​ಭಾರತೀಯ ರೈಲ್ವೆ ಬಗ್ಗೆ ನಿಮಗೆ ಗೊತ್ತಿರದ ಕೆಲವು interesting ವಿಷಯಗಳು.??

ರೈಲಲ್ಲಿ ಓಡಾಡೋಷ್ಟು ಮಜಾ ಬೇರೆಲ್ಲೂ ಸಿಗಲ್ಲ. ಸ್ವಲ್ಪ ಟೈಮ್ ಜಾಸ್ತಿ ಆದ್ರೂ ಪರ್ವಾಗಿಲ್ಲ ಅಂದ್ಕೊಳ್ಳೋರು ಹೊಲ-ಗದ್ದೆ, ಕಾಡು-ಮೇಡು, ಬೆಟ್ಟ-ಗುಡ್ಡ ನೋಡ್ಕೋಂಡ್ ಟ್ರೇನಲ್ಲಿ ಹೋಗ್ಬೋದು. ಹೊಸ ದಾರಿ, ಹೊಸಹೊಸ ಜನ ಪರಿಚಯವಾಗ್ತಾರೆ. ಅದೆಲ್ಲಾ ಬಿಡಿ. ಗೊತ್ತಿರೋದೆ. ಆದರೆ ಭಾರತೀಯ ರೈಲ್ವೇ ಬಗ್ಗೆ ಬಹಳಷ್ಟು ವಿಷಯಗಳು ಗೊತ್ತಿರುತ್ತೆ. ಆದರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲದೆ ಇರೋಂತ ಸಾಕಷ್ಟು ವಿಷಯ ಇದೆ.

1. ರಾಜಧಾನಿ ಎಕ್ಸ್‌ಪ್ರೆಸಲ್ಲಿ ಕೆಲಸ ಮಾಡೋ ಲೋಕೋ ಪೈಲೆಟ್‌ ಸಂಬಳ ತಿಂಗಳಿಗೆ 1 ಲಕ್ಷ ರೂಪಾಯಿ ತುಂಬಾ ಜವಾಬ್ದಾರಿ ಇರೋಂತ ಕೆಲಸ, ಅದಕ್ಕೇ ಕೈತುಂಬ ಸಂಬಳ.

Pilot

2. ಟ್ರೇನಿನ ಸಸ್ಪೆನ್ಷನ್ ಕಂಪನಾಂಕ 1.2 Hz ಇರೋದ್ರಿಂದ ಟ್ರೇನಲ್ಲಿ ನಿದ್ದೆ ಚೆನ್ನಾಗಿ ಬರುತ್ತ. ಈ ಫ್ರೀಕ್ವೆನ್ಸಿ ಮನುಷ್ಯನಿಗೆ ಬಹಳ ಆರಾಮು ಕೊಡುತ್ತೆ. ಆದ್ರಿಂದ್ಲೇ ಬಹಳಷ್ಟು ಜನ ಟ್ರೇನ್ ಪ್ರಯಾಣದಲ್ಲಿ ಆರಾಮವಾಗಿ ಹಾಗೇ ನಿದ್ದೆಗೆ ಜಾರ್ಕೊಂಡ್ ಬಿಡ್ತಾರೆ.

Sleeping

3. ಭಾರತೀಯ ರೈಲ್ವೆಯಲ್ಲಿರೋ 14,300 ಟ್ರೇನುಗಳು ಪ್ರತಿ ದಿನ ಓಡಾಡೋ ದೂರ ಚಂದ್ರನಿಗೆ ಮೂರುವರೆಯಷ್ಟು ದೂರ.

Distance


4. ಭಾರತೀಯ ರೈಲ್ವೆ ವೆಬ್‌ಸೈಟ್ಗೆ ಪ್ರತಿ ನಿಮಿಷಕ್ಕೆ 12 ಲಕ್ಷ ಹಿಟ್ಸ್ ಬರುತ್ತವೆ ಪ್ರತಿ ದಿನ ಲಕ್ಷಾಂತರ ಜನ ವೆಬ್‌ಸೈಟಿಗೆ ಭೇಟಿ ಕೊಡ್ತಾರೆ ಅಂದ್ರೆ ಎಂಥ ಸರ್ವರ್‌ ಇರ್ಬೇಕು ನೋಡಿ!

