ಸ್ಪೋಟಕ ಮಾಹಿತಿ: ಕೇಂಬ್ರಿಜ್‌ ಅನಾಲಿಟಿಕಾ ಫೇಸ್‌ಬುಕ್‌ ದತ್ತಾಂಶ ದುರ್ಬಳಕೆ ಹಗರಣ ಮತ್ತೂಂದು ಮಹತ್ವದ ಸಂಗತಿ ಬಹಿರಂಗ..!!

ಸ್ಪೋಟಕ ಮಾಹಿತಿ: ಕೇಂಬ್ರಿಜ್‌ ಅನಾಲಿಟಿಕಾ ಫೇಸ್‌ಬುಕ್‌ ದತ್ತಾಂಶ ದುರ್ಬಳಕೆ ಹಗರಣ ಮತ್ತೂಂದು ಮಹತ್ವದ ಸಂಗತಿ ಬಹಿರಂಗ..!!

0

ಫೇಸ್‌ಬುಕ್‌ ದತ್ತಾಂಶ ದುರ್ಬಳಕೆ ವಿಚಾರದಲ್ಲಿ ಮತ್ತೂಂದು ಮಹತ್ವದ ಸಂಗತಿ ಬಹಿರಂಗಗೊಂಡಿದೆ. ಫೇಸ್‌ಬುಕ್‌ ಮಾಹಿತಿ ಸೋರಿಕೆ ಹಗರಣದ ಕುರಿತು ಫೇಸ್‌ಬುಕ್‌ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್‌ ಅಧಿಕೃತ ಅಂಕಿಅಂಶ ಒದಗಿಸಿದ್ದು, ಜಗತ್ತಿನಾದ್ಯಂತ ಒಟ್ಟಾರೆ 8 ಕೋಟಿ ಫೇಸ್‌ಬುಕ್‌ ಬಳಕೆದಾರರ ದತ್ತಾಂಶ ಸೋರಿಕೆಯಾಗಿರಬಹುದು ಎಂದು ತಿಳಿಸಿದ್ದಾರೆ.

ಇದರಲ್ಲಿ ಹೆಚ್ಚಿನವರು ಅಮೆರಿಕದವರೇ ಆದರೂ, ಭಾರತದ 5,62,455 ಬಳಕೆದಾರರ ದತ್ತಾಂಶವೂ ಸೋರಿಕೆಯಾಗಿದೆ ಎಂದು ಇದೀಗ ಭಾರತ ಸರ್ಕಾರಕ್ಕೆ ಫೇಸ್‌ಬುಕ್‌ ಮಾಹಿತಿ ನೀಡಿದೆ.

35 ಜನರು ದಿಸ್‌ ಈಸ್‌ ಮೈ ಡಿಜಿಟಲ್‌ ಲೈಫ್ ಎಂಬ ಅಪ್ಲಿಕೇಶನ್‌ ಡೌನ್‌ ಲೋಡ್‌ ಮಾಡಿಕೊಂಡಿದ್ದರು, ಇವರ ದತ್ತಾಂಶಗಳು ನೇರವಾಗಿ ಕೇಂಬ್ರಿಜ್‌ ಅನಾಲಿಟಿಕಾಗೆ ಸೋರಿಕೆಯಾಗಿದೆ. ಭಾರತದಲ್ಲಿ ಸುಮಾರು 20 ಕೋಟಿ ಫೇಸ್‌ಬುಕ್‌ ಬಳಕೆದಾರರಿದ್ದಾರೆ.

ಗ್ಲೋಬಲ್‌ ಸೈನ್ಸ್‌ ರಿಸರ್ಚ್‌ ಲಿಮಿಟೆಡ್‌ ಎಂಬ ಕಂಪನಿ ಈ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದ್ದು, ಇದಕ್ಕೆ ಡಾ. ಅಲೆಕ್ಸಾಂಡರ್‌ ಕೋಗನ್‌ ನೇತೃತ್ವ ವಹಿಸಿದ್ದಾರೆ. ಫೇಸ್‌ಬುಕ್‌ನ ಅನುಮತಿಯಿಲ್ಲದೇ ಈ ಅಪ್ಲಿಕೇಶನ್‌ ಬಳಕೆದಾರರ ದತ್ತಾಂಶವನ್ನು ಪಡೆದಿದೆ. ನಿರ್ದಿಷ್ಟವಾಗಿ ಯಾವ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂಬ ವಿವರವನ್ನು ಪರಿಶೀಲಿಸಲಾಗುತ್ತಿದೆ ಎಂದು ಫೇಸ್‌ಬುಕ್‌ ಹೇಳಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಯಾವ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಹೊಂದಿದ್ದಾರೆ ಮತ್ತು ಯಾವ ಅಪ್ಲಿಕೇಶನ್‌ಗೆ ಎಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನೂ ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಫೇಸ್‌ಬುಕ್‌ ಸುಭದ್ರ, ನನಗೊಂದು ಅವಕಾಶ ಕೊಡಿ..!!

ನನ್ನಿಂದ ತಪ್ಪಾಗಿದೆ. ಇದು ದೊಡ್ಡ ತಪ್ಪು. ಇದರಿಂದ ಫೇಸ್‌ಬುಕ್‌ ಬಳಕೆದಾರರಿಗೆ ಅನ್ಯಾಯವಾಗಿದೆ. ಇದಕ್ಕಾಗಿ ನಾನು ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ. ನನಗೆ ಇನ್ನೊಂದು ಅವಕಾಶ ಕೊಡಿ. ಸುರಕ್ಷಿತವಾಗಿಸಲು ನಾವು ಶ್ರಮಿಸುತ್ತಿದ್ದೇವೆ. ಇದು ನಮ್ಮ ಮೊದಲ ಆದ್ಯತೆ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ. ಮಾಹಿತಿಯನ್ನು ಟ್ರೋಲ್‌ಗ‌ಳ ಮೂಲಕ ಹರಡುವುದನ್ನು ಕೃತಕ ಬುದ್ಧಿಮತ್ತೆಯ ಮೂಲಕ ತಡೆದಿದ್ದೆವು. ಅದನ್ನೇ ಈ ಬಾರಿ ಚುನಾವಣೆ ಸಮಯದಲ್ಲಿ ಬಳಸಿಕೊಳ್ಳಲಿದ್ದೇವೆ. ಭದ್ರತಾ ವಿಭಾಗ ಹಾಗೂ ಕಂಟೆಂಟ್‌ ಮರುಪರಿ ಶೀಲನೆಗಾಗಿ 15 ಸಾವಿರ ಸಿಬ್ಬಂದಿ ನೇಮಿ ಸಲಾಗಿದ್ದು, ಇನ್ನೂ 20 ಸಾವಿರ ಜನರನ್ನು ಇದಕ್ಕಾಗಿ ಈ ವರ್ಷ ನೇಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.