ಪ್ರಪಂಚದ ಅತ್ಯಂತ ಪ್ರಬಲ ಬೇಹುಗಾರಿಕಾ ಸಂಸ್ಥೆಯಾದ ಭಾರತದ RAW ಸಂಸ್ಥೆಯ ಬಗ್ಗೆ ನಿಮಿಗೆಷ್ಟು ಗೊತ್ತು??

ಪ್ರಪಂಚದ ಅತ್ಯಂತ ಪ್ರಬಲ ಬೇಹುಗಾರಿಕಾ ಸಂಸ್ಥೆಯಾದ ಭಾರತದ RAW ಸಂಸ್ಥೆಯ ಬಗ್ಗೆ ನಿಮಿಗೆಷ್ಟು ಗೊತ್ತು??

0

ಹೌದು ಅದು ಅಮೆರಿಕಾ, ರಶ್ಯಾದ ಮುಂತಾದ ಬಲಿಷ್ಠ ರಾಷ್ಟ್ರಗಳ ಉನ್ನತ ಬೇಹುಗಾರಿಕ ಸಂಸ್ಥೆಯನ್ನು ಮೀರಿಸುವ ಅತ್ಯಂತ ಪ್ರಬಲ ಹಾಗೂ ಅಪಾಯಕಾರಿ ಬೇಹುಗಾರಿಕ ಸಂಸ್ಥೆ. 1960ರ ದಶಕದಲ್ಲಿ ಭಾರತದ ಬೇಹುಗಾರಿಕ ಸಂಸ್ಥೆಯಾದ IB ಸಂಸ್ಥೆಯು ವಿಫಲವಾದ ಕಾರಣ 1968 ಸೆಪ್ಟೆಂಬರ್ 21 ರಂದು ಅತ್ಯಂತ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಒಂದು ಸಂಸ್ಥೆಯನ್ನು ರಚಿಸಲಾಯಿತು. ಅದೇ ಪ್ರಸಿದ್ಧ RAW ಸಂಸ್ಥೆ (reesearch and analysis wing). ವಿರೋಧಿಗಳ ಗುಪ್ತವಿಚಾರಗಳನ್ನು ಕಲೆಹಾಕಿ ಸಂಭಾವಿತ ದಾಳಿಯನ್ನು ತಡೆಯುವುದು ಹಾಗೂ ವಿರೋಧಿಗಳ ವಿರುದ್ಧ ಕೂಟನೀತಿಯ ರಣತಂತ್ರ ಹೆಣೆಯುದು ಇದರ ಪ್ರಮುಖ ಜವಾಬ್ದಾರಿ. ಈ ಸಂಸ್ಥೆ ನಡೆಸಿದ ಪ್ರಮುಖ ಭದ್ರತಾ ಆಪರೇಷನ್ಗಳು ಇಂತಿವೆ….

ಆಪರೇಷನ್ ಗಂಗಾ ಪ್ಲೇನ್!
1971ರ ಅವಧಿಯಲ್ಲಿ ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದ ಸೇನೆ ಅಲ್-ಫತೇ ಎನ್ನುವ ಉಗ್ರ ಗುಂಪೊಂದನ್ನು ರಚಿಸಿ ಅವರನ್ನು ತರಬೇತಿಗೊಳಿಸುತ್ತಿತ್ತು. ಭಾರತದ ವಿಮಾನವನ್ನು ಅಪಹರಿಸಬೇಕು ಎಂಬುದು ಆ ಗುಂಪಿನ ಮುಖ್ಯ ಉದ್ದೇಶವಾಗಿತ್ತು. ಅದರಲ್ಲೂ ತತ್ಕಾಲದ ಪ್ರಧಾನಮಂತ್ರಿಯಾದ ಇಂದಿರಾಗಾಂಧಿಯ ಮಗ ಹಾಗೂ ವೃತ್ತಿಯಲ್ಲಿ ಪೈಲೇಟಾದ ಸಂಜಯ್ ಗಾಂಧಿಯನ್ನು ಅಪಹರಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಹಾಶಿಮ್ ಖುರೇಶಿ ಎನ್ನುವ ವ್ಯಕ್ತಿಯನ್ನು ಅದು ಭಾರತಕ್ಕೆ ಗುಪ್ತವಾಗಿ ಕಳುಹಿಸಿತ್ತು.

