​ಬತ್ತಿಹೋಗಿದ್ದ ವೀರಸೈನಿಕನ ಆತ್ಮ ನರೇಂದ್ರ ಮೋದಿಜಿ ಬಗ್ಗೆ ಹೀಗೆ ಹೇಳುತ್ತಿರಬಹುದಾ..?? ಹೀಗೊಂದು ಪತ್ರ…!!

“ಅದು 2012ರ  ಜನವರಿ! ಮರಗಳೆಲ್ಲಾ ಚಿಗುರಿ ಹಚ್ಚಹಸಿರಾಗಿ ಹೂವು ಬಿಡುವ ಸಮಯ. ನಾನು 1ತಿಂಗಳು ಡ್ಯೂಟಿಗೆ ರಜೆಹಾಕಿ ನನ್ನ ಮನೆಗೆ ಬಂದಿದ್ದೆ. ನನ್ನ ಮುದ್ದಿನ ತಂಗಿಗೆ ಒಂದು ಹುಡುಗ ನೋಡಿ ಮದುವೆ ಮಾಡಬೇಕು ಎಂದು ಅಂದುಕೊಂಡಿದ್ದೆ. ತಂದೆಗೆ ಕಣ್ಣು ಸರಿ ಕಾಣುದಿಲ್ಲ ಎಂದು ಹೇಳುತ್ತಿದ್ದರು, ಅವರಿಗೂ ಒಂದು ಆಪರೇಶನ್ ಮಾಡಿಸಬೇಕೆಂದು ಅಂದುಕೊಂಡಿದ್ದೆ. ನನ್ನ

ಮಗಳು   ಇನ್ನೂ ಒಂದು ವರ್ಷದ ಮಗು. ನಡೆಯಲು ಎದ್ದು ಬಿದ್ದು ಕಲಿಯುತ್ತಿದ್ದಾಳೆ ಅಷ್ಟೇ. ನನ್ನ ಅಮ್ಮ ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಪ್ರತಿಬಾರಿಯೂ ನಾನು ಬಂದಾಗ ಊರಿನ ಗಣಪತಿ ದೇವಸ್ಥಾನದಲ್ಲಿ ನನ್ನ ಹೆಸರಲ್ಲಿ ಪೂಜೆ ಕಟ್ಟಿಸುತ್ತಿದ್ದರು. ಇನ್ನು ನನ್ನ ಹೆಂಡತಿಗೆ ನಾನಂದ್ರೆ ಪಂಚಪ್ರಾಣ.””ಮನೆಗೆ ಬಂದು ಎರಡು ದಿನ ಸಂತೋಷದಿಂದ ಕಳೆಯಿತು. ಮೂರನೇ ದಿನ ಬೆಳಗ್ಗೆ ಸುಮಾರು 11ಗಂಟೆ ಸಮಯಕ್ಕೆ ಕಾಶ್ಮೀರದ ಸೇನೆಯ ಕಚೇರಿಯಿಂದ ದೂರವಾಣಿ ಕರೆ ಬಂತು. ನನ್ನನ್ನು ಆದಷ್ಟು ಶೀಘ್ರದಲ್ಲಿ ಡ್ಯೂಟಿಗೆ ಸೇರಿಬೇಕು ಎಂದು ಕೇಳಿಕೊಂಡರು.

ನನ್ನ ಹೆಂಡತಿ ಮತ್ತು ನಾನು ಅವತ್ತು ಸುತ್ತಾಡಲು ಹೋಗಬೇಕು ಎಂದು ಅಂದುಕೊಂಡಿದ್ದೆವು. ಅವಳು ಬೆಳಗ್ಗೆ ಬೇಗ ಎದ್ದು ಅಡುಗೆ ಕೆಲಸ ಮುಗಿಸಿ  ಮಗುವನ್ನು ಸ್ನಾನ ಮಾಡಿಸಿ ಊಟ ಮಾಡಿಸಿ ಖುಷಿಯಿಂದ ತಯಾರಾಗುತ್ತಿದ್ದಳು.”

