ರಾಮಜನ್ಮ ಭೂಮಿ ಹೋರಾಟದಲ್ಲಿ ತುಳುನಾಡ ಕೇಸರಿ ನಂದನ ಡಾ.ಪ್ರಭಾಕರ್ ಭಟ್ ಪಾತ್ರ ಎನುಗೊತ್ತಾ? ಬನ್ನಿ ಅವರ ಮಾತಲ್ಲೇ ಕೇಳಿ!!!

ಜಗತ್ತಿನ ದೊಡ್ಡಣ್ಣ ಅಮೆರಿಕಾದ ವಯಸ್ಸು ಅಷ್ಟೇ, ಆ ದೇಶದಲ್ಲಿ ಇರೋ ಮಹಾಪುರುಷರ ಸಂಖ್ಯೆಯೂ ಅಷ್ಟೇ, ಅಬ್ರಾಮ್ ಲಿಂಕನ್, ಜಾರ್ಜ್ ವಾಷಿಗ್ಟನ್, ಅಬ್ಬಬ್ಬಾ ಅಂದ್ರೆ ಕೆನಾಡಿಯನ್ನು ಹೇಳಬಹುದು. ಆದರೆ ಅಲ್ಲಿ ನಾಲ್ಕನೇ ಮಹಾಪುರುಷರಿಲ್ಲ. ಅದೇರೀತಿ ನಮ್ಮನ್ನು 183ವರ್ಷ ಆಳಿದ ಇಂಗ್ಲೆಂಡ್ನಲ್ಲಿ ಇರೋದು ಒಂದು ಐದಾರು ಜನ ವಿಕ್ಟೊರಿಯಾಗಳು ಇನ್ನು ನಾಲ್ಕೈದು ಜನ ಜಾರ್ಜ್ಗಳು ಇನ್ನೊಬ್ಬ ಚರ್ಚಿಲ್ ಇರಬಹುದು ಒಟ್ಟು 15ಜನ ಮಹಾಪುರುಷರೀರಬಹುದು. ಆದರೆ ಭಾರತ ಹಾಗಲ್ಲ. ನಮಿಗೆ ಸಾವಿರಾರು ವರ್ಷಗಳ ಇತಿಹಾಸವೂ ಇದೆ. ಸಾವಿರಾರು ಮಹಾಪುರುಷರೂ ಇದ್ದಾರೆ ಅದು ಅಂದಿನ ರಾಮನಿಂದ ಹಿಡಿದು ಇಂದಿನ ರಾಮಭಕ್ತ ಮೋದಿಯ ವರೆಗೆ.”

“ಅಂತಹ ಮಹಾಪುರುಷರಲ್ಲಿ ಭಾರಿ ದೊಡ್ಡ ಹೆಸರು ಇರುವಂತದ್ದು ಪ್ರಭು ಶ್ರೀರಾಮ ಚಂದ್ರನದ್ದು. ಆತ ಒಬ್ಬ ಮಾದರಿ ರಾಜ, ಮಾದರಿ ಪತಿ, ಮಾದರಿ ಮಗ, ಮಾದರಿ ಅಣ್ಣ ಅಲ್ಲದೆ ಮಾದರಿ ವೈರಿ ಕೂಡ. ಆತ ಜೀವನದ ಎಲ್ಲಾಘಟ್ಟದಲ್ಲೂ ಎಲ್ಲರಿಗೂ ಆದರ್ಶ. ಆತ ಎಲ್ಲರಿಗೂ ಎಲ್ಲಾ ವಿಷಯದಲ್ಲೂ ಮಾದರಿ. ಆದರಿಂದ ಅವನನ್ನು ಮರ್ಯಾದಾ ಪುರುಷೋತ್ತಮ ಅಂದರೆ ಪುರುಷರಲ್ಲಿ ಉತ್ತಮ ಎಂದು ಕರೆಯಲಾಗುತ್ತದೆ. ರಾಮನ ಜನ್ಮಕ್ಕೆ ಸಂಬಂದಿಸಿದಂತೆ ಇತ್ತೀಚಿಗೆ ಪತ್ರಿಕೆಯಲ್ಲಿ ಬಂದಿದ್ದ ಲೇಖನವೊಂದನ್ನು ನಾನು ಸ್ವಲ್ಪ ಓದಿದ್ದೆ. ಅಮೆರಿಕಾದ ನಾಸಾ ಸಂಸ್ಥೆ ಇತ್ತೀಚಿಗೆ ಉಪಗ್ರಹವೊಂದನ್ನು ಉಡಾಯಿಸಿತ್ತು. ಸಮುದ್ರದ ಒಳಗಿರುವ ರಚನೆಗಳ ಬಗ್ಗೆ ಅಧ್ಯಯನ ಮಾಡುವುದು ಆ ಉಪಗ್ರಹದ ಕೆಲಸ. ಹಾಗೆ ಅಧ್ಯಯನದಲ್ಲಿ ತೊಡಗಿದ್ದಾಗ ತಮಿಳುನಾಡಿನ ಧನುಷ್ಕೊಡಿಯಿಂದ ಶ್ರೀಲಂಕಾದ ವರೆಗೆ ಮಾನವ ನಿರ್ಮಿತ ಸೇತುವೆಯೊಂದನ್ನು ಪತ್ತೆಹಚ್ಚಿದ್ದಾರೆ. ನಾವೇ ಮೊದಲು ಕಂಡುಹಿಡಿದದ್ದು ಎಂದು ಜಂಬಕೊಚ್ಚಿಕೊಂಡು ಕ್ರೈಸ್ತರ ಮೂಲ ಪುರುಷ ಆಡಮಿನ ಹೆಸರನ್ನು ಆ ಸೇತುವೆಗೆ ಇಟ್ಟರು. ಅದರ ಇತಿಹಾಸ ಗಮನಿಸಿದಾಗ ಅದು ಒಂದುಮುಕ್ಕಾಲು ಲಕ್ಷ ವರ್ಷಗಳ ಹಿಂದಿನ ಸೇತುವೆ ಎಂದು ತಿಳಿಯಿತು. ಅಂದರೆ ರಾಮ ಜೀವಿಸಿದ್ದು ಸರಿಸುಮಾರು ಒಂದೂವರೆ ವರ್ಷಗಳ ಹಿಂದೆ.”

“ಇಂತಹ ರಾಮ ಹುಟ್ಟಿದು ಅಯೋದ್ಯೆಯಲ್ಲಿ. ಆತ ರಾಮರಾಜ್ಯವೊಂದನ್ನು ಕಟ್ಟಿಬೆಳಿಸಿ ಕಾಲವಾದ. ಅವನ ನೆನಪಿಗೊಸ್ಕರ ಆತನ ಮಗ ಅಯೋದ್ಯೆಯಲ್ಲಿ ದೇವಸ್ಥಾನವೊಂದನ್ನು ಕಟ್ಟಿದ. ಹಲವಾರು ಭಕ್ತರ ಅಗಮನದೊಂದಿಗೆ ಏಳೆಂಟುಭಾರಿ ಜೀರ್ಣೋದ್ದಾರಗೊಂಡಿತು. ಅದೇ ರೀತಿ ಎರಡು ಸಾವಿರ ವರ್ಷಗ ಹಿಂದೆ ಅದನ್ನು ಜೀರ್ಣೋದ್ದಾರ ಮಾಡಿದ ಕೀರ್ತಿ ರಾಜ ವಿಕ್ರಮಾಧಿತ್ಯನಿಗೆ ಸಲ್ಲುತ್ತದೆ. ಪುನರ್ನಿರ್ಮಾಣವಾದ ಆ ದೇವಸ್ಥಾನ ಒಂಬತ್ತು ಅಂತಸ್ತಿನಿಂದ ಕೂಡಿತ್ತು. ಅಲ್ಲಿದ್ದ 64 ಬೃಹತ್ ಕಂಬಗಳು ಕೂಡಾ ಮುತ್ತು ರತ್ನ ವಜ್ರಗಳಿಂದ ಅಲಂಕೃತಗೊಂಡಿದ್ದವು. ಇಂತಹ ಒಂದು ಭವ್ಯವಾದ ರಾಮನ ಮಂದಿರ ಅದಾಗಿತ್ತು.”

