ದಿನಕ್ಕೆ ೨ ರುಪಾಯಿ ಕೂಡಿ ಇಟ್ಟರೆ ವರ್ಷಕ್ಕೆ 1,32,860 ಆಗುತ್ತೆ ಹೇಗೆ ಗೊತ್ತಾ?

ಆಧುನಿಕ ಜಗತ್ತು ಇದು. ಇಲ್ಲಿ ಸ್ವಲ್ಪವಾದ್ರೂ ಉಳಿತಾಯ ಬೇಕೇ ಬೇಕು, ಹೆಚ್ಚುತ್ತಿರುವ ಬೆಲೆಗಳು , ದಿನದಿಂದ ದಿನಕ್ಕೆ ಏರುತ್ತಿರುವ ದಿನನಿತ್ಯದ ವಸ್ತುಗಳು ಹೀಗೆ ಈ ಯುಗದಲ್ಲಿ ಉಳಿತಾಯ ಅನ್ನುವುದು ಸ್ವಲ್ಪ ಕಷ್ಟವೇ ಆದರೂ ನಮ್ಮ ಭವಿಷ್ಯದ ಬಗ್ಗೆ ಯೋಚಿಸಿದರೆ ಇದು ಮಾಡಲೇಬೇಕಾದ ಅಗತ್ಯತೆ ಎಲ್ಲರಿಗೂ ಇರುತ್ತದೆ.

2rs-NI-97-Korea

ನಮ್ಮ ಇಂದಿನ ಉಳಿತಾಯ ನಮ್ಮ ಮಕ್ಕಳ ಭವಿಷ್ಯಕ್ಕೊ ಅಥವಾ ಆರೋಗ್ಯಕ್ಕೊ, ಯಾವುದಾದ್ರು ಒಂದು ರೂಪದಲ್ಲಿ ಸಹಾಯವಾಗುತ್ತದೆ. ಹಾಗಿದ್ರೆ ನಾವು ಹೇಳುವ ಸಿಂಪಲ್ ಉಳಿತಾಯದ ಉಪಾಯನ್ನು ಒಮ್ಮೆ ಪ್ರಯತ್ನಿಸಿ. ಮೊದಲೇ ಹೇಳುತ್ತಿದ್ದೇವೆ ಈ ಉಪಾಯ ಎಲ್ಲರಿಗೂ ಅನ್ವಯಿಸದು ,ಸಣ್ಣ ವ್ಯಾಪಾರಿಗಳಿಗೆ, ಬಿಸ್ನೆಸ್ ಮಾಡುವರಿಗೆ , ಉದ್ಯಮಿಗಳಿಗೆ, ಹಾಗೂ ತಿಂಗಳಿಗೆ ಸ್ವಲ್ಪ ಮಟ್ಟಿನ ಉತ್ತಮ ಸಂಬಳ ಪಡೆಯುವವರಿಗೆ ಸೂಕ್ತವಾದ ಉಪಾಯ ಆದ್ದರಿಂದ ಒಮ್ಮೆ ಓದಿ ಇಷ್ಟವಾದರೆ ಶೇರ್ ಮಾಡಿ.

ದಿನಕ್ಕೆ 2 ರೂಪಾಯಿಯಿಂದ ವರ್ಷಕ್ಕೆ 132860 ರೂಪಾಯಿ ಉಳಿಸುವುದು ಹೇಗೆ ಅಂತ ಒಮ್ಮೆ ನೋಡೋಣ ಬನ್ನಿ.

ಮೊದಲಿಗೆ ನಾವು ಹೇಳಿದಂತೆ ನೀವು ಪ್ರತಿದಿನ 2 ರು ಉಳಿತಾಯ ಮಾಡುವ ಯೋಜನೆ ಹೊಂದಿರಬೇಕು. ಉದಾಹರಣೆಗೆ ಇವತ್ತು ಮೊದಲ ದಿನ 2 ರೂಪಾಯಿ ಉಳಿಸಿದ್ದೀರಿ ಅಂದುಕೊಳ್ಳಿ .(1*2= 2 ರೂಪಾಯಿ). ಎರಡನೇ ದಿನ 2*2 ಉಳಿತಾಯ ಮಾಡಿ ಅಂದರೆ 4 ರೂಪಾಯಿ ಆಯಿತು. ಒಟ್ಟು ಉಳಿತಾಯ, 6 ರೂಪಾಯಿ ಆಯಿತು. ಇದೇ ರೀತಿ ಮೂರನೇ ದಿವಸಕ್ಕೆ, 3*2=6 ರೂಪಾಯಿ, ನೀವು ಮೂರನೇ ದಿವಸಕ್ಕೆ ಉಳಿತಾಯ ಮಾಡಿದ ಹಣ 6 ರೂಪಾಯಿ. ಈಗ ನಿಮ್ಮ ಒಟ್ಟು ಉಳಿತಾಯ 12 ರೂಪಾಯಿ ಆಗಿದೆ. ಇದೆ ರೀತಿ 365 ದಿನವೂ ಮಾಡಿ. 365 ನೇ ದಿನ ನೀವು ಉಳಿಸಬೇಕಾದ ಹಣ 365*2 =730 ರೂಪಾಯಿ, ಹಾಗೂ ಒಟ್ಟು ಉಳಿತಾಯ 1,32,860 ರೂಪಾಯಿ ಆಗಿರುತ್ತದೆ.

2rs-NI-97-Korea

ನೋಡಿದ್ರಲ್ಲ ಇದೊಂದು ಸರಳ ಉಳಿತಾಯದ ಉತ್ತಮ ಉಪಾಯ ದಿನ ಕಳೆದಂತೆ 2 ರೂಪಾಯಿಯನ್ನು ದಿನದೊಂದಿಗೆ ಗುಣಿಸುತ್ತ ಉಳಿತಾಯ ಮಾಡುವ ಯೋಜನೆ. ಖಂಡಿತವಾಗಿ ಹಣದ ಉಳಿತಾಯ ನಿಮಗೆ ಅಗತ್ಯವಿದ್ದರೆ ಇದನ್ನ ಪಾಲಿಸಿ. ಇಷ್ಟಾವಾಗಿದ್ರೆ ಶೇರ್ ಮಾಡಿ.

Post Author: