ಜನರ ವೋಟ್ ಗಳು ಸೆಳೆಯಲು ಮಾಡುತ್ತಿದಾರಾ ಕರುನಾಡ ಧ್ವಜ..?

ಹೌದು!!ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕಾಲ ಸಮೀಪಿಸಿದೆ. ಹಳದಿ, ಬಿಳಿ ಹಾಗೂ ಕೆಂಪು ಬಣ್ಣಗಳನ್ನು ಒಳಗೊಂಡ ನಾಡಧ್ವಜ ಮಾದರಿ ಅಂತಿಮಗೊಂಡಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಸಮ್ಮತಿ ದೊರೆತ ಬಳಿಕ ಅಂತಿಮ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ.

ಸಿದ್ದರಾಮಯ್ಯ ಕಣ್ಣು ವೋಟ್ ಬ್ಯಾಂಕ್ ಮೇಲೆ??? ಹೌದು !!

ಚುನಾವಣೆ ಸಮೀಪಿಸಿದಾಗ ಈ ನಿರ್ಧಾರ ತೆಗೆದುಕೊಂಡಿರುವುದು ಎಲ್ಲರಿಗೂ ಈ ತರಹದ ಅನುಮಾನ ಬರಲು ಪ್ರಾಂಭವಾಗಿದೆ.ಕಳೆದ ನಾಲ್ಕುವರೆ ವರ್ಷದಿಂದ ವೇಗವಾಗಿ ತೆಗೆದುಕೊಳದ ನಿರ್ಧಾರ ಈಗೇಕೆ..?? ಎಂಬ ಪ್ರಶ್ನೆ ಕಾಡುತ್ತಿದೆ.

ಕನ್ನಡ ಪರ ಸಂಘಟನೆಗಳ ಮನವೊಲಿಗೆ ಹೊಸ ಪ್ರಯೋಗ ಮಾಡುತ್ತಿದ್ದಾರಾ ಸಿದ್ದರಾಮಯ್ಯ?? ಹೌದು

ನಮ್ಮ ಕನ್ನಡ ಪರ ಸಂಘಟನೆಗಳ ಮನವೊಲಿಸಲು ಈ ನಿರ್ಧಾರ ತೆಗೆದುಕೊಂಡಿರಬಹುದು, ಇಷ್ಟು ದಿನ ಎಷ್ಟೋ ಬೇಡಿಕೆಗಳು ಇಟ್ಟಿದರು ನಮ್ಮ ಕನ್ನಡ ಪರ ಸಂಘಟನೆಗಳು ಈಗೇಕೆ ಈ ನಿರ್ಧಾರ ಸ್ವಾಮಿ?.

ಧ್ವಜ ಸಮಿತಿ ಸೋಮವಾರ ಅಂತಿಮ ಸಭೆ ನಡೆಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ವಿನ್ಯಾಸದ ಸಹಿತ ವರದಿಯನ್ನು ಸಲ್ಲಿಸಲಿದೆ. ಬಳಿಕ ಸಚಿವರು ಸಿಎಂ ಜತೆ ರ್ಚಚಿಸಿ ಸಚಿವ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ನಂತರ ಕೇಂದ್ರದ ಅನುಮತಿಗಾಗಿ ರವಾನಿಸಲಾಗುತ್ತದೆ.

ಒಪ್ಪಿಗೆ ಸೂಚಿಸುತ್ತಾ ಕೇಂದ್ರ ಸರ್ಕಾರ..!!ಹೌದು!!

ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿದೆ, ಅವರು ಒಪ್ಪಿಗೆ ನೀಡಿದರೆ ನಮ್ಮ ಹೊಸ ಧ್ವಜ, ಆದರೆ ಒಪ್ಪಿಗೆ ನೀಡುತ್ತಾರೋ ಇಲ್ಲ ಎಂಬುದು ಇನ್ನಷ್ಟೇ ಕಾಡು ನೋಡುಬೇಕಾಗುತ್ತದೆ.

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ನಾಡಧ್ವಜ ಹೊಂದುವ ಎರಡನೇ ರಾಜ್ಯವೆಂಬ ಖ್ಯಾತಿ ಕರ್ನಾಟಕದ ಮುಡಿಗೇರಲಿದೆ. 1972ರಿಂದಲೂ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಧ್ವಜ ಹೊಂದಿದೆ.

ಧ್ವಜಕಾಗಿ ಹೋರಾಟ ಮಾಡಿದ ಇತಿಹಾಸ..!!

ರಾಜ್ಯಕ್ಕೂ ಪ್ರತ್ಯೇಕ ಧ್ವಜ ಇರಬೇಕೆಂಬ ಬೇಡಿಕೆಗೆ 5 ದಶಕಗಳ (1960)ಇತಿಹಾಸವಿದೆ. ಧ್ವಜದ ಕೂಗಿಗೆ ಯಾವುದೇ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮಾ. ರಾಮಮೂರ್ತಿ ಅವರು ಕನ್ನಡ ಪಕ್ಷಕ್ಕಾಗಿ ರಚಿಸಿದ್ದ ಹಳದಿ, ಕೆಂಪು ಧ್ವಜವನ್ನೇ ಬಳಸಲಾಗುತ್ತಿದೆ.