“ಆದರೆ 1526ನೇ ಇಸವಿಯಲ್ಲಿ ಒಬ್ಬ ಕ್ರೂರಿ, ಅನಾಗರಿಕ ಬಾಬಾರ ಭಾರತದ ಮೇಲೆ ಆಕ್ರಮಣ ಮಾಡಿ ದಿಲ್ಲಿಯ ಗದ್ದುಗೆಯೇರಿದ. ಅಲ್ಲಿಂದ ನೇರವಾಗಿ ಅವನ ಕಣ್ಣುಬಿದ್ದದ್ದು ಅಯೋದ್ಯೆಯ ಈ ಭವ್ಯ ಮಂದಿರದ ಮೇಲೆ. ಆತನ ದಂಡನಾಯಕ ಮಿರ್ಭಾಕಿಯನ್ನು ಕಳುಹಿಸಿ ಮಂದಿರವನ್ನು ನಾಶಗೊಳಿಸಲು ಅದೇಶ ನೀಡುತ್ತಾನೆ. ಮುಸ್ಲಿಮರ ಮೂಲ ಚಿಂತನೆ ಹಾಗೆ ಚೆನ್ನಾಗಿರುದನ್ನು ಹಾಳು ಮಾಡುವುದು. ದಂಡೆತ್ತಿ ಬಂದ ಮೀರ್ಬಾಕಿ ಸುಮಾರು ಮೂರುಕಾಲು ಲಕ್ಷ ಹಿಂದುಗಳ ಜೀವಹಿಂಡಿ ಮಂದಿರವನ್ನು ವಶಪಡಿಸಿಕೊಂಡು ಅದನ್ನು ದೋಚಿ ನಾಶಪಡಿಸಿದ. ಅಲ್ಲಿ ಮೂರು ಗುಂಬಜ್ ಇರುವ ಕಟ್ಟಡ ನಿರ್ಮಿಸಲು ಶುರು ಮಾಡಿದರು. ಮೊದಲದಿನ ಕಟ್ಟಿದ ಗೋಡೆ ಮರುದಿನ ನೋಡಿದಾಗ ಮಾಯವಾಗಿತ್ತು. ಮತ್ತೆ ಕಟ್ಟಿದ ಗೋಡೆ ಇದ್ದಕಿದ್ದಂತೆ ಮತ್ತೆ ಮಾಯ ಆಯ್ತು. ಅದೇನು ಹೀಗೆ ಅಂತ ಕಾದು ಕುಳಿತರು ಆದರೂ ಗೋಡೆ ಮಾಯ ಆಯ್ತು. ಕಟ್ಟಿದ ಗೋಡೆ ಮರುದಿನ ಕಣ್ಮರೆಯಾಗುತ್ತಿತ್ತು. ಮುಸ್ಲಿಮರು ಎಲ್ಲಾ ಸೇರಿಕೊಂಡು ಹಿಂದೂ ಪುರೋಹಿತನ ಬಳಿ ಪ್ರಶ್ನೆ ಕೇಳಲು ಹೋದರು. ಪುರೋಹಿತರು ರಾಮನ ಪರಮ ಭಕ್ತನಾದ ಹನುಮಂತ ಅದೃಶ್ಯ ರೂಪದಲ್ಲಿ ಬಂದು ಕಟ್ಟಿದ ಗೋಡೆ ಕೆಡವುತ್ತಿದ್ದಾನೆ. ಅಧಿಕೊಸ್ಕರ ರಾಮನ ಅಥವಾ ಸೀತೆಗೆ ಸಂಬಂದಿಸಿದ ಏನಾದರೂ ಕಟ್ಟಿ ಎಂದು ಪರಿಹಾರವನ್ನೂ ಹೇಳಿದ. ಅದರಂತೆ ಈ ಗುಂಬಜಿನ ಪಕ್ಕ ಸೀತಾ ರಾಸೋಯಿ (ಸೀತೆಯ ಅಡುಗೆಮನೆ)ಎಂಬ ಕಟ್ಟಡ ಕಟ್ಟಲಾಯಿತು. ನಂತರ ಬಾಬರ್ ತನ್ನ ಹೆಸರಿನಲ್ಲಿ ಮಸೀದಿಯೊಂದನ್ನು ಕಟ್ಟಿದ.”

“ಆದರೆ ಇದರ ವಿರುದ್ಧ 1973ರ ವರೆಗೆ ಸುಮಾರು 73ಭಾರಿ ಹೋರಾಟಗಳಾಗಿವೆ. ಒಂದುಭಾರಿ ಮಾತ್ರ ನಾವು ಗೆದ್ದಿದ್ದೆವು. ಆದರೆ ದುರ್ದೈವ ಆಗ ನಮ್ಮನ್ನು ಬ್ರಿಟಿಷರು ಆಳುತ್ತಿದ್ದರು. ಅವರು ನಮ್ಮ ಕೈಯಿಂದ ಮತ್ತೆ ಜಾಗವನ್ನು ಕಿತ್ತು ಮುಸ್ಲಿಮರ ಕೈಗೆ ಕೊಟ್ಟರು. 1947ಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವಾಗುದು ಎಂದು ಹಿಂದೂಗಳು ಆಸೆಯಿಂದ ಕುಳಿತಿದ್ದರು. ಆದರೆ ಸ್ವಾತಂತ್ರ್ಯ ದ ನಂತ್ರ ಅಲ್ಲಿ ಮಂದಿರ ನಿರ್ಮಾಣದ ಕನಸು ನುಚ್ಚುನೂರಾಯಿತು.”

 

