ಹುತಾತ್ಮನಾದ ನನ್ನ ಮಗನ ಚಿತೆಗೆ ಬೆಂಕಿಕೊಡುವ ಅವಕಾಶ ನನಗಿಲ್ಲವಲ್ಲಾ, ಅದೇ ನನ್ನ ಕಣ್ಣೀರಿಗೆ ಕಾರಣ..!!

ಹುತಾತ್ಮನಾದ ನನ್ನ ಮಗನ ಚಿತೆಗೆ ಬೆಂಕಿಕೊಡುವ ಅವಕಾಶ ನನಗಿಲ್ಲವಲ್ಲಾ, ಅದೇ ನನ್ನ ಕಣ್ಣೀರಿಗೆ ಕಾರಣ..!!

0

ಅದು ಹರ್ಯಾಣ ರಾಜ್ಯದ ದೇಸಲೂರು ಎಂಬ ಪುಟ್ಟ ಗ್ರಾಮ ಅಲ್ಲೊಬ್ಬ ದೇಶಪ್ರೇಮಿ ವೃದ್ಧ ರಣಾಸಿಂಗ್, ಆತ ನಿವೃತ್ತ ಜಾಟ್ ಸೈನಿಕನೂ ಹೌದು. ಈ ವೃದ್ಧ ಸೈನಿಕನಿಗೆ ತನ್ನರಿನಲ್ಲಿರುವ ಯುವಕರನ್ನು ಸೈನ್ಯಕ್ಕೆ ಸೇರಿಸುವುದೆಂದರೇ ಎಲ್ಲಿಲ್ಲದ ಉತ್ಸಹ ಮತ್ತು ಆಸಕ್ತಿ. ಅದು ಆ ಗ್ರಾಮದ ಸಂಪ್ರದಾಯವೂ ಹೌದು.

1980ರಲ್ಲಿ ಸಲ್ಲಿಯೇ ಸಮೀಪ ನಡೆದ ಸೈನಿಕ ನೇಮಕಾತಿ ಕ್ಯಾಂಪಿಗೆ ತನ್ನ ಹತ್ತೊಂಬತ್ತರ ಹರೆಯದ ಮಗ ಜೈಪ್ರಕಾಶ್ ಸಿಂಗ್ನನ್ನು ಕಳುಹಿಸುತ್ತಾನೆ. ದೈಹಿಕವಾಗಿ ಗಟ್ಟಿಮುಟ್ಟಾಗಿ ಧೀರನೂ, ರಾಷ್ಟ್ರಪ್ರೇಮಿಯೂ ಆಗಿದ್ದ ಆತ ಸೈನ್ಯಕ್ಕೆ ನೇಮಕಗೊಳ್ಳುತ್ತಾನೆ. ತಂದೆಗೆ ಎಲ್ಲಿಲ್ಲದ ಹರುಷ, ನನ್ನಂತೆ ನನ್ನ ಮಗನೂ ದೇಶ ರಕ್ಷಣೆ ಮಾಡುತ್ತಾನಲ್ಲಾ ಎಂಬ ಹೆಮ್ಮೆ! ಊರಿಗೆಲ್ಲ ಸಂತಸದಿಂದ ಸಿಹಿ ಬೇರೆ ಹಂಚಿದ.

ಅದು ಜೈಪ್ರಕಾಶ್ ಸೈನ್ಯಕ್ಕೆ ಸೇರಿದ ಮೊದಲನೇ ವರ್ಷ 1999. ಭಾರತ ಯಾಕೆ ಇಡೀ ವಿಶ್ವವನ್ನೇ ಬೆಚ್ಚಿಬಿಳಿಸಿದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಕಾರ್ಗಿಲ್ ಯುದ್ದದ ಕಾಲವದು.

ವೈರಿ ರಾಷ್ಟ್ರ ನೀಚಪಾಕಿಸ್ತಾನಕ್ಕೆ ನಮ್ಮ ವಿರಯೋಧರು ದಿಟ್ಟ ಉತ್ತರ ನೀಡುತ್ತಿದ್ದ ಸಮಯವದು.

ಜೈಪ್ರಾಕಾಶ್ ಸಿಂಗ್ ತನ್ನ ವಿದ್ಯಾರ್ಥಿ ಜೀವನದಿಂದಲೇ ತನ್ನ ನಿಖರ ಗುರಿಗೆ ಹೆಸರುವಾಸಿಯಾದವನು. ಆತ ಇಟ್ಟ ಗುರಿ ತಪ್ಪಿದ್ದೇ ಇಲ್ಲ. ಶಾರ್ಪ್ ಶೂಟರಾದ ಈತನನ್ನು ಮೇ ತಿಂಗಳ ಎಂಟನೇ ದಿನದಂದು ಮೊದಲ ತುಕಡಿಯಲ್ಲೇ ಶತ್ರುಗಳ ಅಡಗುತಾಣ,ಬಂಕರ್ಗಳನ್ನು ಪತ್ತೆ ಹಚ್ಚಲು ಕಳುಹಿಸಲಾಯಿತು.

ಚುರುಕಾದ ಈತ ಶತ್ರುಗಳ ಗುಂಡಿನ ಮಳೆಯ ನಡುವೆಯೇ ದೀರತನದಿಂದ ವೈರಿಗಳ ಕಡೆಗೆ ಮುನ್ನುಗುತಿದ್ದಾಗ ವೈರಿ ಕಡೆಯಿಂದ ಬಂದ ಗುಂಡೊಂದು ತನ್ನ ಸ್ನೇಹಿತನಿಗೆ ತಾಗುತ್ತದೆ. ನರಲಾಡುತ್ತಿದ್ದ ಸ್ನೇಹಿತನ ಕೂಗುಕೇಳಿ ಆತನ ಸಹಾಯಕ್ಕೆ ಓಡಿಬಂದ ಜೈಪ್ರಕಾಶ್. ಸಾವಿನಂಚಿನಲ್ಲಿದ ತನ್ನ ಸ್ನೇಹಿತನನ್ನು ಬಾಚಿ ಹಿಡಿದುಕೊಂಡು ಆತನ ಹೆಲ್ಮೆಟ್ ತೆಗೆದು ನಿರುಕುಡಿಸುತಿದ್ದ, ಆ ವೇಳೆಗೆ ಶತ್ರುಗಳ ಕಡೆಯಿಂದ ಯಮನಂತೆ ಬಂದ ಮೋಟಾರ್ ಶೆಲ್ ಒಂದು ಜೈ ಪ್ರಕಾಶ್ ಹಾಗೂ ಆತನ ಸ್ನೇಹಿತನ ದೇಹವನ್ನು ಸುಟ್ಟುಹಾಕಿತು. ಹತ್ತೊಂಬತ್ತರ ಹರೆಯದ, ಜೀವನದ ಬಗ್ಗೆ ಸಾವಿರಾರು ಕನಸು ಹೊತ್ತು ಗಡಿಕಾಯುತ್ತಿದ್ದ ಚಿಗುರು ಮೀಸೆಯ ಯೋಧ ಜೈಪ್ರಕಾಶ್ ಇತಿಹಾದ ಪುಟದಲ್ಲಿ ಹುತಾತ್ಮನಾದ.

ಅದು ಮೇ ತಿಂಗಳ 29ನೇ ದಿನ. ಜೈಪ್ರಕಾಶ್ ಸಿಂಗಿನ ತಂದೆ ರಣಾಸಿಂಗ್ ತನ್ನ ಮೊಮ್ಮಕ್ಕಳೊಂದಿಗೆ ಮನೆಯ ಜಗಲಿಯಲ್ಲಿ ಕುಳಿತು ಆಟವಾಡುತ್ತಿದ್ದರು. ಮಿಂಚಿನಂತೆ ಬಂದ ಎರಡು ಸೈನಿಕರು ನಿವೃತ್ತ ಸೈನಿಕನ ಕೈಗೆ ಎರಡು ಪ್ಯಾಕೆಟ್ ನೀಡಿದರು. ಪ್ಯಾಕೆಟ್ ಹಿಡಿದ ರಾಣಾಸಿಂಗಿನ ಆ ಕೈಗಳು ನಡುಗತೊಡಗಿದವು. ಬಂದ ಸೈನಿಕರಲ್ಲೊಬ್ಬ “ನಿಮ್ಮ ಪುತ್ರನಾದ ಹವಾಲ್ದಾರ್ ಜೈಪ್ರಾಕಾಶ್ ಸಿಂಗಿನ ಪಾರ್ಥಿವ ಶರೀರದ ಚಿತೆಯ ಭಸ್ಮವದು” ಎಂದಾಗ ರಾಣಾಸಿಂಗ್ಗೆ ನೋವು ತಡೆಯಲಾಗಲಿಲ್ಲ. ಆದರೂ ಅಂಜದೆ,ಅಳುಕದೆ ಎದೆಯೆತ್ತಿ “ನನ್ನ ಮಗನ ಗುಂಡಿಗೆಗೆ ಶತ್ರುಗಳ ಗುಂಡು ತಗುಲಿದ್ದು, ನನಗದೇ ಹೆಮ್ಮೆಯ ವಿಚಾರ” ಎಂದರು.

ಯುದ್ಧಭೂಮಿಯ ಮೈ ಕೊರೆಯುವ ಹಿಮಗಳ ನಡುವೆ ವೈರಿಗಳ ಆಕ್ರೋಶಕ್ಕೆ ತುತ್ತಾದ ಜೈಪ್ರಾಕಾಶ್ ಸಿಂಗಿನ ದೇಹ ಸುಮಾರು ಐದುದಿನಗಳ ನಂತರ ಕಣ್ಣಲ್ಲಿ ನೋಡಲಾಗದ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಯಿತು. ಮೋಟಾರ್ ಶೆಲ್ ದಾಳಿಗೆ ಸಿಲುಕಿ ವಿಕಾರವಾದ ಆ ದೇಹವನ್ನು ಸೈನಿಕರಿಗೆ ಬೇರೆ ವಿಧಿಯೇ ಇಲ್ಲದೆ ಯುದ್ಧ ಭೂಮಿಯಲ್ಲೇ ದಹನ ಮಾಡಿದ್ದರು.

