ಮೋದಿ ಏಕೆ ಪೆಟ್ರೋಲಿಯಂ ಉತ್ಪನ್ನಗಳಿಗೆ GST ಹಾಕಿಲ್ಲ ಗೊತ್ತಾ???ವ್ಹಾ..‌ಅದರಿಂದಾಗುವ ಲಾಭಗಳು ಎಷ್ಟು ಗೊತ್ತಾ..??

ಮೋದಿ ಏಕೆ ಪೆಟ್ರೋಲಿಯಂ ಉತ್ಪನ್ನಗಳಿಗೆ GST ಹಾಕಿಲ್ಲ ಗೊತ್ತಾ???ವ್ಹಾ..‌ಅದರಿಂದಾಗುವ
ಲಾಭಗಳು ಎಷ್ಟು ಗೊತ್ತಾ..??

0

*ಹೌದು ಇತ್ತೀಚಿಗೆ ಭಾರಿ ಚರ್ಚೆಯಲ್ಲಿರುವ ವಿಷಯ ಅಂದ್ರೆ. ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್,ಡೀಸೆಲ್,ಗ್ಯಾಸ್ ಮುಂತಾದ ಇಂಧನಗಳಿಗೆ GST ಹಾಕಬೇಕೆ? ಅಥವಾ ಬೇಡವೇ? ಹಾಕಿದರೇನು ಲಾಭ?ಹಾಕದಿದ್ದರೆನಾಗುತ್ತದೆ?

*ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ 32ಶೇಕಡಾ ತೆರಿಗೆಯನ್ನು ಹಾಗೂ ರಾಜ್ಯ ಸರ್ಕಾರ 20ಶೇಕಡಾ ತೆರಿಗೆಯನ್ನು ಹಾಕುತ್ತಿದ್ದೆ(ರಾಜ್ಯವಾರು ಬದಲಾವಣೆಗಳಿವೆ). ಒಟ್ಟಾರೆಯಾಗಿ ತೆರಿಗೆ ಸೇರಿ ಪೆಟ್ರೋಲ್ನ ಬೆಲೆ ಸುಮಾರು 71ರೂಪಾಯಿ,ಡೀಸೆಲ್ 59ರೂಪಾಯ ಆಗುತ್ತದೆ.

*ಒಂದುವೇಳೆ ಇತರವಸ್ತುಗಳಂತೆ ಪೆಟ್ರೋಲಿಯಂ ಉತ್ಪನ್ನಗಳಿಗೂ GST ಹಾಕಿದರೆ.. ಪೆಟ್ರೋಲ್ ಸುಮಾರು 40ರೂ ಗಳಿಗೆ ಡೀಸೆಲ್ ಸುಮಾರು 28ರೂ ಗಳಿಗೆ ಲಭ್ಯವಾಗಲಿದೆ…

*ಆದರೆ ಈ ರೀತಿ GST ಹಾಕಲು ಅದ್ಯಾಕೆ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದ್ದೆ ಗೊತ್ತೇ?? ಇಲ್ಲಿದೆ ನೋಡಿ ವಿವರ

*ಪ್ರಸ್ತುತ ಪೆಟ್ರೋಲ್ ಉತ್ಪನ್ನಗಳಿಗೆ ಹಾಕುವ ತೆರಿಗೆ 32(ಕೇಂದ್ರ)+20(ರಾಜ್ಯ)=ಒಟ್ಟು ಶೇಕಡಾ 52.. ಒಂದುವೇಳೆ GSTಯ ಅಧೀನಕ್ಕೆ ಈ ವಸ್ತುವನ್ನು ತಂದ್ರೆ…ಕೇಂದ್ರ ಸರ್ಕಾರ ನಷ್ಟ ಅನುಭವಿಸುತ್ತದೆ.