“ಆದರೆ 1948ರಲ್ಲಿ ಒಂದು ಮಜವಾದ ಘಟನೆ ನಡೆಯಿತು. ಬಾಬರ್ಮಸೀದಿ ಕಟ್ಟಡವನ್ನು ಕಾಯುತ್ತಿದ್ದ ಮಹಮದ್ ಎಂಬ ಮುಸ್ಲಿಂ ಪೊಲೀಸನಿಗೆ ಅದೇ ಜಾಗದಲ್ಲಿ ರಾತ್ರಿ ಇದ್ದಕಿದ್ದಂತೆ ರಾಮ ಸೀತೆ ಹಾಗೂ ಹನುಮಂತನ ಮೂರ್ತಿ ಪ್ರತ್ಯಕ್ಷವಾಗಿ ಪ್ರಕಾಶಮಾನವಾಗಿ ಹೊಳೆಯಲು ಪ್ರಾರಂಭವಾಗಿದೆ. ಕಣ್ಣು ಮಂಜಾಗಿ ಕಣ್ಣು ಮುಚ್ಚಿ ಮತ್ತೆ ತೆರೆದು ನೋಡುವಾಗ ಅಲ್ಲಿ ಈ ಮೂರು ಮೂರ್ತಿಗಳನ್ನು ಆತ ಕಂಡ. ಮರುದಿನ ಇದು ದೇಶಪೂರ್ತಿ ಸುದ್ದಿಯಾಯಿತು. ಉತ್ತರಪ್ರದೇಶದ ಮುಖ್ಯಮಂತ್ರಿ ತಿವಾರಿ ಹಾಗೂ ಆಗಿನ ಪ್ರಧಾನಿ ನೆಹರು ಈ ವಿಗ್ರಹಗಳಿಗೆ ಪೂಜೆ ನಡೆಯಬೇಕು ಎಂದು ತೀರ್ಮಾನಿಸಿದರು. ಅದರಂತೆ ಒಂದು ಬೆಳಕೇ ಬೀಳದ ಕೊನೆಯಲ್ಲಿ ಮುಚ್ಚಿದ ಬಾಗಿಲಿನ ಒಳಗಡೆ ಪೂಜೆ ನಡೆಯುತ್ತಿತ್ತು. ಅಲ್ಲಿಗೆ ಭಕ್ತರಿಗೆ, ಜನರಿಗೆ ಪ್ರವೇಶ ಇರಲಿಲ್ಲ. ಹೀಗೆ ಹಲವಾರು ವರ್ಷಗಳು ಕಳೆದವು. 1983ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಬಾಲಸಾಹೇಬ್ ದೇವರಸ್ ರಾಮಜನ್ಮಭೂಮಿಗೆ ಸಂಬಂಧ ಪಟ್ಟಂತೆ ರಾಮಜಾನಕಿ ರಥಯಾತ್ರೆಯನ್ನು ಆರಂಭಿಸಿದರು. ದೇಶದ ಜನರಿಗೆ ಅಯೋದ್ಯೆಯ ಪ್ರಸುತ ವಿಷಯದ ಬಗ್ಗೆ ಹಾಗೂ ಮಂದಿರ ನಿರ್ಮಾಣದ ಬಗ್ಗೆ ಮಾಹಿತಿ ನೀಡುವುದು ಈ ರಥಯಾತ್ರೆಯ ಪ್ರಮುಖ ಉದ್ದೇಶವಾಗಿತ್ತು. ದೇಶಪೂರ್ತಿ ಸುತ್ತಿದ ಈ ರಥಯಾತ್ರೆಯ ಎರಡು ರಥಗಳು ನಮ್ಮ ಜಿಲ್ಲೆಗೂ ಬಂದಿತ್ತು. ಇದರಿಂದ ರಾಮಜನ್ಮ ಭೂಮಿಯ ಬಗ್ಗೆ ಜನರಲ್ಲಿ ಸ್ವಲ್ಪ ಅರಿವು ಮೂಡಿತು. ಆದರೆ ಅದು ಸಾಕಾಗಲಿಲ್ಲ. ಮತ್ತೆ ಮೂರು ವರ್ಷ ಕಳೆದು ರಾಮಶಿಲಾ ಎಂಬ ಆಂದೋಲನವನ್ನು ಆರಂಭಿಸಲಾಯಿತು. ಇದರ ಪ್ರಕಾರ ರಾಮನ ಮೂರ್ತಿಯ ಜೊತೆಗೆ ಪ್ರತೀ ಹಿಂದುವಿನ ಮನೆಗೆ ಭೇಟಿಕೊಡಬೇಕಿತ್ತು. ಭೇಟಿಕೊಡುವ ಮೊದಲು ಆ ಮನೆಯವರಿಗೆ ನಾವು ಬರುವಿಕೆಯ ಮಾಹಿತಿ ಕೊಡಬೇಕಿತ್ತು. ಅಂದು ಆ ಮನೆಯವರು ಇಡೀ ದಿನ ಉಪವಾಸವಿದ್ದು ಬಂದ ಮುರ್ತಿಗೆ ಆರತಿಮಾಡಿ ಒಂದುಕಾಲು ರೂಪಾಯಿ ದಕ್ಷಿಣೆಯಾಗಿ ನೀಡಬೇಕಿತ್ತು. ಮನೆಯಲ್ಲೊಂದು ಭಜನೆ ನಡೆದು ಪ್ರಸಾದ ವಿತರಣೆ ನಡೆಯಬೇಕಿತ್ತು. ಮುಂದಿನ ಮನೆಗೆ ಆ ಮನೆಯವರೇ ರಾಮನ ವಿಗ್ರಹವನ್ನು ಹೊತ್ತುಕೊಂಡು ಹೋಗಬೇಕಿತ್ತು. ಇದೊಂದು ಸಾಮರಸ್ಯದ ಸಮನ್ವಯದ ಆಂದೋಲನವಾಗಿತ್ತು. ಹೀಗೆ ಅಯೋದ್ಯೆಯಿಂದ ರಾಮನ ಶಿಲೆ ಬರುತ್ತದೆ ಎಂದು ನಾವೆಲ್ಲಾ ಭಾರಿ ತೇಜಸ್ಸಿನಿಂದ ಕೆಲಸ ಮಾಡಿದೆವು. ಆದರೆ ಎರಡು ದಿನದ ಮೊದಲು ರಾಮನ ಶಿಲೆ ಅಯೋದ್ಯೆಯಿಂದ ಬರುದಿಲ್ಲ. ಅದು ಮಂಗಳೂರಿನಲ್ಲಿರುವ ಒಂದು ಇಟ್ಟಿಗೆ ಖಾರ್ಕಾನೆಯಿಂದ ಬರುತ್ತದೆ ಅದೂ ಕೂಡ ಬರೀ ಇಟ್ಟಿಗೆ ತುಂಡು ಎಂದಾಗ ನಮ್ಮ ಉತ್ಸಹ ಪೂರ್ತಿ ಕುಂದಿಹೋಯಿತು. ಈ ಇಟ್ಟಿಗೆಯನ್ನು ಯಾರು ರಾಮ ಅಂತಾ ಪೂಜೆ ಮಾಡುತ್ತಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಹಿರಿಯರ ಆದೇಶದಂತೆ ಅದೇ ಇಟ್ಟೆಗೆಯನ್ನು ಹೊತ್ತು ನಾವು ಹೊರಟಾಗ ಕುಂದಿದ್ದ ನಮ್ಮ ಆತ್ಮಸ್ಥೈರ್ಯ ಜನರ ಪ್ರಚಂಡ ಜನ ಬೆಂಬಂಬಲದೊಂದಿಗೆ ಕೊನೆಗೊಂಡಿತು. ಕಾರ್ಯಕ್ರಮ ಸಂಜೆ 4ರಿಂದ 8ರ ತನಕ ಎಂದು ಯೋಜನೆ ಮಾಡಿದ್ರೆ ಜನರ ಬೆಂಬಲದೊಂದಿಗೆ ಮದ್ಯರಾತ್ರಿ ಮೂರುಗಂಟೆಯವರೆಗೂ ಕಾರ್ಯಕ್ರಮ ನಡೆಯುತ್ತಿತ್ತು. ಇಟ್ಟಿಗೆಯನ್ನು ಸ್ವತಃ ರಾಮನೇ ಬಂದಂತೆ ಜನರು ಪೂಜೆ ಮಾಡುತಿದ್ದರು. ಮತ್ತೆ ಆ ಎಲ್ಲಾ ಇಟ್ಟಿಗೆಗಳನ್ನು ಲಾರಿಯಲ್ಲಿ ತುಂಬಿಸಿ ಬೃಹತ್ ಮೆರವಣಿಗೆಯ ಮೂಲಕ ಅಯೋದ್ಯೆ ಕಳುಹಿಸಿಕೊಡಲಾಯಿತು.”

