ಜನ್ಮಕೊಟ್ಟ ಅಮ್ಮ ಅಂದ್ರೆ ನಿಮಿಗಿಷ್ಟನಾ???ಹಾಗಿದ್ರೆ ಅಮ್ಮನ ಮನದಾಳದ ಮಾತು…. ಇದನೊಮ್ಮೆ ಓದಿ….!!

ಜನ್ಮಕೊಟ್ಟ ಅಮ್ಮ ಅಂದ್ರೆ ನಿಮಿಗಿಷ್ಟನಾ???ಹಾಗಿದ್ರೆ ಅಮ್ಮನ ಮನದಾಳದ ಮಾತು…. ಇದನೊಮ್ಮೆ ಓದಿ….!! – ಸಚಿನ್ ಜೈನ್ ಹಳೆಯೂರ್

0

“ನನ್ನಪ್ಪ ಬಡವ,ನನ್ನನ್ನು ಓದಿಸದೆ,ಚೆನ್ನಾಗಿ ದುಡಿಸಿದ. ನನ್ನಮ್ಮ ಕಪ್ಪು ನಾನು ಕೂಡ ಅವರಹಾಗೆ ಕಪ್ಪು ಚೆಂದನೂ ಇರ್ಲಿಲ್ಲ…
ಕೋಲುಮುಖ…

ನನ್ನಪ್ಪ ನನ್ನ ಯವ್ವನ ಪ್ರಾಯ ಮುಗಿದು 37ನೇ ವರ್ಷಕ್ಕೆ ಮದುವೆ ಮಾಡಿ ಕೊಟ್ಟರು.

ನನ್ನವರು ಬಡವರು,ಜಾಗ ಜಮೀನು ಇಲ್ಲ. ಸಣ್ಣ ಗುಡಿಸಲು ಅವರ ಮನೆ.ಚಿನ್ನದ ಆಸೆಯೆಲ್ಲಾ ಕನಸಿನ ಮಾತು ಅಷ್ಟೇ.ಅವ್ರು ಕುಡುಕ,ದುಡಿದ ಹಣದಲ್ಲಿ ಕಂಠಪೂರ್ತಿಯಾಗಿ ಕುಡಿದು ನನ್ನ ಬಂದು ಹೊಡೆಯುತ್ತಿದ್ದರು..ಅಡುಗೆ ಮಾಡಿಟ್ಟಿದ ಪಾತ್ರೆ ಬಿಸಾಡುತ್ತಿದ್ದರು.

ಮದುವೆಯಾಗಿ 5ವರ್ಷ ಕಳೆದರೂ ,ನನ್ನ ಕರುಳಿನ ಕುಡಿ ಚಿಗುರಲೇ ಇಲ್ಲ. ಚಿಂತೆಯಿಂದ ಊರುಕೇರಿಯ ದೇವಸ್ಥಾನ,ದೈವಸ್ಥಾನ ಎಲ್ಲಾ ಕಡೆ ಒಂದು ಮಗುವಿಗಾಗಿ ಬೇಡಿದೆ,ವೃತ ಮಾಡಿದೆ….!

ಆ ಕಲ್ಲುರ್ಟಿ ಅಮ್ಮನ ಕೃಪೆಯೇನೋ ಎಂಬಂತೆ ನೀನು ಹುಟ್ಟಿದೆ…ನಿನ್ನ ಅಳು ನನ್ನ ಕಷ್ಟಗಳನ್ನೆಲ್ಲಾ ದೂರ ಸರಿಸಿ..ಸಂತೋಷದ ಕಣ್ಣೀರು ಉಕ್ಕಿ ಬರುವಂತೆ ಮಾಡಿತು.

ಕಷ್ಟಾಆದ್ರೂ ಕೆಮ್ಮುತ್ತಾ ಬೀಡಿ ಕಟ್ಟಿ ನಿನ್ನ ಸಾಕಿದೆ..ನನ್ನ ಅಪ್ಪನತ್ರ ಹಣ ಕೇಳಿ ನಿನ್ನ ನಾಮಕರಣಕ್ಕೆ ಸೊಂಟಕೊಂದು ಬೆಳ್ಳಿಯ ಚೈನ್ ಕೊಡಿಸಿದೆ.

