ಇಮ್ಮಡಿಗೊಳ್ಳಲಿದೆ. ಈ ವಿಷಯಗಳನ್ನು ಮೀಡಿಯಾದವರು ತೋರಿಸುವುದಿಲ್ಲ. ಯಾಕೆಂದರೆ ಕೆಲವು ಹಣ ಪಡೆದ ಮೀಡಿಯಾಗಳು ಟೀಕೆ ಮಾಡುವುದರಲ್ಲಿ ನಿರತವಾಗಿವೆ.

ಮೀಡಿಯಾ ನಂಬಿಕೊಂಡು ನಾವು ಕೂತಿಲ್ಲ ನಾವು ನಿಮಗೆ ವಿಷಯ ತಿಳಿಸಿದ್ದೇವೆ, ನೀವು ಶೇರ್ ಮಾಡಿ ಮತ್ತೊಬ್ಬರಿಗೆ ತಿಳಿಸಿ.