“ನಾನು ನನ್ನ ರೂಮಿಗೆ ಹೋಗಿ ನಾನು ತಂದಿದ್ದ ವಸ್ತ್ರಗಳನ್ನು ಪ್ಯಾಕಿಂಗ್ ಮಾಡತೊಡಗಿದೆ. ಅವಳು “ಯಾಕೆ ಅದನ್ನು ತುಂಬಿಸುತ್ತಿದ್ದೀರಿ ಎಂದು ಕೇಳಿದಳು” ಆಗ ನಾನು ತಕ್ಷಣವೇ ಡ್ಯೂಟಿ ಸೇರಿಕೊಳ್ಳಲು ದೂರವಾಣಿ ಕರೆ ಬಂತು, ಗಡಿಯಲ್ಲಿ ಭಯೋತ್ಪಾದಕರ ಉಪಟಳ ಜಾಸ್ತಿಯಾಗಿದೆ ಅಂತೆ ಅಂದೆ. ಅಷ್ಟರಲ್ಲಿ ಅವಳ ಕಣ್ಣಲ್ಲಿ ನೀರು ತುಂಬಿಹೋಗಿತ್ತು.  ಕೂತಲ್ಲಿಯೇ ಕುಳಿತುಕೊಂಡಳು.

ನನಗೂ ಬೇಜಾರಾಯ್ತು. ಆದರೂ ಅವಳನ್ನು ಸಮಾಧಾನ ಮಾಡಿ ದೀಪಾವಳಿಗೆ ದೀಪಹಚ್ಚಲು ಬರುತ್ತೇನೆ ಎಂದು ಹೊರಟು ನಿಂತೆ.”


“ಅಪ್ಪ,ಅಮ್ಮ ,ತಂಗಿ ,ನನ್ನವಳು, ಎಲ್ಲರೂ ನನ್ನನ್ನು ಕಳುಹಿಸಿ ಕೊಡಲು ಮುಂದಾದರು. ನನ್ನ ಮಗಳು ಮನೆಯ ನಾಯಿ ರಾಕೆಟ್ ಜೊತೆ ಆಡುತ್ತಿದ್ದಳು. ನನ್ನನ್ನು ನೋಡಿ ತೇವಳಿಕೊಂಡು ಬಂದು ನನ್ನ ಕಾಲು ಹಿಡಿದುಕೊಂಡಳು. ನಾನು ಅವಳನ್ನು ಎತ್ತಿ ಮುತ್ತುಕೊಟ್ಟು ಅವಳನ್ನು ಅಪ್ಪನ ಕೈಗೆ ಕೊಟ್ಟೆ. ಎಲ್ಲಾರ ಕಣ್ಣಲ್ಲಿ ನೀರು ನೋಡಿ ನನ್ನ ಕಣ್ಣಲ್ಲೂ ನೀರು ಹರಿದುಬಿತ್ತು. ಅಪ್ಪ ಅಮ್ಮನ ಆಶೀರ್ವಾದ ಪಡೆದು  ಆ ದಿನದ ಸಂಪರ್ಕಕ್ರಾಂತಿ ರೈಲಿನಲ್ಲಿ ನಾನು ಕಾಶ್ಮೀರಕ್ಕೆ ಹೊರಟೆ.”


“ಕಾಶ್ಮೀರ ತಲುಪಿದ ಕೂಡಲೇ ಗಡಿಯಲ್ಲಿ 12 ಉಗ್ರರು ನುಸುಳಿರುವ ಬಗ್ಗೆ ತಿಳಿಯಿತು. ಸಮವಸ್ತ್ರ ಧರಿಸಿ ಗನ್ ಹಿಡಿತು. ನನ್ನ ಸ್ನೇಹಿತರು ಹೋರಾಡುತ್ತಿದ್ದ ಜಾಗಕ್ಕೆ ಹೋದೆ. ನನ್ನ ಸ್ನೇಹಿತ ಉಗ್ರರೊಂದಿಗೆ ವೀರಾವೇಶದಿಂದ ಹೋರಾಡುತ್ತಿದ್ದ. ಸ್ವಲ್ಪ ಸಮಯದ ನಂತ್ರ ನನಗೂ ಧೈರ್ಯಬಂತು ನಾನು ಕೂಡ ಹೋರಾಡಲು ಪ್ರಾರಂಭಿಸಿದೆ. ಯಾವ ಕಾರಣಕ್ಕೂ ಇವರನ್ನು ದೇಶದೊಳಗೆ ನುಗ್ಗಲು ಬಿಡೇನು ಎಂದು ಶಪಥ ಮಾಡಿದ್ದೆ. ಒಮ್ಮೆಲೇ ಕತ್ತಲು ಆವರಿಸಿತ್ತು. ಎಲ್ಲಾ ಉಗ್ರರನ್ನು ಕೊಂದು ಹಾಕಲಾಗಿದೆ ಎಂಬ ಮಾಹಿತಿ ತಿಳಿಯಿತು.”

