ವ್ಯಕ್ತಿತ್ವ ನಿರ್ಮಾಣ ಮಾಡುವ ಚಿನ್ನದ ಪಲ್ಲಕ್ಕಿ ಶ್ರೀರಾಮ ವಿದ್ಯಾ ಕೇಂದ್ರ…!!ಇದನ್ನ ಓದಿ ಅರ್ಥವಾಗುತ್ತೆ..!!

ವ್ಯಕ್ತಿತ್ವ ನಿರ್ಮಾಣ ಮಾಡುವ ಚಿನ್ನದ ಪಲ್ಲಕ್ಕಿ ಶ್ರೀರಾಮ ವಿದ್ಯಾ ಕೇಂದ್ರ…!!ಇದನ್ನ ಓದಿ ಅರ್ಥವಾಗುತ್ತೆ..!!

0

ಅದು 90ರ ದಶಕ..ತುಳುನಾಡಿನ ಪುಟ್ಟದೊಂದು ಊರು… ಬಂಟ್ವಾಳ ಸಮೀಪದ ಕಲ್ಲಡ್ಕ. ಅಲ್ಲಿ ಸುತ್ತಮುತ್ತಲ್ಲಲ್ಲಿ ಶೇಕಡ 90ಕ್ಕಿಂತಲೂ ಹೆಚ್ಚು ಜನರು ಬಡವರು,ಅನಕ್ಷರಸ್ಥರು. ಇಂತಹ ಹಿಂದುಳಿದ ಪ್ರದೇಶದಲ್ಲಿ ಬಡವರ್ಗದವರಿಗೆ ಶಿಕ್ಷಣ ಕೊಡಬೇಕು ಎನ್ನುವ ಉದ್ದೇಶಕೋಸ್ಕರ ಸ್ಥಾಪನೆಯಾದ ವಿದ್ಯಾ ದೇಗುಲ ಶ್ರೀರಾಮ .

ಮೊದಲಿಗೆ ಜಾಗದ ಸಮಸ್ಯೆಯಿಂದ ಕಲ್ಲಡ್ಕದ ಈಗಿನ ಶ್ರೀರಾಮ ಮಂದಿರವಿರುವ ಜಾಗದಲ್ಲಿ ಸಣ್ಣ ಕೊಠಡಿಯಲ್ಲಿ ತರಗತಿಯನ್ನು ನಡೆಸಲಾಗುತ್ತಿತ್ತು… ನಂತರದಲ್ಲಿ ಜಾಗ ಸಿಕ್ಕಿದಾಗ ಮತಾಂಧರ ಭಾರಿ ವಿರೋಧದ ನಡೆವೆಯೇ ಇಂದಿನ ಹನುಮಾನ್ ನಗರದಲ್ಲಿ 144 ಸೆಕ್ಷನ್ ನಡುವೆಯೇ ಶಿಲಾನ್ಯಾಸ ನೆಡೆದು… ಶಾಲೆ ಕಟ್ಟಲಾಯ್ತು.. ಇಂದು ಸಂಸ್ಥೆ ಬೆಳೆದು ಹೆಮ್ಮವರವಾಗಿಬಿಟ್ಟಿದೆ.. ಸುಮಾರು 3500 ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾಧಾನ ಮಾಡುತ್ತಿದ್ದು 150ಕ್ಕೂ ಹೆಚ್ಚು ಶಿಕ್ಷಕರನ್ನು ಈ ಸಂಸ್ಥೆ ಒಳಗೊಂಡಿದೆ…

ಈ ಸಂಸ್ಥೆಯ ಕನಸು ಕಂಡವರು ಬೇರೆ ಯಾರೂ ಅಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣಮಧ್ಯಕ್ಷೆತ್ರಿಯ ಕಾರ್ಯಕರಣಿ ಸದಸ್ಯರು… ತುಳುನಾಡಿನ ಹಿಂದೂ ಹೃದಯ,ಹಿಂದೂ ಸಮಾಜೋತ್ಸವದ ದಿಕ್ಸೂಜಿ ಭಾಷಣಕಾರ.. ಡಾ.ಪ್ರಭಾಕರ್ ಭಟ್ ಕಲ್ಲಡ್ಕ.

ದಾ ರಾಷ್ಟ್ರೀಯತೆ, ಧರ್ಮರಕ್ಷಣೆ, ಸಮಾಜಪರ ಶಿಕ್ಷಣವನ್ನು ಪಡೆದ ಇಲ್ಲಿಯ ವಿದ್ಯಾರ್ಥಿಗಳ ಸಮಾಜಮುಖಿ ಮನಸ್ಸು ಹೇಗಿದೆ ಗೊತ್ತಾ??

ಅದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಘಟನೆ.ಕಲ್ಲಡ್ಕ ಶ್ರೀರಾಮಕ್ಕೆ ಕೊಲ್ಲುರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಮದ್ಯಾಹ್ನದ ಊಟಕ್ಕಾಗಿ ಬರುತ್ತಿದ್ದ ಸಹಾಯ ಧನವನ್ನು ಇಂದಿನ ಸಿದ್ದರಾಮಯ್ಯ ಹಾಗೂ ರಮಾನಾಥ ರೈ ಅವರ ಸರ್ಕಾರ ರಾಜಕೀಯ ದ್ವೇಷದಿನ ಸ್ಥಗಿತಗೊಳಿದ ಸಮಯ.. ಮಕ್ಕಳೆಲ್ಲಾ ಬಟ್ಟಲು ಹಿಡಿದು ಬಿಸಿರೋಡಿನ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ಕ್ರಮವನ್ನು. ಸಿದ್ದರಾಮಯ್ಯರ ಈ ಕೆಟ್ಟ ನಿರ್ದಾರವನ್ನು ವಿರೋಧಿಸಿದರು… ನೀವು ಊಟ ಕೊಡದಿದ್ದರೆ ತೊಂದ್ರೆ ಇಲ್ಲ ನಾವೇ ನಿಮಿಗೆ ಊಟ ಕೊಡ್ತೇವೆ ನಮ್ಮ ಶಾಲೆಗೆ ಬನ್ನಿ ಎನ್ನುವ ಮೂಲಕ 7ವರ್ಷದ ಬಾಲಕ ಸಿದ್ದರಾಮಯ್ಯರಿಗೆ ಬಿಸಿ ಮುಟ್ಟಿಸಿದ ಸಮಯ…

ಈಗ ಕಲ್ಲಡ್ಕದಲ್ಲಿ ಊಟದ ಸಮಸ್ಯೆ. ಈ ಸಮಯದಲ್ಲಿ ನಾವು ಉಪವಾಸವಿದ್ದರೂ ತೊಂದ್ರೆಇಲ್ಲ. ನಾವು ಸಮಜಮುಖಿಯಾದ ಕಾರ್ಯವನ್ನು ಮಾಡಬೇಕು..ಯಾವ ಸಮಸ್ಯೆ ಇದ್ದರೂ ನಾವು ಎಂದಿಗೂ ಈ ಕಾರ್ಯಬಿಡುದಿಲ್ಲ ಎಂದ ಪದವಿಯ ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತಾ??

ಎರಡು ತಿಂಗಳ ಹಿಂದೆ “ಆಶ್ರಯ” ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿದರು… ಸಮಾಜದಲ್ಲಿ ಸಮಸ್ಯೆಯಲ್ಲಿರುವವರಿಗೆ ಸಹಾಯ ಮಾಡುವುದು ಈ ಸಂಘಟನೆ ಮುಖ್ಯ ಉದ್ದೇಶ.. ಪ್ರತಿ ತಿಂಗಳು ಹಣ ಸಂಗ್ರಹ ಮಾಡಿ ಬಡವರಿಗೆ ಕೊಡುವುದೇ ಇದರ ಮುಖ್ಯ ಗುರಿ..

ಅದರಂತೆ ಕಾಲೇಜಿನ ಸರಸ್ವತಿ ವಂಧನಾ ಸಮಯದಲ್ಲಿ ಮನವಿಯೊಂದನ್ನು ಮಾಡಲಾಯ್ತು.. “ಕಾಲೇಜಿನ ಗಿರೀಶ್ ಎಂಬ ವಿದ್ಯಾರ್ಥಿಯು ಮೆದುಳುಜ್ವರದಿಂದ ಬಳಲುತ್ತಿದ್ದಾನೆ,ಪ್ರಸ್ತುತ ಕಂಕನಾಡಿ fatherಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ… ಆತನು ತೀರಾ ಬಡವನಾಗಿದ್ದು ನಾವು ಆತನಿಗೆ ಸಹಾಯ ಮಾಡಬೇಕು.. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡಾ ತಮ್ಮ ಕೈಲಾದಷ್ಟು.. ಹಣವನ್ನು “ಶ್ರದ್ಧಾನಿಧಿ” ಡಬ್ಬಿಗೆ ಹಾಕಿ” ಎಂದು ಕೇಳಿಕೊಳ್ಳಲಾಯ್ತು..

