ಕೆಲವ 21 ದಿನಗಳಲ್ಲಿ ಮೋದಿ ಸಾಧಿಸಿದ ಕೆಲಸ ನೋಡಿದರೆ ಶಾಕ್ ಆಗ್ತೀರಾ?

ಕೆಲವ 21 ದಿನಗಳಲ್ಲಿ ಮೋದಿ ಸಾಧಿಸಿದ ಕೆಲಸ ನೋಡಿದರೆ ಶಾಕ್ ಆಗ್ತೀರಾ?

0

ವಿರೋಧ ಪಕ್ಷಗಳು ಮೋದಿ ರವರ ಸಾಧನೆ ಶೂನ್ಯ ಎಂದು ಬೊಬ್ಬೆ ಹೊಡೆಯುತ್ತಲೇ ಇವೆ. ಆದರೆ ಮೋದಿ ತಮ್ಮ ಯೋಜನೆಗಳ ಮೂಲಕವೇ ಉತ್ತರ ನೀಡುತ್ತಿದ್ದಾರೆ.ಭಾರತದಲ್ಲಿ ಸರ್ಕಾರಿ ಯೋಜನೆಗಳು ಅನುಷ್ಠಾನಗೊಳ್ಳಬೇಕು ಎಂದರೆ ವರ್ಷಗಳೇ ಬೇಕು ಎನ್ನುವ ಕಾಲ ಹೊರಟು ಹೋಗಿದೆ ಕೇವಲ 21 ದಿನಗಳಲ್ಲಿ ಮೋದಿ ಸರ್ಕಾರದ ಸಾಧನೆ ತಿಳಿದರೆ ವಿರೋಧ ಪಕ್ಷಗಳು ಬಾಯಿ ಮುಚ್ಚುವುದಂತೂ ಸತ್ಯ.

ಅಷ್ಟಕ್ಕೂ ಸಾಧನೆ ಏನು?  ಅದುವೇ ಗ್ರಾಮ ಸ್ವರಾಜ್ ಯೋಜನೆ. !!

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನದ ಗೌರವಾರ್ಥವಾಗಿ 16,850 ಹಳ್ಳಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸಲು ಏಪ್ರಿಲ್‌ 14ರಿಂದ ಮೇ 5ರವರೆಗೆ ಗ್ರಾಮ ಸ್ವರಾಜ್‌ ಅಭಿಯಾನ ನಡೆಸಲಾಗಿತ್ತು.

ಈ ಸಾಧನೆಗಳನ್ನು ಸ್ವತಃ ಮೋದಿರವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಳ್ಳಿಗಳಿಗೆ ತಲುಪುಸಿದ ಯೋಜನೆಗಳ ಪಟ್ಟಿ ಕೆಳಗಿನಂತಿದೆ.

5,02,434 – ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾದ ಮನೆಗಳ ಸಂಖ್ಯೆ

25.03 – ಲಕ್ಷ ವಿತರಿಸಲಾದ ಎಲ್‌ಇಡಿ ಬಲ್ಬ್‌ಗಳು

1,64,398 – ಇಂದ್ರಧನುಷ್‌ ಯೋಜನೆಯಡಿ ರೋಗನಿರೋಧಕ ಲಸಿಕೆ ಹಾಕಲಾದ ಮಕ್ಕಳ ಸಂಖ್ಯೆ

20,53,599  – ಜನ್‌ ಧನ್‌ ಯೋಜನೆಗೆ ಸೇರ್ಪಡೆಗೊಂಡ ಫಲಾನುಭವಿಗಳು

16,14,388 – ಪ್ರಧಾನ್‌ ಮಂತ್ರಿ ಜೀವನ್‌ ಜ್ಯೋತಿ ವಿಮಾ ಪಾಲಿಸಿ ಪಡೆದವರ ಸಂಖ್ಯೆ

26,10,506 – ಪ್ರಧಾನ್‌ ಮಂತ್ರಿ ಸುರಕ್ಷಾ ವಿಮಾ ಪಾಲಿಸಿ ಪಡೆದವರ ಸಂಖ್ಯೆ

ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ಬಡವರ ಮನೆಬಾಗಿಲಿಗೆ ತಲುಪಿಸಿ, ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಈ ಅಭಿಯಾನ ಉತ್ತಮ ಉದಾಹರಣೆಯಾಗಿದೆ.
–ನರೇಂದ್ರ ಮೋದಿ

 

ಒಮ್ಮೆ ಓದಿ: ಟೀಕೆಗಳಿಗೆ ಯೋಜನೆಗಳಿಂದಲೇ ಮತ್ತೊಮ್ಮೆ ಉತ್ತರಿಸಿದ ಮೋದಿ:ಒಮ್ಮೆ ಓದಿ