ಸ್ಫೋಟಕ ಮಾಹಿತಿ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ದಾಖಲಾಗಿದ್ದ ಅಪೊಲೊ ಆಸ್ಪತ್ರೆ ಮುಖ್ಯಸ್ಥರಿಂದ ಮಹತ್ವದ ಹೇಳಿಕೆ…!!

ಸ್ಫೋಟಕ ಮಾಹಿತಿ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ದಾಖಲಾಗಿದ್ದ ಅಪೊಲೊ ಆಸ್ಪತ್ರೆ ಮುಖ್ಯಸ್ಥರಿಂದ ಮಹತ್ವದ ಹೇಳಿಕೆ…!!

0

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ದಾಖಲಾಗಿದ್ದ ಅಪೊಲೊ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪ್ರತಾಪ್ ಸಿ ರೆಡ್ಡಿ ಅವರು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಎಲ್ಲಾ CCTV ಕ್ಯಾಮರಾಗಳನ್ನು ಆಫ್ ಮಾಡಲಾಗಿತ್ತು ಎಂಬ ಮಾಹಿತಿ ಬಹಿರಂಗಪಡಿಸಿರುವ ಅವರು, ಅಪೊಲೊ ಆಸ್ಪತ್ರೆಯ 24 ಹಾಸಿಗೆಗಳ ICU ನಲ್ಲಿ ಜಯಲಲಿತಾ ಒಬ್ಬರೇ ಇದ್ದರು. ಆಗ ಆಸ್ಪತ್ರೆಯ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ಬಂದ್ ಮಾಡಲಾಗಿತ್ತು ಎಂದಿದ್ದಾರೆ.

ಜಯಲಲಿತಾ ಅವರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಆರ್ಮುಗಸ್ವಾಮಿ ಆಯೋಗಕ್ಕೆ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು. 2018ರ ಅಪೋಲೋ ಆಸ್ಪತ್ರೆಯ ಉಪನ್ಯಾಸಮಾಲೆ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಸಂಗತಿ ತಿಳಿಸಿದ್ದಾರೆ.

ಆಯೋಗಕ್ಕೆ ಸಿಸಿಟಿವಿ ದಾಖಲೆಗಳನ್ನೂ ಸಲ್ಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ದಯವಿಟ್ಟು ಕ್ಷಮಿಸಿ, ದುರದೃಷ್ಟಕರ ಸಂಗತಿ ಎಂದರೆ 75 ದಿನಗಳ ಕಾಲ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಅವರು ಐಸಿಯುಗೆ ದಾಖಲಾಗುತ್ತಿದ್ದಂತೆ ಎಲ್ಲಾ ಬಂದ್ ಮಾಡಲಾಗಿತ್ತು. ಎಲ್ಲಾ ರೋಗಿಗಳನ್ನು ಬೇರೆ ಐಸಿಯುಗೆ ಸ್ಥಳಾಂತರಿಸಲಾಯಿತು. ಈ ಐಸಿಯುದಲ್ಲಿ ಅವರು ಮಾತ್ರ ಇದ್ದರು. 24 ಬೆಡ್‌ಗಳ ಐಸಿಯುನಲ್ಲಿ ಅವರೊಬ್ಬರೇ ಇದ್ದರು. ಎಲ್ಲರೂ ನೋಡಬಾರದು ಎಂಬ ಕಾರಣಕ್ಕೆ ಸಿಸಿಟಿವಿ ಕ್ಯಾಮರಾಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಏಮ್ಸ್ ವೈದ್ಯರು ಮತ್ತು ನಾವು ಉತ್ತಮ ಚಿಕಿತ್ಸೆ ನೀಡಿದ್ದೆವು ಎಂದು ತಿಳಿಸಿದ್ದಾರೆ.