ಇಷ್ಟೆಲ್ಲಾ ಆದಮೇಲೆ ಹರಕಲು ಮನೆಯೊಳಗೆ ಗಡ್ಡಮುಖದಲಿದ್ದ ವೃದ್ಧ ರಾಣಾಸಿಂಗ್ ಗೋಡೆಯಮೇಲೆ ತೂಗುಹಾಕಿದ್ದ ಕಪ್ಪುಬಿಳುಪಿನ ಹಣೆಗೆ ಕೆಂಪು ಕುಂಕುಮ ಇಟ್ಟ ತನ್ನ ಮಗನ ಫೋಟೋ ನೋಡಿ ತನ್ನ ಪತ್ನಿಯ ಮುಖನೋಡುತ್ತಾ “ಧೀರರು ಮಾತ್ರ ದೇಶಕ್ಕಾಗಿ ಸಾಯುತ್ತಾರ ಅಲ್ಲವೇ” ಎಂದರು.ತನ್ನ ಆರು ಮತ್ತು ಎಂಟರ ಹರೆಯದ ಎರಡು ಮಕ್ಕಳನ್ನು ಮಡಿಲಲ್ಲಿ ಮಲಗಸಿಕೊಂಡು ಕಣ್ಣಿರು ಹಾಕುತ್ತಿದ್ದ ಜೈಪ್ರಕಾಶಿನ ವಿಧವೆ ಪತ್ನಿಯಲ್ಲಿ “ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುತ್ತೀರಾ” ಎಂದು ಕೇಳಿದಕ್ಕೆ “ಯಾಕೆ ಸೇರಿಸಬಾರದು, ಮಕ್ಕಳು ದೊಡ್ಡವರಾಗಲಿ ಎಂದು ಕಾಯುತ್ತಿದ್ದೇನೆ ಎಂದರು”.

ಒಂದೇ ನೋವು, ತ್ರಿವರ್ಣ ಧ್ವಜದೊಳಗೆ ಮಲಗಿದ್ದ ನನ್ನ ಮಗನ ಚಿತೆಗೆ ಬೆಂಕಿಕೊಡುವ ಅವಕಾಶ ನನಗಿಲ್ಲವಲ್ಲಾ ಎಂದು.

ಎಷ್ಟು ಅದ್ಬುತ ಘಟನೆ! ಹುತಾತ್ಮನಾದ ಧೀರ ಯೋಧ ಜೀವಾರ್ಪಣೆ ಮಾಡಿ ವೀರತ್ವ ಮೆರೆದರೆ ಅವನ ತಂದೆ, ಪತ್ನಿ ಇನ್ನೊಂದು ರೀತಿ ವೀರತ್ವಮೆರೆದು ಭಾರತೀಯರ ಮನ ಗೆದ್ದರು. ಇಂದಿಗೂ ಆ ವೃದ್ಧ ನಿವೃತ್ತ ಸೈನಿಕನ ಕೆಲಸ ತನ್ನ ಊರಿನಿಂದ ಸೈನ್ಯಕ್ಕೆ ಯುವಕರನ್ನು ಕಳುಹಿಸುದಾಗಿದೆ. ಮಗನ ವೀರಮರಣದ ನಂತರ ಸುಮಾರು ಎಂಟು ಸೈನಿಕರನ್ನು ಆತ ಸೇನೆಗೆ ನೀಡಿದ್ದಾನೆ.

ಇಂತಹ ವೀರಪರಂಪರೆಯ, ದೇಶಭಕ್ತಿಯನ್ನೇ ಹೊತ್ತ ಈ ಮಾದರಿ ಕುಟುಂಬಕ್ಕೆ ಪ್ರೀತಿಯ ಹಾಗೂ ಗೌರವದ ನಮನಗಳು. ದೇಶಕೋಸ್ಕರ ಜೈಪ್ರಕಾಶ್ನಂತೆ ಪ್ರಾಣಾರ್ಪಣೆ ಮಾಡುವ ಅವಕಾಶ ನಮಿಗೆ ಸಿಗದಿದ್ದರೂ, ದೇಶಕ್ಕಾಗಿ ಬದುಕುವ ಅವಕಾಶ ಅಂತೂ ಖಂಡಿತಾ ಸಿಕ್ಕಿದೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳೋಣ ಎನ್ನುತ್ತಾ……

✍ ಸಚಿನ್ ಜೈನ್ ಹಳೆಯೂರ್