ಮಕ್ಕಳಿಗೆ ಹಿಂದೂ ದೊರೆಯಾಗಿದ್ದ ರಾಣಾ ಪ್ರತಾಪ್ ಸಿಂಹ ಯಾರೆಂದು ಗೊತ್ತಿಲ್ಲ ಆದರೆ ಅಕ್ಬರ್ ಮಾತ್ರ ದಿ ಗ್ರೇಟ್..!!ಯಾಕೆ ಗೊತ್ತಾ..??

ಮಕ್ಕಳಿಗೆ ಹಿಂದೂ ದೊರೆಯಾಗಿದ್ದ ರಾಣಾ ಪ್ರತಾಪ್ ಸಿಂಹ ಯಾರೆಂದು ಗೊತ್ತಿಲ್ಲ ಆದರೆ ಅಕ್ಬರ್ ಮಾತ್ರ ದಿ ಗ್ರೇಟ್..!!ಯಾಕೆ ಗೊತ್ತಾ..??

0

ಅಕ್ಬರ್ ಒಬ್ಬ ಮಹಾ ಪರಾಕ್ರಮಿ ಮತ್ತು ಭಾರತೀಯರ ಬಗ್ಗೆ ಅವನಿಗೆ ಬಹಳಷ್ಟು ಕಾಳಜಿಯಿತ್ತು. ಅವನ ಪರಾಕ್ರಮವನ್ನು ಎಲ್ಲರೂ ಮನಸಾರೆ ಹೊಗಳುತ್ತಿದ್ದರು. ಶಹಜಹಾನ್, ಮುಮ್ ತಾಜ್ ಮೇಲಿನ ಪ್ರೇಮಕ್ಕೆ ಸೋತುಹೋಗಿ ಅವಳ ನೆನಪಿಗಾಗಿ ತಾಜ್ ಮಹಲ್ ಅನ್ನು ಕಟ್ಟಿದ. ಅಲ್ಲಾವುದ್ಧೀನ್ ಖಿಲ್ ಜಿ, ಕುತುಬುದ್ಧೀನ್ ಐಬಕ್, ಹೀಗೆ ಹಲವಾರು ರಾಜರುಗಳಿಗೆ ನಮ್ಮ ದೇಶದಲ್ಲಿ ಸ್ಥಾನ ಕೊಟ್ಟಿದ್ದಲ್ಲದೆ ಅವರನ್ನು ಪರಾಕ್ರಮಿಯೆಂದು ಬಹುಪರಾಕ್ ಹಾಕುತ್ತಾ ಬಂದಿದ್ದೇವೆ.. ! ಆದರೆ ನಿಜವಾಗಿಯೂ ಅವರು ಪರಾಕ್ರಮಿಗಳೇ? ರಾಕ್ಷಸಗುಣಕ್ಕೂ ಪರಾಕ್ರಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲವೇ? ಹಾಗಿದ್ದರೆ ರಾಕ್ಷಸರನ್ನೂ ನಾವು ಮಹಾಪರಾಕ್ರಮಿಗಳು ಎಂದೆನ್ನಬಹುದಲ್ಲವೇ? ದುರದೃಷ್ಟವೆಂದರೆ ಇಂತಹ ಆಘಾತಕಾರಿ ವಿಷಯಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ.