“ಈ ಸಂದರ್ಭದಲ್ಲಿ ಮಂದಿರದ ಕಾವು ಇನ್ನೂ ಹೆಚ್ಚಾಯಿತು. ಆ ಕಾಲದಲ್ಲಿ ಮುಂದೆ ನಿರ್ಮಾಣವಾಗಬೇಕಾದ ಮಂದಿರದ ನೀಲನಕ್ಷೆಯೊಂದನ್ನು ನಮ್ಮ ಹಿರಿಯರು ರಚಿಸಿದರು. ಅದು ಸರಿಸುಮಾರು 170ಅಡಿ ಉದ್ದ 120 ಅಡಿ ಅಗಲವಿದ್ದ ಒಂದು ಬೃಹತ್ ಕಟ್ಟಡವಾಗಿತ್ತು. ಅದರ ಚಿತ್ರವನ್ನು ಮನೆಮನೆಗೆ ಹಂಚಲಾಯಿತು. ಅದರಂತೆ ದೇವಸ್ಥಾನದ ಶಂಕುಸ್ಥಾಪನೆಗೆ 1989ರಲ್ಲಿ ದೇವೋತ್ತಾನ ಏಕಾದಶಿಯ ದಿನವೊಂದನ್ನು ನಿರ್ಧಾರ ಮಾಡಲಾಯಿತು. ಆದರೆ ಸರ್ಕಾರ ಇದ್ದನ್ನು ವಿರೋಧಿಸಿತು. ಕ್ರಮೇಣ ಅಲ್ಲಿ ಸೇರಿದ 25ಸಾವಿರಕ್ಕೂ ಅಧಿಕ ಜನರನ್ನು ನೋಡಿ ರಾಜೀವ್ ಗಾಂಧಿಯ ಸರ್ಕಾರ ಬೆಚ್ಚಿಬಿದ್ದು ಹೆದರಿ ಶಂಕುಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿತು. ಅದರಂತೆ ಮಸೀದಿಯ ಎದುರು ಜಾಗದಲ್ಲಿ ಮೊದಲಿಗೆ ಹೊಂಡವೊಂದನ್ನು ತೆಗೆದು ಒಬ್ಬ ದಲಿತನ ಕೈಯಲ್ಲಿ ಮೊದಲ ಇಟ್ಟಿಗೆಯನ್ನು ಹಾಕುವ ಮೂಲಕ ಶಂಕುಸ್ಥಾಪನೆ ಮಾಡಲಾಯಿತು. ಆದರೆ ಮುಂದಿನ ಕಾರ್ಯಕ್ರಮಗಳನ್ನು ಮುಂದುವರಿಸಲು ಸರ್ಕಾರ ಬಿಡಲಿಲ್ಲ. ಅಧಿಕೊಸ್ಕರ ಮುಂದಿನ ವರ್ಷ 1990ರಲ್ಲಿ ಬರುವ ದೇವೋತ್ತಾನ ಏಕಾದಶಿಯ ದಿನ ಒಂದು ದೊಡ್ಡ ಹೋರಾಟವನ್ನು ನಡೆಸುದಾಗಿ ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಆಕ್ಟೊಬರ್ 30ರಂದು ಸಿಖ್ಖರು ಅವರ ಗುರುದ್ವಾರವನ್ನು ಅವರೇ ಸ್ವತಃ ನಿರ್ಮಿಸುವ ರೀತಿಯಲ್ಲಿ ಕರಸೇವಾ ಎಂಬ ಆಂದೋಲನವನ್ನು ಅಯೋಜಿಸಲಾಯಿತು. ನಮ್ಮ ಮಂದಿರ ನಾವೇ ನಿರ್ಮಿಸುದೆಂದು ತೀರ್ಮಾನಿಸಲಾಯಿತು. ಹಾಗೆ ನಿರ್ಮಾಣಕ್ಕಾಗಿ ನಿರ್ನಾಮ, ಮಂದಿರದ ರಚನೆಗೆ ಮಸೀದಿ ಒಡೆಯುವ ಕೆಲಸಕ್ಕೆ ಕರೆಕೊಡಲಾಯಿತು.”

“ಆದರೆ ಅಲ್ಲಿಯ ಸ್ಥಳೀಯ ಮುಲಾಯಂ ಸಿಂಗಿನ ಸರ್ಕಾರ ಇದನ್ನು ವಿರೋಧಿಸಿ ಮುಸ್ಲಿಮರ ಪರವಾಗಿ ನಿಂತಿತು. ಆರು ವಿವಿಧ ಹಂತಗಳಲ್ಲಿ ಮಸೀದಿಗೆ ಭದ್ರತೆ ಒದಗಿಸಲಾಯಿತು. ಇಡೀ ಉತ್ತರಪ್ರದೇಶ ಪೊಲೀಸ್ಮಯವಾಗಿತ್ತು. ನೀವು ಮಸೀದಿ ಒಡೆಯುದು ಬಿಡಿ ಅದರ ಮೇಲೆ ಒಂದು ಹಕ್ಕಿಯೂ ಹಾರಲು ನಾನು ಬಿಡುದಿಲ್ಲ ಎಂದು ಮುಲಾಯಂ ಸಿಂಗ್ ಹಿಂದೂಗಳಿಗೆ ಸವಾಲು ಹಾಕಿದರು. ಅಯೋದ್ಯೆಯ ಎಲ್ಲಾ ರಸ್ತೆಗಳನ್ನು ಕತ್ತರಿಸಲಾಯಿತು. ಉತ್ತರ ಪ್ರದೇಶ ಮಧ್ಯಪ್ರದೇಶದ ನಡುವೆ ಹರಿಯುವ ನದಿಯೊಂದಕ್ಕೆ ಕರಸೇವಕರು ಈಜಿ ಬರಬಾರದು ಎಂದು ಕ್ರೂರ ಮೊಸಲೆಗಳನ್ನು ಹಾಕಿಸಿದರು. ಹೀಗೆ ಏನಾದರೂ ಆಗಲಿ ಆದರೆ ಕರಸೇವೆಯಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಘ ನಿರ್ಣಯ ಮಾಡಿತ್ತು.”

“ಅದರಂತೆ ಸುಮಾರು ಒಂಬತ್ತು ದಿನ ಮೊದಲು ಸರಿಸುಮಾರು ಹತ್ತು ಗಂಟೆ ರಾತ್ರಿಗೆ ಮಂಗಳೂರಿನಲ್ಲಿ ಸುಮಾರು 137ಜನರಿರುವ ಮೊದಲ ಕರಸೇವಕರ ಬೈಠಕ್ ನಡೆಯಿತು. ಅಲ್ಲಿ ನಾಳೆ ರೈಲಿನಲ್ಲಿ ಹೊರಡುವ ಕರಸೇವಕರಿಗೆ ಬೇರೆಬೇರೆ ಸೂಚನೆಗಳನ್ನು ನೀಡಲಾಯಿತು. ಈಗಾಗಲೇ ಹಲವಾರು ರೈಲುಗಳನ್ನು ನಿಲ್ಲಿಸಲಾಗಿದೆ, ಆದ್ದರಿಂದ ನೀವು ಸಿಕ್ಕಿದ ರೈಲಿನಲ್ಲಿ ಹತ್ತಿಕೊಳ್ಳಬೇಕು, ಯಾರೂ ಕೂಡಾ ಕೇಸರಿ ಬಟ್ಟೆ ಧರಿಸಬಾರದು. ಪರಸ್ಪರ ಒಟ್ಟಿಗೆ ಹೋಗುವುದು, ಮಾತಾಡುದು ಮಾಡಬಾರದು, ರೈಲಿನಲ್ಲಿ ಒಟ್ಟಿಗೆ ಕುಳಿತು ಭಜನೆ ಮಾಡಬಾರದು ಮಾಡಿದರೆ ನಿಮ್ಮನ್ನು ಬಂಧಿಸಿ ಜೈಲಿಗೆ ಅಟ್ಟುತ್ತಾರೆ ಎಂಬ ಸೂಚನೆಯನ್ನು ನಾವು ಆ ಕರಸೇವಕರಿಗೆ ನೀಡಿದೆವು. ಅಲ್ಲದೆ ನೀವು ಯಾರಾದರೂ ನಿಮ್ಮ ಮನೆಯಲ್ಲಿ ತಂದೆ ತಾಯಿ ಹೆಂಡತಿಗೆ ಮಕ್ಕಳಿಗೆ ಅಯೋದ್ಯೆಗೆ ಹೋಗಿ ಹತ್ತಿಪ್ಪತ್ತು ದಿನದಲ್ಲಿ ವಾಪಸ್ ಬರುತ್ತೇವೆ ಎಂದು ಮಾತು ಕೊಟ್ಟಿದ್ದರೆ ಬರುವುದು ಬೇಡ ವಾಪಸ್ ಮನೆಗೆ ಹೋಗಿ ಯಾಕೆಂದರೆ ಹೋದವರು ಬದುಕಿ ಬರುವುದು ಅಷ್ಟು ಕಷ್ಟ ಎಂದು ಕರಸೇವಕರಿಗೆ ಮನವರಿಕೆ ಮಾಡಲಾಯಿತು. ಆಗ ಯಾವೊಬ್ಬನೂ ಹೆದರಿ ಜೀವ ಭಯದಿಂದ ಮನೆಗೆ ಹೋಗಲಿಲ್ಲ.”