* GSTಯ ನಿಯಮದ ಪ್ರಕಾರ 28ಶೇಕಡಕ್ಕಿಂತ ಹೆಚ್ಚು ತೆರಿಗೆ ಹಾಕುವಂತಿಲ್ಲ… ಈ ಕಾರಣದಿಂದಾಗಿ 52ಶೇಕಡದಷ್ಟು ತೆರಿಗೆಯನ್ನು ಹಾಕಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುದಿಲ್ಲ,ಹೆಚ್ಚೆಂದರೆ 28ಶೇಕಡಾ ಹಾಕಬಹುದಷ್ಟೇ.. ಉಳಿದ 22ಶೇಕಡಾ ತೆರಿಗೆಯನ್ನು ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ.

*ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂನ ಮೇಲಿನ ತೆರಿಗೆಯು ಒಂದು ಮುಖ್ಯ ಆದಾಯದ ಮೂಲ.ಒಂದುವೇಳೆ GST ಬಂದ್ರೆ ರಾಜ್ಯಸರ್ಕಾರದ ಆದಾಯದಲ್ಲಿ ಸಿಕ್ಕಾಪಟ್ಟೆ ಕುಸಿತ ಆಗುತ್ತದೆ.

*GST ನಿಯಮದ ಪ್ರಕಾರ,5ವರ್ಷದವರೆಗೆ ರಾಜ್ಯ ಸರ್ಕಾರಗಳಿಗೆ GST ಇಂದ ಆಗುವ ನಷ್ಟವನ್ನು ಕೇಂದ್ರ ಸರ್ಕಾರ ಬರಿಸಬೇಕು.

*ಒಂದುವೇಳೆ ಪೆಟ್ರೋಲ್ ಡೀಸೆಲ್ ಕೂಡ GST ಯ ಅದಿನಕ್ಕೆ ಬಂದ್ರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಕೊಡಬೇಕಾದ ಪರಿಹಾರ ಹಣ ಹೆಚ್ಚಾಗುತ್ತದೆ..ಇದು ಕೇಂದ್ರದ ಮೇಲೆ ಒಂದು ದೊಡ್ಡ ಹೊರೆಯಾಗುತ್ತದೆ.ಕೇಂದ್ರಕ್ಕೆ ಈ ಹಣವನ್ನು ನೀಡುವಷ್ಟು ಅದಾಯವಿಲ್ಲ.

*ಈಗಾಲೇ ಐದಾರು ವರ್ಷದಿಂದ ವಿದೇಶದಿಂದ ಖರೀದಿ ಮಾಡಿದ ಪೆಟ್ರೋಲಿಯಂ ಉತ್ಪನ್ನಗಳ ಬಾಕಿ ಹಣ ಪಾವತಿಯೇ ಕೇಂದ್ರಕ್ಕೆ ಒಂದು ದೊಡ್ಡ ಹೊರೆಯಾಗಿದೆ.ಅದರ ಜೊತೆಗೆ GST ya ಹೊರೆಯೂ ಹೆಚ್ಚಾಗಬಹುದು.

*ಒಂದು ವೇಳೆ GST ತೆರಿಗೆ ಹಾಕಿದರೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಗಣನಿಯಾವಾಗಿ ಕುಸಿತ ಕಾಣಬಹುದು… ಪೆಟ್ರೋಲ್ 38ರೂ ಗಳಿಗೆ ಲಭ್ಯವಾಗುವ ಸಾಧ್ಯತೆ ಇರುತ್ತದೆ..

*ಒಂದುವೇಳೆ GST ಇಂದ ಈ ಪ್ರಮಾಣದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾದರೆ,ಪೆಟ್ರೋಲ್ ಬಳಕೆ ಗಣನೀಯವಾಗಿ ಏರಿಕೆಯಾಗಲಿದೆ.

