ಮೋದಿ ಮೇನಿಯಾ: ಸಿಎಂ ಗೆ ಮುಜುಗರ

ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಬಾಗಲಕೋಟೆಯ ಬಾದಾಮಿಯಲ್ಲಿ ಸಿಎಂ ಪ್ರಚಾರ ಮಾಡಲು ಹೋದಾಗ ಸಿಎಂ ಮುಜುಗರಕ್ಕೆ ಉಂಟಾಗುವಂತಹ ಘಟನೆ ನಡೆದಿದೆ.

ಅಷ್ಟಕ್ಕೂ ಏನು ನಡೆಯಿತು? ಕೆಳಗಡೆ ಓದಿ

ಬಾಗಲಕೋಟೆಯ ಬಾದಾಮಿಯಲ್ಲಿ ಸಿಎಂ ಎಂದಿನಂತೆ ಪ್ರಚಾರ ನಡೆಸುತ್ತಿದ್ದರು. ಬಾದಾಮಿ ಕ್ಷೇತ್ರದ ರೋಡ್ ಶೋ ವೇಳೆ ಬಿ ಜೆ ಪಿ ಬೆಂಬಲಿಗರು ಮೋದಿ.. ಮೋದಿ…ಎಂದು ಜೈಕಾರ ಆರಂಭಿಸಿದರು. ಇದರಿಂದ ಕುಪಿತ ಕೊಂದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.. ರಾಹುಲ್.. ಎಂದು ವ್ಯಾಖ್ಯಾನ ಆರಂಭಿಸಿದರು.

ಇತ್ತಂಡಗಳ ಘೋಷಣೆಗಳು ಗಗನ ಮುಟ್ಟಿದವು. ಎರಡು ತಂಡಗಳು ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದವು, ಕೆಲವರು ಕಲ್ಲು ತೂರಾಟ ಪ್ರಾಂಭಿಸಿದರು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಇದರಿಂದ ಸಿಎಂ ಪ್ರಚಾರದ ಭಾಷಣ ಮಾಡದೆಯೇ ಹಿಂತಿರುಗುವಂತೆ ಆಯಿತು. ಇದೆ ರೀತಿ ಹಲವು ಬಾರಿ ರಮ್ಯ ಮತ್ತು ರಾಹುಲ್ ಗಾಂಧಿರವರಿಗೆ ಆಗಿತ್ತಾದರೂ ಸಿಎಂ ರವರಿಗೆ ಮೊದಲ ಬಾರಿಗೆ ಈ ಮುಜುಗರ ಘಟನೆ ನಡೆದಿದೆ

Post Author: Ravi Yadav