ಒಬ್ಬ ಲೇಖಕ ತಪ್ಪಾಗಿ ಬರೆದರೆ ಮಾಡಿದರೆ ಇಡೀ ಪೀಳಿಗೆಯನ್ನೇ ಸುಡಬೇಕೆನ್ನುತ್ತಾರೆ. ಆದರೆ ಬರೀ ಅಸತ್ಯಗಳೇ ತುಂಬಿರುವಂತಹ ಇತಿಹಾಸ ಪುಸ್ತಕಗಳನ್ನು ಮಕ್ಕಳಿಗೆ ಪಾಠವಾಗಿ ಕೊಟ್ಟರೆ ಇಡೀ ಸಮಾಜವನ್ನೇ ಸುಡಬೇಕಾದೀತು! ಹೌದು, ಇಂದು ನಮ್ಮ ಮಕ್ಕಳಿಗೆ ಬಹುತೇಕ ಮುಸಲ್ಮಾನ ರಾಜರುಗಳ ರಾಕ್ಷಸ ಕೃತ್ಯಗಳನ್ನು “ಪರಾಕ್ರಮವೆಂದು” ಹೇಳಿಕೊಡಲಾಗುತ್ತಿವೆ. ಶಹಜಹಾನ್ ತನ್ನ ಪ್ರೇಮಕ್ಕಾಗಿ ತಾಜ್ ಮಹಲ್ ಅನ್ನು ಕಟ್ಟಿರಬಹುದು ಆದರೆ ಅವನು 1635ರಲ್ಲಿ ಬಂಡೇಲಾದ ರಾಜಧಾನಿ ಒರ್ಚ್ಚಾದಲ್ಲಿ ಸಹಸ್ರಾರು ಸೃಜನಶೀಲ ಹಿಂದುಗಳನ್ನು ಮಾರಣ ಹೋಮವನ್ನೇ ಮಾಡಿ ಅಲ್ಲಿದ್ದ ಬಿರ್ ಸಿಂಗ್ ದೇವ್ ದೇವಸ್ಥಾನವನ್ನು ಉರುಳಿಸಿ ಅಲ್ಲೇ ಒಂದು ಮಸೀದಿಯನ್ನೂ ಕಟ್ಟಿದ್ದಾನೆ, ಇನ್ನು ಅನೇಕ ಹಿಂದೂಗಳ ಮಾರಣ ಹೋಮ.. ಅದೂ ಕೇವಲ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಲು ತಿರಸ್ಕರಿಸಿದ್ದಕ್ಕೆ ಎಂಬ ವಿಚಾರವನ್ನು ಮಕ್ಕಳ ಪುಸ್ತಕದಲ್ಲಿ ಎಲ್ಲಾದರೂ ಪ್ರಕಟಿಸಿದ್ದಾರೆಯೇ? ಇಂದು ತಾಜ್ ಮಹಲ್ ನೋಡಿ ವಾಹ್ ತಾಜ್! ಎನ್ನುವ ನಾವು ಹಿಂದೆ ಅಲ್ಲಿ ದೇವಸ್ಥಾನವಿತ್ತೆಂಬುದನ್ನು ಮರೆತಂತಿದೆ. ಪ್ರೀತಿ ಪ್ರೇಮದ ವಿಷಯ ಬಂದರೆ ನಮ್ಮ ನಳ ದಮಯಂತಿಯ ಪಾಠಗಳನ್ನಿಡುವ ಬದಲು ಇನ್ಯಾವುದೋ ದೇಶದಿಂದ ಬಂದ ಮೊಘಲ್ ರಾಜ ನಮಗೇಕೆ ಬೇಕು? ಅವನ ತತ್ವಗಳು ನಮಗೆ ಆದರ್ಶವಾಗುವುದಾದರೂ ಹೇಗೆ?

ಇನ್ನು ಅಕ್ಬರ್ ದಿ ಗ್ರೇಟ್ ಎಂದು ಹೆಮ್ಮೆಯಿಂದ ಬೀಗುವ 4ರಿಂದ 6ನೇಯ ತರಗತಿಯ ಪುಸ್ತಕಗಳ ಲೇಖಕರಿಗೆ ಇನ್ನೂ ಅಕ್ಬರ್ ನ ಇನ್ನೊಂದು ಮುಖದ ಪರಿಚೆಯವಿಲ್ಲವೆಂದೆನಿಸುತ್ತದೆ ಏಕೆಂದರೆ ಅಕ್ಬರ್ ತಾನೂ ಸಹ ಇಸ್ಲಾಮ್ ಧರ್ಮಕ್ಕೆ ಸೇವೆಯನ್ನೆಸಗಿದ್ದೇನೆ ಎನ್ನುವ ಸಲುವಾಗಿ ಪಾಣಿಪಟ್ ನ ಎರಡನೇ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಯುದ್ಧದಲ್ಲಿ ಭಾಗವಹಿಸದೆ ಇದ್ದ ಅಮಾಯಕರಾದ ಎಂಟು ಸಾವಿರ ರಜಪುತ್ಸ್ ಮತ್ತು ಇಪ್ಪತ್ತು ಸಾವಿರ ರೈತರನ್ನು ಬಲಿ ತೆಗೆದುಕೊಂಡಿದ್ದಾನೆಂಬುದು “ಅಕ್ಬರ್-ನಾಮಾ”ದಲ್ಲಿ ಉಲ್ಲೇಖವಿದೆ. ಹಾಗಿದ್ದರೆ ಯಾವ ಕೋನದಿಂದ ಅಕ್ಬರ್, ನಮಗೆ ಮತ್ತು ಅವನ so called ಪರಾಕ್ರಮದ ಪಾಠನ್ನು ಓದುತ್ತಿರುವ ಮಕ್ಕಳಿಗೆ ಆದರ್ಶವಾಗಿಯಾನು?