ಪರಿಣಾಮ ಏನಾಯ್ತ್ ಗೊತ್ತೇ?? ಕಲ್ಲಡ್ಕದ ವಿದ್ಯಾರ್ಥಿಗಳು ತೀರಾ ಬಡತನವಿರುವ ಮನೆಯಿಂದ,ಮಧ್ಯಮ ವರ್ಗದ ಮನೆಯಿಂದ ಬರುವ ವಿದ್ಯಾರ್ಥಿಗಳಾದರೂ ಕೂಡಾ ಅವರಿಗಾದಷ್ಟು ಸಹಾಯ ಮಾಡಿದರು.. ಸರಿ ಸುಮಾರು 13,680ರೂ ಹಣ ಸಂಗ್ರಹ ಆಯ್ತು ಆ ಹಣವನ್ನು ಗಿರೀಶ್ ಗೆ ಕೊಡಲಾಯ್ತು… ಆತ ನಿಧಾನವಾಗಿ ಗುಣಮುಖವಾಗುತ್ತಿದ್ದಾನೆ..

ನಂತ್ರ ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ಶ್ರೀ ಹರೀಶ್ ಇವರು ಕನ್ಯಾನ ವೃದ್ಧಾಶ್ರಮಕ್ಕೆ ಹೋಗುವುದೆಂದು ಯೋಜನೆ ಮಾಡಿದರು… ಮಕ್ಕಳೇ ಬಂದು ಆಶ್ರಮಕ್ಕೆ ಹೋಗುವುದು ಮಾತ್ರವ? ಅಲ್ಲಿರುವವರಿಗೆ ಏನೂ ಕೊಡಲಿಕಿಲ್ವಾ ಅಂತಾ ಮಕ್ಕಳೇ ಬಂದು ಹರೀಶ್ ಅವರನ್ನು ಪ್ರಶ್ನೆ ಮಾಡಿದರು… ನಂತ್ರ ನಿರ್ದಾರ ಮಾಡಿ ಮಕ್ಕಳ ಹಾಗೂ ಉಪನ್ಯಾಸಕರ ಸಹಾಯದ ಹಣದಲ್ಲಿ 50kg ಅಕ್ಕಿಯನ್ನು ಸುಮಾರು 1000ರೂ ಹಣದ ತರಕಾರಿಯನ್ನು ಕನ್ಯಾನ ಆಶ್ರಮಕ್ಕೆ 80ಮಕ್ಕಳ ಸಮ್ಮುಖದಲ್ಲಿ ಕೊಡಲಾಯ್ತು… ಅಲ್ಲದೆ ಆ ದಿನ ಮದ್ಯಾಹ್ನ ದ ವರೆಗೆ ಅಲ್ಲಿ ಶ್ರಮಧಾನ ಮಾಡಲಾಯ್ತು… ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಭಾಗವಹಿಸಿ ವೃದ್ಧರ ಯೋಗ ಕ್ಷೇಮ ವಿಚಾರಿಸಿದರು..

ಇನ್ನು ಟೀಮ್ ಆಶ್ರಯ ಈ ತಿಂಗಳು ಇನ್ನೊಂದು ಕರೆ ಕೊಟ್ಟಿತು. ಈ ತಿಂಗಳ ಹಣವನ್ನು “ಕುತ್ತಾರು ಬಾಲ ಸಂರಕ್ಷಣಾ ಆಶ್ರಮಕ್ಕೆ” ಕೊಡುವುದು ವಿದ್ಯಾರ್ಥಿಗಳು ತರಕಾರಿ,ತೆಂಗಿನಕಾಯಿ, ಸಾಬೂನು , ಹಣದ ರೂಪದಲ್ಲಿ ಸಹಾಯ ಮಾಡಬಹುದು ಎಂದು ವಿದ್ಯಾರ್ಥಿಗಳಲ್ಲಿ ಕೇಳಿಕೊಂಡರು…

ಪರಿಣಾಮವಾಗಿ ಸುಮಾರು 7900ರೂ ಹಣ, 1250ರೂ ಯ ಸಾಬೂನು,25 ತೆಂಗಿನ ಕಾಯಿ,20kg ಅಕ್ಕಿ ಸಂಗ್ರಹ ಆಯ್ತು… ಮಕ್ಕಳ ಜೋತೆಗೆ ಅಧ್ಯಾಪಕರೂ ಕೂಡ ಸಹಾಯ ಮಾಡುವುದು ಇಲ್ಲಿಯ ವಿಶೇಷ.. ಈ ಸಂಗ್ರವಾದ ಹಣ ವಸ್ತುಗಳನ್ನು ನಿನ್ನೆ ಕುತ್ತಾರು ಆಶ್ರಮಕ್ಕೆ ನೀಡಿ… ಆಶ್ರಮದ ನಿವಾಸಿಗಳ ಕ್ಷೇಮವಿಚಾರಿಸಿ ಬರಲಾಯ್ತು…ಆಶ್ರಮ ನಿವಾಸಿಗಳಿಗೂ ತುಂಬಾ ಸಂತೋಷವಾಯ್ತು…