ನೆರೆಹೊರೆ ಮನೆಯಲ್ಲಿ ಮನೆ ಗುಡಿಸಿ ಒರೆಸಿ,ಮುಸುರೆತಿಕ್ಕಿ ನಿನ್ನ ಹುಟ್ಟಿದ ಹಬ್ಬಕ್ಕೆ ಹೊಸ ಅಂಗಿ ಚಡ್ಡಿ ಕೊಡಿಸಿ,ತಲೆ ಚೆನ್ನಾಗಿ ಭಾಚಿ ಪಕ್ಕದ ದೇವಸ್ಥಾನದಲ್ಲಿ ಒಳ್ಳೆದಾಗಲಿ ಎಂದು ನಿನ್ನ ಹೆಸರಲ್ಲಿ ಪೂಜೆ ಮಾಡಿಸಿದೆ.

ಮನೆಯಲ್ಲಿ ನಿನ್ನಪ್ಪ ನೆಟ್ಟಿದ ಕದಲಿ ಬಾಳೆ ಗಿಡದಲ್ಲಿದ್ದ ಗೊನೆ ಮಾರಿ ನಮ್ಮೂರ ಜಾತ್ರೆಯಲ್ಲಿ ತಿರುಗುವ ತೊಟ್ಟಿಲಲ್ಲಿ ನಿನ್ನ ಕೂರಿಸಿ…. ಕೆಳಗಿನಿಂದ ನಾನು ನಿನ್ನ ನೋಡುತ್ತಾ ಟಾಟಾ ಮಾಡುತ್ತ ಖುಷಿ ಪಟ್ಟೆ..
ದೀಪಾವಳಿಗೆ ಸೀಗೆ ಕಾಯಿ ಮಾರಿ ಕೇಪು ಪಟಾಕಿ, ಪಿಸ್ತೂಲು ತೆಗೆದು ಕೊಟ್ಟೆ.

ಮನೆಯ ಮಾಡು ರಿಪೇರಿ ಮಾಡಲು ಇಟ್ಟಿದ ಬೀಡಿಯ ಸ್ಕಾಲರ್ಶಿಪ್ ಹಣದಲ್ಲಿ ನಿನಿಗಿಷ್ಟದ ಸೈಕಲ್ ಕೊಡಿಸಿದೆ..ಮನೆಯಲ್ಲಿ ಹಾಲು ಕೊಡುತ್ತಿದ್ದ ಭಾಗ್ಯ ಮತ್ತದರ ಕರುವನ್ನು ಮಾರಿ ಪಟ್ಟಣಕ್ಕೆ puc ಓದಲು ನಿನ್ನನ್ನು ಕಳುಹಿಸಿದೆ…

ನಿನ್ನ ಹಠಕ್ಕೆ…ನನ್ನಪ್ಪ ಕಷ್ಟಪಟ್ಟು ಮಾಡಿಕೊಟ್ಟಿದ್ದ ನನ್ನ ಚಿನ್ನದ ಕರಿಮಣಿಯನ್ನು ಮಾರಿ ಫೋಟೋ ತೆಗೆಯುವ,ಪದ್ಯ ಹಾಡುವ ನೋಕಿಯಾ ಮೊಬೈಲ್ ನೀನಿಗೋಸ್ಕರ ತೆಗೂದುಕೊಟ್ಟೆ…

ಆದ್ರೆ ನೀನೇನು ಮಾಡಿದ್ದಿ ಮಗ!!!

ಪೋಷಕರ ಸಭೆಗೆ ಒಳ್ಳೆಯ ಸೀರೆ ಉಟ್ಟು ಬನ್ನಿ ಅಂದಿದ್ದ ನೀನು.. ನಾನು ನನ್ನ ಮದುವೆಯ ಕೆಂಪು ಧಾರೆ ಸೀರೆಯನ್ನೇ ಉಟ್ಟು ಬಂದರೂ..ನನ್ನನ್ನು ನಿನ್ನ ಗೆಳೆಯರಲ್ಲಿ ಅಜ್ಜಿ ಎಂದು ಹೇಳಿ ಪರಿಚಸಿ, ಕೊನೆಯ ಬೆಂಚಿನಲ್ಲಿ ಕುತ್ಕೊಳಕೆ ಹೇಳಿದ್ದಿ.. ಬೀಡಿ ಕಟ್ಟಿ ದಪ್ಪ ಆಗಿದ್ದ ನನ್ನ ಕೈಯಲ್ಲಿ ಎಬ್ಬೆಟ್ಟು ಸರಿ ಬೀಳದಿದ್ದಾಗ ಅಷ್ಟು ಜನರ ಎದುರು ನನ್ನ ಬೈದಿ… ಆದ್ರೆ ಅದ್ರಲೇನೂ ನನಿಗೆ ಬೇಜಾರಿಲ್ಲ..ಬಿಡು..!!