“ಎಲ್ಲಾ ಚಿಂತೆ ದೂರವಾಯ್ತು. ಸ್ವಲ್ಪ ಸಮಯದ ನಂತರ ನನ್ನ ಗೆಳೆಯನ ಬಳಿ ಹೋಗಿ ಅವನಿಗೆ ಅಭಿನಂದನೆ ಹೇಳಿದೆ. ಅವನು ಸುಸ್ತಾಗಿ ಹೋಗಿದ್ದ ಮತ್ತು ಯಾವುದೇ ಪ್ರತಿಕ್ರಿಯೆ ನೀಡದೆ ಉಗ್ರರ ತಪಾಸನೆಯಲ್ಲಿ ತೊಡಗಿದ. ನನ್ನ ಕಡೆ ನೋಡಲೂ ಇಲ್ಲ. ಆಗಲೇ ನನಗೆ ಗೊತ್ತಾಯಿತು ಅವನಿಗೆ ಗುಂಡು ತಾಗಿದೆ ಎಂದು. ನಾನು ಅವನ ಕಡೆ ನನ್ನ ಕೈ ಕೊಂಡುಹೋದೆ ಆದರೆ ಅವನ ದೇಹ ಸಿಗಲಿಲ್ಲ! ಮತ್ತೆ ಅವನ ಕಡೆ ನನ್ನ ಎರಡೂ ಕೈ ಕೊಂಡುಹೋದೆ ಮತ್ತೆ ಅಸಫಲನಾದೆ. ಏನಾಗುತ್ತಿದ್ದೆ ಎಂದು ಗೊತ್ತಾಗಲೇ ಇಲ್ಲ. ತಪಾಸನೆಯಲ್ಲಿ ತೊಡಗಿದ್ದ ಆ ನನ್ನ ಸ್ನೇಹಿತ ನನ್ನ ಕಡೆಗೆ ಬಂದ.  ಅವನು ನನ್ನ ಯೋಗಕ್ಷೇಮವಿಚಾರಿಸುತ್ತಾನೆ ಎಂದು ನಾನು ಅಂದುಕೊಂಡೆ. ಆದರೆ ಅವನು ನನ್ನನ್ನು ದಾಟಿ ನನ್ನ ಹಿಂದೆ ಬಂದು ನನ್ನನ್ನು ಹಿಡಿದುಕೊಂಡ. ನಾನು ಅಲ್ಲಿ ನಿಂತುಕೊಂಡಿದ್ದೆ ಇಲ್ಲಿ ಯಾಕೆ ಬಂದೆ? ಅಷ್ಟರಲ್ಲಿ ಇತರ ಸೈನಿಕರು ನನ್ನಬಳಿ ಬಂದು ನನ್ನ ಎತ್ತಿಕೊಳ್ಳಲು ಪ್ರಯತ್ನಿಸಿದರು.”


“ಆಗ ನನಗೆ ಗೊತ್ತಾಯಿತು, ದೇಶದ ಸೇವೆಮಾಡುತ್ತಾ ನನ್ನ ಜೀವ ನನ್ನನ್ನು ಬಿಟ್ಟುಹೋಗಿದೆ ಎಂದು, ನನಗೆ ಹೆಮ್ಮೆ ಎನಿಸಿತು! ನನ್ನ ಅಜ್ಜನ ಹಾಗೆಯೇ ನನ್ನ ಜೀವವೂ ಕೂಡ ತಾಯಿ ಭಾರತಿಗೆ ಅರ್ಪಣೆ ಆಗಿದೆ ಎಂದು. ಇಷ್ಟೆಲ್ಲಾ ಆದ್ರೂ ನಾನು ನನ್ನ ಕುಟುಂಬದ ಬಗ್ಗೆ  ಯೋಚನೆ ಮಾಡಲೇ ಇಲ್ಲ, ನಾನು ಸೈನಿಕರನ್ನೇ ನಂಬಿ ಸಂತೋಷದಿಂದ ದೇಶದ ಒಳಗೆ ನೆಮ್ಮಯಿಂದಿರುವ ಕೋಟ್ಯಾಂತರ ಕುಟುಂಬದ ಬಗ್ಗೆ ಯೋಚಿಸಿದೆ.”