“ಮಾತು ಮುಂದುವರಿಸುತ್ತಾ ನೀವು ಒಂದುವೇಳೆ ಬಂಧನವಾದರೆ ಸುಮ್ಮನೆ ಕೂರಬಾರದು. ನಾನು ರಾಮನಿಗೋಸ್ಕರ ಮಹಾರಾಷ್ಟ್ರದವರೆಗೆ ಬಂದೆನಲ್ಲಾ ಎಂದು ವಾಪಸ್ ಬರುವಂತಿಲ್ಲ. ಸಾಧ್ಯವಾದ್ರೆ ಆವರಣ ಗೋಡೆ ಹಾರಿ ಹೋಗಿ, ಇಲ್ಲ ಬೇಲಿ ಮುರಿದು ಹೋಗಿ. ಒಟ್ಟಾರೆ ಅಯೋದ್ಯೆಗೆ ತಲುಪುವುದು ನಿಮ್ಮ ಗುರಿಯಾಗಿರಬೇಕು ಎಂದೆವು. ಆದರೂ ಮರುದಿನ ನಮಗೆ ಸುದ್ದಿಬಂತು, ದೇಶದ ವಿವಿಧ ಕಡೆ ಕರಸೇವಕರನ್ನು ತಡೆದು ನಿಲ್ಲಿಸಿದ್ದಾರೆ. ನವೆಂಬರ್ 30 ರಂದು ಹನ್ನೊಂದು ಗಂಟೆಗೆ ಅಲ್ಲಿ ಕರಸೇವೆ ನಡೆಯುದು ಎಂದು ಘೋಷಿಸಲಾಯಿತು. ಆದರೆ ನಮ್ಮ ದಕ್ಷಿಣಕನ್ನಡದವ್ರು ಕರಸೇವೆಯಲ್ಲಿ ಒಬ್ಬರಾದ್ರು ಭಾಗವಹಿಸಬೇಕಿತ್ತು ಇದು ನಮ್ಮ ಮರ್ಯಾದಿಯ ಪ್ರಶ್ನೆಯಾಗಿತ್ತು. ಆ ಕಾರಣದಿಂದ ಮರುದಿನ ನಮ್ಮ ಹಿರಿಯರು ನೀವು ಆರು ಜನ ಅಯೋದ್ಯೆಗೆ ಹೊರಡಬೇಕೆಂದು ಸೂಚನೆ ನೀಡಿದರು. ಅದರಂತೆ ನಾನು ಹಾಗೂ ಇನ್ನೊಂದು ಐದು ಜನ ಅಲ್ಲೇ ಪಕ್ಕದ ಶ್ರೀಮಂತರೊಬ್ಬರ ಅಂಬಾಸೆಟರ್ ಕಾರಲ್ಲಿ ಹೊರಟು ಬೆಂಗಳೂರಿಗೆ ಸುಮಾರು 10ಗಂಟೆ ರಾತ್ರಿಗೆ ತಲುಪಿದೆವು. ಅಲ್ಲಿರುವವರೊಬ್ಬರು “ನೀವು ಹೇಗೆ ಹೋಗುತ್ತಿರಿ? ಎಲ್ಲಾ ಕಡೆ ಬಂದ್ ಮಾಡಿದ್ದಾರೆ ಮರಗಳನ್ನು ಕಡಿದು ರಸ್ತೆಗೆ ಹಾಕಿದ್ದಾರೆ, ಬಿದಿರಿನ ಕಟ್ಟಕಟ್ಟೆ ಮಾಡಿದ್ದಾರೆ , ನೀವು ಅಯೋದ್ಯೆಗೆ ಬಿಡಿ ಮಹಾರಾಷ್ಟ್ರಕ್ಕೆ ತಲುಪುವುದೇ ಕಷ್ಟ ಅಂದರು” ಆದರೆ ನಮ್ಮ ಮೇಲೆ ನಮ್ಮ ಹಿರಿಯರು ಇಟ್ಟ ಭರವಸೆಯನ್ನು ನಾವು ಉಳಿಸಬೇಕಿತ್ತು. ನವೆಂಬರ್ ಮೂವತ್ತಕ್ಕೆ ಅಲ್ಲಿ ನಮ್ಮ ದಕ್ಷಿಣಕನ್ನಡದ ಒಂದು ತಂಡ ಇರುತ್ತದೆ ಮತ್ತು ಇರಲೇಬೇಕು ಎಂಬುದು ಹಿರಿಯರ ಆಸೆಯಾಗಿತ್ತು. ಆ ದಿನ ರಾತ್ರಿ ಅಲ್ಲೇ ಕಳೆದು ಮರುದಿನ ಬೆಳಗ್ಗೆ ಬೇಗ ಕಾರಲ್ಲಿ ಹೊರಟೆವು.”

“ಹೊರಡುವ ಮೊದಲೇ ಪೊಲೀಸರು ಸಿಕ್ಕಾಗ ಏನಾದ್ರು ಪ್ರಶ್ನೆ ಕೇಳಿದ್ರೆ ನಮ್ಮಲ್ಲಿ ಒಬ್ಬನೆ ಉತ್ತರಿಸಬೇಕು ಎಂದು ತೀರ್ಮಾನಿಸಿದ್ದೆವು. ಹೀಗೆ ಹೋಗುತ್ತಿರುವಾಗ ಮಹಾರಾಷ್ಟ್ರದ ಗಡಿಯಲ್ಲಿ ಪೋಲಿಸರು ನಮ್ಮನ್ನು ತಡೆದು ನಿಲ್ಲಿಸಿ “ಎಲ್ಲಿಗೆ ಹೋಗುತ್ತಿದ್ದೀರಾ?” ಎಂದ ಆಗ ನಮ್ಮಲ್ಲಿ ಮೊದಲೇ ತೀರ್ಮಾನ ಆದಂತೆ ಒಬ್ಬ ಮಾತಾಡಿದ. “ನಾವು ಪ್ರಯಾಗಕ್ಕೆ ಹೋಗುತ್ತಿದ್ದೇವೆ ಸ್ವಾಮಿ” ಅಂದರು. ಮತ್ತೆ ಪೊಲೀಸ್ “ಪ್ರಯಾಗಕ್ಕೊ ಅಯೋದ್ಯೆಗೋ” ಏಂದು ಗದರಿಸಿ ಮರು ಪ್ರಶ್ನೆ ಮಾಡಿದ. ಆಗ “ಅಯೋದ್ಯೆಗೆ ಯಾಕೆ ಪ್ರಯಾಗಕ್ಕೆ ಹೋಗೋದು” ನನ್ನ ತೊಡೆಯ ಮೇಲಿದ್ದ ಸಣ್ಣ ಮಡಕೆಯನ್ನು ತೋರಿಸಿ “ಅವರ ತಂದೆ ತೀರಿಕೊಂಡಿದ್ದಾರೆ ಅದರ ಅಸ್ತಿಯನ್ನು ತ್ರಿವೇಣಿ ಸಂಗಮದಲ್ಲಿ ಬಿಡಲು ಹೋಗುತ್ತಿದ್ದೇವೆ” ಅಂದರು. ಅಷ್ಟಾಗುವಾಗ ಪೊಲೀಸ್ “ಚಲ್” ಅಂದ, ಅಮ್ಮಬ್ಬಾ! ಎಂದು ಅಲ್ಲಿಂದ ನನ್ನ ಕೈಯಲ್ಲಿದ್ದ ಭೂದಿ ಮತ್ತು ಆಸ್ತಿಯನ್ನು ತೋರಿಸಿ ತೋರಿಸಿ ಅಯೋದ್ಯೆಗಿಂತ ಸರಿಸುಮಾರು 60ಕಿಲೋಮೀಟರ್ ದೂರದಲ್ಲಿರುವ ಸುಲ್ತಾನ್ಪುರಿಗೆ ತಲುಪಿದೇವು. ಅಲ್ಲಿಂದ ಮುಂದೆ ಯಾವ ಎಲುಬು ಭೂದಿ ಕೆಲಸ ಮಾಡಲಿಲ್ಲ.”