ಇನ್ನು ಮೊಹಮ್ಮದ್ ಘೋರಿಯ ಸೇನಾಧಿಕಾರಿಯಾದ ಕುತುಬ್ ಉದ್ಧೀನ್ ಐಬಕ್ 1193ರ ಅಲಿಘಾರ್ ನಲ್ಲಿ ಸಾವಿರಾರು ಹಿಂದೂಗಳ ತಲೆಯನ್ನು ಛೇದಿಸಿ ಅವನ ಕೋಟೆಗೆ ಅಲಂಕಾರಕ್ಕಾಗಿ ಇಟ್ಟಿದ್ದಲ್ಲದೇ 1194ರಲ್ಲಿ ದೆಹಲಿಯಲ್ಲಿನ 27 ಜೈನ್ ದೇವಾಲಯಗಳನ್ನು ಧ್ವಂಸಮಾಡಿ ಅದೇ ಅವಷೇಶಗಳಿಂದ ಖುವ್ವತ್-ಉಲ್-ಇಸ್ಲಾಮ್ ಮಸೀದಿಗಳನ್ನು ಒಬ್ಬ ಸೇನಾಧಿಕಾರಿಯೆ ಕಟ್ಟಿದನೆಂದರೆ ಇನ್ನು ಅವನ ರಾಜ ಘೋರಿಯ ಘೋರತೆಯನ್ನು ನೀವೇ ಊಹಿಸಿಕೊಳ್ಳಿ.

ಔರಂಗ್ ಜೇಬ್ ನು ಛತ್ರಪತಿ ಶಿವಾಜಿಯ ಮಗನಾದ ವೀರ್ ಸಾಂಭಾಜಿಯನ್ನು ಪುಣೆಯಲ್ಲಿ ಮಾರ್ಚ್ 11, 1689ರಂದು ಅವನ ಕಣ್ಣುಗಳನ್ನು ಕಿತ್ತು, ನಾಲಿಗೆ ಮತ್ತು ಕೈಗಳನ್ನು ಕತ್ತರಿಸಿರಿ ಹಿಂಸಾತ್ಮಕವಾಗಿ ಕೊಂದಿದ್ದಲ್ಲದೇ ಅವನ ಮಾಂಸಗಳನ್ನು ಕತ್ತರಿಸಿ ನಾಯಿಗಳಿಗೆ ಆಹಾರವಿತ್ತ ಉದಾಹರಣೆಯೂ ಇದೆ. ನಿಜವಾದ ಇತಿಹಾಸ ಪುಸ್ತಕದ ಪುಟಗಳನ್ನು ತಿರುವಿಹಾಕುತ್ತಿದ್ದರೆ ಇನ್ನು ಅನೇಕ ಆಘಾತಕಾರಿ ವಿಷಯಗಳು ನಮಗೆ With Proof ಸಿಗುತ್ತವೆ. ಇವರ ದುಷ್ಕೃತ್ಯಗಳನ್ನು ಪರಾಕ್ರಮವೆಂದು ಹೊಗಳುತ್ತಾ ಪುಟ್ಟ ಮಕ್ಕಳನ್ನು ನಂಬಿಸುತ್ತಿರುವ ಪುಸ್ತಕಗಳನ್ನು ಯಾವುದರಲ್ಲಿ ಹಾಕಿ ಸುಡಬೇಕು? ಇನ್ನು ಅದನ್ನು ಓದುತ್ತಾ ಬೆಳದಿರುವ ಪೀಳಿಗೆಯನ್ನು ಹೇಗೆ ಸುಡಬೇಕು??

ಅಷ್ಟಕ್ಕೂ ಮಕ್ಕಳಿಗೆ ಹಿರಿಯರ ಪರಾಕ್ರಮದ ಮೂಲಕ ದೇಶಾಭಿಮಾನ ಮೂಡಿಸುವ ಉದ್ದೇಶವೇ ಇದ್ದಲ್ಲಿ ಅವರಿಗೆ ಮದನ್ ಲಾಲ್ ಧಿಂಗ್ರ, ವೀರ ಸಾವರ್ಕರ್ ಅಂಥವರ ಪಾಠಗಳನ್ನೇಕಿಡುವುದಿಲ್ಲ?? ನಾಳೆಯೋ ನಾಡಿದ್ದೋ ಅಸುನೀಗುವ ವಯಸ್ಕರೂ ಸಹ ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟ ನಿಜವಾದ ಪರಾಕ್ರಮಿಗಳ ಹೆಸರೇ ಕೇಳಿರುವುದಿಲ್ಲ, ಇನ್ನು ಅವರ ಕಥೆಗಳನ್ನು ಕೇಳುತ್ತಾ ಬೆಳೆದಿರುವ ಮಕ್ಕಳಾದರೂ ಹೇಗೆ ಕೇಳಲು ಸಾಧ್ಯ??

