ನನ್ನ ಕೊರಳಿಗೆ ಕರಿಮಣಿ ಬಿದ್ದ ದಿನವೇ ನನ್ನವರು ದೇಶಕೋಸ್ಕರ ಹೆಣವಾದರು, ಮದುವೆಯ ವಾರ್ಷಿಕೋತ್ಸವದ ದಿನವೇ ಹುತಾತ್ಮನಾದ ಧೀರ ಹಾಗೂ ಧೀಮಂತ ಯೋಧನ ವೀರ ಯೋಶೋಗಾಥೆ!!

ಅದು ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮುತ್ತಿಟ್ಟ ಪುಣ್ಯ ಭೂಮಿ ಮಹಾರಾಷ್ಟ್ರ. ಆ ಮಹಾರಾಷ್ಟ್ರದ ಪಹಾನಿ ತೆಹಸೀಲ್ ತಾಲೂಕಿನ ಜುನೋನಾ ಎಂಬ ಸಣ್ಣದೊಂದು ಗ್ರಾಮ. ಅಲ್ಲಿ ಅಂಬಡಸ್ ಮೋಹರ್ಕರ್ ಮತ್ತು ಸುಧಾ ಮೋಹರ್ಕರ್ ಎಂಬ ಇಬ್ಬರು ಶಿಕ್ಷಕ ದಂಪತಿಗಳಿಗೆ ಜನಿಸಿದ ಮಗನೇ ಪ್ರಫುಲ್ ಕುಮಾರ್. ಹುಟ್ಟಿದ್ದಾಗ್ಲೇ ದುಂಡು ದುಂಡಾಗಿ ಮುದ್ದಾಗಿದ್ದ ಈ ಮಗುವೆಂದರೇ ಆಸುಪಾಸಿನ ಜನರಿಗೆಲ್ಲಾ ಅಚ್ಚುಮೆಚ್ಚು. ಪ್ರಫುಲ್ ಕುಮಾರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪಕ್ಕದ ಮನೋರಾ ಹಳ್ಳಿಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ವೈನಗ ಶಿಕ್ಷಣ ಸಂಸ್ಥೆ ಹಾಗೂ ಸೋಮಲ್ವಾರ್ ಪ್ರೌಢಶಾಲೆ ನಾಗ್ಪುರದಲ್ಲಿ ಮುಗಿಸಿದ. ವಿದ್ಯಾರ್ಥಿ ಜೀವನದಲ್ಲಿ ಚುರುಕಾಗಿದ್ದ ಪ್ರಫುಲ್ ಓದು ಅದರಲ್ಲೂ ಆಟೋಟ ವಿಷಯದಲ್ಲಿ ಎರಡು ಬಾರಿ ರಾಜ್ಯಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದ. ಶಿಕ್ಷಕರಿಗಂತೂ ಈತ ಅಚ್ಚುಮೆಚ್ಚು. ಅದರಲ್ಲೂ ಶಾಲೆಯ ಗಂಟೆ ಭಾರಿಸುವ ಈಶ್ವರ್ ಎಂದರೆ ಪ್ರಫುಲಿಗೆ ಪಂಚಪ್ರಾಣ. ತನ್ನ ಮದ್ಯಾಹ್ನದ ಟಿಫಿನಿನಲ್ಲಿ ತಂದಿದ್ದ ತಿಂಡಿಯನ್ನು ಆತ ಆ ಬಡ ಈಶ್ವರಿಗೂ ಹಂಚುತ್ತಿದ್ದ. ತನ್ನ ಮಾಧ್ಯಮಿಕ ಶಿಕ್ಷಣದ ನಂತರ ಪ್ರಫುಲ್ ನಾಗಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆರಿಟ್ ಆಧಾರದಲ್ಲಿ ವ್ಯಾಸಂಗ ಮಾಡಲು ಅವಕಾಶ ಗಿಟ್ಟಿಸಿಕೊಂಡನಲ್ಲದೆ ಶುಲ್ಕ ರಿಯಾಯಿತಿಯನ್ನೂ ಪಡೆದ.

FB

ಆದರೆ ನಾನು ಸೈನಿಕನಾಗಬೇಕು, ನಾನು ಕೂಡ ದೇಶ ಕಾಯಬೇಕು ಎಂದು ಅರ್ಧದಲ್ಲೇ ಇಂಜಿನಿಯರಿಂಗ್ ಪದವಿಯನ್ನು ತಂದೆಯ ವಿರೋಧಕಟ್ಟಿಕೊಂಡೇ ತ್ಯಜಿಸಿದ.
TES ಮೂಲಕ ಸೇನೆಯ ತಾಂತ್ರಿಕ ಕಾಲೇಜೊಂದರಲ್ಲಿ ವ್ಯಾಸಂಗ ಮಾಡಲು ಸೇರಿಕೊಂಡ. (Technical Entry Scheme).

ನಂತರದಲ್ಲಿ OTA (Officers Training Academy ) ನಡೆಸಿದ ಪರೀಕ್ಷೆಯೊಂದರಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿ, ಧೈರ್ಯಕ್ಕೆ ಪರಾಕ್ರಮಕ್ಕೆ ಹೆಸರುವಾಸಿಯಾದ ಸೇನೆಯ ಪ್ರತಿಷ್ಠಿತ ಸಿಖ್ ರೇಜಿಮೆಂಟನ್ನು ಸೇರಿಕೊಂಡ. ನಂತರದಲ್ಲಿ ತನ್ನ ಘನತೆಗೆ ಪರಾಕ್ರಮಕ್ಕೆ ತಕ್ಕಂತೆ ಲೆಫ್ಟಿನೆಂಟ್ ಮತ್ತು ಮೇಜರ್ ಹುದ್ದೆಯನ್ನು ಅಲಂಕರಿಸಿದನು. 2015 ರಲ್ಲಿ ಪಕ್ಕದೋರಿನ ಅಬೋಲಿ ಯೆನ್ನುವ ಹುಡುಗಿಯೊಂದಿಗೆ ಮೇಜರ್ ಅಗ್ನಿಸಾಕ್ಷಿಯಾಗಿ ಸಕಲ ಕುಟುಂಬ ಬಂಧುಮಿತ್ರರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮದುವೆಯ ಸುಮಾರು ಒಂದು ತಿಂಗಳ ಬಳಿಕ ಹೆಂಡತಿಯ ಕಣ್ಣೀರಿನ ಬಿಳ್ಕೊಡುಗೆಯೊಂದಿಗೆ ಪುನಃ ಕರ್ತವ್ಯಕ್ಕೆ ಹಾಜರಾದರು ಮೇಜರ್ ಪ್ರಫುಲ್ ಕುಮಾರ್.

ಅದು ಮೇಜರ್ ಪಫುಲ್ ಕುಮಾರ್ ಕಾಶ್ಮೀರದ ಅಂತರಾಷ್ಟ್ರೀಯ ಸಿಮಾರೇಖೆಯ(LOC) ಪಕ್ಕದ ಕೂಪವಾರ ಜಿಲ್ಲೆಯ ಕೆರಿ ಸೆಕ್ಟರಿನಲ್ಲಿ ಕಾರ್ಯನಿರತರಾಗಿದ್ದ ಸಮಯ. ಪಾಕಿಸ್ತಾನದಿಂದ ನಿರಂತರವಾಗಿ ಗುಂಡಿನ ದಾಳಿಯಾಗುವ ಅತ್ಯಂತ ಕಠಿಣವಾದ ಕ್ಲಿಷ್ಟಕರವಾದ ಜಾಗ ಅದಾಗಿತ್ತು. ಎಂತಹ ಪರಿಸ್ಥಿತಿಯಲ್ಲೂ ಪಾಕಿಸ್ತಾನದ ನೀಚ ಸೈನಿಕರ ಗುಂಡಿಗೆ ಬಲವಾದ ಪ್ರತ್ಯುತ್ತರ ನೀಡುವ ಸೈನಿಕರ ತಂಡವೊಂದನ್ನು ಪಫುಲ್ ಕುಮಾರ್ ತರಬೇತಿಗೊಳಿಸಿ ಸಿದ್ಧಪಡಿಸಿದ್ದರು. ಅಲ್ಲದೆ ಅದಾಗಲೇ ಐದಾರು ಬಾರಿ ಪಾಕಿಸ್ತಾನದ ಕಡೆಗೆ ತೀವ್ರವಾಗಿ ದಾಳಿ ನಡೆಸಿ ಅವರ ಸೊಕ್ಕುಮುರಿದ ಶ್ರೇಯಸ್ಸು ಪ್ರಫುಲ್ ಕುಮಾರ್ ಮತ್ತು ಅವರ ಸಹೋದ್ಯೋಗಿಗಳದಾಗಿತ್ತು.

