ಅಯೋಧ್ಯೆಯಲ್ಲಿ ರೈಲುನಿಲ್ದಾಣ ರಾಮಮಂದಿರದ ನೀಲನಕ್ಷೆಯಂತೆ ನಿರ್ಮಿಸಲಾಗುತ್ತಿದೆ ನಿಮಗೆ ಗೊತ್ತಾ?..!!

ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ. ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ನಾಯಕನಾದ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ.

ಇದು ರಾಮಾಯಣ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿತ್ತು. ಆಗ ಇದರ ವಿಸ್ತೀರ್ಣ ಸುಮಾರು 12 ಯೋಜನ ಎಂದರೆ ಸುಮಾರು 80 ರಿಂದ 100 ಮೈಲಿಗಳ ಸುತ್ತಳತೆ ಇತ್ತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.  ಈಗಿನ ಪಟ್ಟಣದ ಸುತ್ತಲೂ ಇರುವ ಎತ್ತರದ ದಿಬ್ಬ ಪ್ರದೇಶದ ಅಂದಾಜಿನಲ್ಲಿ ಈ ನಗರವನ್ನು ಗುರುತಿಸಿದ್ದಾರೆ.


ಅಯೋಧ್ಯೆಯಲ್ಲಿ ರೈಲುನಿಲ್ದಾಣ ರಾಮಮಂದಿರದ ನೀಲನಕ್ಷೆಯಂತೆ   ನಿರ್ಮಿಸಲಾಗುತ್ತಿದೆ..!!
ಶ್ರೀರಾಮ ಮಂದಿರದ ನೀಲನಕ್ಷೆಯಂತೆ ಅಯೋಧ್ಯೆಯ ರೇಲ್ವೆ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿದೆ. ಈ ನಿಲ್ದಾಣವನ್ನು ಫೆಬ್ರವರಿ 20 ರಂದು ಭೂಮಿ ಪೂಜೆ ಮಾಡಲಾಗಿತ್ತು.


ಪವಿತ್ರ ಅಯೋಧ್ಯೆಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇದರಿಂದ ಆ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬರಿಗೂ ತಾವು ಭಗವಾನ ಶ್ರೀರಾಮನು ಜನಿಸಿದ್ದ ನಗರಕ್ಕೆ ಬಂದಿದ್ದೇವೆ, ಎಂಬ ಭಾವನೆ ಬರಬೇಕು ಹಾಗೂ ತಿಳಿಯಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ ಶಾ ಅವರ ಇಚ್ಛೆಯಾಗಿದೆ. ಆದುದರಿಂದ ಈ ನಿಲ್ದಾಣವನ್ನು ಅಯೋಧ್ಯೆ ರಾಮಮಂದಿರದ ನಕ್ಷೆಯಂತೆಯೇ ಸಿದ್ಧಗೊಳಿಸಲು ನಿರ್ಣಯಿಸಲಾಗಿದೆ.


ನಿಲ್ದಾಣದ ನಿರ್ಮಾಣಕ್ಕಾಗಿ ಸುಮಾರು 80 ಕೋಟಿ ಮೊತ್ತ ವೆಚ್ಚವಾಗಲಿರುವ ಈ ರೇಲ್ವೆ ನಿಲ್ದಾಣದಲ್ಲಿ ಲಿಫ್ಟ, ಸರಿಯುವ ಮಹಡಿ ಮೆಟ್ಟಿಲುಗಳು ಹೀಗೆ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಹೊಂದಲಿದೆ. ಈ ನಿಲ್ದಾಣ 2022 ರ ವರೆಗೆ ಪೂರ್ಣಗೊಳ್ಳಲಿದೆ ಹೇಳಲಾಗುತ್ತಿದೆ.

2.

3.

4.

5.


‘ಅಯೋಧ್ಯೆಯ ರೈಲು ನಿಲ್ದಾಣ ರಾಮಮಂದಿರದ ಪ್ರತಿಕೃತಿಯಂತೆಯೇ ಕಟ್ಟುವ ಯೋಜನೆ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿಯವರ ಸಮಯದಲ್ಲಿ ಈ ವಿಷಯದಲ್ಲಿ ಚರ್ಚೆಯಾಗಿತ್ತು.

Post Author: Ravi Yadav