ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸದಿದ್ದರೆ, ಮೆಕ್ಕಾದಲ್ಲಿ ನಿರ್ಮಿಸಬೇಕಾ.?- ಮಹಾಂತ್ ಜ್ಞಾನ್ ದಾಸ್.

ಅಯೋಧ್ಯಾ ಹನುಮಾಂಗಂಢಿಯ ಮಹಂತ ಮತ್ತು ಅಖಾರಾ ಪರಿಷದ್ ಅಧ್ಯಕ್ಷರಾದ ಮಹಾಂತ್ ಜ್ಞಾನ್ ದಾಸ್ ಅವರು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಅವರ ಸಿರಿಯಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಸಂತ ಖಬೀರ್ ನಗರ ಜಿಲ್ಲೆಯ ಖಾಲಿಲಾಬಾದ್ನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಮಹಾಂತ್ ಜ್ಞಾನ್ ದಾಸ್, “ಭಾರತವನ್ನು ಸಿರಿಯಾ ಮಾಡಿ ರವಿಶಂಕರ್ ಅವರು ಕಟ್ಟುವ ರಾಮಮಂದಿರ ನಮಗೆ ಬೇಕಾಗಿಲ್ಲ” ಎಂದು ಹೇಳಿದ್ದಾರೆ.

“ನಮಗೆ ರಕ್ತದಲ್ಲಿ ಕಟ್ಟುವ ರಾಮ ಮಂದಿರ ಬೇಕಾಗಿಲ್ಲ, ನಮಗೆ ಹಾಲಿನಲ್ಲಿ ಕಟ್ಟುವ ರಾಮಮಂದಿರ ಬೇಕು. ರವಿಶಂಕರ್ ಅವರು ಪ್ರಧಾನಿ ಮೋದಿಯವರ ದೃಷ್ಟಿಯಲ್ಲಿ ಒಳ್ಳೆಯವರಾಗಲು ಬಯಸುತ್ತಿದ್ದಾರೆ. ಅದಕ್ಕಾಗಿ ಈ ರೀತಿಯ ಅನವಶ್ಯಕ ಹೇಳಿಕೆ ನೀಡುತ್ತಿದ್ದಾರೆ. ಆತ ಅಯೋಧ್ಯೆಯಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದರು, ಆದರೆ ನಾವು ಅವರನ್ನು ಓಡಿಸಿದೆವು” ಎಂದು ಮಹಾಂತ್ ಹೇಳಿದ್ದಾರೆ.

2010 ರಲ್ಲಿ, ವಿವಾದಿತ ಭೂಮಿಗಳನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸಲು ನ್ಯಾಯಾಲಯ ನಿರ್ಧರಿಸಿತು ದೇವಸ್ಥಾನ ಯಾವಾಗ ನಿರ್ಮಾಣವಾಗಬೇಕೆಂದು ಎಂದು ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಿಸದಿದ್ದರೆ, ಮೆಕ್ಕಾದಲ್ಲಿ ನಿರ್ಮಿಸಬೇಕಾ??ಎಂದು ಜ್ಞಾನ್ ದಾಸ್ ಪ್ರಶ್ನೆ ಕೇಳಿದರು. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಬೇಕು ಎಂದು ಅವರು ಒತ್ತಿ ಹೇಳಿದರು. ಆದಾಗ್ಯೂ, ಈ ದೇವಾಲಯವನ್ನು ರಕ್ತ ಹರಿಸಿ ನಿರ್ಮಿಸಬಾರದು ಎಂದು ಹೇಳಿದರು.

ರಾಜಕಾರಣಿಗಳು ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತಾರೆ ಎಂದು ಹೇಳಿದರು, ಆದರೆ ಅವರಿಗೆ ಮತಗಳನ್ನು ಬೇಕಾದರೆ ಅವರು ಎಲ್ಲರಿಗೂ ಗೌರವವನ್ನು ನೀಡುತ್ತಾರೆ ಎಂದು ಹೇಳಿದರು.

Source: https://www.siasat.com/news/ayodhyal-temple-built-mecca-asks-mahant-gyan-das-1331070/

 

Comments (0)
Add Comment