ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತದ ಆ ಪ್ರಧಾನಿ ಯಾರು ಗೊತ್ತಾ?

ಪ್ರತಿಯೊಂದು ದೇಶವು ತಮ್ಮ ನಾಗರಿಕರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಹಾಗೆಯೆ, ಪಾಕಿಸ್ತಾನ ತಮ್ಮ ನಾಗರಿಕರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುತ್ತದೆ, ಆದರೆ ಪಾಕಿಸ್ತಾನ ತನ್ನ ದೇಶದವರಲ್ಲದವರಿಗೂ ಅಂತಹ ಪ್ರಶಸ್ತಿ ನೀಡುತ್ತಾ?

ಹೌದು ಪಾಕಿಸ್ತಾನ ನಿಶಾನ್ ಎ ಪಾಕಿಸ್ತಾನ ಪ್ರಸ್ತಿಯನ್ನ ಒಬ್ಬ ಭಾರತೀಯ ಪ್ರಧಾನಿಗೂ ನೀಡಿತ್ತು.ಹಾಗಾದರೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಭಾರತದ ಆ ಪ್ರಧಾನಿ ಯಾರು?

ಆ ಪ್ರಧಾನಿಯಾದರೂ ಯಾರು ಅನ್ನೋ ಪ್ರಶ್ನೆ ನಿಮಗೆ ಕಾಡುತ್ತಿರಬಹುದಲ್ಲವೇ? ಅವರು ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಂತ ನೀವು ಅಂದುಕೊಳ್ಳಿತ್ತಿರಬಹುದುಲ್ಲವೇ?ಉಹುಂ ಅಲ್ಲ, ನಿಮ್ಮ ಊಹೆ ತಪ್ಪು,

ಅವರು ಭಾರತದ ನಾಲ್ಕನೇ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ

ಮೊರಾರ್ಜಿ ದೇಸಾಯಿಯವರು 1977 ರಿಂದ 1979 ರವರೆಗೆ ಭಾರತದ ಪ್ರಧಾನಿಯಾಗಿದ್ದವರು.

 

ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ನಿಶಾನ್-ಎ-ಪಾಕಿಸ್ತಾನ 1990 ರಲ್ಲಿ ಆಗಿನ ಅಧ್ಯಕ್ಷ ಗುಲಾಂ ಇಶಾ ಖಾನ್ ಅವರು ಏರ್ಪಡಿಸಿದ ವರ್ಣರಂಜಿತ ಸಮಾರಂಭದಲ್ಲಿ ಮೊರಾರ್ಜಿ ದೇಸಾಯಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪಾಕಿಸ್ತಾನದ ಉನ್ನತ ಮಟ್ಟದ ಸೇವೆಗಾಗಿ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ನೀಡಲಾಗುತ್ತದೆ. ಹಾಗಾದರೆ ಪಾಕಿಸ್ತಾನಕ್ಕೆ ಮೊರಾರ್ಜಿ ದೇಸಾಯಿಯವರು ಯಾವ ಸೇವೆ ಮಾಡಿದ್ದಾರೆ ಅನ್ನೋದು ನಿಮ್ಮನ್ನ ಕಾಡಿತ್ತಿರಬಹುದಲ್ಲವೇ? ಓದಿ!!

ಕಾರಣ ಒಂದು!!

`ಆಪರೇಷನ್ ಕಹುತಾ’: ಇಂಥದೊಂದು ಅಸಾಮಾನ್ಯ ಬೇಹುಗಾರಿಕಾ ಕಾರ್ಯಾಚರಣೆಯನ್ನು ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿತ್ತು. ಈ ಕಾರ್ಯಾಚರಣೆ ಭಾರತದ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಯಾರು ಗೊತ್ತ??

ಜಗತ್ತಿನ ಅಸಾಮಾನ್ಯ ಗುಪ್ತಚರ ಸಂಸ್ಥೆಯಾಗಿರುವ ಭಾರತದ RAW, ಅಂದರೆ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್. ಮೈನವಿರೇಳಿಸುವಂತೆ ಮಾಡುವ ಈ ಆಪರೇಷನ್ ಕಹುತಾದ ಕಥೆಯೇ
ವಿಚಿತ್ರ.

ಕಹುತಾ ಕಾರ್ಯಾಚರಣೆ ಯಾಕೆ ಗೊತ್ತೇ?