ಅದು ಡಿಸೆಂಬರ್ 23 2017 ಎಂದಿನಂತೆ ಮದ್ಯಾಹ್ನ 12 ಗಂಟೆಗಿಂದ ಸುಮಾರು 3 ಗಂಟೆಯ ಸಮಯದಲ್ಲಿ ಪ್ರಫುಲ್ ಕುಮಾರ್ ಹಾಗೂ ಅವರ ತಂಡ ಕೆರಿ ಸೆಕ್ಟರಿನ ಭಾರತ್ ಗಲ್ಲಾ ಎನ್ನುವ ಸ್ಥಳದಲ್ಲಿ ಪೆಟ್ರೋಲಿಂಗಿನಲ್ಲಿ ತೊಡಗಿದ್ದಾಗ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತವಾದ ಗುಂಡಿನ ದಾಳಿಯಾಗಿದೆ. ಗನ್ ಎತ್ತಲು ಸಮಯವೇ ಸಿಗದ ಮೇಜರ್ ಪರಪುಲ್ ಕುಮಾರ್ ಹಾಗೂ ಅವರ ಸಹೋದ್ಯೋಗಿ ಮಿತ್ರರಾದ ಲ್ಯಾನ್ಸ್ ನಾಯಕ್ ಗುರ್ಮೈಲ್ ಸಿಂಗ್, ಕುಲದೀಪ್ ಸಿಂಗ್ ಹಾಗೂ ಪಾರಗತ್ ಸಿಂಗ್ ಎನ್ನುವವರು ತೀವ್ರವಾಗಿ ಗಾಯಗೊಂಡರು. ವಿಪರೀತವಾದ ರಕ್ತಸ್ರಾವದಿಂದಾಗಿ ಪ್ರಫುಲ್ ಹಾಗೂ ಉಳಿದವರ ಪ್ರಾಣಪಕ್ಷಿ ವಂದೇ ಮಾತರಂ ಘೋಷಣೆ ಕೂಗುತ್ತಾ ಹಾರಿ ಹೊಯ್ತು. ತಾಯಿ ಭಾರತೀಯ ಪಾದಕಮಲಗಳಿಗೆ ಮತ್ತೆ ಸೈನಿಕರ ಬಿಸಿ ಬಿಸಿ ರಕ್ತದ ಅಲೆಗಳು ಬಂದು ಅಪ್ಪಳಿಸಿದವು. ಜೀವನ ಏನೆಂಬುದೇ ತಿಳಿಯದ 32ರ ಹರೆಯದ ಜೀವವೊಂದು ಕನಸುಗಳ ಹೊತ್ತು ಹೆಣವಾಯ್ತು.

ಡಿಸೆಂಬರ್ 25 ಪ್ರಫುಲ್ ಕುಮಾರಿನ ಮದುವೆಯ ಎರಡನೇ ವಾರ್ಷೋಕೋತ್ಸವದ ದಿನ. ಪುಣೆಯಲ್ಲಿ ವಾರ್ಷಿಕೋತ್ಸವದ ಸಕಲ ತಯಾರಿಯಲ್ಲಿ ಅವರ ಧರ್ಮಪತ್ನಿ ನಿರತರಾಗಿದ್ದರು. ಅವರ ಈ ಖುಷಿಗೆ ಅದ್ಯಾರ ಕಣ್ಣುಬಿತ್ತೋ ಏನೋ? ಒಮ್ಮೆದೊಮ್ಮೆಲೆ ಅವರ ಸಂತಸ ಮಾಯವಾಗಿ ಮನೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಯಿತು. ಆವರ ಪತ್ನಿ ಗಂಡ ನೂರು ಕಾಲ ಬದುಕಲಿ ಎಂದು ಕರಿಮನಿಗೆ ಅರಶಿನ ಕುಂಕುಮ ಹಚ್ಚಬೇಕಾದ ದಿನ ಹಣೆಯ ಕುಂಕುಮ ಅಳಿಸಬೇಕಾಯಿತು. ಕೈ ತುಂಬಾ ಬಳೆ ಹಾಕಬೇಕಾದವತ್ತು ಇದ್ದಬಳೆ ಪುಡಿಪುಡಿಮಾಡಿ ತೆಗಿಯಬೇಕಾಯಿತು. ಚಂದವಾಗಿ ಹೂವು ಮುಡಿದುಕೊಂಡು ರೇಷ್ಮೆ ಸೀರೆ ಉಟ್ಟುಕೊಳ್ಳುವ ದಿನ ಬಿಳಿಸೀರೆ ಉಟ್ಟುಕೊಳ್ಳಬೇಕಾಯಿತು. ಅದಾಗಲೇ ರಕ್ತದಲ್ಲಿ ಮುಳುಗಿದ್ದ ಮೇಜರ್ ಪ್ರಫುಲ್ ಕುಮಾರಿನ ದೇಹವನ್ನು ತ್ರಿವರ್ಣ ಧ್ವಜದಲ್ಲಿಸುತ್ತಿ ಮಹಾರಾಷ್ಟ್ರ ದ ನಾಗಪುರ ವಿಮಾನ ನಿಲ್ದಾಣಕ್ಕೆ ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ತರಲಾಯಿತು. ಅಲ್ಲಿಂದ ಆಂಬುಲೆನ್ಸ್ ಮೂಲಕ ಸ್ವಾಗ್ರಾಮಕ್ಕೆ ಸಾಗಿಸಲಾಯಿತು. ಜೊತೆಗೆ ಹುತಾತ್ಮ ಯೋಧನ ಪತ್ನಿ ಅಬೋಳಿಯೂ ಇದ್ದರು. “ಒಂದು ವರ್ಷಬಿಟ್ಟು ಮತ್ತೆ ಬರುತ್ತೇನಮ್ಮ ಎಂದು ಹೇಳಿ ಹೋಗಿದ್ದ ಮಗ ಬೇಗ ಬಂದುಬಿಟ್ಟ” ಎಂದು ತನ್ನಮಗನನ್ನು ನೆನೆದು ತಾಯಿ ಬಿಕ್ಕಿಬಿಕ್ಕಿ ಅಳತೊಡಗಿದರು. ತನ್ನ ಮಗನ ಫೋಟೋ ಕೈಯಲ್ಲಿ ಹಿಡಿದು “ನನ್ನ ಮಗ ಮುಂದಿನ ವರ್ಷ ಬರುತ್ತೇನಮ್ಮ ಎಂದಿದ, ಬಹುಶಃ ಆ ಮುಂದಿನ ವರ್ಷ ನಮ್ಮ ಪಾಲಿಗೆ ಬರುವುದೆಲ್ಲವೇನೂ” ಎಂದು ಆ ತಾಯಿ ಮತ್ತೆ ಮತ್ತೆ ತನ್ನ ಮುದ್ದಿನ ಮಗನನ್ನು ನೆನೆದು ಕಣ್ಣೀರು ಹಾಕತೊಡಗುತ್ತಾರೆ.ತನ್ನ ಹುಟ್ಟೂರಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಆ ವೀರಯೋಧ ಪಂಚಭೂತಗಳಲ್ಲಿ ವಿಲೀನವಾದರು.