“ನವೆಂಬರ್ 27ರಂದು ನಾವು ನಾವು ಸುಲ್ತಾನ್ ಪುರಿಯ ಮಾಜಿಸ್ಟ್ರೇಟ್ ಒಬ್ಬರ ಮನೆಯಲ್ಲಿ ಉಳಿದೆವು. ಅವರು ನಮ್ಮ ಪರವಾಗಿದ್ದರು. ಅಲ್ಲಿಂದ ಅಯೋದ್ಯೆಗೆ ತಲುಪುದು ಭಾರಿ ಕಷ್ಟದ ಕೆಲಸವಾಗಿತ್ತು. ಇಡೀ ಊರಿಗೆ ಊರೇ ಪೊಲೀಸ್ ಮಿಲಿಟರಿಯ ಸರ್ಪಗಾವಲಿತ್ತು. ಹಾಗೆ ನವೆಂಬರ್ 27 ಕಳೆಯಿತು. 28 ಕೂಡ ಪೂರ್ತಿ ಕಳೆಯಿತು. ಮಾಜಿಸ್ಟ್ರೇಟ್ ಅವರು ನೀವು ಕಾರಿನಲ್ಲಿ ಹೋಗುವುದು ಕಷ್ಟ ನಡೆದು ಹೋಗಿ ಅಂದರು. ಆದರೆ ನಮ್ಮ ಜತೆಗಿದ್ದ ಇತರರಲ್ಲಿ ಮೂವರು ಹಿರಿಯ ವಯಸ್ಸಿನವರು. ಒಬ್ಬರು ಕಿರಿಯರಾದರೂ ಸ್ವಲ್ಪ ದಪ್ಪಗಿದ್ದರು. ಅವರು ಅಷ್ಟು ದೂರ ನಡೆಯುದು ಅಸಾಧ್ಯ ಎಂದರು. ಅದ್ದರಿಂದ ಅವರನ್ನು ಅಲ್ಲೇ ಬಿಟ್ಟು ನಾನು ಹಾಗೂ ಇನ್ನೊಬ್ಬರು ಅಲ್ಲಿಂದ ಅಯೋದ್ಯೆಯ ಕಡೆಗೆ ಹೊರಟೆವು. ಹೋಗುವಾಗ ಒಂದು ಪ್ಯಾಂಟ್, ಒಂದು ಶರ್ಟ್ ಹಾಗೂ ಒಂದು ಶ್ವೇಟರ್ ಹಿಡಿದುಕೊಳ್ಳಬಹುದಿತ್ತು. ಒಂದು ವೇಳೆ ಚೀಲ ಹಿಡಿಕೊಂಡರೆ ನಮ್ಮನ್ನು ಕರಸೇವಕರು ಎಂದು ತಿಳಿದು ಬಂದಿಸುವ ಭಯವೂ ಇತ್ತು. ಹಲ್ಲು ಉಜ್ಜಲು ಟೋತ್ ಬ್ರೆಶ್ , ಶೇವಿಂಗ್ ಇರಲಿಲ್ಲ, ಸ್ನಾನ ಮಾಡಲು ಟವೆಲ್ ಕೂಡ ಇಲ್ಲ ಹಾಗೆಯೇ ಹೊಗಬೇಕಿತ್ತು. ನಡೆಯುತ್ತಾ ನಡೆಯುತ್ತಾ ರಾತ್ರಿಯಾಗುತ್ತಾ ಬಂತು ಒಂದು ನದಿ ಸಿಕ್ಕಿತು. ಒಬ್ಬ ಮಧ್ಯರಾತ್ರಿ ದೋಣಿಯಲ್ಲಿ ನದಿದಾಟಿಸಿ ರಾಮ್ ರಾಮ್ ಅಂದ. ಸ್ವಲ್ಪ ಸಮಯದ ನಂತರ ಇನ್ನೊಬ್ಬ ಬಂದು ದಾರಿ ತೋರಿಸಿದ ಹೀಗೆ ರಾತ್ರಿ ಪೂರಾ ನಡೆಯಿತು.”

 

