ಅದು ಒಂದುರಾತ್ರಿಯಲ್ಲಿ ಒಂದೇಕೈಯಲ್ಲಿ ನಿರ್ಮಾಣವಾದ ಪೂಜೆಯೇ ನಡೆಯದ ಸುಪ್ರಸಿದ್ಧ ಶಿವದೇವಾಲಯ…!!

0

ನಂಬಲು ಆಸಾಧ್ಯವಾದರೂ ಇದೊಂದು ಅದ್ಬುತ ದೇವಸ್ಥಾನ. ಕನಸಲ್ಲೂ ನೆನೆಯದಷ್ಟು ವಿಶೇಷ ಹಿನ್ನೆಲೆಯುಳ್ಳ ಪವಿತ್ರ ಶಿವದೇವಾಲಯ ಇದು. ಪ್ರಪಂಚದ ಯಾವ ಶ್ರದ್ದಾಕೇಂದ್ರಕ್ಕೂ ಕಮ್ಮಿಯಿಲ್ಲದ ಶ್ರೇಷ್ಠ ಸ್ಥಳವಿದು.

ಉತ್ತರಖಾಂಡ ರಾಜ್ಯದ ಪಿತೋರ್ಗಡ್ ನಗರದಿಂದ ಧಾರಚುಲಾ ನಗರಕ್ಕೆ ಹೋಗುವ ಧಾರಿಯಲ್ಲಿ ಸುಮಾರು ಎಪ್ಪತ್ತು ಕಿಲೋಮಿಟರ್ ಚಲಿಸಿದರೆ ಬಲ್ತಿರ್ ಗ್ರಾಮ ಸಿಗುವುದು, ಅಲ್ಲಿದೆ ಈ ವಿಶೇಷ ದೇವಾಲಯ. ಅದೇ “ಏಕ್ ಹಾತ್ ದೇವಾಲಯ್”. ಒಂದು ಕೈಯಲ್ಲಿ ನಿರ್ಮಿಸಿದ್ದ ಕಾರಣ ಇದನ್ನು “ಏಕ್ ಹಾತ್ ದೇವಾಲಯ್” ಎನ್ನುವರು. ಶಿವಲಿಂಗ ಒಳಗೊಂಡಿದ್ದರೂ ಇಲ್ಲಿ ಪೂಜೆ ಅರ್ಚನೆ ನಡೆಯುದಿಲ್ಲ!!!

ಅವಿಸ್ಮರಣೀಯ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯ ಇದು. ಈ ಮಂದಿರ ನಾಗರ ಹಾಗೂ ಲ್ಯಾಟಿನ್ ಶಿಲ್ಪ ಶೈಲಿ ಇವೆರಡರ ಮಿಶ್ರಣವಾಗಿದೆ. ಸಾಧಾರಣ ಮುಖ್ಯದ್ವಾರದೊಂದಿಗೆ ಪಶ್ಚಿಮ ದಿಕ್ಕಿಗೆ ಮುಖವಿದ್ದು ಒಂದೂವರೆ ಮೀಟರ್ ಎತ್ತರದ ಶಿವಲಿಂಗವಿದೆ. ದೂರದೂರದ ಊರಿಂದ ದೇವರ ದರ್ಶನಪಡೆಯಲು ಭಕ್ತರು ಇಲ್ಲಿಗೆ ಬರುತ್ತಾರೆ!

ಪೂಜೆ ಯಾಕೆ ನಡೆಯುದಿಲ್ಲ?
ಈ ಗ್ರಾಮದಲ್ಲಿ ಒಬ್ಬ ಶಿಲ್ಪಿಯು ವಾಸವಾಗಿದ್ದ. ದೊಡ್ಡದೊಡ್ಡ ಕಲ್ಲನ್ನು ಉಪಯೋಗಿಸಿ ಮೂರ್ತಿ ಕೆತ್ತುವುದೇ ಅವನ ದಿನನಿತ್ಯದ ಕೆಲಸವಾಗಿತ್ತು. ಒಂದುದಿನ ಇದ್ದಕಿದ್ದಂತೆ ಕೆಲಸದಲ್ಲಿ ನಿರತನಾಗಿದ್ದಾಗ ಅಪಘಾತ ಸಂಭವಿಸಿ ಅವನ ಒಂದು ಕೈ ಪೂರ್ತಿಯಾಗಿ ತುಂಡಾಯಿತು. ಕೈ ಕಳೆದುಕೊಂಡ ಅವನನ್ನು ಊರವರು “ಒಂದು ಕೈಯವ ಒಂದುಕೈಯವ, ಇವನಿಂದೇನು ಸಾಧ್ಯ” ಎಂದು ತಮಾಷೆ ಮಾಡಲು ಪ್ರಾರಂಭಿಸಿದರು. ದಿನಹೋದಂತೆ ಗ್ರಾಮಸ್ಥರುಮಾಡುವ ಅಪಹಾಸ್ಯ ಹೆಚ್ಚಾಯಿತು. ಬೇಸರಗೊಂಡ ಶಿಲ್ಪಿ ಈ ಗ್ರಾಮದಲ್ಲಿ ಇನ್ನು ಉಳಿಯಲಾರೆ ಎಂದು ಶಪತ ಮಾಡುತ್ತ ಗ್ರಾಮಬಿಟ್ಟು ಬಂದನು.