ಮೇಜರ್ ಪ್ರಫುಲ್ಲರ ತಾಯಿ ತಡೆಯಲಾರದ ಕಣ್ಣೀರಿನ ನಡುವೆ ಹೇಳಿದ ಮಾತಂತೂ ಹೃದಯ ಸ್ಪರ್ಶ “ನನ್ನ ಮಗ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಲು ಇಚ್ಚಿಸುತ್ತಿದ್ದ. ಭಾರತ ಮಾತೆಯ ಸುರಕ್ಷತೆಗಾಗಿ ಹುತಾತ್ಮನಾದ ಆತನ ಅತ್ಯುನ್ನತ ತ್ಯಾಗಕ್ಕೆ ನಾನು ಹೆಮ್ಮೆ ಪಡುತ್ತೇನೆ! ಆದರೆ ನನ್ನ ಕೈಯಲ್ಲಿ ಒಂದು ಮೊಮ್ಮಗೂ ಕೊಡದೆ ನಮ್ಮನ್ನು ಬಿಟ್ಟು ಹೋದನಲ್ಲಾ ಎಂದು ಬೇಜಾರು ಅಷ್ಟೇ”.

ದೇಶಪೂರ್ತಿ ಕ್ರಿಸ್ಮಸ್, ಹೊಸವರ್ಷದ ಗುಂಗಿನಲ್ಲಿ ಪಾರ್ಟಿ ಮಾಡುತಿದ್ದ ಸಮಯದಲ್ಲಿ ರಾಷ್ಟ್ರೀಯತೆಯ, ದೇಶಪ್ರೇಮದ ಪರಾಕಾಷ್ಠೆ ಮೆರೆದು ವಿರೋಧಿಗಳ ಗುಂಡಿಗೆ ಎದೆಯೊಡ್ಡಿ ಪುಣ್ಯಭೂಮಿಗೆ ರಕ್ತದ ಅಭಿಷೇಕ ಮಾಡಿ ಹುತಾತ್ಮನಾದ ಈ ವೀರಯೋಧ ಅಮರ ಅಜಾರಾಮರ. ಆತ ಮತ್ತೆ ರಾಷ್ಟ್ರಭಕ್ತಿಯ ಕಿರಣವಾಗಿ ಹುಟ್ಟಿ ತಾಯಿ ಭಾರತಿಯ ಕೆನ್ನೆಗೆ ಅಪ್ಪಳಿಸಬೇಕೆಂಬುದು ನನ್ನ ಹೃದಯನಂತರಾಳದ ಆಸೆ! ನಿಮ್ಮ ಆಸೆ ಅದೇ ತಾನೇ?

✍ ದೇಶ ಪ್ರೇಮಿ

Post Author: Ravi Yadav