“ಸ್ವಲ್ಪ ಸಮಯದ ಬಳಿಕ ನನ್ನನ್ನು ನನ್ನ ದೇಹವನ್ನು ಸ್ನೇಹಿತರು ಅಲ್ಲಾಡಿಸಿದರು. ನಾನು ಜೀವಂತವಾಗಿಲ್ಲ ಎಂದು ಅವರಿಗೂ ಗೊತ್ತಾಗಿ ಅವರ ಕಣ್ಣಲ್ಲೂ ನೀರು ಬಂತು. ನನ್ನ ದೇಹವನ್ನು ಕ್ಯಾ0ಪಿಗೆ ಎತ್ತಿಕೊಂಡು ಬಂದರು. ನಾನು ಅವರಿಗೆ ಹೇಳಬೇಕೆಂದಿದ್ದೆ “ನೀವು ಅಳಬೇಡಿ ,ಧೈರ್ಯದಿಂದ ಇರಿ, ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ, ನಾನು ಖುಷಿಯಲ್ಲಿ ಇದ್ದೇನೆ,ನನ್ನ ಜೀವ ದೇಶಕ್ಕೆ ಅರ್ಪಣೆಯಾಗಿದೆ ಎಂದು ಹೆಮ್ಮೆ ಇದೆ” ಅಂತಾ”.


“ಅಷ್ಟರಲ್ಲಿ ರಾತ್ರಿಯಾಗಿತ್ತು ಆ ರಾತ್ರಿಯಾಕೋ ತುಂಬಾ  ದೀರ್ಘವಾಗುತ್ತನೆ ಹೋಗುತ್ತಿತ್ತು. ತಲೆಯಲ್ಲಿ ಇಲ್ಲಸಲ್ಲದ ಯೋಚನೆಗಳು ಬರತೊಡಗಿತು. ಹೆಂಡತಿಯ ಬಳಿ ದೀಪಾವಳಿಗೆ ದೀಪ ಹಚ್ಚಲು ಬರುತ್ತೇನೆ ಎಂದು ಹೇಳಿದ್ದೆ! ಅಮ್ಮ ಅಮ್ಮ ಎಂದು ಕರೆಯುವ ನನ್ನ ಮಗಳ ಬಾಯಿಂದ ಅಪ್ಪ ಎಂದು ಕರೆಸಿಕೊಳ್ಳುವ ಆಸೆ ಆಗುತ್ತಿದೆ. ನನ್ನ ಹೆಂಡತಿ,ಮಗಳ ಬಗ್ಗೆ ಏನೂ ಚಿಂತೆ ಇಲ್ಲ. ನನ್ನ ಅಪ್ಪ ಅಮ್ಮನನ್ನು ನೋಡಿಕೊಳ್ಳುವವಾರು, ನನ್ನ ತಂಗಿಯ ಮದುವೆ ಮಾಡುವವರಾರು ಎಂಬ ಚಿಂತೆ ನನ್ನನ್ನು ಕಾಡತೊಡಗಿತು”.


“ಅಷ್ಟರಲ್ಲಿ ತ್ರಿವರ್ಣ ಧ್ವಜದಲ್ಲಿ ಸುತ್ತಿಟ್ಟಿದ್ದ ನನ್ನ ಮುಖಕ್ಕೆ ಸೂರ್ಯನ ಕಿರಣ ಬೀಳತೊಡಗಿತು. ಬೆಳಗ್ಗೆ ಆಗಿ ಹೋಗಿತ್ತು ನನ್ನ ಸ್ನೇಹಿತರು ನನ್ನ ಹೆಣದ ಜೊತೆಗೆ ನನ್ನ ಹಳ್ಳಿಕಡೆಗೆ ನಡೆದೇ ಬಿಟ್ರು. ಮತ್ತೆ ಬರ್ತ್ತೇನೆ ಎಂದು ಹೇಳಿದ್ದ ನನ್ನ ಮನೆಯವರಿಗೆ ಏನು ಅನಿಸಬಹುದು ಎಂಬ ಚಿಂತೆ ನನ್ನನ್ನು ಕಾಡತೊಡಗಿತು?