ಆ ದಿನ ರಾತ್ರಿ ಅದೇ ಗ್ರಾಮದ ಹತ್ತಿರದಲ್ಲಿರುವ ಗುಡ್ಡದ ಮೇಲಿನ ಏಕಾಶಿಲೆಯಮೇಲೆ ಶಿಲ್ಪಿ ಚಿಂತಿತನಾಗಿ ಕುಳಿತಿದ್ದ. ಇದ್ದಕಿದ್ದಂತೆ ಅದೇ ಶಿಲೆಯಲ್ಲಿ ದೇವಸ್ಥಾನ ಕೆತ್ತಿ ಅಪಹಾಸ್ಯ ಮಾಡಿದ ಗ್ರಾಮಸ್ಥರಿಗೆ ನನ್ನ ಸಾಮರ್ಥ್ಯ ತೋರಿಸಬೇಕು ಎಂದು ಅಂದುಕೊಂಡು ಕೆಲಸ ಪ್ರಾರಂಭಿಸಿದ. ಒಂದೇದಿನ ರಾತ್ರಿ ಕೆಲಸ ಮುಗಿಸಿದ ಆತ ಅದ್ಬುತ ಮಂದಿರವೊಂದನ್ನು ಕೋಪದಲ್ಲೇ ಕೆತ್ತಿ ಹಾಕಿ ಅಲ್ಲಿಂದ ಹೊರಟು ಹೋಗಿದ್ದ.

ಮರುದಿನ ಒಬ್ಬ ಗ್ರಾಮಸ್ಥ ಬಂದು ನೋಡಿದಾಗ ಅಲ್ಲಿ ಇದ್ದಕಿದ್ದಂತೆ ದೇವಸ್ಥಾನ ಪ್ರತ್ಯಕ್ಷವಾಗಿರುದನ್ನು ನೋಡಿದ. ಹೋಗಿ ಇತರ ಗ್ರಾಮಸ್ಥರಿಗೆ ಈ ಅಚ್ಚರಿಯ ವಿಷ್ಯ ತಿಳಿಸಿದ. ತದನಂತರ ಆ ಗ್ರಾಮಸ್ಥರಿಗೆ ಆ ಈ ಶಿಲ್ಪಿಯ ಅದ್ಬುತ ಶಕ್ತಿ ಅರಿವಾಗಿ ಅವನನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಕಾಲ ಮಿಂಚಿಹೋಗಿತ್ತು. ಶಿಲ್ಪಿಯು ಊರುಬಿಟ್ಟು ಮರೆಯಾಗಿದ್ದ. ಗ್ರಾಮಸ್ಥರು ಹುಡುಕಿ ಹುಡುಕಿ ಹತಾಶರಾದರು.

ಗ್ರಾಮಸ್ಥರು ಸ್ಥಳೀಯ ಪುರೋಹಿತರನ್ನು ಪೂಜೆ ಮಾಡುವಂತೆ ಕೇಳಿಕೊಂಡಾಗ ಅವರು ಶಿವಲಿಂಗದ ರೂಪ ಕುರೂಪಿಯಾಗಿದೆ ಆದ್ದರಿಂದ ಪೂಜೆ ಮಾಡಿದರೆ ಫಲ ಪ್ರಾಪ್ತಿಯಾಗುವ ಬದಲು ನಷ್ಟವೇ ಹೆಚ್ಚಾಗುತ್ತದೆ ಎಂದರು. ಆ ಒಂದೇ ಒಂದು ಕಾರಣದಿಂದ ಇಂದಿಗೂ ಅಲ್ಲಿ ಪೂಜೆಅರ್ಚನೆ ನಡೆಯುದಿಲ್ಲ.

ಪೂಜೆ ನಡೆಯದಿದ್ದರೂ ಅಲ್ಲಿರುವ ಶಿವನ ಕಾರ್ಣಿಕ ಅಪಾರವಾದದು. ದಿನವೊಂದಕಕ್ಕೆ ಐದುಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಶಿವನ ದರ್ಶನಮಾಡಿ ಅವನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಭಕ್ತಿಯಿಂದ ಬೇಡಿದರೆ ಬೇಡಿದನ್ನು ಶಿವ ಅನುಗ್ರಹಿಸುತ್ತಾನೆ ಎಂಬ ನಂಬಿಕೆಯೂ ಇಲ್ಲಿದೆ. ಭಗವಂತನ, ಪ್ರಕೃತಿಯ ಹಾಗೂ ಮನುಷ್ಯರ ಅಪೂರ್ವ ಸಂಗಮದ ಫಲವೇ ಈ ದೇವಾಲಯ.

ಎಷ್ಟು ಅದ್ಬುತ ಹಿನ್ನೆಲೆಯುಳ್ಳ ದೇವಸ್ಥಾನ ! ನಂಬಲು ಅಸಾದ್ಯವದರೂ ನಿಜ ಹಾಗೂ ಅಚ್ಚರಿಯ ಸಂಗತಿ! ಹಿಂದುಗಳ ಪ್ರತೀಯೊಂದು ಶ್ರದ್ದಾಕೇಂದ್ರಕ್ಕೂ ಅದರದ್ದೇ ಆದಂತಹ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಇಂತಹ ವಿಶೇಷತೆಯನ್ನು ಒಳಗೊಂಡ ದೇವಭೂಮಿ ಪವಿತ್ರ ಭಾರತಕ್ಕೆನ್ನ ಸಹಸ್ರ ಸಹಸ್ರ ನಮನಗಳು..

ಅವಕಾಶ ಸಿಕ್ಕರೆ ನಾವೂ ಈ ವಿಶೇಷ ದೇವಾಲಯದಲ್ಲಿರುವ ಶಿವನ ಭಕ್ತಿ ಸಂಪಾದಿಸುವ ಎನ್ನುತ್ತಾ….

✍ ಸಚಿನ್ ಜೈನ್ ಹಳೆಯೂರ್