ಸ್ಪೋಟಕ ಮಾಹಿತಿ: ಚೀನಾದಿಂದ ಗಡಿಯಲ್ಲಿ ಮತ್ತೊಂದು ಕ್ಯಾತೆ..! ಭಾರತದಿಂದ ದಿಟ್ಟ ಉತ್ತರ..!!ಏನದು ಗೊತ್ತಾ..?

ಸ್ಪೋಟಕ ಮಾಹಿತಿ: ಚೀನಾದಿಂದ ಗಡಿಯಲ್ಲಿ ಮತ್ತೊಂದು ಕ್ಯಾತೆ..! ಭಾರತದಿಂದ ದಿಟ್ಟ ಉತ್ತರ..!!ಏನದು ಗೊತ್ತಾ..?

0

ಚೀನಾ ಭಾರತದ ವಿರುದ್ಧ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವುದು ಇದೇನು ಮೊದಲ್ಲಲ, ಈಶಾನ್ಯ ರಾಜ್ಯಗಳು & ದೋಕ್ಲಾಂ ನಂತಹ ಪ್ರದೇಶಗಳಲ್ಲಿ ಚೀನಾ ಭಾರತಕ್ಕೆ ಹಲವು ಬಾರಿ ಕಿರಿಕಿರಿ ಕೊಟ್ಟಿದೆ. ನಮ್ಮ ಭಾರತೀಯ ಸೇನೆ ಚೀನಾಗೆ ತಕ್ಕ ಪಾಠವನ್ನ ಕಲಿಸೋ ಸಾಮರ್ಥ್ಯವನ್ನ ಹೊಂದಿದ್ದಾರೆ.

ಅಷ್ಟಕು ಗಡಿಯಲ್ಲಿ ಚೀನಾದ ಮತ್ತೊಂದು ಕ್ಯಾತೆ ಏನು..!!

ಚೀನಾ ಭಾರತದ ವಿರುದ್ಧ ಗಡಿಯಲ್ಲಿ ಮತ್ತೆ ಕ್ಯಾತೆ  ತೆಗೆದಿದೆ ಅದೇನೆಂದರೆ ಅರುಣಾಚಲ ಪ್ರದೇಶ ಗಡಿ ಪ್ರದೇಶದ ಸ್ಥಳವನ್ನು ಭಾರತೀಯ ಸೇನೆ ಅತಿಕ್ರಮಣ ಮಾಡಿದೆ ಎಂದು ಚೀನಾ ಆರೋಪ ಮಾಡಿದ್ದು, ಇದನ್ನು ಭಾರತ ತಳ್ಳಿಹಾಕಿದ್ದು ತಕ್ಕ ಉತ್ತರ ನೀಡಿದೆ‌.

ಅರುಣಾಚಲ ಪ್ರದೇಶದ ವಿವಾದಿತ ಗಡಿಯ ಸೂಕ್ಷ್ಮ ಪ್ರದೇಶ ‘ಅಸಾಫಿಲಾ’ ಪ್ರದೇಶದಲ್ಲಿ ಭಾರತ ಅತಿಕ್ರಮಣ ಮಾಡಿದೆ ಎಂದು ಚೀನಾ ಆರೋಪ ಮಾಡಿದ್ದು, ಈ ವಿಷಯವನ್ನು ಮಾರ್ಚ್‌‌ 15ರಂದು ನಡೆದ ‘ಗಡಿ ಸಿಬ್ಬಂದಿ ಸಭೆ’ (Border Personnel Meeting- BPM)ಯಲ್ಲಿ ಚೀನಾ ಪ್ರಸ್ತಾಪಿಸಿದೆ.

ಆದರೆ, ಚೀನಾದ ಈ ಆರೋಪವನ್ನು ಭಾರತೀಯ ಸೇನೆ ಅಲ್ಲಗಳೆದಿದೆ. ಅರುಣಾಚಲ ಪ್ರದೇಶದ ಸುಬಾನ್‌‌ಸಿರಿಯ ಮೇಲ್ಭಾಗ ಪ್ರದೇಶ ಭಾರತಕ್ಕೆ ಸೇರಿದ್ದು, ಅಲ್ಲಿ ನಿಯಮಿತವಾಗಿ ಗಸ್ತು ನಡೆಸಲಾಗುತ್ತಿದೆ ಎಂದು ಭಾರತೀಯ ಸೇನೆ ಪ್ರತಿಪಾದಿಸಿದೆ.

ಈ ಪ್ರದೇಶದಲ್ಲಿ ಭಾರತ ಗಸ್ತು ನಡೆಸುತ್ತಿರುವುದನ್ನು ಅತಿಕ್ರಮಣ ಎಂದು ಬಿಂಬಿಸಲು ಚೀನಾ ಯತ್ನಿಸಿದ್ದು, ಈ ಪದ ಬಳಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಸಾಫಿಲಾದಲ್ಲಿನ ಗಸ್ತು ಕಾರ್ಯಕ್ಕೆ ಚೀನಾ ಆಕ್ಷೇಪ ಎತ್ತುತ್ತಿರುವುದು ಆಶ್ಚರ್ಯವಾಗಿದೆ. ಇದೇ ಪ್ರದೇಶದಲ್ಲಿ ಚೀನಾವೇ ಹಲವು ಬಾರಿ ಅತಿಕ್ರಮಣ ನಡೆಸಿದ್ದು, ಅದನ್ನು ಭಾರತ ಪ್ರತಿಭಟಿಸುತ್ತಾ ಬಂದಿದೆ ಎಂದು ಮೂಲಗಳು ತಿಳಿಸಿವೆ.

Source: eenadu India