“ಹೀಗೆ ಹೋಗ್ತಾ ಹೋಗ್ತಾ ಬೆಳಗಾಯಿತು. ಅಲ್ಲಿರುವ ಎಲ್ಲಾ ಅಂಗಡಿ ಹಾಗೂ ಮನೆಯವರು ರಾಮನ ಭಕ್ತರು. ನಿಮಿಗೇನು ಬೇಕು? ಎನ್ ಬೇಕು? ಎಂದು ನಮ್ಮನ್ನು ಉಪಚರಿಸತೊಡಗಿದರು. ತಿಂಡಿಬೇಕಾ? ಸ್ನಾನ ಮಾಡುತ್ತೀರಾ ಎಂದು ಕೇಳಿದರು. ನಮಗೆ ಸ್ನಾನಕ್ಕೆ ಪುರುಸೊತ್ತು ಎಲ್ಲಿದೆ? ತಿಂಡಿ ಬೇಕಿತ್ತು. ತಿಂಡಿ ತಿಂದು ಪ್ರಯಾಣ ಮುಂದುವರೆಸಿದೆವು. ನಾವು ರಸ್ತೆಯ ದಾರಿಯಲ್ಲಿ ಹೋಗದೆ ಗದ್ದೆಯಿಂದ ಗದ್ದೆಗೆ ಆಗಿಯೇ ನಡೆಯುತ್ತಿದ್ದೆವು. ಹಾಗೆ ನಾವು 29ನೇ ದಿನದಂದು ರಾತ್ರಿ ಒಂದು ಕಡೆ ತಲುಪಿದೆವು. ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೋಗಬೇಕಾಗಿದ್ದವನು ಬರಲಿಲ್ಲ. ಕಾರಣ ಆತ ದಾರಿ ತೋರಿಸಲು ಹೋದ ಒಂದು ತಂಡದವರ ಜತೆಗೆ ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಹಾಗೆ ಕಾಯುತ್ತಿದ್ದಾಗ ನಮ್ಮ ಅದೃಷ್ಟದಿಂದ ಒಬ್ಬ ಕರೆದುಕೊಂಡು ಹೋಗಲು ಬಂದ. ಹೀಗೆ ಮೈ ಕೊರೆಯುವ ಚಳಿಯಲ್ಲಿ ಹೋಗುತ್ತಿದ್ದಾಗ ಮತ್ತೆ ಒಂದು ನದಿಸಿಕ್ಕಿತು. ನದಿಯಲ್ಲಿ ಎದೆ ಮುಳುಗುವಷ್ಟು ನೀರು ಇತ್ತು. ನೀರಿನೊಳಗೆ ಮುಂದಿನವನ ಹಿಂದೆಯೇ ಹೆಜ್ಜೆ ಇಡುತ್ತಾ ಸುಮಾರು 3ಗಂಟೆ ರಾತ್ರಿಗೆ ನಡೆದೆವು ತುಂಬಾ ನಡೆದೆವು. ಹೀಗೆ ಮೂರೂವರೆ ಗಂಟೆಗೆ ಆಗುವಾಗ ಒಂದು ಕಿರಿದಾದ ಟಾರ್ ರಸ್ತೆ ಸಿಕ್ಕಿದು. ರಸ್ತೆ ಸಿಕ್ಕಿದ ಕೂಡಲೇ ಅಮ್ಮಬ್ಭಾ ಅನಿಸಿತು. ಇನ್ನು ನಾವು ತಲುಪುದು ನಿಶ್ಚಿತ ಅಂತ ಅನಿಸಿತು. ಹಾಗೆ ನಡೆಯುತ್ತಾ ಹೋಗುತ್ತಿದ್ದಂತೆ ಬೆಳಗಾಗುತ್ತಾ ಬಂತು. ಬೆಳಗಾಗುತ್ತಿದ್ದಂತೆ ಅಲ್ಲಿ ಪಕ್ಕದ ಗದ್ದೆಯಲ್ಲಿ, ಕಬ್ಬಿನ ಪೊದೆಯೊಳಗೆ ಮರದ ಎಡೆಯಿಂದ ಜೈ ಶ್ರೀರಾಮ್ ಜೈ ಶ್ರೀರಾಮ್ ಎಂಬ ಘೋಷಣೆ ಮೊಳಗಿತು. ಹಾಗಿಯೇ ಹೋಗುತ್ತಾ ಅಯೋದ್ಯೆಯ ಬಾಬ್ರಿ ಕಟ್ಟಡದ ಸಮೀಪಕ್ಕೆ ಬಂದೆವು. ಅಲ್ಲಿ ಸಾವಿರಾರು ಜನರು ಸೇರಿದ್ದರು. ಸೇರಿದ ಜನರನ್ನು ಪೊಲೀಸರು ಬಸ್ಸಿನಲ್ಲಿ ತುಂಬಿಸಿ ತುಂಬಿಸಿ ಬಂಧಿಸಿ ಕಳುಹಿಸುತ್ತಿದ್ದರು. ಹಾಗೆ ಮಾಡುತ್ತಿರುವಾಗ ಒಬ್ಬ ತರುಣ ಗಟ್ಟಿಮುಟ್ಟಾದ ಸನ್ಯಾಸಿ ಬಸ್ಸಿನ ಚಾಲಕನನ್ನು ಎತ್ತಿ ಬಿಸಾಡಿ, ಸ್ವತಃ ತಾನು ಕುಳಿತು ಬಸ್ಸು ಬಾಬ್ರಿ ಮಸೀದಿಯೊಳಗೆ ನುಗ್ಗಿಸಿದ. ಇದರಿಂದ ಕೆಲವು ಆವರಣಗಳು ಪುಡಿಪುಡಿಯಾದವು. ನಾವು ಹತ್ತಿರ ಹೋಗುತ್ತಾ ಹೋಗುತ್ತಾ ಮಸೀದಿಯ ಗುಂಬಜಿನ ಮೇಲೆ ಹತ್ತಿ ಪರಮ ಪವಿತ್ರ ಭಾಗವದ್ ಧ್ವಜವನ್ನು ಹಾರಿಸಿದೆವು. ಹಕ್ಕಿಯೂ ಹಾರಡಲು ಬಿಡುದಿಲ್ಲ ಎಂದಿದ್ದ ಮುಲಾಯಮ್ ಸಿಂಗ್ ಈಗ ಗುಂಬಜಿನ ಮೇಲೆ ಹಿಂದುಗಳ ಧ್ವಜವನ್ನು ನೋಡಬೇಕಾಯಿತು. ಇಷ್ಟಾಗುವಾಗ ಮುಲಾಯಂ ಸಿಂಗ್ ಪೊಲೀಸರಿಗೆ ಗುಂಡು ಚಲಾಯಿಸಲು ಹೇಳಿದ. ಪರಿಣಾಮವಾಗಿ ಸಾವಿರಾರು ಜನ ಕರಸೇವಕರು ತನ್ನ ಪ್ರಾಣ ಕಳೆದುಕೊಂಡರು. ನಾವು ಹೇಗೋ ಗುಂಡಿನಿಂದ ತಪ್ಪಿಸಿಕೊಂಡೆವು.”

ಅಲ್ಲಿಂದ ಮದ್ಯಾಹ್ನ ನಾವಿದ್ದ ಛತ್ರಕ್ಕೆ ವಾಪಸ್ ಬಂದೆವು. ಅಲ್ಲಿ 35 ಜನರನ್ನು ಒಳಗೊಂಡ ಪ್ರಾಂತ ಬೈಠಕ್ ನಡೆಯಲಿತ್ತು. ಆ ಛತ್ರದಲ್ಲಿ ಗುಂಡಿಗೆ ಪ್ರಾಣ ಕೊಟ್ಟ ಸಾವಿರಾರು ಕರಸೇವಕರ ಹೆಣವನ್ನು ಸಾಲಾಗಿ ಇಡಲಾಗಿತ್ತು. ಕೋಣೆ ಪೂರ್ತಿ ರಕ್ತ ಹರಿಯುತ್ತಿತ್ತು. ಕೆಲವು ಹೆಣದ ರುಂಡ ಮುಂಡಗಳು ಭಾಗವಾಗಿತ್ತು. ಕೈ ಕಾಲುಗಳು ತುಂಡಾಗಿತ್ತು. ಅದನ್ನು ನೋಡಿದ ನಮ್ಮ ಪ್ರಮುಕರಿಗೆ ಸಿಟ್ಟು ನೆತ್ತಿಗೇರಿತ್ತು. ಸಭೆಯಲ್ಲಿ “ನಾವು ಜೈ ಶ್ರೀರಾಮ್ ಹೇಳುವುದು ಅವರು ಗುಂಡು ಹಾರಿಸುವುದು ಇದು ಸಾಧ್ಯವೇ ಇಲ್ಲ ಎಂದು ಕೆಲವು ನಾಯಕರು ಗುಡುಗಿದರು”. ಆಗ ವಿನಯ್ ಕಟಿಯಾರ್ ಎಂಬವರೊಬ್ಬರು ಎದ್ದುನಿಂತು ಮಾತಾಡುತ್ತಾ “ನೀವು ಹೇಳುವುದು ಸತ್ಯ ನನಗೂ ಹಾಗೆಯೇ ಅನಿಸಿತು, ಆದರೆ ಇದು ಎರಡನೇ ಸ್ವಾತಂತ್ರ್ಯ ಹೋರಾಟ ತಾಯಿ ಭಾರತಿ ಇನ್ನೂ ರಕ್ತದ ಅಭಿಷೇಕ ಆಗಬೇಕು, ಇನ್ನೂ ರಕ್ತದ ತರ್ಪಣವನ್ನು ಬಯಸುತ್ತಿದ್ದಾಳೆ, ಅವಳ ಇಚ್ಛೆ ಪೂರೈಸುವವರು ನಾವೇ ತಾನೇ” ಎಂದರು ಅಷ್ಟಾಗುವಾಗ ಕಾರ್ಯಕರ್ತರ ಉತ್ಸಹಾ ಮತ್ತೂ ಹೆಚ್ಚಿತು.”