ಕಹುತಾ ಎಂಬುದು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಒಂದು ನಗರ. ಇಲ್ಲಿಯೇ ಖಾನ್ ರಿಸರ್ಚ್ ಲ್ಯಾಬೊರೇಟರೀಸ್ ಅನ್ನು ಸ್ಥಾಪಿಸಲಾಯಿತು.

ಕಹುತಾ ಪ್ರಾಜೆಕ್ಟ್ ನ ನೆಲೆಯನ್ನು ಅಧಿಕೃತವಾಗಿ ಪ್ರಾಜೆಕ್ಟ್ – 706 ಎಂದೂ ಕರೆಯಲಾಗುತ್ತದೆ. ಆದರೆ ಇಲ್ಲಿ ಇಡೀ ವಿಶ್ವವನ್ನೇ ನುಂಗಿಹಾಕಲಿರುವ ಘಟನೆಯೊಂದು ನಡೆಯಲಿದೆ ಎಂಬ ವಿಷಯವನ್ನು RAW ಸಂಸ್ಥೆ ರಹಸ್ಯವಾಗಿ ಕಲೆಹಾಕಿತ್ತು. ಅದೇ ಪಾಕಿಸ್ತಾನದ ಮೊದಲ ಪರಮಾಣು ಬಾಂಬನ್ನು ಅಭಿವೃದ್ಧಿಪಡಿಸುವ ಯೋಜನೆ.

ಈ ಕೆಲಸ 1972 ರಿಂದ 1983 ರವರೆಗೆ ಗುಪ್ತವಾಗಿ ನಡೆಯುತ್ತಿತ್ತು. ಪಾಕಿಸ್ತಾನದ ಪರಮಾಣು ರಿಯಾಕ್ಟರನ್ನೇ ನಾಶಪಡಿಸಬೇಕೆಂಬ ಉದ್ದೇಶದಿಂದ ಭಾರತದ RAW ಸಂಸ್ಥೆ ಆಪರೇಷನ್ ಕಹುತಾವನ್ನು ಕೈಗೊಂಡಿತ್ತು.

ಆಪರೇಷನ್ ಕಹುತಾ ಎಂದರೇನು ಗೊತ್ತೇ?

1965 ರ ಪಾಕ್ ಯುದ್ಧದ ನಂತರ RAW ಎನ್ನುವ ಭಾರತದ ಗುಪ್ತಚರ ಸಂಸ್ಥೆಯೊಂದು ಆರಂಭಗೊಂಡಿತ್ತು. ಈ ಸಂಸ್ಥೆಗೆ ಪಾಕಿಸ್ತಾನ 1977 ರಲ್ಲಿ ರಹಸ್ಯವಾಗಿ ಪರಮಾಣು ರಿಯಾಕ್ಟರ್ ಆರಂಭಿಸುವುದನ್ನು ಆರಂಭಿಸಿತ್ತು. ಈ ಬಗ್ಗೆ ದೃಢೀಕರಿಸಿದ RAW ಅದನ್ನು ಪತ್ತೆಹಚ್ಚಿ ನಾಶಪಡಿಸಬೇಕೆಂಬ ಉದ್ದೇಶ ಹೊಂದಿತ್ತು.

ಈ ಕಾರ್ಯಾಚರಣೆಗೆ ಇಸ್ರೇಲ್‍ನ ಖ್ಯಾತಿವೆತ್ತ ಗುಪ್ತಚರ ಸಂಸ್ಥೆ ‘ಮೊಸಾದ್’‍ನ ನೆರವನ್ನೂ ಕೂಡಾ ಕೋರಲಾಯಿತು. ಅದರಂತೆ ಮೊಸಾದ್ ಕೂಡಾ ಕಾರ್ಯಾಚರಣೆಗೆ RAW ಗೆ ನೆರವಾಗಿದೆ ಎಂದು ಹೇಳಲಾಗಿದೆ.

ಕಾಬೊಯ್ ಎಂದೇ ಖ್ಯಾತರಾದ ಆರ್.ಎನ್. ಕಾವೊ ಅವರು RAW ದಲ್ಲಿ ಒಂದು ದಶಕಗಳ ಸೇವೆ ಸಲ್ಲಿಸಿದ್ದರಲ್ಲದೆ RAW ದ ಜಾಲವನ್ನು ಪಾಕಿಸ್ತಾನದಲ್ಲೂ ವಿಸ್ತರಿಸುವಲ್ಲಿ ಮಹತ್ವದ ಕೆಲಸ ಮಾಡಿದ್ದರು.

