ಬೀದಿಯಲ್ಲಿ ಜಟಾಪಟಿ: ಸಿಎಂ ವಿರುದ್ದ ಆಪ್ತನ ಸಿಟ್ಟು ಓದಿ ಒಮ್ಮೆ ಸಿಎಂರವರ ವ್ಯಥೆ

ಬೀದಿಯಲ್ಲಿ ಜಟಾಪಟಿ: ಸಿಎಂ ವಿರುದ್ದ ಆಪ್ತನ ಸಿಟ್ಟು ಓದಿ ಒಮ್ಮೆ ಸಿಮ್ ರವರ ವ್ಯಥೆ

0

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆಯಿತು.

ಕಾಂಗ್ರೆಸ್ ನ ಪ್ರಚಾರದ ವೇಳೆಯಲ್ಲಿ ಸಿದ್ದರಾಮಯ್ಯನವರು ಸೇರಿದ್ದ ಜನರನ್ನು ಉದ್ದೇಶಿಸಿ ಭಾಷಣ ಬಿಗಿಯುತ್ತಿದ್ದರು. ಸೇರಿದ್ದು ಕೆಲವೇ ಜನ ಆದರೂ ಜನ ಕೇಕೇ ಹಾಕುತ್ತಿದ್ದರು. ಆದರೆ ಈ ಜನರ ಮಧ್ಯೆಯೇ ಬಂದ ಜೆಡಿಎಸ್ ಮುಖಂಡ ಮರಿಸ್ವಾಮಿ ಸಿದ್ದರಾಮಯ್ಯನವರ ಚಳಿ ಬಿಡಿಸಿದರು.

ಮರಿಸ್ವಾಮಿಯನ್ನು ನೋಡುತ್ತಿದ್ದಂತೆ ಪ್ರಚಾರ ವಾಹನದ ಮೇಲಿದ್ದ ಸಿದ್ದರಾಮಯ್ಯನವರು , “ಏನಯ್ಯಾ ಮರಿಸ್ವಾಮಿ , ನೀನು ನನ್ನ ಜೊತೆಗೆ ಇದ್ದವ, ಕಾಂಗ್ರೆಸ್ ಗೆ ವೋಟು ಹಾಕಯ್ಯಾ” ಎಂದು ತಮಾಷೆಯಾಗಿ ಹೇಳಿದರು. ಆದರೆ ಇದರಿಂದ ಆಕ್ರೋಷಗೊಂಡ ಮರಿಸ್ವಾಮಿ, ” ನಾನು ಜೆಡಿಎಸ್ ನಲ್ಲೇ ಇದ್ದವನು, ಜೆಡಿಎಸ್ ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ವೋಟ್ ಹಾಕಲ್ಲ” ಎಂದು ಬಹಿರಂಗವಾಗಿಯೇ ಹೇಳಿದ ಮರಿಸ್ವಾಮಿ ಸಿದ್ದರಾಮಯ್ಯನವರಿಗೆ ಲೇವಡಿ ಮಾಡಿದರು.

ಏ ಮರಿಸ್ವಾಮಿ… ನೀ ನನ್ನ ಜೊತೆ ಇದ್ದಲ್ಲಯ್ಯ ಬಾ ಅಂತ ಸಿಎಂ ಕರೆದ್ರು. ಆಗ ಮರಿಸ್ವಾಮಿ, ನಾನು ಜೆಡಿಎಸ್‍ನಲ್ಲಿದ್ದೇನೆ ಬರೋಲ್ಲ ಎಂದರು. ಆಗ ಸಿದ್ದರಾಮಯ್ಯ, ಆಯ್ತು ನೀ ಬರಬೇಡ ವೋಟು ಹಾಕು ಅಂದ್ರು. ಇದಕ್ಕೆ ಮರಿಸ್ವಾಮಿ, ನಾ ಬರೋದು ಇಲ್ಲ, ವೋಟು ಹಾಕೋಲ್ಲ ಎಂದ್ರು. ಅದಕ್ಕೆ ಸಿಎಂ ಆಯ್ತು ಬರಬೇಡ ಹೋಗು ಎಂದರು.

ಸಿಎಂ ಮಾತಿನಿಂದ ಗರಂ ಆದ ಮರಿಸ್ವಾಮಿ, ನೀವು ನಮ್ಮ ಊರಿನಲ್ಲಿ ಇರೋದು. ಮೊದ್ಲು ನೀವೇ ಹೋಗಿ. ನಿಮ್ಮನ್ನ ಉಪಮುಖ್ಯಮಂತ್ರಿ ಮಾಡಿದ ಮಹಾಸ್ವಾಮಿಗೆ ದೊಡ್ಡ ನಮಸ್ಕಾರ ಎಂದರು.

ಮುನಿಸ್ವಾಮಿರವರ ಮೇಲೆ ಹಲ್ಲೆ ಒಮ್ಮೆ ಓದಿ