ಕಳೆದ ನಾಲ್ಕು ವರ್ಷದ ನಮ್ಮ ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಎಷ್ಟು ಮಹಿಳೆಯರು ಕಾಣೆಯಾಗಿದ್ದಾರೆ ಗೊತ್ತೇ..!!??

ಒಂದು ರಾಜ್ಯವಾಗಲಿ ಅಥವಾ ರಾಷ್ಟ್ರವಾಗಲಿ ಅಭಿವೃದ್ಧಿಯಾಗಬೇಕಾದರೆ ಮೊದಲು ಅಲ್ಲಿನ ಕಾನೂನು ಸುವ್ಯವಸ್ಥೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದರೆ ಕರ್ನಾಟಕ ದಲ್ಲಿ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಹೇಗಿದೆ?

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟುಹೋಗಿದೆ, ಆದರೆ ನಮ್ಮ ಸಿಎಂ ಸಾಹೇಬರು ಮಾತ್ರ ಎಲ್ಲವೂ ಸರಿ ಇದೆ ಅನ್ನೋ ಹಾಗೆ ನಟಿಸುತ್ತಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟುಹೋಗಿದೆ, ಆದರೆ ನಮ್ಮ ಸಿಎಂ ಸಾಹೇಬರು ಮಾತ್ರ ಎಲ್ಲವೂ ಸರಿ ಇದೆ ಅನ್ನೋ ಹಾಗೆ ನಟಿಸುತ್ತಿದ್ದಾರೆ.

ಕಳೆದ ನಾಲ್ಕು ವರ್ಷದಲ್ಲಿ ಕರ್ನಾಟಕದಲ್ಲಿ ಎಷ್ಟು ಮಹಿಳೆಯರು ಕಾಣೆಯಾಗಿದ್ದಾರೆ ನಿಮಗೆ ಗೊತ್ತೇ??

ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ ಮಹಿಳೆಯರು ಕಾಣೆಯಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ;

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಬರೋಬರಿ ಇಪ್ಪತ್ತೊಂದು ಸಾವಿರದ ಐವತ್ಮೂರು(21,053) ಮಹಿಳೆಯರು ಕಾಣೆಯಾಗಿದ್ದಾರೆ.

2014 ರಲ್ಲಿ, 5,989 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 5,509 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 480 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2015 ರಲ್ಲಿ, 5,975 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 5,435 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 540 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2016 ರಲ್ಲಿ, 6,316 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 5,362 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 954 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

2017 ರಲ್ಲಿ, 2,773 ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಪೈಕಿ 1,471 ಮಹಿಳೆಯರು ಕಾಣೆಯಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಮತ್ತು ಉಳಿದ 480 ಮಹಿಳೆಯರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಹಿರಿಯ ಪೊಲೀಸ್ ಅಧಿಕಾರಿ ಹೇಳಿರುವ ಪ್ರಕಾರ ಇದರಲ್ಲಿ ಕೆಲವರು ಸ್ವಇಚ್ಛೆಯಿಂದ ಹೋಗಿದ್ದಾರೆ ಮತ್ತು ಕೆಲವರು ಮಹಿಳಾ ಕಳ್ಳಸಾಗಣೆ(women trafficking)ಗೆ ಬಲಿಯಾಗಿದ್ದಾರೆ, ಹೌದು ಹೊರದೇಶಗಳಿಗೆ ಮಹಿಳೆರನ್ನ ಮಾರುವುದು, ಕಳ್ಳ ಸಾಗಾಟ ಮಾಡುವುದು ನಮ್ಮ ರಾಜ್ಯದಲ್ಲಿ ಬಹಳ ಹೆಚ್ಚಾಗಿದೆ.

ಈ ಎಲ್ಲಾ ಅಂಕಿ ಅಂಶಗಳು ನಾನು ಹೇಳುತ್ತಿಲ್ಲ ಸ್ವತಃ ಆಗಿನ ಗೃಹ ಸಚಿವರಾಗಿದ್ದವರೆ ಅವರು ವಿಧಾನ ಸಭೆಯಲ್ಲಿ ಹೇಳಿದ್ದಾರೆ.

ಬಡ ಕುಟುಂಬದ ಹೆಣ್ಣುಮಕ್ಕಳನನ್ನ ಕೆಲಸ ಕೊಡಿಸುದಾಗಿ ಹೇಳಿ ಅಪಹರಣ ಮಾಡುತ್ತಿದ್ದಾರೆ.

ಹಾಗಾದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇದೆಯೇ?

ಖಂಡಿತವಾಗಿಯೂ ಇಲ್ಲ, ದಿನಬೆಳಗಾದರೆ ಹಿಂದೂ ಕಾರ್ಯಕರ್ತರ ಹತ್ಯೆ, ಪೋಲಿಸ್ ಅಧಿಕಾರಿಗಳ ನಿಗೂಢ ಸಾವು, ಮಹಿಳೆಯರು ಕಾಣೆಯಾಗಿರುವ ಸುದ್ದಿ, ಗ್ಯಾಂಗ್ ವಾರ್, ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ ಹೀಗೆ ಸರ್ಕಾರದ ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ.

ಇಷ್ಟೆಲ್ಲ ಆಗುತ್ತಿದರು ನಮ್ಮ ಸಿಎಂ ಸಾಹೇಬರು ಕ್ಯಾರೇ ಎನ್ನದೇ ಉಡಾಫೆ ಮಾತುಗಳನ್ನ ಆಡುತ್ತಿದ್ದಾರೆ , ಮತ್ತು ತಮ್ಮನ್ನ ತಾವು ಮೋದಿ ಹೋಲಿಕೆ ಮಾಡಿಕೊಳ್ಳೋದನ್ನ ನೋಡಿದರೆ ನಗು ಬರುತ್ತೆ.

ಎಲ್ಲಿಯ ಮೋದಿ ಎಲ್ಲಿಯ ಸಿದ್ದರಾಮಯ್ಯ? ಅಷ್ಟಕ್ಕೂ ಮೋದಿ ಮಹಿಳೆಯರಿಗೋಸ್ಕರ ಯಾವೆಲ್ಲ ಯೋಜನೆಗಳು ತಂದಿದ್ದಾರಂತ ನಿಮಗೆ ಗೊತ್ತೇ ??

ಹೆಣ್ಣುಮಕ್ಕಳ ಸರ್ವಾಂಗೀಣ ಅಭಿವೃದಿಗಾಗಿ ಮೋದಿ ಸರ್ಕಾರ “ಬೇಟಿ ಬಚಾವೋ ಬೇಟಿ ಪಡಾವೋ” ಯೋಜನೆಯನ್ನ ತಂದಿದ್ದಾರೆ ಆದರೆ ಸಿದ್ದರಾಮಯ್ಯನವರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವೇ ಜಾರಿಗೆ ತಂದ 2 ರೂಪಾಯಿ ಯೋಜನೆಯನ್ನ ಸದ್ದಿಲ್ಲದೆ ಬಂದ್ ಮಾಡಿಸಿಬಿಟ್ಟಿದ್ದಾರೆ.

ಮೋದಿಯವರ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಟಿಕಾಂಶದ ಕೊರತೆ ನೀಗಿಸುದು, ಭ್ರೂಣ ಹತ್ಯೆ ತಡೆ ಸೇರಿದಂತೆ ಕೆಲವು ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ ದೇಶದ 100 ಹಿಂದುಳಿದ ಜಿಲ್ಲೆಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ, ಮಹಿಳಾ ಸಬಲೀಕರಣ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡೊಕೊಳ್ಳಲಿದೆ.

ಹೀಗೆ ಮೋದಿ ಹಲವು ಯೋಜನೆಗಳ ಮೂಲಕ ಮಹಿಳೆಯರ ಅಭಿವೃದಿಗೆ ಶ್ರಮಿಸುತ್ತಿದ್ದಾರೆ, ಮತ್ತೊಂದು ಕಡೆ ನಮ್ಮ ಸಿಎಂ ಸಾಹೇಬರು ಏನೂ ಮಾಡಿಲ್ಲವಾದರೂ ಎಲ್ಲವೂ ಮಾಡಿದ್ದೇನೆ ಅನ್ನೋ ರೀತಿಯಲ್ಲಿ ಪೋಸ್ ಕೊಡ್ತಿದಾರೆ.

ಇಷ್ಟೆಲ್ಲ ಓದಿದ ಮೇಲೆ ಸಿದ್ದರಾಮಯ್ಯನವರವರ ಸರ್ಕಾರದ ಬಗ್ಗೆ ನಿರ್ಧಾರ ಮಾಡುವುದು ನಿಮಗೆ ಬಿಟ್ಟದ್ದು..!

 

Post Author: Ravi Yadav