ಹೀಗೆ ಯೋಚಿಸುತ್ತಾ ಯೋಚಿಸುತ್ತಾ ನನ್ನ ಹೊತ್ತ ಗಾಡಿ ನನ್ನ ಮನೆಯೆದುರು ಬಂದು ನಿಂತೆಬಿಟ್ಟಿತು. ನನ್ನ ಪ್ರಿಯ ಮಗಳು ಅಂಗಳದಲ್ಲಿ ಗೊಂಬೆಯ ಜೊತೆ ಆಟಾಡುತ್ತಿದ್ದಳು ಯಾಕೋ ಅವಳನ್ನು ಅಪ್ಪಿಕೊಳ್ಳುವ ಆಸೆ ಆಗುತ್ತಿದೆ”.

‘ನನ್ನ ಸ್ನೇಹಿತ ಹೋಗಿ ನನ್ನ ಹೆಂಡತಿಯನ್ನು ಕರೆದ, ಆ ಹೊತ್ತಿಗೆ ಒಳಗಿಂದ ನನ್ನ ತಂದೆ ಬಂದರು. ತಂದೆಗೆ ವಿಷಯ ತಿಳಿದು ಅವರು ನಿಂತಲ್ಲೇ ಕುಸಿದುಬಿದ್ದಾಗ ಒಳಗಿಂದ ನನ್ನವಳು ಓಡಿಬಂದು ಏನಾಯಿತು ಎಂದು ಕೇಳಿ ನನ್ನ ಸ್ನೇಹಿತನ ಬಳಿ ಅವರು ಬರಲಿಲ್ವಾ ಅಂತ ಕೇಳಿದಳು. ಅಷ್ಟೋತ್ತಿಗೆ ಅವಳಿಗೂ ವಿಷಯ ಗೊತ್ತಾಯ್ತು.

ಸ್ವಲ್ಪ ಸಮಯಲ್ಲಿ ನನ್ನ ಊರುಪೂರಾ ನಾನು ಹುತಾತ್ಮನಾದ ಸುದ್ದಿ ಹರಡಿತ್ತು. ದೇವಸ್ಥಾನದಲ್ಲಿದ್ದ ನನ್ನ ಅಮ್ಮ ತಂಗಿ ವಿಷಯ ತಿಳಿದು ಓಡಿ ಬಂದರು. ಊರಿನ ರಾಜಕಾರಣಿಗಳು ನನ್ನ ನೋಡಲು ಬಂದರು. ನನ್ನ ಹೆಸರಲ್ಲಿ ರಾಜಕೀಯ ಮಾಡಲು ಆರಂಭಿಸಿದರು. ನನ್ನವರಿಗೆ ಸಾಂತ್ವನ ಹೇಳುವ ಕೆಲಸ ಮಾಡುವುದು ಬಿಟ್ಟು ಅವರು ಪರಸ್ಪರ ಕೇಸರೇರೆಚಾಟದಲ್ಲಿ ತೊಡಗಿದ್ದನ್ನು ಕಂಡು ನನ್ನ ಬಗ್ಗೆ ನನಗೆ ಅಸಹ್ಯ ಆಯಿತು.

