ಕರ್ನಾಟಕ ವಿಧಾನಸಭೆ ಚುನಾವಣೆ 2018: ಕರ್ನಾಟಕದಲ್ಲಿ ಘರ್ಜಿಸಲಿದೆ ಸಿಂಹ

ಕರ್ನಾಟಕ ವಿಧಾನಸಭೆ ಚುನಾವಣೆ 2018: ನರೇಂದ್ರ ಮೋದಿ 8 ದಿನಗಳಲ್ಲಿ 16 ರ್ಯಾಲಿಯನ್ನು ರಾಜ್ಯದಲ್ಲಿ 29 ಏಪ್ರಿಲ್ ಆರಂಭಿಸಿ ಮಾತನಾಡುತ್ತಾರೆ

0

ಹೌದು, ನರೇಂದ್ರ ಮೋದಿ ರವರು ಕರ್ನಾಟಕದ ಚುನಾವಣಾ ಕಣಕ್ಕೆ ಧುಮುಕುವ ದಿನಾಂಕ ಪ್ರಕಟಣೆಯಾಗಿದೆ.

ಏಪ್ರಿಲ್ 29 ರಂದು ಆರಂಭವಾಗುವ ಈ ಕರ್ನಾಟಕ ಪ್ರವಾಸ ಎಂಟು ದಿನಗಳಲ್ಲಿ ಹದಿನಾರು  ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಬಿಜೆಪಿಯ ವಕ್ತರಾರು ಸೋಮವಾರ ಘೋಷಿಸಿದ್ದಾರೆ.

ದೇಶವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ಬಿಜೆಪಿ, ಮೋದಿ ಅಲೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ನೇರವಾಗಿ ಮೋದಿರವನ್ನು ಪ್ರಚಾರಕ್ಕಾಗಿ ಭಾಷಣ ಮಾಡಲು ಕರೆ ತಂದಿದೆ. ಆದರೆ ಕರ್ನಾಟಕದ ಯುವಕರು ಮೋದಿ ಕೈ ಇಡಿಯುವರೇ ಎಂದು ನೋಡಬೇಕಿದೆ.

ದಕ್ಷಿಣ ಕರ್ನಾಟಕದ ಕೋಲಾರದಲ್ಲಿ ಮೋದಿ ತನ್ನ ಮೊದಲ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಅದೇ ದಿನದಂದು ರಾಯಚೂರುನಲ್ಲಿ ಮತ್ತೊಂದು ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

ಮೇ 1 ರಂದು ಬಳ್ಳಾರಿ ಮತ್ತು ಬೆಳಗಾವಿಗಳಲ್ಲಿ ಎರಡು  ನಡೆಸಲಿದ್ದಾರೆ. ಅವರು ಮೇ 3 ರಂದು ಚಾಮರಾಜನಗರ ಮತ್ತು ಉಡುಪಿಯಲ್ಲಿ ಎರಡು ಸಭೆಗಳಲ್ಲಿ ಭಾಷಣ ನಡೆಸಲಿದ್ದಾರೆ

ಮೇ 5, ಮೇ 6, ಕಲಾಬುರಗಿ ಮತ್ತು ಹುಬ್ಬಳ್ಳಿ ಮೇ 6, ಶಿವಮೊಗ್ಗ ಮತ್ತು ತುಮಕೂರು ಮೇ 7 ರಂದು ಮಂಗಳೂರಿನಲ್ಲಿ ಮತ್ತು  ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮೋದಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನ ಮಂತ್ರಿ ಮೇ 9 ರಂದು ಇನ್ನೂ ಎರಡು ಸಭೆಗಳಲ್ಲಿ ಭಾಷಣ ನಡೆಸಲು ನಿರ್ಧರಿಸಲಾಗಿದೆ, ಇದಕ್ಕಾಗಿ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಬೇಕಾಗಿದೆ.

ನಿಮ್ಮ ಬೆಂಬಲ ಯಾರಿಗೆ? ಶೇರ್ ಮಾಡಿ ಬೆಂಬಲ ವ್ಯಕ್ತ ಪಡಿಸಿ.