ಖಡಕ್ ಸಂದೇಶ ನೀಡಿದ ಶ್ರೀ ರಾಮುಲು: ಬೆದರುತ್ತದೆಯೇ ಕಾಂಗ್ರೆಸ್?

 ಬಿಜೆಪಿ 104 ಸ್ಥಾನಗಳನ್ನು ಗೆದ್ದಿದ್ದರೂ ವಿಶ್ವಾಸ ಮತ ಯಾಚನೆ ಮಾಡುವಲ್ಲಿ ಸೋತಿದ್ದೇವೆ. ಬಿಎಸ್ ವೈ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಜನಾದೇಶ ನಮ್ಮ ಕಡೆಯೇ ಇದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಾವೆಲ್ಲಾ ಜೈಲಿಗೆ ಹೋಗ್ತೆವೆ ಎಂಬ ಕಾರಣಕ್ಕೆ ಕಾಂಗ್ರೆಸ್, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಎಚ್ ಡಿಕೆಗೆ ಸಿಎಂ ಮಾಡಲು ಅನುಕೂಲ ಮಾಡಿದ್ದಾರೆ ಎಂದಿದ್ದಾರೆ.

ನಾವು ಕಾಂಗ್ರೆಸ್’ನವರನ್ನು ಮಲಗೋಕೆ ಬಿಡಲ್ಲ. ಅವರ ಭ್ರಷ್ಟಾಚಾರ, ಅಕ್ರಮಗಳನ್ನು ಎತ್ತಿ ಹಿಡಿಯುತ್ತೇವೆ. ದಿನದ 24 ತಾಸು ಅವರನ್ನು ಕಾಯುತ್ತೇವೆ. ಈಗಾಗಲೇ ಒಳ ಜಗಳ ಅವರಲ್ಲಿ ಪ್ರಾರಂಭವಾಗಿದೆ. ಮಂತ್ರಿಗಿರಿಗಾಗಿ ಒಳ‌ಜಗಳ ಆರಂಭವಾಗಿದೆ. ಕುಮಾರಸ್ವಾಮಿಯನ್ನು ಬೇಷರತ್ ಆಗಿ ಸಿಎಂ ಮಾಡಲು ಒಪ್ಪಿದ್ದಾರೆ. ಅವರ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಅವರ ಅನಾಚಾರ, ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಈ ನಡುವೆ ಬಿ ಸ್ ವೈ ಪತ್ರಿಕಾಗೋಷ್ಠಿ ಕರೆದು ಪರಾಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನು ಮೇ 23ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಸಿ,ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು  ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಾಜಿತ ಅಭ್ಯರ್ಥಿಗಳ ಸೋಲಿನ ಬಗ್ಗೆ ಪರಾಮರ್ಶಿಸುತ್ತೇವೆ. 2019ರ ಲೋಕಸಭಾ ಚುನಾವಣೆಗೆ ಸಿದ್ದತೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಇದೆಲ್ಲದರ ನಡುವೆ ಪ್ರಜೆಗಳು ಸತ್ಯದ ಅರಿವು ಮೂಡಿಸಿಕೊಳ್ಳಬೇಕು.

Post Author: Ravi Yadav