ಕೊನೆಗೆ ಎಲ್ಲರೂ ಸೇರಿ ನನ್ನ ಅಂತಿಮಸಂಸ್ಕಾರ ಮಾಡಿ  ಹೊರಟುಹೋದರು. ನನ್ನ ವೀರ ಯೋಶೋಗಾಥೆಯನ್ನು ಎಲ್ಲಾ tv,ಪತ್ರಿಕಾ ಮಾಧ್ಯಮಗಳು ಹಾಡಿ ಕೊಂಡಾಡಿದವು”. ಸ್ವಲ್ಪ ದಿನದಲ್ಲೇ ಮನೆಗೊಂದು ಪತ್ರ ಬಂತು. ನನ್ನ ವೀರತೆಗೆ ಸರ್ಕಾರ ಪರಮವೀರ ಚಕ್ರ ಗೌರವ ಕೊಡುವುದು ಎಂದು ಅದರಲ್ಲಿ ಬರೆದಿತ್ತು. ಜನವರಿ 26ರಂದು ನನ್ನ ವಿಧವಾಪತ್ನಿ ಆ ಪ್ರಶಸ್ತಿ ಸ್ವೀಕರಿಸಿದಳು.”


“ನನ್ನ ಬಳಿಕ ಸುಮಾರು 189 ಸೈನಿಕರು ಹುತಾತ್ಮರಾಗಿರುವ ವಿಚಾರ ನಂಗೆ ತಿಳಿಯಿತು. ಸೈನಿಕರ ಪರವಾದ, ಸೈನಿಕರಿಗೆ ಬೇಕಾದ ಆಧುನಿಕ ಆಯುಧ ಒದಗಿಸುವ ಸರ್ಕಾರ ಬರಲಿ ಎಂದು ನನ್ನಷ್ಟಕ್ಕೆ ಯೋಚನೆ ಮಾಡುತ್ತಿದ್ದಾಗ.ಮೋದಿಯ ಬಗ್ಗೆ ತಿಳಿಯಿತು,ಮೋದಿ ಹರ್ಯಾಣದ ರೇವಾಡಿಯಲ್ಲಿ ಸೈನಿಕರ ಸಮಾವೇಶ ನಡೆಸುತ್ತಿದ್ದಾರೆ ಎಂದು ತಿಳಿಯಿತು. 3 ವರ್ಷದಿಂದ ಸುಮ್ಮನಿದ್ದ ನಾನು ಮತ್ತೆ  ದೇಶದ ಬಗ್ಗೆ ಯೋಚನೆ ಮಾಡತೊಡಗಿದೆ.”


“ಮೋದಿ ಅಧಿಕಾರಕ್ಕೆ ಬಂದು ಸೈನಿಕರಿಗೆ OROP ಘೋಷಣೆಮಾಡಿದಾಗ ಕುಣಿದುಕುಪ್ಪಳಿಸಿದ ನನ್ನ ಸ್ನೇಹಿತರ ಜೊತೆಗೆ ಕುಣಿವ ಆಸೆ ನನಗೂ ಆಯ್ತು.

ಮೋದಿ ಸೈನಿಕರಿಗೆ ಆಧುನಿಕ ಬುಲ್ಲೆಟ್ಪ್ರೂಫ್ ಜಾಕೆಟ್ ಹೆಲ್ಮೆಟ್ ಕೊಟ್ಟಾಗ ನನಗೂ ಅದನ್ನು ಧರಿಸುವ ಆಸೆ ಆಯ್ತು.

ದೀಪಾವಳಿಗೆ ಸೈನಿಕರ ಜತೆಗೆ ಮೋದಿ ಬಂದು ಹಬ್ಬ ಆಚರಿಸಿದಾಗ ಕಣ್ಣುತುಂಬಿ ಬಂತು, ನಾನು ನನ್ನ ಕುಟುಂಬದ ಜತೆಗೆ ಹಬ್ವ ಆಚರಿಸಿದಷ್ಟು ಸಂತೋಷ ಸಿಕ್ಕಿತು.

ಅದ್ಯಾಕೋ ಮತ್ತೆ ಸೈನಿಕನಾಗಿ ಭಾರತಮಾತೆಯ ರಕ್ಷಣೆ ಮಾಡುವಾಸೆ ಮತ್ತೆ ಹುಟ್ಟಿದೆ. ಮೋದಿಯ ಜತೆ ದೀಪಾವಳಿ ಆಚರಿಸುವಾಸೆಯಾಗುತ್ತಿದೆ.”

ಸಚಿನ್ ಜೈನ್ ಹಳೆಯೂರ್

ಸರಿ ಅನಿಸಿದ್ರೆ ಶೇರ್ ಮಾಡಿ….

Post Author: Ravi Yadav