ಒಂದು ಕಡೆಯಿಂದ ಶ್ರೀರಾಮದ ಮಕ್ಕಳ ಊಟ ಕಸಿದುಕೊಂಡ ಸಿದ್ದರಾಮಯ್ಯ,ರಮಾನಾಥ ರೈಯ ಸರ್ಕಾರ ವಿಕೃತ ರಾಕ್ಷಸ ಮುಖ,ಇನ್ನೊಂದು ಕಡೆ ತಮಗೆ ಊಟ ಇಲ್ಲದಿದ್ದರೂ ತೊಂದ್ರೆ ಇಲ್ಲ ,ಸಮಾಜಕ್ಕೆ ಸಹಾಯ ಆಗಬೇಕು,ಬಡವರಿಗೆ ಆಶ್ರಯ ಆಗಬೇಕು ಎನ್ನುವ ವಿದ್ಯಾರ್ಥಿಗಳ ಪುಟ್ಟ ಮನಸ್ಸು.. ಎನ್ ಅದ್ಬುತ ಕಂಡ್ರಿ!!

ಒಂದು ವೇಳೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ನಿಜವಾಗಿ ಇರುತ್ತಿದ್ದರೆ ಖಂಡಿತಾ ಈ ಮಕ್ಕಳನ್ನು ನೋಡಲು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರುತ್ತಿದ್ದ…. ಆದ್ರೆ ಶ್ರೀರಾಮನ ಗುಣ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುದು, ಶ್ರೀರಾಮ ನಮ್ಮ ರೂಪದಲ್ಲಿದ್ದಾನೆ ಎಂದು ಸಾರುವ ಮುಗ್ದ ಮಕ್ಕಳು..!!

ಇಂತಹ ಮಕ್ಕಳ ಅನ್ನ ಕಿತ್ತುಕೊಂಡ ಮಾನ್ಯ ಸಿದ್ದರಾಮಯ್ಯ ಅವರನ್ನು, ಮಂಗಳೂರಿನ ಉಸ್ತುವಾರಿ ಸಚಿವರಾದ ರಮನಾಥ ರೈ ಅವರನ್ನು ಶ್ರೀರಾಮ ಕಾಲೇಜಿಗೆ ಅಮಂತ್ರಿಸುತ್ತಿದ್ದೇವೆ, ಮಕ್ಕಳ ಕಾರ್ಯ ಚಟುವಟಿಗೆ ಬಂದು ನೋಡಿ…!! ಈ ಮಕ್ಕಳ ಗುಣದ ಎದುರು ನೀವಿಬ್ಬರೂ ತಲೆ ತಿಗ್ಗಿಸದಿದ್ದರೆ ದೇವ್ರೇ ಇಲ್ಲ ಅಂತ ಅರ್ಥ…

ಅದು ಮಾನವೀಯತೆಯನ್ನು ಕಲಿಸಿಕೊಡುವ ತೊಟ್ಟಿಲು, ಅದು ರಾಷ್ಟ್ರೀಯತೆ ನಿರ್ಮಾಣ ಮಾಡುವ ಚಿನ್ನದ ಪಲ್ಲಕ್ಕಿ.. ಅದು ಹಿಂದುತ್ವದ ಶಕ್ತಿ ಕೇಂದ್ರ,ಗಾಳಿಯ ಕಣಕಣವೂ ಓಂಕಾರ ಶಬ್ದ ಮಾಡುತ್ತಾ ಬೀಸುವ ಕಲ್ಲಡ್ಕದ ಹನುಮಾನ್ ನಗರ,ಅಲ್ಲಿರುವುದೆಲ್ಲವೂ ಇತರರಿಗೆ ಮಾದರಿ..

ಮುಂದೆಯೂ ಈ ರೀತಿಯ ಸಮಾಜಮುಖಿ ಕಾರ್ಯ ನಡೆಯಲಿ… ಈ ಎಲ್ಲದಕ್ಕೂ ಮಾರ್ಗದರ್ಶಕರಾಗಿರುವ ಪ್ರಭಾಕರ್ ಭಟ್ ಜಿ ಗೆ, ಹಾಗೂ ಮಕ್ಕಳಲ್ಲಿ ಈ ರೀತಿಯ ಭಾವನೆ ಬೆಳೆಯುವಂತೆ ಮಾಡುವ ಶಿಕ್ಷಕ ವರ್ಗದವರಿಗೆ,ಮುಖ್ಯವಾಗಿ ಮಕ್ಕಳಿಗೆ ನನ್ನದೊಂದು ಸಲಾಂ!!! ಸಮಾಜ ಯಾವತ್ತೂ ನಿಮ್ಮಂತವರಿಗೆ ಚಿರಋಣಿ.. ನೀವು ಕೂಡಾ ಅಲ್ವಾ???

ಸರಿ ಅನಿಸಿದ್ರೆ ಶೇರ್ ಮಾಡಿ,ಧನ್ಯವಾದಗಳು

-ಸಚಿನ್ ಜೈನ್ ಹಳೆಯೂರು