ಹೀಗೆ ಮಾಡಿದರೆ ಚೀನಾ ವಸ್ತುಗಳು ಖಂಡಿತವಾಗಿಯೂ ನಿಷೇಧವಾಗುತ್ತವೆ ..?? ಮೋದಿ ಯಾಕೆ ಹೀಗೆ ಮಾಡಬಾರದು..??

ಪ್ರಸ್ತುತ ಭಾರತದ no1 ವೈರಿ ಯಾರು ಅಂತ ಸಣ್ಣ ಮಕ್ಕಳನ್ನು ಕೇಳಿದ್ರೂ ಹೇಳುದು ನಮ್ಮ ಪಕ್ಕದ ರಾಷ್ಟ್ರ ಚೀನಾದ ಹೆಸರು..  ಹೌದು…ನಮ್ಮ ಎಲ್ಲ ವಿಷಯಕ್ಕೂ ಅಡ್ಡಗಾಲು ಹಾಕುತಿರುವ ಪ್ರಬಲ ರಾಷ್ಟ್ರ ಅದು ಚೀನಾ…

ಆರ್ಥಿಕವಾಗಿ ಪ್ರಬಲ ಆಗಿರುವ ಚೀನಾ ಇಂದು ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿ.. ಕಡಿಮೆ ಕರ್ಚುಮಾಡಿ ವಸ್ತುಗಳನ್ನು ಉತ್ಪಾದನೆ ಮಾಡಿ ಹೊರದೇಶಗಳಿಗೆ ರಫ್ತು ಮಾಡುವುದು ಚೀನಾ ದೇಶವನ್ನು ಒಂದು ಆರ್ಥಿಕ ಶಕ್ತಿಯಾಗಿ ಮಾಡಿದೆ…


ಭಾರತದ ಜತೆಗೆ ಸದಾ ಕಾಲು ಕೇರಿಯುತ್ತಾ ಜಗಳಕ್ಕೆ ಬರುದು ಚೀನಾ ದೇಶದ ಒಂದು ಚಾಲಿ ಆಗಿಬಿಟ್ಟಿದೆ.

ಕಾಶ್ಮೀರ,ಡೋಕಾಲಂ,ಅರುಣಾಚಲ ಪ್ರದೇಶ್, ಸಿಕ್ಕಿಂ,ಲಡಾಖ್ ಮುಂತಾದ ಭಾಗದಲ್ಲಿ ಚೀನಾದ ಅತಿಕ್ರಮಣ ದಿನ ದಿನ ಹೆಚ್ಚಾಗುತ್ತಿದೆ….


ಈ ಸಮಸ್ಯೆ ಪರಿಹಾರಕ್ಕೆ ಸಮಾನ್ಯರಾದ  ನಾವೇನು ಸೈನಿಕರಾಗಿ ಹೋಗಿ ಗಡಿಯಲ್ಲಿ ಯುದ್ಧ ಮಾಡಲಾಗುತ್ತದೆಯೇ? ಸಾಧ್ಯವಿಲ್ಲ. ಬದಲಿಗೆ ನಾವೇನು ಮಾಡಬೇಕು?ನಮ್ಮ ಸರ್ಕಾರ ಏನು ಮಾಡಬೇಕು? ಏನೇನ್  ಮಾಡಬಹುದು ಇಲ್ಲಿದೆ ನೋಡಿ…


1) ಚೀನಾದ ವಸ್ತುಗಳ ಆಮದಿಗೆ ಸುಂಕವನ್ನು ಭಾರತ ಸರ್ಕಾರ 100 ಪಟ್ಟು ಹೆಚ್ಚುಮಾಡಬೇಕು…ಇದರಿಂದ ಚೀನಾ ವಸ್ತುಗಳ ಬೆಲೆ ದುಭಾರಿಯಾಗಿ ಭಾರತದಲ್ಲಿ ಬೇಡಿಕೆ ತಗ್ಗಬಹುದು…


2)ದೇಶದ ಒಳಗೆ ಬಂದ ಚೀನಾ ವಸ್ತುಗಳ ಮೇಲೆ ಹಾಕುವಂತಹ GST ಯನ್ನು ದುಪ್ಪಟ್ಟು ಮಾಡಬೇಕು.ಇದರಿಂದ ಬೆಲೆ ದುಭಾರಿಯಾಗಿ ಬೇಡಿಕೆ ಇಳಿಕೆಯಾಗಬಹುದು..

3)ಚೀನಾ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಪ್ರತ್ಯೇಕವಾಗಿ ಪರವಾನಿಗೆ ವ್ಯವಸ್ಥೆ ಕಡ್ಡಾಯ,ಹಾಗೂ ಆ ಅಂಗಡಿಗಳಿಗೂ ಪ್ರತ್ಯೇಕವಾಗಿ ತೆರಿಗೆ ಹಾಕುವುದು..

4)ನಮ್ಮ ದೇಶದಲ್ಲಿ ಉತ್ಪಾದನೆಯಾದ ಸರಕುಗಳಿಗೆ ತೆರಿಗೆಯನ್ನು ಇಳಿಸುವಂತದ್ದು..ಇದರಿಂದ ನಮ್ಮ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಬಹುದು..

5)ನಮ್ಮ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಚೀನಾದ ಉತ್ಪನ್ನಗಳಿಗೆ ಸೆಡ್ಡುಹೊಡಿಯುವ ವಸ್ತುಗಳನ್ನು ನಮ್ಮಲ್ಲೇ ಕಡಿಮೆ ಬೆಲೆಗೆ ಉತ್ಪಾದನೆ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುವಂತದ್ದು…

6)ಚೀನಾ ವಸ್ತುಗಳ ಗುಣಮಟ್ಟ ಪರೀಕ್ಷೆ ಮಾಡುವ ವಿಭಾಗವೊಂದನ್ನು ಸ್ಥಾಪಿಸುವುದು…

7)ಭಾರತದ ಮಾಧ್ಯಮಗಳಲ್ಲಿ ಚೀನಾ ವಸ್ತುಗಳ ಜಾಹೀರಾತನ್ನು ಕಡ್ಡಾಯವಾಗಿ ನಿಷೇಧಿಸುವುದು…

8)ಎಲ್ಲಾ ರಾಜ್ಯಗಳಲ್ಲಿ 1ರಿಂದ10 ತರಗತಿಯ ಪಠ್ಯ ಪುಸ್ತಕದಲ್ಲಿ ಚೀನಾ ಮಾಡುತಿರು ದೌರ್ಜನ್ಯ, ಆಕ್ರಮಣವನ್ನು ಎಳೆಎಳೆಯಾಗಿ ವಿವರಿಸುವುದು ಆ ಮಕ್ಕಳಿಗೆ ಒಮ್ಮೆ ವಿಷಯ ತಿಳಿದರೆ ಚೀನಾವನ್ನು ಜೀವನ ಪರ್ಯಂತ ವಿರೋಧಿಸುತ್ತಾರೆ…

9)ಇದು ಅಲ್ಲದೇ ಜನಜಾಗೃತಿ ಮೂಡಿಸುವುದು….

ಈ ರೀತಿ ಮಾಡುವ ಮೂಲಕ ನಾವು ಆರ್ಥಿಕವಾಗಿ ಚೀನಾವನ್ನು ಕಟ್ಟಿಹಾಕಬಹುದು… ಚೀನಾದ ಒಟ್ಟು ವ್ಯವಹಾರದಲ್ಲಿ 50ಶೇಕಡಾ ವ್ಯಾಪಾರ ನಡೆಯುದು ಭಾರತದ ಜತೆಗೆ.. ಆದರಿಂದ ಆ ವ್ಯಪಾರಕ್ಕೆ ಪೆಟ್ಟು ಬಿದ್ರೆ

ಚೀನಾ ಆರ್ಥಿಕವಾಗಿ ಕುಸಿದು ಬೀಳುದು ಖಂಡಿತಾ..

 

ಯವುದಕ್ಕೂ ನಮ್ಮ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು…ಅಲ್ವಾ??

ಆಳಬಲ್ಲೆವು

ಅಳಿಸಬಲ್ಲೆವು

ಸೋಲನ್ನೆಂದೂ ಒಲ್ಲೆವು….

ಚೀನಾ ಏನು ವಿಶ್ವಪೂರ್ತಿ ಮುನಿದು ನಿಂತರೂ

ನಾಡನ್ನು ಉಳಿಸಬಲ್ಲೆವು…!!!

ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು..
ಸಚಿನ್ ಜೈನ್ ಹಳೆಯೂರು.

Post Author: Ravi Yadav