ನಿನ್ನಪ್ಪನ ಕಿಡ್ನಿ ಆಪರೇಷನ್ ಗೆ ನಾನು ಕೂಡಿಟ್ಟಿದ ಹಣವನ್ನು ಕದ್ದುಕೊಂಡು ಪೇಟೆಗೆ ಓಡಿ ಹೊದಿ… ಕೆಲಸ ಸಿಕ್ಕಿದ ಕೂಡಲೇ ನನಗೆ ಹೇಳದೆ ಮದುವೆಯೂ ಆದಿ. ನಾನು ಪಕ್ಕದ ಮನೆಯಿಂದ ಫೋನ್ ಮಾಡುತ್ತೇನೆಂದು ನಿನ್ನ ನಂಬರ್ ಬದಲಾವಣೆ ಮಾಡಿದ್ದಿ..

ನನ್ನವರು ಕುಡಿದು ಕುಡಿದೇ ನನ್ನ ಬಿಟ್ಟು ಹೋದರು. ಅಗಳಾದ್ರೂ ನೀನು ಊರಿಗೆ ಬರುತ್ತಿ ಎಂದು ಕಾದು ಕುಳಿತೆ.. ನೀನು ಬಾರದಿದ್ದಾಗ… ಅವರ ಚಿತೆಗೆ ನಾನೇ ಬೆಂಕಿಕೊಟ್ಟೆ…

ನಾನೀಗ ಮುದುಕಿ ಮಗ,ಕೂದಲು ಬಿಳಿಯಾಗಿದೆ, ಬೀಡಿ ಕಟ್ಟಲು ಕಣ್ಣು ಕಾಣಿಸುತ್ತಿಲ್ಲ. ಬಾಗಿಲಿಲ್ಲದ ನನ್ನ ಮನೆ ಮಳೆಗೆ ಸೂರುತಿದೆ. ಇದ್ದ ಒಂದು ಸೀರೆ,ರವಿಕೆ ಹರಿದು ಹೋಗಿದೆ.ಅಡುಗೆ ಮಾಡಲು ಅಕ್ಕಿ ಬಿಡು ಬೆಂಕಿಯೂ ಇಲ್ಲದಂತಾಗಿದೆ. ಮನೆ ಕಾಲಿಯಾಗಿದೆ,ಮನಸ್ಸು ಬರಿದಾಗಿದೆ. ಕಣ್ಣಿನ ನೀರು ಬತ್ತಿ ಹೋಗಿದೆ, ಮಗ!!!ನೀನಿಗೋಸ್ಕರ ನಾ ಇ……”

ಹೀಗೆ ತನ್ನ ಮನದಾಳದ ಮಾತು ಹೇಳುತ್ತಿರುವಾಗ ಆ ತಾಯಿಯ ಪೆನ್ನಲ್ಲಿ ಶಾಯಿ ಕಾಲಿಯಾಗಿದೆ..
ಆ ಪೆನ್ನು ಮತ್ತೆ ಬರೆಯಲೇ ಇಲ್ಲ…!
ಆ ಮನಸ್ಸು ಮತ್ತೆ ಯೋಚನೆ ಮಾಡಲೇ ಇಲ್ಲ…!
ಆ ಹೃದಯ ಮತ್ತೆ ಬಡಿಯಲೇ ಇಲ್ಲ…!!!!

ಒಂದು ತಾಯಿಯ ತ್ಯಾಗ ಇಲ್ಲಿ ನಾವು ನೋಡಬಹುದು…

ಆ ಮಗನಿಂದಾಗಿ ಈಗ ತಾಯಿಗೆ ಚುಚ್ಚಿದ ಕಾಲ, ಮುಂದೊಂದು ದಿನ ನೀವು ಮುದುಕರಾಗುವಾಗ ನಿಮಿಗೂ ಚುಚ್ಚಬಹುದು,ಯಾಕಂದ್ರೆ ಗಡಿಯಾರದಲ್ಲಿ ಸಮಯ ಬದಲಾವಣೆ ಮಾಡುವುದೇ ಮುಳ್ಳುಗಳು…ಅಲ್ವಾ ಉಷಾರ್!!

ಹಿರಿಯರನ್ನು,ಅವರ ಆಸೆಗಳನ್ನು ಗೌರವಿಸಿ..🙏
ಸರಿ ಅನಿಸಿದ್ರೆ ಶೇರ್ ಮಾಡಿ,ಧನ್ಯವಾದಗಳು..

– ಸಚಿನ್ ಜೈನ್ ಹಳೆಯೂರ್