Website

5. ಹಳೆ ಕಾಲದಲ್ಲಿ ಬೋಗಿಗಳನ್ನ ಕೂರ್ಸೋಕೆ ಆನೆಗಳನ್ನ ಬಳಸ್ತಿದ್ರು ಈಗ ಪರಿಸ್ಥಿತಿ ಆ ರೀತಿ ಇಲ್ಲ, ಆದರೆ ಹಳೆ ಕಾಲದಲ್ಲಿ ಆನೆಗಳನ್ನ ಬಳಸ್ತಿದ್ರು.

Elephant

6. ಭಾರತದಲ್ಲಿ ಅತ್ಯಂತ ಉದ್ದವಾದ ಹೆಸರಿರೋ ರೈಲ್ವೇ ಸ್ಟೇಷನ್ನು ಅಂದ್ರೆ “ವೆಂಕಟನರಸಿಂಹರಾಜುವಾರಿಪೇಟ”

Station name

7. ಅತ್ಯಂತ ಚಿಕ್ಕ ಹೆಸರಿನ ರೈಲ್ವೇ ಸ್ಟೇಷನ್ ’ಈಬ್’ ಈ ರೈಲ್ವೇ ಸ್ಟೇಷನ್ನು ಒಡಿಶಾದ ಝಾರ್ಸುಗೂಡದಲ್ಲಿದೆ.

Station name

8. ತುಂಬಾ ಲೇಟ್ ಟ್ರೇನು ಅಂದ್ರೆ ಗುವಾಹಟಿ-ಟ್ರಿವೇಂಡ್ರಂ ಎಕ್ಸ್‌ಪ್ರೆಸ್ ಎಲ್ಲಾ ಟ್ರೇನುಗಳು ಈ ತರಹ ಇರಲ್ಲ. ಆದರೆ ತುಂಬಾ ಲೇಟಾಗಿ ಬರೋಂತ ಟ್ರೇನು ಅಂದ್ರೆ ಇದೇ.  ಸರಾಸರಿ ಹತ್ತರಿಂದ ಹನ್ನೆರಡು ಗಂಟೆ ಲೇಟಾಗಿ ಬಂದು ದಾಖಲೆ ನಿರ್ಮಿಸಿದೆ.

Express

9. ಅತ್ಯಂತ ದೂರ ಹೋಗೊಂತ ಟ್ರೇನು ವಿವೇಕ್ ಎಕ್ಸ್‌ಪ್ರೆಸ್: ಇದು 4273 ಕಿ.ಮೀ ದೂರ ಪ್ರಯಾಣ ಮಾಡುತ್ತೆ. ದಿಬ್ರುಗರ್‌ನಿಂದ ಕನ್ಯಾಕುಮಾರಿತನಕ ಹೋಗೋ ವಿವೇಕ್ ಎಕ್ಸ್‌ಪ್ರೆಸ್ ಅತ್ಯಂತ ದೂರ ಪ್ರಯಾಣಿಸೋಂತ ಟ್ರೇನು.

Vivek

10. ಎರಡು ಜಂಕ್ಷನ್ ಮಧ್ಯದಲ್ಲಿರೋ ಅತಿ ಕಡಿಮೆ ದೂರ ಅಂದ್ರೆ 3 ಕಿ.ಮೀ. ನಾಗಪುರ ಮತ್ತೆ ಅಜನಿ ಜಂಕ್ಷನ್‌ಗಳ ನಡುವಿನ ಅಂತರ ಕೇವಲ 3 ಕಿ.ಮೀ. ಇದು ಅತ್ಯಂತ ಕಡಿಮೆ ದೂರದಲ್ಲಿರೋಂತ ಜಂಕ್ಷನ್‌ಗಳು.

Nagpur

11. “ನವಪುರ” ರೈಲ್ವೇ ನಿಲ್ದಾಣ ಅರ್ಧ ಒಂದು ರಾಜ್ಯದಲ್ಲಿ ಅರ್ಧ ಇನ್ನೊಂದು ರಾಜ್ಯದಲ್ಲಿದೆ.

Navapura

ಹೌದು ಒಂದು ಹೆಜ್ಜೆ ಆಕಡೆ ಇಟ್ರೆ ಮಹಾರಾಷ್ಟ್ರ, ಇನ್ನೊಂದು ಹೆಜ್ಜೆ ಈ ಕಡೆ ಇಟ್ರೆ ಅದು ಗುಜರಾತ್. ಈ ರೀತಿ ಎರಡು ರಾಜ್ಯಗಳಲ್ಲಿ ಅರ್ಧರ್ಧ ಹಂಚಿಹೋಗಿರುವ ನಿಲ್ದಾಣದ ಹೆಸರು ನವಪುರ.

– Prabhu

Post Author: