ಗೂಂಡಾ ಸರ್ಕಾರ ಎಂಬ ಹಣೆಪಟ್ಟಿಯನ್ನು ನಿರೂಪಿಸುತ್ತಿದೆಯಾ ಕಾಂಗ್ರೆಸ್ ಸರ್ಕಾರ?

ಮೊದಲೇ ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದೆ ಅದಕ್ಕೆ ತಕ್ಕಂತೆ ನಡೆದು ಕೊಳ್ಳುತ್ತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.

ಎಲೆಕ್ಷನ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರಚಾರದಲ್ಲಿ ಮುಳಿಗಿರುವುದು ತಿಳಿದಿರುವ ವಿಷಯ. ಇದೆ ರೀತಿ ಚಾಮರಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿಯೂ ಮತ ಕೇಳಲು ಜನರ ಬಳಿ ಹೋಗಿದ್ದಾಗ ನಡೆದ ಘಟನೆಯಿದು.

ಕಾಂಗ್ರೆಸ್ ನ ಶಾಸಕ ಹಾಗೂ ಅಭ್ಯರ್ಥಿ ನರೇಂದ್ರ ಮತ್ತು ಬೆಂಬಲಿಗರು ಚಾಮರಾಜನಗರದ ಹನೂರು ಕ್ಷೇತ್ರದಲ್ಲಿ ಪ್ರಚಾರ ಮಾಡುವ ಸಲುವಾಗಿ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು, ನಿಮಗೆ ಯಾಕೆ ಮತ ನೀಡಬೇಕು ಕಾರಣಗಳನ್ನು ಕೊಡಿ? ಅಭಿವೃದ್ದಿ ಮಾಡಿದ್ದೀರಾ? ಎಂದು ಪ್ರಶ್ನಿಸ ತೊಡಗಿದರು. ಇದರಿಂದ ಕುಪಿತಗೊಂಡ ಕಾಂಗ್ರೀ ಕಾರ್ಯಕರ್ತರು ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.

ಚುನಾವಣೆ ಬಂದಾಗ ಮಾತ್ರ ಬರ್ತೀರಾ ಬೇರೆ ದಿನ ಎಲ್ಲಿಗೆ ಹೋಗಿರುತ್ತೀರಾ. ಗ್ರಾಮದ ಅಭಿವೃದ್ಧಿಗೆ ಏನು ಮಾಡಿದ್ದೀರಾ? ನಾವು ಯಾಕೆ ಮತ ಹಾಕಬೇಕು? ಅಂತ ಗ್ರಾಮಸ್ಥರು ಶಾಸಕನ ಬೆಂಬಲಿಗರಿಗೆ ಪ್ರಶ್ನೆ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಹೋದಲ್ಲೆಲ್ಲಾ ಪ್ರಶ್ನೆಗಳನ್ನು ಕೇಳುವ ಮೂಲಕ ಗ್ರಾಮ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಕುಪಿತಗೊಂಡ ಶಾಸಕನ ಬೆಂಬಲಿಗರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯನ್ನು ಖಂಡಿಸಿ ಗ್ರಾಮಸ್ಥರು ಬೆಂಬಲಿಗರ ಕಾರಿನ ಮೇಲೆ ಕಲ್ಲು ಎಸೆಯುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸ್ವಾಮಿ ಇದು ಪ್ರಜಾಪ್ರಭುತ್ವ ಇಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕಿದೆ, ಕೇಳಿದಕ್ಕೆ ಹಲ್ಲೆ ಮಾಡುವುದಾ?

 

Post Author: Ravi Yadav