 

“ಡಿಸೆಂಬರ್ ಎರಡನೇ ತಾರೀಕು ಮತ್ತೆ ಆಂದೋಲನ ನಡೆಸುದು ಎಂದು ಅಲ್ಲಿ ತೀರ್ಮಾನಿಸಲಾಯಿತು. ಆ ಪ್ರಕಾರ ಎರಡು ಗುಂಪುಗಳಾಗಿ ಹೋಗಬೇಕು ಎಂದು ತೀರ್ಮಾನಿಸಲಾಯಿತು. ಪೊಲೀಸರು ಟಿಯರ್ ಗ್ಯಾಸ್ ಹಾಕುವುದರಿಂದ ಹೋಗೆಯಲ್ಲಿ ಕಣ್ಣು ಉರಿಯುತ್ತದೆ ಹಾಗಾಗಿ ನೀವು ಕಣ್ಣಿನ ಸುತ್ತಲೂ ಸುಣ್ಣ ಹಚ್ಚಿಕೊಳ್ಳಬೇಕು ಮತ್ತು ಈರುಳ್ಳಿಯ ರಸವನ್ನು ಹಚ್ಚಿಕೊಳ್ಳಬೇಕು ಎಂದು ತೀರ್ಮಾನಿಸಿ ಹೋರಟೆವು. 8ಸಾವಿರ ಜನರಿರುವ ಒಂದು ಗುಂಪಿನ ನೇತೃತ್ವ ಉಮಾಭಾರಥಿಯವರು ವಹಿಸಿಕೊಂಡಿದ್ದರು. ಇನ್ನೊನ್ನು ಗುಂಪಿನ ನಾಯಕತ್ವ ಆಂಧ್ರದವರೊಬ್ಬರು ವಹಿಸಿಕೊಂಡಿದ್ದರು. ಆ ಗುಂಪಿನಲ್ಲಿ ನಾನಿದ್ದೆ. ಬಾಬ್ರಿ ಕಟ್ಟಡದ ಕಡೆಗೆ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸತೊಡಗಿದರು. ನಮ್ಮ ಗುಂಪು ಎರಡು ತುಂಡುಗಳಾಗಿ ಹಂಚಿ ಹೋಯಿತು. ಎಲ್ಲರೂ ಕಕ್ಕಾಬಿಕ್ಕಿಯಾಗಿ ಓಡತೊಡಗಿದರು. ಇದು ನನಿಗೆ ಯಾಕೋ ಸರಿ ಕಾಣಲಿಲ್ಲ. ನಾನು ಎದ್ದುನಿಂತು ಓಡುವುದು ಬೇಡ ಕುಳಿತುಕೊಳ್ಳುವಂತೆ ಜೋರು ಬೊಬ್ಬೆ ಹಾಕಿದೆ. ಅದೃಷ್ಟದಿಂದ ಅದರಲ್ಲಿದ್ದವರು ಹೆಚ್ಚಿನವರು ಕರ್ನಾಟಕದವರಾದ ಕಾರಣ ನನ್ನ ಮಾತು ಕೇಳಿ ಅಲ್ಲೇ ಕುಳಿತುಕೊಂಡರು. ಆದರೆ ಪೊಲೀಸರು ಬಂದು ಕುಳಿತಲ್ಲಿಗೆ ದಪ್ಪದ ದೊಣ್ಣೆಯಲ್ಲಿ ಹೋಡೆದರು. ನಾವು ಪೆಟ್ಟು ತಿನ್ನುತ್ತಾ ನೋವಿನಲ್ಲಿ ಜೈ ಜೈ ರಾಮ್ ಎಂದು ಜಪಿಸತೊಡಗಿದೆವು. ಹೊಡೆದು ಹೊಡೆದು ಸುಸ್ತಾದ ಪೊಲೀಸರು ನಮ್ಮನ್ನು ಅಲ್ಲೇ ಬಿಟ್ಟು ಹೋದರು. ಅಷ್ಟುಹೊತ್ತಿಗೆ ಇವತ್ತಿನ ಆಂದೋಲನ ಮುಗಿಯಿತು ಎಂದು ಹಿರಿಯರಿಂದ ಸೂಚನೆಯೊಂದು ಬಂತು. ಕಾರಣ ಉಮಾಭಾರಥಿಯಾರಿದ್ದ ಗುಂಪಿನ ಮೇಲೆ ಪೊಲೀಸರು ವಿಪರೀತ ಗುಂಡಿನ ದಾಳಿ ಮಾಡಿದ್ದರು. ಬಂಗಾಳದ ಒಬ್ಬ ಸಹೋದರ ತನ್ನ ಸಹೋದರಿನಿಗೆ ಗುಂಡು ತಾಗಿದೆ ಎಂದು ಜೀವ ಹೋಗುವ ಸಮಯದಲ್ಲಿ ಆತನನ್ನು ಅಪ್ಪಿಕೊಂಡಿದ್ದಾಗ ಅವನಿಗೂ ಗುಂಡು ಹಾರಿಸಿಬಿಟ್ಟಿದ್ದರು.ಇಂತಹ ಹಲವಾರು ಘಟನೆಗಳಿಗೆ ಆ ದಿನ ಸಾಕ್ಷಿಯಾಯಿತು. ಅಲ್ಲಿಗೆ ನಮ್ಮ ಆವತ್ತಿನ ಆಂದೋಲನ ಮುಗಿಯಿತು. ಅಲ್ಲಿಂದ ವಾಪಾಸ್ ಬಂದೆವು.”

Jaipur: Rajasthan Governor Kalyan Singh with Minister of Higher Education Kali Charan Saraf and Minister Education Vasudev Devnani during the 26th Convocation at Rajasthan University in Jaipur on Tuesday. PTI Photo(PTI7_7_2015_000238A)

“ಅದಾದ ಸ್ವಲ್ಪ ದಿನದ ನಂತ್ರ ಅಲ್ಲಿ ಚುನಾವಣೆ ನಡೆದು ಬಿಜೆಪಿಯ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾದರು. 1992 ಡಿಸೆಂಬರ್ 6ರಂದು ಮತ್ತೆ ಆಂದೋಲನ ನಡೆಸುದು ಎಂದು ತೀರ್ಮಾನ ಮಾಡಿ ಬಾಬ್ರಿ ಕಟ್ಟಡವನ್ನು ದ್ವಂಸ ಮಾಡಿ ಅದೇ ಜಾಗದಲ್ಲಿ ಸಣ್ಣ ರಾಮ್ ಲಾಲನ ಗುಡಿಯೊಂದನ್ನು ಕಟ್ಟಿದೆವು. ಇಂದು ಆ ಭೂಮಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿದ್ದು ಸುಮಾರು 2019ಕ್ಕೆ ಆಗುವಾಗ ರಾಮನ ಭವ್ಯ ಮಂದಿರ ಅಲ್ಲಿ ನಿರ್ಮಾಣ ಆಗಲಿದೆ ಎಂಬುದು ನಿಶ್ಚಿತ”.

 

ನೀವು ಸ್ವಾಭಿಮಾನಿ ಹಿಂದುವಾ? ಹಾಗಿದ್ರೆ ಶೇರ್ ಮಾಡಿ.

✍ಸಚಿನ್ ಜೈನ್ ಹಳೆಯೂರ್

Comments (0)
Add Comment