ಕರುನಾಡಿಗೆ ಇನ್ನೊಂದು ಹೆಮ್ಮೆ. ಮೋದಿಜೀಯ ರಾಜತಾಂತ್ರಿಕತೆ ಫಲ

ಕರುನಾಡಿಗೆ ಇನ್ನೊಂದು ಹೆಮ್ಮೆ. ಮೋದಿಜೀಯ ರಾಜತಾಂತ್ರಿಕತೆ ಫಲ

0

ಹೌದು, ಕರುನಾಡಿಗೆ ಇನ್ನೊಂದು ಹೆಮ್ಮೆಯ ವಿಷಯ , ಇದಕೆಲ್ಲ ಕಾರಣ ಪ್ರಧಾನ ಸೇವಕರಾದ ಮೋದಿರವರ ರಾಜತಾಂತ್ರಿಕತೆ !.60 ವರ್ಷಗಳಲ್ಲಿ ಯಾವುದೇ ದೇಶಗಳು ಭಾರತದ ಜೊತೆ ಮಾಡಿಕೊಳ್ಳದಂತಹ ಒಪ್ಪಂದಗಳು ಇತ್ತೀಚಿಗೆ ಮೋದಿ ಗದ್ದುಗೆ ಏರಿದ ಮೇಲೆ ನಡೆಯುತ್ತಿರುದು ಎಲ್ಲರಿಗೂ ತಿಳಿದಿರುವ ವಿಷಯ. ಆ ಒಪ್ಪಂದಗಳ ಸಾಲಿಗೆ ಮತ್ತೊಂದು ಸೇರ್ಪಡೆ. ವಿವರಕ್ಕಾಗಿ ಕೆಳಗಡೆ ಪೂರ್ತಿ ಓದಿ.

UAE ಅರಬ್‌ ದೇಶ ಮೊದಲ ಬಾರಿಗೆ ಭಾರತದಲ್ಲಿ ತೈಲ ಶೇಖರಣಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ಕೇಂದ್ರೀಯ ಇಂಧನ ಸಂಪನ್ಮೂಲಗಳ ಸಚಿವ ಧರ್ಮೇಂದ್ರ ಪ್ರಧಾನ್ ಮೊನ್ನೆ ರವಿವಾರ ತಿಳಿಸಿದ್ದಾರೆ. ಇದರಿಂದ ಭಾರತದ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಸಂಬಂಧ ವೃದ್ದಿಯಾಗಲಿದೆ.

ಈ ಒಪ್ಪಂದ ಕೇಂದ್ರೀಯ ತೈಲ ಉತ್ಪನ್ನ ಸಚಿವ ಧರ್ಮೇಂದ್ರ ಪ್ರಧಾನ್ UAE ಮೂರು ದಿನದ ಪ್ರವಾಸದ ವೇಳೆ ನಡೆದಿದೆ. ಈ ಯೋಜನೆ  ಸುಮಾರು 39 ಮಿಲಿಯನ್ ಸಂಸ್ಕರಣೆದ್ದಾಗಿದ್ದು ಸುಮಾರು 5.86 ಮಿಲಿಯನ್ ಬ್ಯಾರೆಲ್ ಗಳಷ್ಟು ತೈಲ ಅಬುದಾಬಿ ಭಾರತಕ್ಕೆ ಸಾಗಿಸಲಿದೆ. ಈ ಘಟಕ ಮಂಗಳೂರಿನಲ್ಲಿ(1.5 ಮಿಲಿಯನ್ ಟನ್) ಹಾಗು ಪಾದೂರಿನಲ್ಲಿ(2.5 ಮಿಲಿಯನ್ ಟನ್) ಗಳಷ್ಟು ಶೇಖರಣೆ ಮಾಡಲಿದೆ. ಇದು emergency ಕಾಲದಲ್ಲಿ ಭಾರತಕ್ಕೆ ಸಹಾಯವಾಗಲಿದೆ.

ಭಾರತ ಹಾಗು ಅಬುದಾಬಿಯ ದೇಶಗಳ ಈ ಒಪ್ಪಂದಕ್ಕೆ ಅಮೇರಿಕಾ ಕೂಡಾ ಆಸಕ್ತಿ ತೋರಿಸಿದ್ದು ಭಾರತದೊಂದಿಗೆ ಅಮೇರಿಕಾ ಕೂಡಾ ಶೇಖರಣೆ ಮಾಡಲು ಬಯಸಿದೆ.

-ಶ್ರೀ ಭಟ್