ಅಟಲ್ ಜಿ ಕನಸು ಕಂಡರು!ಮೋದಿ ಅವರ ಕನಸನ್ನು ನನಸು ಮಾಡಹೊರಟಿದ್ದಾರೆ!!!

ಹೌದು ಬಂಧುಗಳೇ ಭಾರತದ ಅಜಾತಾಶತ್ರು ಎನಿಸಿಕೊಂಡ ಶ್ರೇಷ್ಠ ಭಾರತದ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ನವ ಭಾರತದ ನವನವೀನ ತಂತ್ರಜ್ಞಾನದ ಬಗ್ಗೆ ಕನಸು ಕಂಡವರು. ಅದನ್ನು ನನಸು ಮಾಡಬೇಕು ಅಂದುಕೊಂಡಾಗ ಜನರೇ ಅವರಿಗೆ ಮೋಸ ಮಾಡಿ ಬಿಟ್ಟರು. 2004ರಲ್ಲಿ ಸ್ವಾತಂತ್ರ್ಯ  ಭಾರತ ಕಂಡ ಶ್ರೇಷ್ಠ ಪ್ರಧಾನಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಆದರೆ ಈಗ ಅಟಲ್ ಜಿ ಕನಸು ನನಸು ಮಾಡುವ ಒಂದು ನಡೆದಾಡುವ ಮಾಣಿಕ್ಯ  ಭಾರತಕ್ಕೆ ಸಿಕ್ಕಿದೆ. ಅವರೇ ನಮ್ಮ ನೆಚ್ಚಿನ ಭಾರತ ಭಾಗ್ಯವಿಧಾತ ನರೇಂದ್ರಮೋದಿ ಜಿ .

ಅಟಲ್ ಜಿ ಕಂಡ ರೈಲು,ರಸ್ತೆ,ನದಿ ಜೋಡಣೆ ಮುಂತಾದ ಪ್ರಮುಖ ಯೋಜನೆಗಳನ್ನು ಮೋದಿ ಕೈಗೆತ್ತಿಕೊಳ್ಳುತ್ತಿದ್ದಾರೆ. ಅದರಲ್ಲಿ ಪ್ರಮುಖವಾದದು ಪ್ರಪಂಚದ ಅತ್ಯಂತ ಎತ್ತರದ ರಸ್ತೆ ಯೋಜನೆ. ಸಮುದ್ರಮಟ್ಟದಿಂದ ಸುಮಾರು 19300 ಅಡಿ ಎತ್ತರದಲ್ಲಿರುವ  “ಉಮಲಿಂಗಳಾ ಟಾಪ್” ಎನ್ನುವಲ್ಲಿ ಪ್ರಪಂಚವೇ ಬೆರಗಾಗುವಂತೆ ಮಾಡುವ ಅತೀ ಎತ್ತರದ 85km ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಚೀನಾದ ಗಡಿಯಲ್ಲಿರುವ ಈ ರಸ್ತೆ ಚೀನಾಕ್ಕೆ ಸೆಡ್ಡುಹೊಡೆದು ನಿರ್ಮಿಸುತ್ತಿರುವುದಾಗಿದೆ. ಭದ್ರತೆಯ ದೃಷ್ಟಿಯಿಂದ ಪ್ರಮುಖವಾದ ರಸ್ತೆಯಾಗಿದ್ದು, ಚೀನಾದ ವಿರೋಧದ ನಡುವೆಯೂ ರಸ್ತೆ ನಿರ್ಮಾಣ ಆಗುತ್ತಿದೆ. ಚೀನಾ ಮೋದಿಯ ಈ ನಡೆಗೆ ಮೂಕವಿಸ್ಮಿತವಾಗಿದೆ.


ಇನ್ನೊಂದು ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆ. ಕಾಶ್ಮೀರದಲ್ಲಿ ಚೀನಾಬ್ ನದಿಗೆ ಈ ಸೇತುವೆ ನಿರ್ಮಿಸಲಾಗುತ್ತಿದೆ. ನವೆಂಬರ್ 5ರಂದು ಈ ಸೇತುವೆಗೆ 47ಮೀಟರ್ ಉದ್ದದ ಆರ್ಕ್ ಜೋಡಿಸುವ ಕೆಲಸ ಆರಂಭವಾಗಲಿದೆ. 24ಟನ್ ಇರುವ ಈ ಕಬ್ಬಿಣದ ಆರ್ಕನ್ನು ಜೋಡಿಸಲು ಪ್ರಪಂಚದ ಅತ್ಯಂತ ದೊಡ್ಡ ಕೇಬಲ್ ಕ್ರೇನ್ ಸಿದ್ದವವಾಗಿದೆ. ಇದರ ಎತ್ತರ ಸುಮಾರು ಕುತ್ಬ್ ಮಿನಾರ್ ನ ಐದು ಪಟ್ಟು ಇದೆ. ಪ್ಯಾರಿಸ್ ಟವರ್ ನ ಎರಡುಪಟ್ಟು ಇದೆ.ಈ ಸೇತುವೇ ಬಾರಮುಲ್ಲಾ ನಗರವನ್ನು ಉದ್ಯಪುರ್,ಕಟಾರ ರಸ್ತೆಮೂಲಕ ಜಮ್ಮುವನ್ನು ಜೋಡಿಸುತ್ತದೆ. ಈಗ ಬಾರಮುಲ್ಲಾದಿಂದ ಜಮ್ಮುವಿಗೆ 13ಗಂಟೆ ಪ್ರಯಾಣಕ್ಕೆ ಆಗುವ ಸಮಯ ಈ ಸೇತುವೆ ನಿರ್ಮಾಣ ಆದರೆ ಬರಿ 6 ಗಂಟೆ ಸಾಕಾಗುತ್ತದೆ.


ಈ ಸೇತುವೆಯ ಕಾರ್ಯವು 2002ರಲ್ಲಿ ಆರಂಭವಾದರೂ ನಂತರ ಬಂದ ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರ 2008ರಲ್ಲಿ ಅಸುರಕ್ಷತೆ ಕಾರಣ ನೀಡಿ ಯೋಜನೆಯನ್ನು ಸ್ಥಗಿತಗೊಳಿಸಿತು.
ಭಾರಿ ಕಷ್ಟದ ನಿರ್ಮಾಣವಾದರೂ ಸುಮಾರು 1100ಕೋಟಿ ಖರ್ಚುಮಾಡಿ 2019ರ ವೇಳೆಗೆ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸುಮಾರು 356ಮೀಟರ್ ಎತ್ತರದ ಈ ಸೇತುವೆ ಚೀನಾದ ಈಗಿನ ಪ್ರಪಂಚದ ಅತ್ಯಂತ ಎತ್ತರದ (250ಅಡಿ ಎತ್ತರದ) ಸೂಬಾಯ್ ಸೇತುವೆಯ ಹೆಗ್ಗಳಿಕೆಯನ್ನು ಕಸಿದುಕೊಳ್ಳಲಿದೆ. ಇದು ನಮ್ಮ ಹೆಮ್ಮೆ.
ರೈಲು ಅಧಿಕಾರಿಗಳ ಪ್ರಕಾರ ಇದು ಒಂದು ಮಹತ್ವದ ಯೋಜನೆಯಾಗಿದೆ. ಪ್ರವಾಸಿ ತಾಣವಾಗಿಯೂ ಈ ಸ್ಥಳವನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಜಮ್ಮು ಕಾಶ್ಮೀರವನ್ನು ಪ್ರಮುಖ ಆರ್ಥಿಕ ಶಕ್ತಿಯಾಗಿಸಲು ಈ ಸೇತುವೆ ಸಹಾಯ ಮಾಡಲಿದೆ.


ಇದೆಲ್ಲವೂ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಸ್ವಯಂ ಆಸಕ್ತಿಯಿಂದ ಆಗುತ್ತಿರುವುದು. ಜಮ್ಮು ವಿಂದ ಕಾಶ್ಮೀರ ಘಾಟಿಗೆ ಇರುವ 31ಕಿಮೀ ದೂರವನ್ನು ಕಡಿಮೆ ಮಾಡುವುದೇ ಮೋದಿಯ ಉದ್ದೇಶ. ಕಳೆದ ವರ್ಷ 10ಕಿಮೀ ಇರುವ ಬೃಹತ್ ಸುರಂಗಮಾರ್ಗವೊಂದನ್ನು ಉದ್ಘಾಟನೆ ಮಾಡಿದನ್ನು ನಾವಿಲ್ಲಿ ಸ್ಮರಿಸಬಹುದು. ಇದರಲ್ಲಿ ಸುಮಾರು 125ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಒಟ್ಟಿನಲ್ಲಿ ನವ ಭಾರತ ತಾನೇನು ಯಾರಿಗೂ ಕಮ್ಮಿ ಇಲ್ಲ ಎಂದು ಮತ್ತೆಮತ್ತೆ ಸಾರಿ ಹೇಳುತ್ತಿದೆ. ಕಠಿಣ ಪ್ರಯತ್ನಕ್ಕಾಗಿ ಹೆಮ್ಮೆಯ ಮೋದಿಜಿಗೊಂದು ಸಲಾಮ್.  ಇನ್ನೂ ಇಂತಹ ಯೋಜನೆಗಳು ಜಾರಿಗೆ ಬರಲಿ ಎಂಬುದೇ ರಾಷ್ಟ್ರಪ್ರೇಮಿಗಳ ಆಶಯ.

-ಮೋದಿ ಭಕ್ತ

 

Post Author: Ravi Yadav