​ಹದಿನಾರರ ಹರೆಯದ ಸುಭಾಶ್ಚಂದ್ರ ಬೋಸ್ ತಮ್ಮ ತಾಯಿಗೆ ಬರೆದ..!!!! ಪತ್ರದಲ್ಲಿ ಅದೆಷ್ಟು ರಾಷ್ಟ್ರಭಕ್ತಿಯನ್ನು ಒಳಗೊಂಡಿತ್ತು ಗೊತ್ತಾ.? ಒಮ್ಮೆ ಓದಿ ನೋಡಿ.. 

ನೇತಾಜಿ ಸುಭಾಶ್ಚಂದ್ರ ಬೋಸ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. “ನನಗೆ ನಿಮ್ಮ ರಕ್ತಕೊಡಿ ನಾನು ಸ್ವಾತಂತ್ರ್ಯ ಕೊಡುತ್ತೇನೆ” ಎಂದ ಶ್ರೇಷ್ಠ  ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ. 1897ರ ಜನವರಿ 23ರಂದು ಜನಿಸಿ 1945ರ ತೈವಾನಲ್ಲಿ ನಿಗೂಢವಾಗಿ ಕಣ್ಮರೆಯಾದ ನೇತಾಜಿ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ತನ್ನ ತಾಯಿಗೆ ಬರೆದ ಪತ್ರದಲ್ಲೇನಿದೆ? ಅದೆಷ್ಟು ರಾಷ್ಟ್ರಭಕ್ತಿಯನ್ನು ಒಳಗೊಂಡಿತ್ತು ಗೊತ್ತಾ?

ಆ ಪತ್ರ ಹೀಗಿತ್ತು..

“ಪವಿತ್ರ ಚರಣಗಳನ್ನು ಸ್ಪರ್ಶಿಸುತ್ತಾ..

ನೀವು ಕ್ಷೇಮವಾಗಿದ್ದೀರಿ ಎಂದು ಆಶಿಸುತ್ತೇನೆ.

ಅಮ್ಮ , ಇವತ್ತು  ಬೆಳಗಿನಿಂದ ಯಾಕೋ ಮತ್ತೆಮತ್ತೆ ಇದೆ ವಿಷಯ ಮನಸ್ಸಲ್ಲಿ ಬರುತ್ತಿದೆ. ಗುಲಾಮಿ ಭಾರತದಲ್ಲಿ ಸ್ವಾರ್ಥರಹಿತವಾದ ಒಂದು ಸಂತಾಣವೂ ಇಲ್ಲವಾ? ಭಾರತ ಮಾತೆಯ ವೀರ ಪುತ್ರರು  ದೇಶಕೋಸ್ಕರ ಪ್ರಾಣಕೊಡುವ ಆ ಆರ್ಯರು ಎಲ್ಲಿದ್ದಾರೆ?

ಎಷ್ಟು ಕಾಲ ಭಾರತದ ದುರ್ದೆಸೆಯನ್ನು ನೋಡುವುದು? ಇನ್ನು ನಾವು ಎಚ್ಚೆತ್ತುಕೊಳ್ಳಬೇಕು. ಎಷ್ಟೋ ಜನ್ಮ ಪ್ರಾಣಿಗಳಾಗಿ ಹುಟ್ಟಿ ಬೆಳೆದು ಈಗ ಈ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಈ ಜನ್ಮದಲ್ಲಿ ನಾವೇನೂ ಶ್ರೇಷ್ಠ ಕೆಲಸ ಮಾಡದಿದ್ದರೆ ಈ ಜನ್ಮವೂ ವ್ಯರ್ಥ.

ದೇವರು ಕಲಿಯುಗದಲ್ಲಿ ಒಂದು ಜಾತಿಯನ್ನು ಸೃಷ್ಟಿಮಾಡಿದ್ದಾನೆ. ಅದೇ ಶ್ರೀಮಂತನೆಂಬ ಜಾತಿ. ದೇವರು ನಮಿಗೆ ಕಾಲು ಕೊಟ್ಟಿದ್ದಾರೆ ಆದ್ರೆ ನಾವು ಕಾಲಲ್ಲಿ ಹತ್ತು ಕಿಲೋಮೀಟರ್ ಕೂಡಾ ನಡಿಯೋದಿಲ್ಲ. ದೇವರು ನಮಿಗೆ ಕೈ ಕೊಟ್ಟಿದ್ದಾರೆ ಆದ್ರೆ ನಾವು ನಮ್ಮ ಕೆಲಸವನ್ನೇ ಮಾಡಿಕೊಳ್ಳುವುದಿಲ್ಲ. ಎಲ್ಲಾ ಕೆಲವರ್ಗದವರಿಂದ ಮಾಡಿಸುತ್ತೇವೆ. ಯಾಕಂದ್ರೆ ನಾವು ಶ್ರೀಮಂತರಲ್ವಾ?

ಇದೆ ಕಾರಣ ನಾವು ಶ್ರೀಮಂತರು, ನಾವು ಪ್ರತಿಯೊಂದು ಕೆಲಸಕಾರ್ಯಗಳನ್ನು ಕಾರ್ಮಿಕರಿಂದ ಮಾಡಿಸಲು ಮುಂದಾಗುತ್ತೇವೆ. ಕೈಕಾಲು ಅಲ್ಲಾಡಿಸಲು ನಮಗೆ ಕಷ್ಟವಾಗುತ್ತದೆ. ತಾಪಮಾನ ಹೆಚ್ಚಿರುವ ದೇಶದಲ್ಲಿ ಹುಟ್ಟಿದ್ದೇವೆ, ಆದ್ರೆ ಬಿಸಿ ತಡೆದುಕೊಳ್ಳುವ ಶಕ್ತಿ ನಮಗಿಲ್ಲ. ಈ ಕಾರಣದಿಂದಲೇ ನಮ್ಮ ದೇಶ ದಿನದಿಂದದಿನಕ್ಕೆ ಅವನತಿಯೆಡೆಗೆ ಸಾಗುತ್ತಿದೆ.

ಅಮ್ಮ ಆದ್ರೆ ಈಗ ಎಲ್ಲಾ ಅರ್ಥವಾಗುತ್ತಿದೆ, ನಾವು ನಮ್ಮ ಸ್ವಾರ್ಥವನ್ನು ತ್ಯಾಗ ಮಾಡುವುದು ಭಾರತಮಾತೆಯ ಸೇವೆ ಮಾಡುವುದು ಎರಡು ಒಂದೇ ಎಂದು. ಯಾಕೋ ಈಗೀಗ ನನ್ನ ಮನಸ್ಸಿಗೆ, ಕಿವಿಗೆ ತಾಯಿ ಭಾರತಿ ಅಳುವ ಸ್ವರ ಕೇಳಿಸುತ್ತಿದೆ. ಬಹುಶಃ ಉಳಿದವರು ಕೂಡಾ ಮುಂದೊಂದು ದಿನ ಈ ಅಳುವ ಧ್ವನಿ ಕೇಳುವರು ಎಂದು ಅನಿಸುತ್ತಿದೆ. ನಾನು ಯಾವತ್ತಿಗೂ ಭಾರತಮಾತೆಯ ಸೇವಕನಾಗಿರಲು ಬಯಸುತ್ತೇನೆ.

ಅಮ್ಮಾ,ನಾನು ಈ ದೇಶದ ಅಭಿವೃದ್ಧಿಗೆ ಪೂರ್ಣ ಸಮಯ ನೀಡುತ್ತಿದ್ದೇನೆ.  ಈ ನಡುವೆ ನಿನ್ನ ಸೇವೆಮಾಡಲು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿಬಿಡು ನಿನ್ನ ಸೇವೆ ಮಾಡಿದರೆ ಸ್ವತಃ ನನಿಗೆ ಮಾತ್ರ ಲಾಭ. ಆದ್ರೆ, ತಾಯಿ ಭಾರತಿಯ ಸೇವೆಯಿಂದ ಇಡೀ ರಾಷ್ಟ್ರಕ್ಕೆ ಕಲ್ಯಾಣವಾಗುತ್ತದೆ.
ನನಿಗೆ ಆಶೀರ್ವಾದ ಮಾಡಮ್ಮ, ನಿಮ್ಮ ಆರೋಗ್ಯ ಕಾಪಾಡಿಕೊ.