ಈ ವಿಷಯ ತಿಳಿದ RAW ಸಂಸ್ಥೆ ಹಾಶಿಮ್ ಖುರೇಷಿಯನ್ನು ಹಿಡಿದು ಅವನ ಕೈಯಲ್ಲಿ ನಕಲಿ ಗನ್ ಮತ್ತು ಗ್ರೇನೆಟ್ ನೀಡಿ ವಿಮಾನವನ್ನು ಅಪಹರಿಸಿ ಲಾಹೋರಿಗೆ ತೆಗೆದುಕೊಂಡು ಹೋಗುವಂತೆ ನಾಟಕ ಮಾಡಲು ಹೇಳಿತು, ಅದರಂತೆ ನಡೆಯಿತು ಕೂಡ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯವಾಗಿ ಹಾಗೂ ತಂತ್ರದ ಕೂಟನೀತಿಯಿಂದ ಪಾಕಿಸ್ತಾನವನ್ನು ಕಟ್ಟಿಹಾಹಿ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಭಾರತದ ಆಕಾಶದಲ್ಲಿ ವಿಮಾನ ಹಾರಾಟವನ್ನು ಭಾರತ ಈ ನೆಪಹೇಳಿ ಪೂರ್ಣಪ್ರಮಾಣದಲ್ಲಿ ನಿಷೇಧಿಸಿತು. ಇದರ ಪೂರ್ಣ ಶ್ರೇಯಸ್ಸು RAW ಸಂಸ್ಥೆಗೆ ಸಲ್ಲುತ್ತದೆ.

ಆಪರೇಷನ್ ಸ್ಮೈಲಿಂಗ್ ಬುದ್ದಾ!
ಮೇ 8 1974 ರಂದು ಮೊದಲಬಾರಿಗೆ ಭಾರತ ರಾಜಸ್ಥಾನದ ಪೊಕ್ರಾನ್ ಎಂಬ ಸ್ಥಳದಲ್ಲಿ ಪ್ರಬಲ ಅಣುಬಾಂಬ್ ಪರೀಕ್ಷೆ ನಡೆಸುವುದು ಎಂದು ತೀರ್ಮಾನಿಸಲಾಯಿತು. ಈ ವಿಷಯವನ್ನು ಅತ್ಯಂತ ಗುಪ್ತವಾಗಿಡುವ ಜವಾಬ್ದಾರಿಯನ್ನು RAW ಸಂಸ್ಥೆಗೆ ನೀಡಲಾಯಿತು. ಕೊಟ್ಟ ಕೆಲಸವನ್ನು RAW ಅತ್ಯಂತ ಕಟ್ಟುನಿಟ್ಟಾಗಿ ಗುಪ್ತವಾಗಿ ಮಾಡಿ ಮುಗಿಸಿತು.

ಈ ವಿಷಯ ಅಮೆರಿಕಾದ ಹಾಗೂ ಚೀನಾದ ಪ್ರಬಲ ಬೇಹುಗಾರಿಕಾ ಸಂಸ್ಥೆಗಳ ಕೈಗೆ ಸಿಗದಂತೆ RAW ಮುಚ್ಚಿಟ್ಟಿತ್ತು. ಇದರ ನಂತರವೇ ಈ ರೀತಿಯ ಗುಪ್ತ ಪರೀಕ್ಷೆಯನ್ನು ತಡೆಯುದ್ದಕೋಸ್ಕರ ವಿಶ್ವಸಂಸ್ಥೆ NSG (nuclear supplies group)ನ್ನು ಸ್ಪಾಸಿಸಿದ್ದು.

ಆಪರೇಷನ್ ಕಹುತಾ ಬ್ಲೂಪಾರ್ಟಿ!
1984ರಲ್ಲಿ ಪಾಕಿಸ್ತಾನದ ಕಹುತಾದಲ್ಲಿರುವ ಡಾ. A Q ಖಾನ್ ರಿಸರ್ಚ್ ಲಾಬೋರೇಟರಿಯಲ್ಲಿ ಪ್ರಬಲವಾದ ಯುರೇನಿಯಮನ್ನು ಪಾಕಿಸ್ತಾನ ಕದ್ದುಕದ್ದು ತಯಾರು ಮಾಡುತ್ತಿದೆ! ಎಂದು
ಬರೀ ಅಲ್ಲಿನ ನೌಕರರ ಕೂದಲಿನ DNA ಸಾಂಪಲ್ ಪರೀಕ್ಷೆಯ ಮೂಲಕ ಕಂಡುಹುಡುಕಿದ ಕೀರ್ತಿ RAW ಸಂಸ್ಥೆಯದ್ದು.