ಪಾಕಿಸ್ತಾನದಲ್ಲಿರುವ RAW ದ ಕಾರ್ಯಕರ್ತರು ಸಂಭವನೀಯ ಪರಮಾಣು ಬಾಂಬ್ ತಯಾರಿಕೆಯ ರಹಸ್ಯ ವಿಚಾರಗಳನ್ನು ಭಾರತಕ್ಕೆ ಒದಗಿಸಿದ್ದರು. ಇನ್ನೇನು ಪಾಕಿಸ್ತಾನದ ಪರಮಾಣು ಸ್ಥಾವರವನ್ನು ದಾಳಿ ಮಾಡಬೇಕೆಂದು RAW ಏಜೆಂಟರು ತಯಾರಾಗಿದ್ದರು. ಆದರೆ ಆ ಒಬ್ಬ ವ್ಯಕ್ತಿ ದೇಶಕ್ಕೆ ದ್ರೋಹ ಬಗೆದರು.

ಅವರೇ ಆಗಿನ ಭಾರತದ ಪ್ರಧಾನಿ ಮೊರಾರ್ಜಿ ದೇಸಾಯಿ.

ಅಂದಿನ ರಾಜಕಾರಣಿಗಳಿಗೆ ದೇಶಭಕ್ತ ಗುಪ್ತಚರ ಸಂಸ್ಥೆಗಳಾದ IB ಮತ್ತು RAW ಬಗ್ಗೆ ನಂಬಿಕೆ ಅಷ್ಟೊಂದು ಇರಲಿಲ್ಲ. ಅದಕ್ಕಾಗಿ ಮೊರಾರ್ಜಿ ಬಜೆಟ್‍ನಲ್ಲಿ ಇಡುತ್ತಿದ್ದ RAW ಮೊತ್ತವನ್ನು 40% ರಿಂದ 30% ಕ್ಕೆ ಇಳಿಸಿದರು.

ಈ ಕ್ರಮದಿಂದ RAW ದ ಸ್ಥಾಪಕ ಆರ್.ಎನ್.ಕಾವೋ ಅವರು ರಾಜೀನಾಮೆ ಸಲ್ಲಿಸಿದರು. ಇದು ಅವರ ಆದರ್ಶ ವ್ಯಕ್ತಿತ್ವ ಸೇವಾ ಮನೋಭಾವಕ್ಕೆ ಅಪಾರ ನೋವು ತಂದಿತ್ತು. ಆದರೆ ಇದಾದ ಬಳಿಕ RAW ವನ್ನು ದೇಸಾಯಿ ನೋಡಿಕೊಂಡರು. ನಂತರದಲ್ಲಿ ನಾಯರ್ ವಹಿಸಿಕೊಂಡರು.

ಕಾರಣ ಎರಡು!!

1987 ರಲ್ಲಿ, ಭಾರತವು ರತ್ನವನ್ನು ಪಾಕಿಸ್ತಾನದ ಖಾನ್ ಅಬ್ದುಲ್ ಘಫಾರ್ ಖಾನ್ ಅವರನ್ನ ನೀಡಲಾಯಿತು, ಇವರನ್ನ ‘ಗಡಿನಾಡ ಗಾಂಧಿ’ ಎಂದು ಕರೆಲಾಗುತ್ತದೆ, ಈ ಕಾರಣಕ್ಕೆ ಮೊರಾರ್ಜಿ ದೇಸಾಯಿ ಅವರನ್ನ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ನಿಶಾನ್-ಇ-ಪಾಕಿಸ್ತಾನ 1990 ರಲ್ಲಿ ನೀಡಲಾಯಿತು. ಅದಕ್ಕಾಗಿ ಪಾಕಿಸ್ತಾನ ಪರಸ್ಪರ ಪ್ರಶಸ್ತಿಗಳು ಹಂಚಿಕೊಂಡಿದೆ ಎಂದೂ ಹೇಳಲಾಗುತ್ತೆ.

ಅದೇನೇ ಇರಲಿ ಒಂದು ದೇಶಕ್ಕೆ ದ್ರೋಹ ಮಾಡಿ ಪ್ರಶಸ್ತಿ ಪಡೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವಲೋಕನ ಮಾಡಿಕೊಳ್ಳಬೇಕುಷ್ಟೇ

Post Author: Ravi Yadav