ನಿಮ್ಮ ಮಗ ಸುಭಾಶ್.”

ಎಂತಹಾ ಅದ್ಬುತ ಭಾವನೆ! ಅಷ್ಟು ಸಣ್ಣ ಪ್ರಾಯದಲ್ಲಿ ದೇಹದ ಕಣಕಣದಲ್ಲೂ ಮಾತೃಭೂಮಿಯನ್ನು ತುಂಬಿಕೊಂಡು  ರಾಷ್ಟ್ರಭಕ್ತಿಯ ಅಮೃತಧಾರೆ ಹರಿಸಿದ ನೀವೇ ಶ್ರೇಷ್ಠ ನೇತಾಜಿ. ನಿಮ್ಮ ಈ ಬಿಸಿ ರಕ್ತ ಪ್ರತಿಯೊಬ್ಬ  ದೇಹದಲ್ಲಿ ಹರಿಯಲಿ.
ದೇಶ ಬ್ರಿಟಿಷರ ಗುಲಾಮಿತನದಿಂದ ಸ್ವಾತಂತ್ರ್ಯಗೊಂಡು ಬರೋಬ್ಬರಿ ಎಪ್ಪತ್ತು ವರ್ಷಗಳೇ ಆಯಿತು ನೇತಾಜಿ!!  ನಿಮ್ಮ ಕನಸಿನಂತೆ ನಮ್ಮ ಈ ಪವಿತ್ರ ಮಾತೃಭೂಮಿ  ನಿಮ್ಮಂತಹ ಯುಗಪುರುಷರಿಂದ ಪ್ರೇರಣೆ ಪಡೆದ ನರೇಂದ್ರ ಮೋದಿಯ ನಾಯಕತ್ವದಲ್ಲಿ ಸರಿ ದಾರಿಯಲ್ಲಿ ಮುನ್ನುಗುತ್ತಿದೆ ಎಂಬ ಭರವಸೆಯನ್ನು ನೀಡುತ್ತಾ, ನಿಮ್ಮದೇ ಮಾತಿನಿಂದ ಮಾತು ಮುಗಿಸುತ್ತಿದ್ದೆನೆ..

” ನೀವು ಯಶಸ್ವಿಯಾಗಲು ಏಕಾಂಗಿಯಾಗಿ ಚಲಿಸಬೇಕು , ಯಾವಾಗ ನಿಮ್ಮ ಹಿಂದೆ ಹಿಂಬಾಲಕರಾಗಿ ಜನ ಬರುತ್ತಾರೋ ಆಗ ನೀವು ಯಶಸ್ಸುಗಳಿಸಿದ್ದೀರಿ ಎಂದರ್ಥ ”

ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.

ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.

ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್‌ರ ನಿಲುವುಗಳೆಲ್ಲ ಕಾಂಗ್ರೆಸ್‌ನ ಮಂದಗಾಮಿ ಗುಂಪಿಗೆ ಅಸಹ್ಯವಾಗಿತ್ತು. ಸ್ವತಃ ಗಾಂಧೀಜಿಯವರೇ ಹಲವು ಬಾರಿ ಬೋಸ್‌ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ.

ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್- ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್‌ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್‌ನಿಂದ ಸ್ವತಃ ಹೊರಬಂದವರುಶುಭಾಶಯಗಳು.

ಸುಭಾಷ್ ಚಂದ್ರ ಬೋಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಸರಿ ಅನಿಸಿದ್ರೆ  ..ಶೇರ್ ಮಾಡಿ.. ಧನ್ಯವಾದಗಳು..

ಸಚಿನ್ ಜೈನ್ ಹಳೆಯೂರ್

Post Author: Ravi Yadav