ಮದನ್ ಲಾಲ್ ಧಿಂಗ್ರನೆಂಬುವ 21ವರ್ಷದ ಯುವಕ ವೀರ ಸಾವರ್ಕರ್ರ ದೇಶಾಭಿಮಾನದ ಮಾತುಗಳನ್ನು ಕೇಳಿ ಆಕರ್ಷಿತನಾಗಿ ಬಂದು ಸಾವರ್ಕರ್ರಲ್ಲಿ ತನಗೊಂದು ಗುರಿಯನ್ನು ನಿರ್ಮಿಸಿಕೊಡಿಯೆಂದು ಕೇಳಿ ಪಡೆದು ಭಾರತದ ಸ್ವಾತಂತ್ರ್ಯದ ಹೋರಾಟಗಾರರಿಗೆ ಹಿಂಸಿಸುತ್ತಿದ್ದ ಕರ್ಜನ್ ವಾಯ್ಲಿಯೆಂಬ ಬ್ರಿಟೀಷ್ ಅಧಿಕಾರಿಯನ್ನು ಕೊಲ್ಲು ಎಂದು ಆದೇಶ ನೀಡಿದ ಒಂದೇ ತಿಂಗಳಿನಲ್ಲಿ ಕರ್ಜನ್ ವಾಯ್ಲಿಗಾಗಿ ಹೊಂಚು ಹಾಕಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗುಂಡಿಟ್ಟು ಕೊಂದು ಜೈಲು ಸೇರಿ ಕೊನೆಗೆ ಮರಣ ದಂಡನೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ ಮದನ್ ಲಾಲ್ ಧಿಂಗ್ರನ ಬಗ್ಗೆ ಬಹುತೇಕ ಯಾವ ಜನರಿಗೂ ಗೊತ್ತಿಲ್ಲ, Google ಹೊರತಾಗಿ!! ಇಂಥವರ ಪಾಠಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸುವ ಬದಲು ಒಂದೇ ಒಂದು ಜಾತಿಯ ಸಲುವಾಗಿ ಲಕ್ಷಾಂತರ ಹಿಂದೂಗಳ ಮಕ್ಕಳನ್ನು ತಬ್ಬಲಿ ಮಾಡಿದ, ಹೆಂಗಸರನ್ನು ವಿಧವೆಯನ್ನಾಗಿಸಿದ ಆ ಮುಸಲ್ಮಾನ ರಾಜರುಗಳಿಂದ ನಾವು ಕಲಿಯುವ ನೀತಿಯಾದರೂ ಏನು? ಖಾಸಗಿ ಶಾಲೆಗಳ ಶಿಕ್ಷಕರ ನೇಮಕಾತಿ ಮತ್ತು ಇನ್ನಿತರ ಬಹುತೇಕ ವಿಚಾರಗಳಲ್ಲಿ ತನ್ನ ಮೂಗು ತೋರಿಸುವ ನಮ್ಮ ಘನ ಸರ್ಕಾರ ಏಕೆ ಇಂತಹ ನಿಜವಾದ ಪರಾಕ್ರಮಿಗಳ ಪಾಠಗಳನ್ನು ಕಡ್ಡಾಯಗೊಳಿಸುತ್ತಿಲ್ಲ??

ಇನ್ನು ಸರಕಾರಿ ಶಾಲೆಗಳಲ್ಲಿ ಅದೇ ಹಾವು ಮುಂಗೂಸಿ ಕಥೆ, ಆಮೆ ಮೊಲದ ಓಟದ ಸ್ಪರ್ಧೆಯ ಕಥೆಗಳನ್ನು ಸುಮಾರು ಹತ್ತು ಹದಿನೈದು ವರುಷಗಳಿಂದಲೂ ಬದಲಾಯಿಸದೇ ಇರುವ ಬದಲು ಇಂತಹ ನಿಜವಾದ ಪರಾಕ್ರಮಿಗಳ ಮತ್ತು ಇನ್ನಿತರ ಕ್ಷೇತ್ರದಲ್ಲಿ ಸಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಟ್ಟಂಥವರ ಪಾಠಗಳನ್ನು ಸೇರಿಸಿದರೆ ಪಾಠ ಮಾಡುವ ಶಿಕ್ಷಕರಿಗೂ ರಿಟೈರ್ ಆಗುವ ಸಮಯದಲ್ಲಿ ಬುದ್ಧಿ ಬರುತ್ತದೆ ಮತ್ತು ಹೊಸ ಮಕ್ಕಳೂ ಸಹ ನಮ್ಮ ಹಿರಿಯರ ಪರಾಕ್ರಮಗಳು ಮತ್ತೆ ಸಾಧನೆಯಿಂದ ಪ್ರೇರೇಪಿತಗೊಂಡು ತಮ್ಮ ಜೇವನದ ಹಾದಿಯನ್ನು ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದಲ್ಲವೇ?? ಈ ಹೊಸ ಐಡಿಯವನ್ನು ಓಮ್ಮೆ ಟ್ರಯ್ ಮಾಡಿ ನೋಡಬಹುದಲ್ಲವೇ ವಿಧ್ಯಾಮಂತ್ರಿಗಳೇ..???