ಆದರೆ ಆಗಿನ ಭಾರತದ ಪ್ರಧಾನಮಂತ್ರಿ ಮುರಾರ್ಜಿ ದೇಸಾಯಿ “ಕಹುತಾದಲ್ಲಿ ಏನೆಲ್ಲಾ ನಡೆಯುತಿದೆ! ಎಲ್ಲಾ ಗೊತ್ತಾಯಿತು?” ಎಂದು ಪಾಕಿಸ್ತಾನದ ಜಿಯಾಹುಲ್ ಹಕ್ಕಿಗೆ ಹೇಳಿದರು. ತಕ್ಷಣವೇ ಪಾಕಿಸ್ತಾನ ಕಹುತಾದಲ್ಲಿರುವ RAW ಸಂಸ್ಥೆಯ ಗೂಢಾಚಾರನ್ನು ಓಡಿಸಿತು. ಇದರಿಂದ RAW ಸಂಸ್ಥೆಗೆ ಸ್ವಲ್ಪ ಹಿನ್ನೆಡೆಯಾಗಿತು.

ಆಪರೇಷನ್ ಮೇಘದೂತ
ಲಂಡನಿನ ಪ್ರತಿಷ್ಠಿತ ಕಂಪನಿಯೊಂದು ಚಳಿಯ ಸಿಯಾಚಿನ್ ಪ್ರದೇಶದಲ್ಲಿ ದೇಶರಕ್ಷಣೆ ಮಾಡುವ ಭಾರತೀಯ ಸೈನಿಕರಿಗೆ ಬೇಕಾದ ಜಾಕೆಟ್ ಕಾಲುಚೀಲ, ಕವರ್ ಮುಂತಾದ ವಸ್ತುಗಳನ್ನು ರಫ್ತು ಮಾಡುತ್ತಿತ್ತು.

ಇದೆ ವಸ್ತುಗಳನ್ನು ಪಾಕಿಸ್ತಾನ ಕೂಡ ಖರೀದಿ ಮಾಡುತ್ತಿದೆ ಮತ್ತು ಭಾರತದ ಸಿಯಾಚಿನ್ ಪ್ರದೇಶದಲ್ಲಿ ಯುದ್ಧಕ್ಕೆ ತಯಾರಿ ಮಾಡುತ್ತಿದೆ ಎಂದು ಭಾರತೀಯ ಸೈನ್ಯಕ್ಕೆ ಮಾಹಿತಿ ನೀಡಿದ ಕೀರ್ತಿ RAW ಸಂಸ್ಥೆಯದ್ದು. ಈ ಮೂಲಕ ಭಾರತ ಕಾರ್ಗಿಲ್ ಯುದ್ಧಕ್ಕೆ ತಯಾರಿ ಮಾಡಿ ಯುದ್ಧಗೆದ್ದಿತು. ಇದರ ಪೂರ್ಣ ಶ್ರೇಯಸ್ಸು RAw ಸಂಸ್ಥೆಗೆ ಸಲ್ಲುತ್ತದೆ.

ಆಪರೇಷನ್ ಚಾಣಕ್ಯ.
ಚಾಣಕ್ಯ ನೀತಿಯ ಮೂಲಕ ವಿರೋಧಿಗಳನ್ನು ಹಡೆಮುರಿಕಟ್ಟುವ ರಣತಂಟ್ರವೊಂದನ್ನು ಇದು ಹೆಣೆದಿತ್ತು. ಹಿಜಬುಲ್ ಮುಜಾಯಿದ್ದೀನ್ ಎಂಬ ಬಯೋತ್ಪದಕ ಸಂಘಟನೆಯನ್ನು ಹುಳಿಹಿಂಡಿ ಇಬ್ಬಾಗ ಮಾಡಿ, ಅವರೊಳಗೆ ಕಚ್ಚಾಡುವಂತೆ ಮಾಡಿದ್ದು ಇದೆ ರಾ ಸಂಸ್ಥೆ. ISIs ಸಂಬಂದಿಸಿದಂತೆ ಪ್ರೊ ಇಂಡಿಯಾ ಸಂಘಟನೆಯನ್ನು ಕಾಶ್ಮೀರಾದಲ್ಲಿ ಆರಂಭಿಸಿದ ಕೀರ್ತಿ ಇದರದ್ದು.

ಇದಲ್ಲದೆ ಸಂಸತ್ತಿನ ಮೇಲಿನ ದಾಳಿ, ಮುಂಬೈ ಸೀರಿಯಲ್ ಬ್ಲಾಸ್ಟ್, ಬೆಂಗಳೂರು,ಹೈದರಾಬಾದ್ ಮುಂತಾದ ಕಡೆ ಬಾಂಬ್ ಸ್ಫೋಟವಾಗುವ ಬಗ್ಗೆ ಇದು ಸರ್ಕಾರಕ್ಕೆ ಒಂದು ವಾರಕ್ಕೂ ಮೊದಲೇ ಮುನ್ಸೂಚನೆ ನೀಡಿತ್ತು. 26/11 ರಂದು ತಾಜ್ ಹೋಟೆಲಿನ ಮೇಲೆ ನಡೆದ ದಾಳಿಯ ಬಗ್ಗೆಯೂ ಆಗಿನ ಮನಮೋಹನ್ ಸಿಂಗ್ ಸರ್ಕಾರಕ್ಕೆ ಇದು ಮಾಹಿತಿ ರವಾನಿಸಿತ್ತು ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಆ ಕಾರಣದಿಂದಾಗಿ ದೊಡ್ಡ ಅನಾಹುತವೊಂದು ನಡೆದು ಹೋಯಿತು.

ಬಿಹಾರದ ಗಾಂಧಿ ಮೈದಾನದಲ್ಲಿ ನಡೆದ ಮೋದಿಯ ಹುಂಕಾರ್ ರ್ಯಾಲಿಯಲ್ಲಿ ಸ್ಪೋಟವಾಗುವ ಬಗ್ಗೆಯೂ ನಿಖರವಾದ ಮಾಹಿತಿ ಇದು ರವಾನಿಸಿತ್ತು. ಜೊತೆಗೆ ಅಮೆರಿಕಾದ 9/11 ದಾಳಿಗೆ ಸಂಬಂದಿಸಿದ ಬಯೋತ್ಪದಕನನ್ನು ಹಿಡಿಯಲು ಸಹಾಯ ಮಾಡಿದ ಪ್ರಪಂಚದ ಏಕೈಕ ಬೇಹುಗಾರಿಕ ಸಂಸ್ಥೆ ನಮ್ಮ ಹೆಮ್ಮೆಯ RaW ಸಂಸ್ಥೆ. ಇದರ ಟ್ಯಾಗ್ ಲೈನ್ ಧರ್ಮೋ ರಕ್ಷತಿ ರಕ್ಷಿತಾಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ನಾವು ರಕ್ಷಿಸುತ್ತೇವೆ ಎಂದು.

 

ಇಂದು ಜಗತ್ತಿನ ಪ್ರಬಲ ರಾಷ್ಟ್ರಗಳಿಗೆ ಸೆಡ್ಡುಹೊಡೆಯುತಿದೆ ನಮ್ಮ ಹೆಮ್ಮೆಯ ಈ ಸಂಸ್ಥೆ! ಇದೀನ್ನೂ ಉತ್ತುಂಗದ ಶಿಖರವಾಗಿ ಬೆಳೆಯಬೇಕು ಎಂಬುದು ಕೋಟಿಕೋಟಿ ಭಾರತೀಯರ ಮನದಾಳದ ಆಶಯ….

ನನ್ನ ಬರಹ ಇಷ್ಟವಾದರೆ ದಯವಿಟ್ಟು ಶೇರ್ ಮಾಡಿ.

✍ ಸಚಿನ್ ಜೈನ್ ಹಳೆಯೂರ್