2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಕನ್ನಡ ರಾಜ್ಯೋತ್ಸವದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವಂತೆ ಸುತ್ತೋಲೆ ಹೊರಡಿಸಿದ್ದರು. ಆ ನಂತರ ಡಿ.ವಿ. ಸದಾನಂದಗೌಡರು ಬಜೆಟ್​ನಲ್ಲಿ ಘೊಷಣೆ ಮಾಡಿದ್ದರು. ಆದರೆ ಈ ನಿರ್ಧಾರವನ್ನು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರಿಂದಾಗಿ 2012ರಲ್ಲಿ ಸುತ್ತೋಲೆ ವಾಪಸ್ ಪಡೆಯಲಾಗಿತ್ತು.

ಅಷ್ಟಕು ಬಣ್ಣಗಳ ಆಯ್ಕೆ ಹೇಗೆ..!!

ಕನ್ನಡ ಹೋರಾಟಗಾರ ಮ. ರಾಮಮೂರ್ತಿ ವಿನ್ಯಾಸ ಮಾಡಿದ್ದ ಹಳದಿ ಮತ್ತು ಕೆಂಪು ಧ್ವಜ ಜನರನ್ನು ಭಾವನಾತ್ಮಕವಾಗಿ ಬೆಸೆದಿದೆ. ಆ ಬಣ್ಣಗಳನ್ನು ಇಟ್ಟುಕೊಂಡೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಲ್ಕು ಮಾದರಿಗಳನ್ನು ಕಲಾವಿದರಿಂದ ವಿನ್ಯಾಸ ಮಾಡಿಸಿತ್ತು. ಅದರಲ್ಲಿ ಹಳದಿ, ಬಿಳಿ ಮತ್ತು ಕೆಂಪು ಬಣ್ಣ ಹಾಗೂ ಮಧ್ಯದಲ್ಲಿ ‘ಸತ್ಯಮೇವ ಜಯತೆ’ ಎಂಬ ಘೋಷವಾಕ್ಯ, ಗಂಡಭೇರುಂಡದ ಲಾಂಛನ ಒಳಗೊಂಡ ಧ್ವಜವನ್ನು ಅಂತಿಮ ಮಾಡಲಾಗಿದೆ. ಈ ಮೂರು ವರ್ಣಗಳು ಶಾಂತಿ, ಧೈರ್ಯ, ಸಹಬಾಳ್ವೆ, ಗೌರವವನ್ನು ಪ್ರತಿನಿಧಿಸುತ್ತವೆ.

ಧ್ವಜದ ವಿಶೇಷತೆ ಏನು..!!

ಹಳದಿ, ಬಿಳಿ ಹಾಗೂ ಕೆಂಪು ವರ್ಣಗಳ ಪೈಕಿ ಬಿಳಿಯ ಬಣ್ಣದ ಮಧ್ಯದಲ್ಲಿ ರಾಜ್ಯದ ಲಾಂಛನ ಇರುತ್ತದೆ. ಸದ್ಯ ಹಳದಿ ಹಾಗೂ ಕೆಂಪು ಬಣ್ಣದ ಕನ್ನಡ ಧ್ವಜ ಚಾಲ್ತಿಯಲ್ಲಿದೆ. ಆದರೆ ಅದು ಕನ್ನಡ ಪಕ್ಷವೊಂದರ ಧ್ವಜವೂ ಆಗಿರುವ ಕಾರಣ ಅದರಲ್ಲಿಯೇ ಸ್ವಲ್ಪ ಬದಲಾವಣೆ ಮಾಡಿಕೊಂಡು ಹೊಸ ವಿನ್ಯಾಸದ ಧ್ವಜವನ್ನು ಅಂತಿಮಗೊಳಿಸಲಾಗಿದೆ.

ಕಾನೂನಾತ್ಮಕವಾಗಿ ಯಾವುದೆ ಅಡ್ಡಿಯಿಲ್ಲ!!

ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಾನೂನು, ಡಿಪಿಎಆರ್ ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ಧ್ವಜ ಹೊಂದಲು ಕಾನೂನಿನ ಸಮಸ್ಯೆ ಏನಿಲ್ಲ, ಆದರೆ ಕೇಂದ್ರದ ಒಪ್ಪಿಗೆಯಷ್ಟೇ ಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿಪ್ರಾಧಿಕಾರ.

ಅದೇನೆ ಇರಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಈ ನಿರ್ಧಾರ ಕೈಕೊಂಡಿದರೆ ಜನರೇ ಅದನ್ನ ಅವಲೋಕಿಸಿ ಒಂದು ನಿರ್ಧರಿಕೆ ಬರೋದು ಒಳ್ಳೇದು.

 

 

Comments (0)
Add Comment