*ಪೆಟ್ರೋಲಿನ ಬೆಲೆ ಇಳಿಕೆಯಿಂದ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ…ವಾಹನಗಳ ಸಂಖ್ಯೆ ಹೆಚ್ಚಾಗಿ ಮತ್ತೆ ರಸ್ತೆಅಪಘಾತ,ಟ್ರಾಫಿಕ್ ಸಮಸ್ಯೆ,ಪರಿಸರ ಮಾಲಿನ್ಯ ಸಮಸ್ಯೆ ಜಾಸ್ತಿಯಾಗಲಿದೆ.

*ವಾಹನಗಳ ಬೇಡಿಕೆ ಹೆಚ್ಚಾಗಿ ಕ್ರಮೇಣ ವಾಹನಗಳ ಬೆಲೆಯೂ ದುಭಾರಿಯಾಗುತ್ತದೆ.. ಇದರಿಂದಾಗಿ ಜನಸಾಮಾನ್ಯರು ವಾಹನ ಖರೀದಿ ಮಾಡುವುದು ಕಷ್ಟವಾಗಬಹುದು.

*ಇದೆ ರೀತಿ ಬೆಲೆ ಕಡಿಮೆಯಾಗಿ ಪೆಟ್ರೋಲ್ ಡೀಸೆಲ್ ಬೇಡಿಕೆ ಹೆಚ್ಚಾಗಬಹುದು. ಕ್ರಮೇಣ ಬೇಡಿಕೆ ಹೆಚ್ಚಿದಂತೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗಲು ಆರಂಭವಾಗುತ್ತದೆ..

*GST ಹಾಕಿದರೂ ಕೂಡ ಅಲ್ಪಾವಧಿಯಲ್ಲಿ ಬೆಲೆ ಕಡಿಮೆಯಿದ್ದರೂ ದೀರ್ಘವಾದಿಯಲ್ಲಿ ಮತ್ತೆ ಈಗಿನ ದರವನ್ನೇ ಬಂದು ತಲುಪುವ ಸಾಧ್ಯತೆ ಇರುತ್ತದೆ.ಹೀಗಿರುವಾಗ GST ಹಾಕಿ ಏನು ಪ್ರಯೋಜನ.

*ಒಂದು ಕಡೆಯಿಂದ ಸರ್ಕಾರಕ್ಕೂ ನಷ್ಟ,ಸದ್ಯಕೊಮ್ಮೆ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾದರೂ ,5ವರ್ಷದೊಳಗೆ ಮತ್ತೆ ಪೆಟ್ರೋಲ್,ಡೀಸೆಲ್ ದರ ಈಗ ಇರುವ ದರಕ್ಕೆ ಬಂದು ತಲುಪುತ್ತದೆ,ಪರಿಸರ ಮಾಲಿನ್ಯ ಕೂಡ ಜಾಸ್ತಿಯಾಗುವ ಭಯ….ಈ ಎಲ್ಲಾ ಪ್ರಮುಖ ಕಾರಣಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು GST ya ಆದಿನಕ್ಕೆ ಕೇಂದ್ರ ಸರ್ಕಾರ ತರಲು ಹಿಂದೇಟು ಹಾಕುತ್ತಿದ್ದೆ… ಒಂದುವೇಳೆ ತಂದರೆ ದೇಶದ ಆರ್ಥಿಕತೆ ಕುಸಿದು ಬಿಳುವುದರಲ್ಲಿ ಎರಡು ಮಾತಿಲ್ಲ..

ಒಮ್ಮಿದೊಮ್ಮೆಲೆ GST ಹಾಕಿ ನಷ್ಟ ಅನುಭವಿಸುದಕ್ಕಿಂತ..ಈಗ ಇರುವ ನೀತಿಯನ್ನೇ ಅನುಸರಿಕೊಂಡು ಹೋಗುವುದು ಉತ್ತಮ…

ಸರಿ ಅನಿಸಿದ್ರೆ ಶೇರ್ ಮಾಡಿಬಿಡಿ ಬಂಧುಗಳೇ,ಧನ್ಯವಾದಗಳು…

-ಸಚಿನ್ ಜೈನ್ ಹಳೆಯೂರ್