ಇವತ್ತು ಸೈನಿಕರ ದಿನ ಅಂತ ಒಬ್ಬರಿಗಾದರು ಅರಿವು ಇದೆಯೇ?? ಇದೆನಾ ನಾವು ಅವರಿಗೆ ಕೊಡುವ ಗೌರವ…

ಇಂದು ಭಾರತೀಯ ಸೇನಾ ದಿನಾಚರಣೆ ನಮ್ಮ ಸೈನಿಕರಿಗೆ ಕೋಟಿ ಕೋಟಿ ನಮನಗಳು….

0

ಇಂದು ಭಾರತೀಯ ಸೇನಾ ದಿನಾಚರಣೆ ನಮ್ಮ ಸೈನಿಕರಿಗೆ ಕೋಟಿ ಕೋಟಿ ನಮನಗಳು….

ನಾವು ಭಾರತೀಯರು ಬೆಳಗಾದರೆ ದೇವರನ್ನ ಪೂಜಿಸುತ್ತೇವೆ, ಮಲಗಬೇಕಿದ್ದರೂ ದೇವರನ್ನ ನೆನೆದು ಮಲುಗುತ್ತೇವೆ. ಆದರೆ ಆ ದೇವರು ಎಲ್ಲಿದ್ದಾನೆ ಅನ್ನೋದು ಮಾತ್ರ ನಮ್ಮ ಕಣ್ಣಿಗೆ ಕಾಣಲ್ಲ.

https://www.facebook.com/officialkarunaadavaani/

ದೇವರೆಂದರೆ ಆತ ಕಣ್ಣಿಗೆ ಕಾಣದ ಶಕ್ತಿ ಅಂತಲೇ ನಾವು ಭಾವಿಸಿದ್ದೇವೆ ಆದರೆ ನಮ್ಮನ್ನ ಸದಾ 24/7 ಕಾಪಾಡುತ್ತಿರೋ ದೇವರ ಬಗ್ಗೆ ನಮಗೆಷ್ಟು ಗೊತ್ತು?

ದೇಶದ 125 ಕೋಟಿ ಜನರು ಆರಾಮಾಗಿ ಬದುಕುತ್ತಿದ್ದಾರೆ, ಶಾಂತಿಯುತವಾಗಿ ತಮ್ಮತಮ್ಮ ಬಾಳ್ವೆ ನಡೆಸುತ್ತಿರೋದಕ್ಕೆ ತನ್ನ ಜೀವವನ್ನ ಪಣಕ್ಕಿಟ್ಟು ನಮ್ಮನ್ನ ಕಾಪಾಡುತ್ತಿರೋ ಆ ದೇವರು ಮತ್ಯಾರೂ ಅಲ್ಲ ಅದೇ ನನ್ನ ದೇಶದ ಸೈನಿಕ!!

ತಾಯಿ ಭಾರತಾಂಬೆಗಾಗಿ ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಹಗಲಿರುಳು ದುಡಿಯುತ್ತಿರುವ ನಾವು ಕೂಡುವ ಗೌರವ ಅತ್ಯಮೂಲ್ಯ.

ಸೇನಾ ದಿನವನ್ನು ಜನವರಿ 15 ರಂದು ಭಾರತದಲ್ಲಿ ಪ್ರತಿವರ್ಷ ಜನವರಿ ಆಚರಿಸಲಾಗುತ್ತದೆ. ಫೀಲ್ಡ್ ಮಾರ್ಷಲ್ ಕೋದಂಡೆರಾ ಎಮ್. ಕ್ಯಾರಿಯಪ್ಪ (ನಂತರ ಲೆಫ್ಟಿನೆಂಟ್ ಜನರಲ್) ಭಾರತೀಯ ಸೈನ್ಯದ ಮೊದಲ ಕಮಾಂಡರ್-ಇನ್-ಚೀಫ್ ಆಗಿ ನೇಮಕ ಮಾಡಿದರು.

1949 ರ ಜನವರಿ 15 ರಂದು ಭಾರತದ ಕಮಾಂಡರ್ ಇನ್ ಚೀಫ್. ದಿನವನ್ನು ರಾಷ್ಟ್ರೀಯ ರಾಜಧಾನಿ ನವದೆಹಲಿ ಮತ್ತು ಎಲ್ಲಾ ಪ್ರಧಾನ ಕಛೇರಿಗಳಲ್ಲಿ ಮೆರವಣಿಗೆಗಳು ಮತ್ತು ಇತರ ಸೇನಾ ಪ್ರದರ್ಶನಗಳ ರೂಪದಲ್ಲಿ ಆಚರಿಸಲಾಗುತ್ತದೆ. 2017 ರ ಜನವರಿ 15 ರಂದು ಭಾರತ ತನ್ನ 69 ನೇ ಭಾರತೀಯ ಸೇನಾ ದಿನವನ್ನು ಹೊಸ ದೆಹಲಿಯಲ್ಲಿ ಆಚರಿಸಿತು. ದೇಶದ ಮತ್ತು ಅದರ ನಾಗರಿಕರನ್ನು ಕಾಪಾಡಲು ತಮ್ಮ ಜೀವವನ್ನು ತ್ಯಾಗ ಮಾಡಿದ ಧೀರ ಯೋಧರನ್ನು ವಂದನೆ ಮಾಡಲು ಆರ್ಮಿ ಡೇ ಒಂದು ದಿನ ಸೂಚಿಸುತ್ತದೆ.

1942 ರಲ್ಲಿ ಕೆ ಎಂ ಎಂ ಕ್ಯಾರಿಯಪ್ಪ ಅವರು ಪ್ರಥಮ ಭಾರತೀಯ ಸೇನಾಧಿಕಾರಿಯಾಗಿದ್ದರು,  ಇವರು ಈ ಆಚರಣೆಗೆ ಆದೇಶ ನೀಡಿದರು.

ಕಡೇಯದಾಗಿ, ನಮ್ಮೆಲ್ಲರ ನಾಳೆಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗಿ ಹೋಗಿರುವ ಪ್ರತಿಯೊಬ್ಬರಿಗೂ ಮನಸಾ ಪ್ರಣಾಮಗಳು. ಇವತ್ತಿನ ದಿವಸಕ್ಕಾಗಿ ಭಾರತ ಮಾತೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರಿಗೆಲ್ಲಾ ಒಂದು ದೊಡ್ಡ ಸಲಾಂ ಒಂದು ವೇಳೆ ಇವರಿಲ್ಲದಿದ್ದಿದ್ದರೆ ಇವತ್ತು ನಾವು ಇಷ್ಟು ಕಮ್ಫರ್ಟ್ ಜೋನ್ ನಲ್ಲಿ ಇಷ್ಟು ಆರಾಮಾಗಿ ಬದುಕಲು ಸಾಧ್ಯವೇ ಇರುತ್ತಿರಲಿಲ್ಲವೇನೋ, ಅದಕ್ಕೆ ಅಂಕಣದ ಮೊದಲ ವಾಕ್ಯಗಳಲ್ಲೇ ಇವರನ್ನ ನಮ್ಮ ದೇವರು ಅಂತ ನಾನು ಕರೆದದ್ದು.

ಇಂತಹ ವೀರ ಯೋಧರಿಗೆ ನಮ್ಮೆಲ್ಲರ ವತಿಯಿಂದ ಹ್ಯಾಟ್ಸಾಫ್ ಹೇಳೋಣ!!!

ಜೈ ಜವಾನ್ ಜೈ ಹಿಂದ್!

ನಿಮಗೆ ಈ ಸುದ್ದಿ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.